ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿ ನೀಡದಿದ್ದರೆ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್‌ ರದ್ದು; ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ

ನಮಗೆ ಖಾಸಗಿ ಆಸ್ಪತ್ರೆಗಳಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಿಲ್ಲ. ರೋಗಿ ಸಾವನ್ನಪ್ಪಿದರೂ ಮಾಹಿತಿ ನೀಡದ ಆಸ್ಪತ್ರೆಳಿದ್ದರೆ ಅಂತಹ ಪ್ರಕರಣದಲ್ಲಿ ಇನ್ನಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

news18-kannada
Updated:June 30, 2020, 3:45 PM IST
ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿ ನೀಡದಿದ್ದರೆ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್‌ ರದ್ದು; ಮೈಸೂರು ಜಿಲ್ಲಾಧಿಕಾರಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ಮೈಸೂರು (ಜೂನ್ 30); ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದು, ಮೃತಪಟ್ಟವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡದೆ ಇದ್ದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಅಲ್ಲದೆ ಲೈಸೆನ್ಸ್‌ ರದ್ದು ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಇಂದು ಅಧಿಕೃತ ಜ್ಞಾಪನಾ ಪತ್ರ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ ಕಚೇರಿ, "ಕೋವಿಡ್ -19 ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯ ವಹಿಸುತ್ತಿವೆ. ಎಲ್ಲಾ ಆಸ್ಪತ್ರೆಗಳು ಕೋವಿಡ್ ಗುಣಲಕ್ಷಣದ ರೋಗಿಯ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಯಾವುದೇ ಆಸ್ಪತ್ರೆಗಳಿಗೆ ಈ ಗುಣಲಕ್ಷಣದ ರೋಗಿ ದಾಖಲಾದರೆ ವೆಬ್‌ಸೈಟ್‌ಗೆ ಅಪ್ಡೇಟ್ ಮಾಡಬೇಕು ಆದರೆ ಕೆಲವೊಂದು ಆಸ್ಪತ್ರೆಗಳು ಮಾಹಿತಿ ನೀಡುತ್ತಿಲ್ಲ.

ಎರಡು ಕೋವಿಡ್ ಪ್ರಕರಣದಲ್ಲು ರೋಗಿ ಸಾವನ್ನಪ್ಪಿದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಇದು ನಿರ್ಲಕ್ಷ್ಯತನದ ಪರಮಾವಧಿಯಾಗಿದೆ. ಇದು ನಿಮಗೆ ಕೊನೆ ಎಚ್ಚರಿಕೆ. ಇನ್ಮುಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗುವವರ ಎಲ್ಲಾ ಮಾಹಿತಿ ನೀಡಿ  ಇಲ್ಲವಾದರೆ ನಿಮ್ಮ ಆರೋಗ್ಯ ಸಂಸ್ಥೆಯ ನೋಂದಣಿ ರದ್ದು ಮಾಡಬೇಕಾಗುತ್ತದೆ" ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

"ನಮಗೆ ಖಾಸಗಿ ಆಸ್ಪತ್ರೆಗಳಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಿಲ್ಲ. ರೋಗಿ ಸಾವನ್ನಪ್ಪಿದರೂ ಮಾಹಿತಿ ನೀಡದ ಆಸ್ಪತ್ರೆಳಿದ್ದರೆ ಅಂತಹ ಪ್ರಕರಣದಲ್ಲಿ ಇನ್ನಷ್ಟು ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕಾಗಿರುವುದು ಅನಿವಾರ್ಯವಾಗಿದೆ" ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ಸೋಂಕಿತ ಸಾವನ್ನಪ್ಪಿದ್ದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಈ ವಿಚಾರವನ್ನ ಖಚಿತಪಡಿಸಿದ್ದಾರೆ. ಕೊರೋನಾ ಸೋಂಕಿತ ಮೃತಪಟ್ಟಿರುವುದು ನಿಜ, ಈ ಬಗ್ಗೆ ಇಂದು ಸಂಜೆಯೆ ಹೆಲ್ತ್‌ಬುಲೆಟಿ‌ನ್‌ನಲ್ಲಿ ಖಚಿತವಾಗಲಿದೆ. ಇಂದು ಸಹ ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಬರುತ್ತೆ, ಎಷ್ಟು ಬರುತ್ತೆ ಅನ್ನೋದಕ್ಕಿಂತ ಎಷ್ಟು ಗಂಭೀರ ಪ್ರಕರಣ ಬರುತ್ತೆ ಅನ್ನೋದೆ ಮುಖ್ಯ.

ಇದನ್ನೂ ಓದಿ : CoronaVirus: ಕೊರೋನಾ ಭೀತಿ; ಗಾಂಧಿ ಬಜಾರ್‌ ಸೇರಿದಂತೆ ನಗರದ ಹಲವೆಡೆ ಸ್ವಯಂ ಪ್ರೇರಿತ ಲಾಕ್‌ಡೌನ್
ಮೈಸೂರಿನಲ್ಲಿ ಸದ್ಯ 5 ಮಂದಿ ಐಸಿಯೂ‌ನಲ್ಲಿದ್ದಾರೆ SARI ಹಾಗು ILI ಪ್ರಕರಣ ಹೆಚ್ಚಾಗುತ್ತಿವೆ. ಈ ಎರಡು ಪ್ರಕರಣದಲ್ಲಿ ಸೋಂಕಿತರು ಬೇಗ ಬಂದು ಆಸ್ಪತ್ರೆಗೆ ದಾಖಲಾಗಬೇಕು ಹಾಗಿದ್ದಲ್ಲಿ ಮಾತ್ರ ಸೋಂಕಿತರ ಪ್ರಾಣ ಉಳಿಸಲು ಸಾಧ್ಯವಾಗಲಿದೆ. ಮೈಸೂರಿನಲ್ಲಿ ನಿರಂತರ ಸ್ಯಾಂಪಲ್ ಟೆಸ್ಟ್ ನಡೆಯುತ್ತಿದೆ ಆದ್ಯತೆ ಮೇರೆಗೆ ಸ್ಯಾಂಪಲ್ ಟೆಸ್ಟ್ ಮಾಡುತ್ತಿದ್ದೇವೆ. ಮೊದಲ ಆದ್ಯತೆ ಸೋಂಕಿತರ ಸಂಪರ್ಕಿತ ವ್ಯಕ್ತಿಗಳಿಗೆ ಮಾತ್ರ ಇರಲಿದೆ" ಎಂದು ಅವರು ತಿಳಿಸಿದರು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading