ಬೆಡ್​ಗಳು ಭರ್ತಿ, ಹೊಸ ರೋಗಿಗಳಿಗೆ ಇಲ್ಲ ಸ್ಥಳ: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಅಸಹಾಯಕತೆ

ನಮ್ಮಲ್ಲಿ ಇಲ್ಲದ ಸೌಕರ್ಯದಿಂದ ಚಿಕಿತ್ಸೆ ಕೊಡುವುದಾದರೂ ಹೇಗೆ ಎನ್ನುವ ಪ್ರಶ್ನೆ ಅವರದ್ದು. ಕೋವಿಡ್ ರೋಗಿಗಳ ಅಲೆದಾಟದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೂಡಾ ತಮ್ಮ ಅಳಲು ತೋಡಿಕೊಂಡಿವೆ.

ಸಾಂದರ್ಭಿ ಚಿತ್ರ

ಸಾಂದರ್ಭಿ ಚಿತ್ರ

  • Share this:
ಬೆಂಗಳೂರು: ರಾಜ್ಯ ರಾಜಧಾನಿ ನಗರದಲ್ಲಿ ಅನೇಕ ಕಡೆ ರೋಗಿಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವಾಪಸ್ ಕಳಿಸುತ್ತಿರುವ ಘಟನೆಗಳು ಇತ್ತೀಚೆಗೆ ಪ್ರತಿದಿನ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬೆಡ್ ಖಾಲಿ ಇಲ್ಲ ಎಂದು ರೋಗಿಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.‌ ಆದರೆ ಇದು ಬೇಕಂತಲೇ ಮಾಡುತ್ತಿರುವುದಲ್ಲ, ನಮ್ಮ ಅಸಹಾಯಕತೆ ಎನ್ನುತ್ತಿವೆ ಪ್ರೈವೇಟ್ ಹಾಸ್ಪಿಟಲ್ಸ್.

ಅನಿವಾರ್ಯವಾಗಿ ರೋಗಿಗಳನ್ನು ವಾಪಸ್ ಕಳಿಸಬೇಕಾಗಿದೆ. ನಮ್ಮಲ್ಲಿ ಇಲ್ಲದ ಸೌಕರ್ಯದಿಂದ ಚಿಕಿತ್ಸೆ ಕೊಡುವುದಾದರೂ ಹೇಗೆ ಎನ್ನುವ ಪ್ರಶ್ನೆ ಅವರದ್ದು. ಕೋವಿಡ್ ರೋಗಿಗಳ ಅಲೆದಾಟದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೂಡಾ ತಮ್ಮ ಅಳಲು ತೋಡಿಕೊಂಡಿವೆ. ಪ್ರತಿಯೊಂದು ಆಸ್ಪತ್ರೆಯಲ್ಲೂ ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳು ಕೊರೋನಾ ಚಿಕಿತ್ಸೆಗೆ ಮೀಸಲಿವೆ. ರಾಜ್ಯ ಸರ್ಕಾರದ ಜೊತೆಗಿನ ಚರ್ಚೆಯ ನಂತರ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳಲ್ಲಿ ಶೇ 50ರಷ್ಟನ್ನು ಕೋವಿಡ್ ಚಿಕಿತ್ಸೆಗೆ ನೀಡಿವೆ.

ಬೆಂಗಳೂರಿನಲ್ಲಿ ಒಟ್ಟು 73 ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿ ಕೊರೊನಾ ವಿರುದ್ಧ ಹೋರಾಡ್ತಿವೆ. ಆದರೆ ಮೀಸಲಿರುವ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳಲ್ಲಿ ಬಹುತೇಕ ಆಗಲೇ ಫುಲ್ ಆಗ್ಬಿಟ್ಟಿವೆ. ರೋಗಿಗಳ ಸಂಬಂಧಿಕರು ಕೂಡಾ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆಯಾ ಇಲ್ಲವಾ ಎನ್ನುವುದನ್ನು ವಿಚಾರಿಸದೆ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸುತ್ತಾರೆ. ಇದರಿಂದಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದಕ್ಕೆ ಅಲೆಯುವಂತಾಗಿದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿ ದಿಢೀರನೆ ಬಂದ ರೋಗಿಗೆ ಹಾಸಿಗೆ, ವೆಂಟಿಲೇಟರ್ ಇಲ್ಲ ಎಂದು ವಾಪಸ್ ಕಳಿಸುತ್ತಿದ್ದಾರೆ. ವಿಕ್ರಮ್ ಆಸ್ಪತ್ರೆ, ಸೇಂಟ್ ಜಾನ್ಸ್, ಫೋರ್ಟಿಸ್, ಸಾಕ್ರಾ ಮುಂತಾದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಕುಟುಂಬಸ್ಥರು ಆಂಬ್ಯುಲೆನ್ಸ್ ಅಥವಾ ಖಾಸಗಿ ವಾಹನದಲ್ಲಿ ರೋಗಿಗಳನ್ನು ಕರೆತರುತ್ತಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಎಂಎಲ್​ಸಿಗೆ ಕೊರೋನಾ ಸೋಂಕು; ಪತ್ನಿ ಸಮೇತ ಕೋವಿಡ್ ಆಸ್ಪತ್ರೆಗೆ ದಾಖಲುಈ ವಿಚಾರದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಏಸಿಂಪ್ಟಮ್ಯಾಟಿಕ್ ರೋಗಿಗಳದ್ದು. ಖಾಸಗಿ ಆಸ್ಪತ್ರೆಗಳ ಬಹುಪಾಲು ಹಾಸಿಗೆಗಳಲ್ಲಿ ರೋಗಲಕ್ಷಣ ಇಲ್ಲದ ರೋಗಿಗಳೇ ತುಂಬಿ ಹೋಗಿದ್ದಾರೆ. ಹಿರಿಯ ವೈದ್ಯರೊಬ್ಬರು ಹೇಳುವ ಉದಾಹರಣೆಯ ಪ್ರಕಾರ ವಿಕ್ರಂ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗಾಗಿ 45 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಆದರೆ ಅದರಲ್ಲಿ 42 ಏಸಿಂಪ್ಟಮ್ಯಾಟಿಕ್ ರೋಗಿಗಳು ಸದ್ಯ ಇದ್ದಾರೆ. ಇವರನ್ನೆಲ್ಲಾ ಮನೆಗೆ ಶಿಫ್ಟ್ ಮಾಡಿದ್ರೆ ಅಗತ್ಯ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಾಧ್ಯವಾಗುತ್ತದೆ. ಆದ್ದರಿಂದಲೇ ತುರ್ತು ಪರಿಸ್ಥಿತಿಯ ರೋಗಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಿದೆ. ನಮ್ಮ ರಾಜ್ಯದಲ್ಲಿ ಶೇ 60 ರಿಂದ 80 ರಷ್ಟು ಸೋಂಕಿತರು ಏಸಿಂಪ್ಟಮ್ಯಾಟಿಕ್ ಇದ್ದಾರೆ. ಇವರೆಲ್ಲರಿಗೂ ಮನೆಗಳಲ್ಲಿ ಚಿಕಿತ್ಸೆ ಸಾಧ್ಯವಾದರೆ ತುರ್ತು ಚಿಕಿತ್ಸೆ ಅವಶ್ಯಕತೆ ಇರುವ ಉಳಿದೆಲ್ಲಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸ್ಥಳ ಸುಲಭವಾಗಿ ಸಿಗಲಿದೆ.
Published by:Vijayasarthy SN
First published: