ದೇಶಕ್ಕೆ ಬರುತ್ತಿರುವ ಚೀನೀ ವಸ್ತುಗಳನ್ನು ನಿಷೇಧಿಸಿ: ಕನ್ನಡಪರ ಹೋರಾಟಗಾರ ರಮೇಶ್ ಗೌಡ ಆಗ್ರಹ

ದೇಶಕ್ಕೆ ಅಮದಾಗುತ್ತಿರುವ ಎಲ್ಲಾ ಚೀನಾ ವಸ್ತುಗಳು ಹಾಗೂ ರೇಷ್ಮೆಯನ್ನ ಈ ಕೂಡಲೇ ನಿಷೇಧ ಮಾಡಲು ಇದು ಸೂಕ್ತ ಸಮಯ. ಈ ಕ್ರಮವನ್ನ ಕೇಂದ್ರ ಸರ್ಕಾರ ಕೈಗೊಂಡಿದ್ದೇ ಆದರೆ ಚೀನಾ ನಮ್ಮ ದೇಶದ ಮುಂದೆ ಮಂಡಿಯೂರುವುದು ಖಚಿತ ಎಂದು ರಮೇಶ್ ಗೌಡ ಅಭಿಪ್ರಾಯಪಟ್ಟರು.

ರಮೇಶ್ ಗೌಡ ನೇತೃತ್ವದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

ರಮೇಶ್ ಗೌಡ ನೇತೃತ್ವದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಪ್ರತಿಭಟನೆ

  • Share this:
ರಾಮನಗರ(ಜೂನ್ 17): ಭಾರತದ ಗಡಿಯಲ್ಲಿ ಚೀನಾ ಯೋಧರು ತಂಟೆ ತೆಗೆದು ಭಾರತದ 20 ಯೋಧರನ್ನ ಹತ್ಯೆ ಮಾಡಿರುವುದನ್ನ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಅವರ ನೇತೃತ್ವದಲ್ಲಿ ಇವತ್ತು ಪ್ರತಿಭಟನೆ ನಡೆಯಿತು. ಚನ್ನಪಟ್ಟಣ ನಗರದ ಕಾವೇರಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಚೀನಿ ಗೊಂಬೆಗಳು ಹಾಗೂ ಪಟಾಕಿಯನ್ನ ಪುಡಿಪುಡಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಮೇಶ್ ಗೌಡ ಮಾತನಾಡಿ, ದೇಶಕ್ಕೆ ಅಮದಾಗುತ್ತಿರುವ ಎಲ್ಲಾ ಚೀನಾ ವಸ್ತುಗಳು ಹಾಗೂ ರೇಷ್ಮೆಯನ್ನ ಈ ಕೂಡಲೇ ನಿಷೇಧ ಮಾಡಲು ಇದು ಸೂಕ್ತ ಸಮಯ. ಈ ಕ್ರಮವನ್ನ ಕೇಂದ್ರ ಸರ್ಕಾರ ಕೈಗೊಂಡಿದ್ದೇ ಆದರೆ ಚೀನಾ ನಮ್ಮ ದೇಶದ ಮುಂದೆ ಮಂಡಿಯೂರುವುದು ಖಚಿತ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಮುಂದೆ ದೇಶದ ವಿಚಾರದಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಗಮನಹರಿಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: ಚಿಕ್ಕಮಗಳೂರಿನ ಬಾಲಕ ಡಿಸ್​ಚಾರ್ಜ್; ಈ SSLC ವಿದ್ಯಾರ್ಥಿಗೆ ಸೋಂಕು ತಗುಲಿದ್ದು ನಿಜವಾ?

ಇದೇ ವೇಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ನರಸಿಂಹ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.ಲಡಾಖ್​ನ ಚೀನಾ ಗಡಿಭಾಗದಲ್ಲಿರುವ ಗಾಲ್ವನ್ ಕಣಿವೆ ಬಳಿ ಚೀನೀ ಸೈನಿಕರು ಭಾರತದ ಯೋಧರ ಮೇಲೆ ಮಾರಕ ಹಲ್ಲೆ ಎಸಗಿ 20 ಮಂದಿಯನ್ನು ಬಲಿ ಪಡೆದಿದ್ದಾರೆ. ಚೀನೀಯರ ಈ ಉದ್ದಟತನಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಚೀನಾಗೆ ದಿಟ್ಟ ಉತ್ತರ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
First published: