ಆನ್ ಲೈನ್ ಶಿಕ್ಷಣ, ಶಾಲಾ ಶುಲ್ಕ ವಸೂಲಿಗೆ ಮುಂದಾದ ಖಾಸಗಿ ಶಿಕ್ಷಣ ಸಂಸ್ಥೆಗಳು

ಕೆಲವು ಶಾಲೆಗಳು ಹಣ ಕಟ್ಟದೆ ಇದ್ದರೆ ಟಿಸಿ ಹಿಂಪಡೆಯಲು, ವಾಟ್ಸಾಪ್ ಗ್ರೂಪ್​ನಿಂದ ಹೆಸರು ರಿಮೂವ್ ಮಾಡುತ್ತಾರೆ ಎಂಬ ಆರೋಪವು ಕೇಳಿ ಬಂದಿದೆ. ರಾಯಚೂರಿನ ಸ್ಟೆಪಿಂಗ್ ಸ್ಟೋನ್ ಶಾಲೆ ಸೇರಿದಂತೆ ಬಹುತೇಕ ಶಾಲೆಗಳು ಪ್ರವೇಶ ಹಾಗೂ ಪುಸ್ತಕ ಖರೀದಿಗೆ ಆಗ್ರಹಿಸುತ್ತಿದ್ದಾರೆ.

news18-kannada
Updated:August 2, 2020, 4:34 PM IST
ಆನ್ ಲೈನ್ ಶಿಕ್ಷಣ, ಶಾಲಾ ಶುಲ್ಕ ವಸೂಲಿಗೆ ಮುಂದಾದ ಖಾಸಗಿ ಶಿಕ್ಷಣ ಸಂಸ್ಥೆಗಳು
ಸಾಂದರ್ಭಿಕ ಚಿತ್ರ
  • Share this:
ರಾಯಚೂರು: ಇನ್ನೂ ಶಾಲೆಗಳನ್ನು ಆರಂಭಿಸುವ ದಿನ ನಿಗದಿಯಾಗಿಲ್ಲ. ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಅದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸುವಂತಿಲ್ಲ ಎಂದು ಸರಕಾರ ಆದೇಶಿಸಿದೆ. ಆದರೆ ಈಗ ಆನ್ ಲೈನ್ ಶಿಕ್ಷಣಕ್ಕಾಗಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅಡ್ಮಿಷನ್ ಮಾಡಿಸಲು, ಪುಸ್ತಕ ಖರೀದಿಸಲು ಸೂಚಿಸುತ್ತಿವೆ.

ಕೊರೋನಾ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗುವುದಕ್ಕೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲ. ಇನ್ನೂ ಆರಂಭವಾಗುವ ಬಗ್ಗೆ ಅನಿಶ್ಚಿತತೆ ಇದೆ. ಈ ಮಧ್ಯೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆನ್ ಲೈನ್ ಶಿಕ್ಷಣ ನೀಡಲು ಅವಕಾಶ ನೀಡಿದೆ. ಇದರಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಪಾಠ ಮಾಡುತ್ತಿವೆ. ಪಾಠ ಮಾಡುವ ಮುನ್ನ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಮಕ್ಕಳನ್ನು ಶಾಲೆಗೆ ಪ್ರವೇಶ ಪಡೆಯಲು ಸೂಚಿಸುತ್ತಿದ್ದಾರೆ.

ಒಂದರಿಂದ ಐದನೆಯ ತರಗತಿಯ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಹೊರೆಯಾಗುತ್ತಿದೆ. ಇದರಿಂದಾಗಿ ಆನ್ ಲೈನ್ ಶಿಕ್ಷಣ ಬೇಡ ಎಂಬ ಒತ್ತಾಯದ ಮಧ್ಯೆ ಸರಕಾರ ಯಾವುದೋ ಒತ್ತಡಕ್ಕೆ ಮಣಿದು ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ನೀಡಿದೆ. ಈ ಮಧ್ಯೆ ಆನ್ ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಪಡೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸೂಚಿಸುತ್ತಿವೆ. ಶಾಲೆಗಳು ಆರಂಭವಾಗುವುದೇ ಅನಿಶ್ಚಿತವಾಗಿರುವಾಗ ಶಾಲೆಗೆ ಪ್ರವೇಶ ಪಡೆಯುವುದು ಯಾಕೆ ಎಂದು ಪಾಲಕರು ಕೇಳುತ್ತಿದ್ದಾರೆ.

ಇದನ್ನು ಓದಿ: ನ್ಯೂಸ್ 18 ವರದಿಗೆ ಸ್ಪಂದನೆ; ಆನ್​ಲೈನ್ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಸ್ಮಾರ್ಟ್​ಫೋನ್ ಖರೀದಿಸಿದ ಸಹೋದರಿಯರಿಗೆ ನೆರವು

ಈ ಮಧ್ಯೆ ಆನ್ ಲೈನ್ ಶಿಕ್ಷಣಕ್ಕೆ ಪುಸ್ತಕ ಖರೀದಿಸಬೇಕು, ಪುಸ್ತಕ ಖರೀದಿಸಲು ಪ್ರವೇಶ ಪಡೆಯಬೇಕು, ಈಗ ಪ್ರವೇಶ ಹಾಗೂ ಪುಸ್ತಕ ಖರೀದಿಸಬೇಕಾಗಿದೆ. ಲಾಕ್ ಡೌನ್​ನಿಂದಾಗಿ ಬಹುತೇಕರು ಕೆಲಸವಿಲ್ಲದೆ ಹಣವಿಲ್ಲದ ಈ ಸಂದರ್ಭದಲ್ಲಿ ಶಾಲಾ ಶುಲ್ಕ ಕಟ್ಟುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ಕೆಲವು ಶಾಲೆಗಳು ಹಣ ಕಟ್ಟದೆ ಇದ್ದರೆ ಟಿಸಿ ಹಿಂಪಡೆಯಲು, ವಾಟ್ಸಾಪ್ ಗ್ರೂಪ್​ನಿಂದ ಹೆಸರು ರಿಮೂವ್ ಮಾಡುತ್ತಾರೆ ಎಂಬ ಆರೋಪವು ಕೇಳಿ ಬಂದಿದೆ. ರಾಯಚೂರಿನ ಸ್ಟೆಪಿಂಗ್ ಸ್ಟೋನ್ ಶಾಲೆ ಸೇರಿದಂತೆ ಬಹುತೇಕ ಶಾಲೆಗಳು ಪ್ರವೇಶ ಹಾಗೂ ಪುಸ್ತಕ ಖರೀದಿಗೆ ಆಗ್ರಹಿಸುತ್ತಿದ್ದಾರೆ. ಅಕ್ರಮವಾಗಿ ಪೋಷಕರಿಂದ ಹಣ ಕಟ್ಟಿಸಿಕೊಳ್ಳುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
Published by: HR Ramesh
First published: August 2, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading