ಸೋಂಕು ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಳ ; ಮೈಸೂರು ಕೋವಿಡ್ ಕೇರ್‌ ಸೆಂಟರ್‌ ಅವ್ಯವಸ್ಥೆ ಆಗರ

ಮೈಸೂರಿನ ಪ್ರತಿಷ್ಠಿತ ಕೆ.ಆರ್.ಆಸ್ಪತ್ರೆಯೂ ಕೋವಿಡ್ ಆಸ್ಪತ್ರೆಯಾಗುವ ಸಾಧ್ಯತೆ ಇದೆ. ಈಗಾಗಲೇ 10 ಬೆಡ್‌ನ ಒಂದು ಕೋಣೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ

news18-kannada
Updated:July 16, 2020, 4:00 PM IST
ಸೋಂಕು ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಳ ; ಮೈಸೂರು ಕೋವಿಡ್ ಕೇರ್‌ ಸೆಂಟರ್‌ ಅವ್ಯವಸ್ಥೆ ಆಗರ
ಕೋವಿಡ್ ಕೇರ್ ಸೆಂಟರ್
  • Share this:
ಮೈಸೂರು(ಜುಲೈ.16): ರಾಜ್ಯದಲ್ಲಿ ದಿನೇ ದಿನೆ ಕೋವಿಡ್‌ ಸಮಸ್ಯೆ ಉಲ್ಬಣಗೋಳ್ಳುತ್ತಿದ್ದು, ಇದೀಗ ಬೆಡ್‌ ಸಮಸ್ಯೆ ಹಾಗೂ ಚಿಕಿತ್ಸೆ ನೀಡದ ಸರದಿ ಮೈಸೂರಿಗು ತಗುಲಿದೆ. ಮೈಸೂರಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಅಂತ ಆರೋಪ ಕೇಳಿ ಬಂದಿದ್ದು, ಮೈಸೂರಿನಲ್ಲಿ ಕೇಸುಗಳು ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗಿವೆ.

ಕೋವಿಡ್ ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲ, ಸರಿಯಾಗಿ ಔಷಧ ಕೊಡುತ್ತಿಲ್ಲ, ವೈದ್ಯರು ಸರಿಯಾಗಿ ವಿಚಾರಿಸಿಕೊಳ್ಳುತ್ತಿಲ್ಲವೆಂದು ರೋಗಿಗಳ ಹೀಗೆ ಆರೋಪಗಳ ಸುರಿಮಳಗೈದಿದ್ದು, ಮೈಸೂರಿನ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಸೊಂಕಿತರು. ಈ ಕೋವಿಡ್‌ ಕೇರ್‌ನ ಅವ್ಯವಸ್ಥೆ ಬಗ್ಗೆ ಸೋಂಕಿತರು ಕಿಡಿಕಾರಿದ್ದು, ಮೈಸೂರು ಇಎಎಸ್‌ಐ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿ ಕೊರೊನಾ ಸೋಂಕಿತರು ಸರಿಯಾಗಿ ಮೆಡಿಸನ್ ನೀಡಿದ ಆರೋಗ್ಯ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಇಪ್ಪತ್ತು ಜನ ಮಹಿಳೆಯರಿಗೆ ಎರಡು ಬಾತ್ ರೂಂ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಏನು ಸ್ವಚ್ಛತೆ ಇಲ್ಲ, ನೀರು ಕೂಡ ಕೂಡುವುದಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ. ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿ ಇಲ್ಲ ಮನೆಗೆ ಕಳುಹಿಸಿ ಎಂದು ಸಿಬ್ಬಂದಿಗಳ ವಿರುದ್ದ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ಕೋವಿಡ್‌ ಕೇರ್‌ ಸೆಂಟರ್‌ನ ಸಮಸ್ಯೆಯಾದರೆ ಕೋವಿಡ್ ಆಸ್ಪತ್ರೆಯಲ್ಲು ಇನ್ನು ಗಂಭೀರ ಸಮಸ್ಯೆಗಳು ಎದುರಾಗಿವೆ.

ಮೊದಲ ಹಂತದಲ್ಲಿ 90 ಪಾಸಿಟಿವ್ ಬಂದಿರುವವರನ್ನು ಡಿಶ್ಚಾರ್ಜ್‌ ಮಾಡಿ ಮನೆಗೆ ಕಳುಹಿಸಿದ ಮೈಸೂರಿನ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳು. ಇದೀಗ ಎರಡನೆ ಹಂತದಲ್ಲಿ ಬರುತ್ತಿರುವ ಪಾಸಿಟಿವ್‌ ಕೇಸ್‌ಗಳನ್ನ ನಿಭಾಯಿಸುವುದಕ್ಕೆ ಹರಸಾಹಸ ಪಡುವಂತಾಗಿದೆ. ನಿತ್ಯ ಸರಾಸರಿ 100 ಕೇಸ್‌ಗಿಂತ ಹೆಚ್ಚಿನ ಪಾಸಿಟಿವ್‌ಗಳು ಪತ್ತೆಯಾಗುತ್ತಿದ್ದು, ಸರಾಸರಿಯಲ್ಲಿ ಕೋವಿಡ್‌ ಆಸ್ಪತ್ರೆಯಲ್ಲೆ 5 ಮಂದಿ ಸಾವನ್ನಪ್ಪುತ್ತಿದ್ದಾರೆ. ಕಳೆದ 5 ದಿನಗಳಲ್ಲೆ 400ಕ್ಕು ಹೆಚ್ಚು ಕೇಸ್‌ ದಾಖಲಾಗಿದ್ದು 25ಕ್ಕು ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ದಿನೇ ದಿನೆ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿರುವುದರಿಂದ ಕೋವಿಡ್‌ ಆಸ್ಪತ್ರೆಯಲ್ಲಿ ಇದ್ದ ಎಲ್ಲ ಬೆಡ್‌ಗಳು ತುಂಬಿ ಹೋಗಿವೆ. ಇದರಿಂದಾಗಿ ಇಎಸ್‌ಐ ಆಸ್ಪತ್ರೆ ಹಾಗೂ ಕೆ.ಎಸ್.ಓ.ಯೂ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಷ್ಟಾದರು ಮೈಸೂರಿನಲ್ಲಿ ಸೋಂಕಿತರಿಗೆ ಬೆಡ್‌ ಸಿಗುತ್ತಿಲ್ಲ ಎಂದು ಆರೋಪಗಳು ನಿನ್ನೆಯಿಂದ ಹೆಚ್ಚಾಗಿ ಕೇಳಿ ಬರುತ್ತಿವೆ.

ಮೈಸೂರಿನ ಪ್ರತಿಷ್ಠಿತ ಕೆ.ಆರ್.ಆಸ್ಪತ್ರೆಯೂ ಕೋವಿಡ್ ಆಸ್ಪತ್ರೆಯಾಗುವ ಸಾಧ್ಯತೆ ಇದೆ. ಈಗಾಗಲೇ 10 ಬೆಡ್‌ನ ಒಂದು ಕೋಣೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ILI ಹಾಗೂ SARI  ಕೇಸ್‌ಗಳು ಹೆಚ್ಚಾಗಿ ಕಂಡುಬರುತ್ತಿರುವುದು ಕೆ.ಆರ್.ಆಸ್ಪತ್ರೆಯಲ್ಲೆ ಇಲ್ಲಿನ ಪಾಸಿಟಿವ್‌ ಪೇಷಂಟ್‌ಗಳನ್ನ ಕೋವಿಡ್‌ ಆಸ್ಪತ್ರೆಗೆ ಶಿಫ್ಟ್​ ಮಾಡುವ ಹಂತದಲ್ಲು ಸಾವನ್ನಪ್ಪಿರುವ ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ILI ಹಾಗೂ SARI ಪ್ರಕರಣ ಸೋಂಕಿತರಿಗೆ ಕೆ.ಆರ್.ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸುವುದಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಇನ್ನೆರಡು ಮೂರು ದಿನದಲ್ಲಿ ಕೆ.ಆರ್.ಆಸ್ಪತ್ರೆಯೂ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ : ಲಾಕ್ ಡೌನ್ ನಿಂದ ಹೆಚ್ಚಿದ ಕೆಲಸದ ಒತ್ತಡ ; ಪೊಲೀಸರಿಗೆ ಹೆಗಲು ಕೊಡಲು ಮುಂದಾದ ಸಾವಿರಾರು ಸ್ವಯಂ ಸೇವಕರು

ಚಾಮುಂಡಿ ವಿಹಾರ ಸ್ಟೇಡಿಯಂ ಸಹ ಕೋವಿಡ್‌ ಕೇರ್ ಸೆಂಟರ್ ಮಾಡುವ ಉದ್ದೇಶವನ್ನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮೈಸೂರಿನಲ್ಲಿ ಕೇಸುಗಳು ಹೆಚ್ಚಾಗುತ್ತಿವೆ. ನಾವು ಖಾಸಗಿ ಆಸ್ಪತ್ರೆಗಳ ಜೊತೆ ಸಮಯದಾಯ ಭವನ, ಹಾಸ್ಟೆಲ್‌, ಕಲ್ಯಾಣ ಮಂಟಪಗಳನ್ನ ಬಳಸಿಕೊಂಡು ನಂತರ ಚಾಮುಂಡಿ ಸ್ಟೇಡಿಯಂ ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಈವರೆಗೆ ಅಲ್ಲಿ ಯಾವುದೇ ಸಿದ್ದತೆ ಆಗಿಲ್ಲವಾದರೂ ಇನ್ನೆರಡು ಮೂರು ದಿನದಲ್ಲಿ ಬೆಡ್‌ ಹಾಗೂ ನೀರಿನ ವ್ಯವಸ್ಥೆ ಮಾಡಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಮೈಸೂರಿನಲ್ಲಿ ಕೇಸುಗಳು ಹೆಚ್ಚಾದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟಯ ಕೇಸ್‌ಗಳು ಹೆಚ್ಚಾದರೆ ಮತ್ತಷ್ಟು ಸಮಸ್ಯೆಗಳು ಉಲ್ಬಣಗೊಳ್ಳಲಿವೆ. ಸದ್ಯದ ಕೋವಿಡ್ ಪರಿಸ್ಥಿತಿಯನ್ನ ಹೇಗೆ ನಿಯಂತ್ರಣಕ್ಕೆ ತರವುದು ಎನ್ನುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಚಿಂತಿಸುತ್ತಿದೆ.
Published by: G Hareeshkumar
First published: July 16, 2020, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading