ರಾಮನಗರ: ಮಾಗಡಿ ಪಟ್ಟಣದ ವಾಸವಿ ಖಾಸಗಿ ವಿದ್ಯಾಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಖಾಸಗಿ ಸ್ಥಳದಲ್ಲಿ ನಡೆಯುತ್ತಿದ್ದ ಈ ಶಾಲೆಯ ಜಾಗವನ್ನ ಮೂಲ ಮಾಲೀಕನಿಗೆ ಜಾಗ ಬಿಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದರಿಂದ ಈ ಶಾಲೆಯಲ್ಲಿ ಓದುತ್ತಿರುವ ಸಾವಿರಾರು ಮಕ್ಕಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಪ್ರತಿಷ್ಠಿತ ಖಾಸಗಿ ವಾಸವಿ ವಿದ್ಯಾಮಂದಿರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲೆ ಕಲಿಯುತ್ತಿದ್ದಾರೆ. ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿ ಶಾಲೆ ನಡೆಸಲಾಗುತ್ತಿದ್ದು, ಈಗ ವಿದ್ಯಾರ್ಥಿಗಳು ಆತಂತ್ರದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಜಾಗದ ಸಮಸ್ಯೆ.
ಹೌದು ಮಾಗಡಿ ಪಟ್ಟಣದ ಸರ್ವೆ ನಂ 258/2 ರಲ್ಲಿ 2.17 ಎಕರೆ ಜಮೀನು ಇದೆ. ಈ ಹಿಂದೆ ಜಯಮ್ಮ ಎಂಬುವವರು ವಾಸವಿ ಎಜುಕೇಷನ್ ಟ್ರಸ್ಟ್ ಗೆ 1.30 ಎಕರೆ ಜಾಗವನ್ನ ಮಾರಾಟ ಮಾಡಿದ್ದರು. ಆದರೆ ಪಿತ್ರಾರ್ಜಿತ ಸ್ವತ್ತಿನಲ್ಲಿ ನಮಗೂ ಪಾಲು ಬರಬೇಕೆಂದು ಶಾಲೆಯ ಆಡಳಿತ ಮಂಡಳಿ ವಿರುದ್ದ ಮಾಗಡಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಯಿತು.
ವಾದ ಪ್ರತಿವಾದಗಳನ್ನ ಆಲಿಸಿದ ಕೋರ್ಟ್ ವಾಸವಿ ವಿದ್ಯಾ ಸಂಸ್ಥೆಗೆ ಕೇವಲ 23 ಗುಂಟೆ ಜಮೀನು ಸೇರಬೇಕು. ಇರುವ 1.30 ಎಕರೆ ಜಾಗದಲ್ಲಿ ದೂರುದಾರರಾದ ಶಾರದಮ್ಮ ಹಾಗೂ ರೇವಮ್ಮ ಇಬ್ಬರಿಗೂ ಸರಿ ಸಮಾನವಾಗಿ ಜಾಗ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಘನ ನ್ಯಾಯಾಲಯ ಮೂಲ ಮಾಲೀಕರ ಪರವಾಗಿ ತೀರ್ಪು ನೀಡಿರುವುದರಿಂದ ವಾಸವಿ ಎಜುಕೇಷನ್ ಟ್ರಸ್ಟ್ ಗೆ ಕೇವಲ 23 ಗುಂಟೆ ಜಮೀನು ಮಾತ್ರ ಉಳಿದಿದೆ. ನಮ್ಮ ಜಾಗವನ್ನ ಬಿಟ್ಟುಕೊಡುವಂತೆ ಶಾಲೆಯ ಆಡಳಿತ ಮಂಡಳಿಯವರನ್ನ ಜಾಗದ ಮಾಲೀಕರಾದ ರಮೇಶ್ ಹಾಗೂ ಇತರರು ಕೇಳುತ್ತಿದ್ದಾರೆ.
ಇನ್ನು ಸರ್ಕಾರಿ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಾಲೆ ನಿರ್ಮಾಣವಾಗ ಬೇಕಾದ್ರೆ ಕನಿಷ್ಟ ಎರಡು ಎಕರೆ ಜಮೀನು ಇರಬೇಕು. ಆದರೆ ಈಗ 23 ಗುಂಟೆ ಜಾಗ ಮಾತ್ರ ಶಾಲೆಗೆ ಉಳಿದಿದೆ. ಈ ಸಂಬಂದ ಈಗಾಗಲೆ ಸ್ಥಳ ಪರಿಶೀಲನೆ ಕೂಡ ನಡೆಸಲಾಗಿದೆ. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿಗೆ ನೋಟೀಸ್ ಕೂಡ ನೀಡಲಾಗಿದೆ ಎಂದು BEO ಸಿದ್ದೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ : ’ಯುವ ಜನರಿಗೆ ಉದ್ಯೋಗ ನೀಡುವ ಶಕ್ತಿ ಮೋದಿಗಿಲ್ಲ’; ಉದ್ಯೋಗ ಒದಗಿಸಿ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿ
ಈ ಜಾಗವನ್ನ 1991 ರಲ್ಲಿ ಶಾಲೆಯ ಆಡಳಿತ ಮಂಡಳಿ ಹೆಸರಿನಲ್ಲಿ ತೆಗೆದುಕೊಂಡಿದ್ದೇವೆ. ನಾವು ಒತ್ತುವರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಹೈಕೋರ್ಟ್ ನಲ್ಲಿ ಅರ್ಜಿ ಕೂಡ ಸಲ್ಲಿಸಲಾಗಿದೆ. ತೀರ್ಪು ಬರುವ ವರೆಗೂ ಕಾಯುತ್ತೇವೆಂದು ಶಾಲೆಯ ಮುಖ್ಯಸ್ಥ ರಮೇಶ್ ಗುಪ್ತಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ