ಕಲಬುರ್ಗಿಯಲ್ಲಿ ಸಾವಿನ ಸಂಖ್ಯೆ ವ್ಯಾಪಕ ; ಪ್ಲಾಸ್ಮಾ ಥೆರಪಿ ಕೇಂದ್ರ ಆರಂಭಿಸದೇ ಇರುವುದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ

ಕಲಬುರ್ಗಿಯಲ್ಲಿ ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಸೋಂಕು ಪತ್ತೆ ಕೇಂದ್ರ ತೆರೆಯಲಾಗಿದೆ. ವ್ಯಾಪಕಗೊಳ್ಳುತ್ತಿರುವ ಸೋಂಕು ಪತ್ತೆಗೆ ಇಎಸ್ ಐ ಸಿ ಆಸ್ಪತ್ರೆಯಲ್ಲಿ ಮತ್ತೊಂದು ಲ್ಯಾಬ್ ತೆರೆಯುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದರೂ ಇತ್ತ ಕಡೆ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

  • Share this:
ಕಲಬುರ್ಗಿ(ಆಗಸ್ಟ್​. 11) ದೇಶದ ಮೊದಲ ಕೊರೋನಾ ಸಾವಿಗೆ ಸಾಕ್ಷಿಯಾದ ಕಲಬುರ್ಗಿ ಜಿಲ್ಲೆಯಲ್ಲಿ ಸೋಂಕು ರುದ್ರನರ್ತನ ಮಾಡುತ್ತಿದೆ. ಸೋಂಕಿನ ಜೊತೆ ಸಾವಿನ ಸಂಖ್ಯೆ ವ್ಯಾಪಕಗೊಂಡಿದ್ದು, ನಿಯಂತ್ರಣಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕಲಬುರ್ಗಿಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂದು ಹಲವಾರು ರೋಗಿಗಳು ನೆರೆಯ ಮಹಾರಾಷ್ಟ್ರದ ಸೋಲಾಪುರ, ಹೈದರಾಬಾದ್ ಗಳಿಗೆ ತೆರಳುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ಕಲಬುರ್ಗಿಯಲ್ಲಿಯೂ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಕೇಂದ್ರ ಆರಂಭಿಸುವಂತೆ ಮಾಜಿ ಸಚಿವ, ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ಜಿಲ್ಲೆಗಳಲ್ಲಿ ಕಲಬುರ್ಗಿಯೂ ಒಂದಾಗಿದೆ. ಮೊದಲ ಸಾವು ಸಂಭವಿಸಿದ್ದು ಕೂಡಾ ಇಲ್ಲಿಯೇ, ಸೋಂಕಿತರ ಜೊತೆ ಸಾವಿನ ಸಂಖ್ಯೆಯೇ ದಿನೇ ದಿನೇ ಹೆಚ್ಚಳವಾಗುತ್ತಿದೆ.ಇಲ್ಲಿಯವರೆಗೆ ಸುಮಾರು 7537 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೇ 140 ಕ್ಕೂ ಹೆಚ್ಚು ಸೋಂಕಿತರು ಸಾವಿಗೀಡಾಗಿದ್ದಾರೆ. ಕಲಬುರ್ಗಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇರುವುದಕ್ಕೆ ದೂರದ ಸೋಲಾಪುರ, ಹೈದರಾಬಾದ್ ಗಳಿಗೆ ರೋಗಿಗಳು ಹೋಗುತ್ತಿದ್ದಾರೆ. ಈಗಾಗಲೇ ಬೆಂಗಳೂರು ಹಾಗೂ ಹುಬ್ಬಳ್ಳಿಗಳಲ್ಲಿ ಪ್ಲಾಸ್ಮಾಥೆರಪಿ ಕೇಂದ್ರ ಆರಂಭಿಸಲಾಗಿದೆ. ಆದರೆ ಕಲಬುರ್ಗಿಯಲ್ಲೇಕೆ ಆರಂಭಿಸುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.

ಕಲಬುರ್ಗಿಯಲ್ಲಿ ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಸೋಂಕು ಪತ್ತೆ ಕೇಂದ್ರ ತೆರೆಯಲಾಗಿದೆ. ವ್ಯಾಪಕಗೊಳ್ಳುತ್ತಿರುವ ಸೋಂಕು ಪತ್ತೆಗೆ ಇಎಸ್ ಐ ಸಿ ಆಸ್ಪತ್ರೆಯಲ್ಲಿ ಮತ್ತೊಂದು ಲ್ಯಾಬ್ ತೆರೆಯುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದರೂ ಇತ್ತ ಕಡೆ ದಿವ್ಯ ನಿರ್ಲಕ್ಷ್ಯ ವಹಿಸಲಾಗಿದೆ. ಒಂದೇ ಕೇಂದ್ರದಲ್ಲಿ ಸೋಂಕು ಪತ್ತೆ ವ್ಯವಸ್ಥೆ ಇದ್ದುದರಿಂದ ತೀವ್ರ ಒತ್ತಡವಾಗುತ್ತಿದ್ದು, ನಿತ್ಯ ನೂರಾರು ಪರೀಕ್ಷಾ ವರದಿಗಳು ಹೊರಬರಲು ತಡವಾಗುತ್ತಿದೆ. ಇದರಿಂದಾಗಿ ಸೋಂಕಿತರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಇದನ್ನೂ ಓದಿ : Coronavirus Vaccine : ಕೊರೋನಾ ವೈರಸ್​ಗೆ ರಷ್ಯಾದಿಂದ ಮೊದಲ ಲಸಿಕೆ: ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಣೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಮನಗಂಡು ಪ್ಲಾಸ್ಮಾಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವಂತೆ ಮೇ ತಿಂಗಳಿನಲ್ಲೇ ಕೇಂದ್ರ ಸರ್ಕಾರ ಸೂಚಿಸಿತ್ತು. ಆ ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೇಂದ್ರ ಮಂಜೂರು ಮಾಡಿರುವ ಸರ್ಕಾರ, ರಾಜ್ಯದ ಅತಿಹೆಚ್ಚು ಸೋಂಕಿತರ ಸಂಖ್ಯೆ ಹೊಂದಿದ ಜಿಲ್ಲೆಗಳ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಕಲಬುರ್ಗಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸೋಂಕಿತರಿಗೆ ತುರ್ತು ಹಾಗೂ ಅಗತ್ಯ ಚಿಕಿತ್ಸೆ‌ ನೀಡುವ ಉದ್ದೇಶದಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪಿಸದೇ ರಾಜ್ಯ ಸರ್ಕಾರ ಕಲಬುರ್ಗಿಯಲ್ಲಿ ಕಡೆಗಣಿಸಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕಲಬುರ್ಗಿಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಮೂಲಕ ಸೋಂಕಿತರ ಜೀವ ರಕ್ಷಿಸಬೇಕು. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ದೊರಕಿಸಿಕೊಡಬೇಕೆಂದು ಪತ್ರಕದಲ್ರಿ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
Published by:G Hareeshkumar
First published: