HOME » NEWS » District » PRIVATE HOSPITALS IN BENGALURU ARE HALF FILLED WITH COVID PATIENTS AS CASES SKY ROCKET SHTV SNVS

ಕೋವಿಡ್ ಕೇಕೆ - ಖಾಸಗಿ ಆಸ್ಪತ್ರೆಗಳ ಅರ್ಧದಷ್ಟು ಬೆಡ್​ಗಳು ಕೊರೋನಾ ಸೋಂಕಿತರಿಂದಲೇ ಭರ್ತಿ

ಕೊರೋನಾದ ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿದೆ. ರಾಜ್ಯದಲ್ಲಿ ದಿನವೊಂದಕ್ಕೆ 6 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರಿನಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಅರ್ಧದಷ್ಟು ಭಾಗ ಕೋವಿಡ್ ರೋಗಿಗಳಿಂದಲೇ ತುಂಬಿಹೋಗಿದೆ.

news18-kannada
Updated:April 7, 2021, 8:32 AM IST
ಕೋವಿಡ್ ಕೇಕೆ - ಖಾಸಗಿ ಆಸ್ಪತ್ರೆಗಳ ಅರ್ಧದಷ್ಟು ಬೆಡ್​ಗಳು ಕೊರೋನಾ ಸೋಂಕಿತರಿಂದಲೇ ಭರ್ತಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಇದರ ಪರಿಣಾಮ ಕೊರೋನಾ‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಅರ್ದಕ್ಕರ್ದದಷ್ಟು ಬೆಡ್ ಗಳು ಕೊರೋನಾದಿಂದ ಫುಲ್ ಆಗುತ್ತಿವೆ. ಇದೇ ವೇಗದಲ್ಲಿ ಕೊರೊನಾ ಕೇಸ್ ಹೆಚ್ಚಾದ್ರೆ ಆಸ್ಪತ್ರೆಗಳಲ್ಲಿ ಬೆಡ್​ಗಳೇ ಸಿಗೋದು ಡೌಟು.

ರಾಜ್ಯದಲ್ಲಿ 2ನೆ ಅಲೆ ಕೊರೊನಾ ಅತಿ ಹೆಚ್ಚು ಪರಿಣಾಮಕಾರಿಯಾಗಿದೆ. ಕಳೆದ ವರುಷವಂತೂ ಕೊರೊನಾಗೆ ಸಾಕಷ್ಟು ನಲುಗಿದ್ದ ಜನತೆ ಈ ಬಾರಿಯೂ ಎರಡನೇ ಅಲೆಗೆ ತೊಂದರೆ ಎದುರಿಸುತ್ತಿದ್ದಾರೆ. ಕಳೆದೆರಡು ವಾರದಿಂದ ಕೊರೋನ ಅರ್ಭಟ ಹೆಚ್ಚಾಗುತ್ತಿರುವುದರಿಂದ ಇದೀಗ ಆಸ್ಪತ್ರೆಯತ್ತ ಕೊರೋನಾ ಸೋಂಕಿತರು ಮುಖ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಆರು ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ದಾಖಲಾಗುತ್ತಿದ್ದು, ಬೆಂಗಳೂರಿನಲ್ಲಿ ನಾಲ್ಕು ಸಾವಿರ ಗಡಿ ದಾಟುತ್ತಿದೆ. ಇಂಥ ಸಂದರ್ಭದಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಶೇ.30ರಷ್ಟು ಬೆಡ್ ಕೊವಿಡ್ ಸೋಂಕಿತರಿಂದ ಭರ್ತಿಯಾದರೆ, ಚಿಕ್ಕ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಕೊರೊನಾ ರೋಗಿಗಳಿಂದ‌ ಭರ್ತಿಯಾಗಿವೆ. ಹೀಗೆ ಪರಿಸ್ಥಿತಿ ಮೀರಿದ್ರೆ ಬೆಡ್​ಗಳೆಲ್ಲ ಕೊರೊನಾ ರೋಗಿಗಳಿಂದಲೇ ತುಂಬಿಹೋಗಲಿವೆ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್‌ ಹೋಮ್ ಸಂಘ (ಫನಾ) ಎಂದು ಕಾರ್ಯದರ್ಶಿ ಡಾ. ರಾಜಶೇಖರ್ ಅವರು ವಾಸ್ತವ ಚಿತ್ರಣ ನೀಡಿದ್ದಾರೆ.

ಕೊರೊನಾ‌ ಕೇಸ್‌ ಹೆಚ್ಚಳ ಹಿನ್ನೆಲೆ ಈಗಾಗಲೇ ಖಾಸಗಿ ಆಸ್ಪತ್ರೆಗಳ ಜೊತೆ ಸರ್ಕಾರ ಸಭೆ ನಡೆಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಪ್ರತ್ಯೇಕ ಸಭೆ ನಡೆಸಿದ್ದು ಶೇ. 20ರಷ್ಟು ಬೆಡ್ ಕೊರೋನಾಗಾಗಿ ಮೀಸಲಿಡುವಂತೆ ಸೂಚಿಸಿದೆ. ಇದರ‌ ಹಿನ್ನೆಲೆ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಈ ಸೂಚನೆ ನೀಡುವ ಮೊದಲೇ ಅಂದರೆ ಮಾರ್ಚ್ ಎರಡನೇ ವಾರದಲ್ಲಿ ಶೇ. 5ರಷ್ಟು ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತರು, ಕೇವಲ ವಾರದಲ್ಲಿ ಕೊರೊನಾ ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ನಾಲ್ಕು‌ ಪಟ್ಟು ಹೆಚ್ಚಾಗಿದೆ. ಇದೇ ರೀತಿ ಮುಂದುವರೆದರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಕಳೆದ ವರುಷದಂತೆ ಹೋಟೆಲ್, ಲಾಡ್ಜ್ ಗಳನ್ನೇ ಕೊರೊನಾ ಕೇರ್ ಸೆಂಟರ್ ಮಾಡಬೇಕಾಗುತ್ತದೆ ಎನ್ನುತ್ತಾರೆ ಫನಾ ಕಾರ್ಯದರ್ಶಿ ಡಾ ರಾಜಶೇಖರ್.

ಇದನ್ನೂ ಓದಿ: KSRTC Workers Strike - ಮುಷ್ಕರ ಎಫೆಕ್ಟ್ - ಖಾಸಗಿ ಬಸ್​ಗಳು ಬಂದರೂ ನಿಲ್ದಾಣಕ್ಕೆ ಬಾರದ ಜನರು

ಫನಾ ವ್ಯಾಪ್ತಿಯಲ್ಲಿ ಎಷ್ಟು ಆಸ್ಪತ್ರೆ, ಬೆಡ್ ಗಳಿವೆ?
ರಾಜ್ಯದಲ್ಲಿ ಒಟ್ಟು ಆರು ಸಾವಿರ ಆಸ್ಪತ್ರೆ
ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಆಸ್ಪತ್ರೆಗಳುರಾಜ್ಯದಲ್ಲಿ 4500 ಐಸಿಯು ಬೆಡ್
ಬೆಂಗಳೂರಿನಲ್ಲಿ 600 ಐಸಿಯು ಬೆಡ್ ಗಳಿವೆ
ರಾಜ್ಯದಲ್ಲಿ 30 ಸಾವಿರ ಸಾಮಾನ್ಯ ಬೆಡ್ ಗಳು
ಬೆಂಗಳೂರಿನಲ್ಲಿ ಆರು ಸಾವಿರ ಬೆಡ್ ಗಳು

ಕಳೆದ ಬಾರಿ 75 ಸಾವಿರ ಜನರಿಗೆ ಕೊರೋನಾ ಚಿಕಿತ್ಸೆ ನೀಡಲಾಗಿತ್ತು. ರಾಜ್ಯದಲ್ಲಿಂದು 6150 ಪ್ರಕರಣಗಳು ಪತ್ತೆಯಾದರೆ ಬೆಂಗಳೂರಿನಲ್ಲಿಯೇ ಇಂದು 4266 ಕೇಸ್ ದಾಖಲಾಗಿದೆ. 3487 ಮಂದಿ ಇಂದು ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದರೆ, ಈಗಲೂ 351 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಕೇಸ್​ಗಳ ಸಂಖ್ಯೆ ಹೆಚ್ಚಾದ್ರೆ ಬೆಡ್​ಗಳಿಗಾಗಿ ಕೊರೊನಾ ಸೋಂಕಿತರ ಪರದಾಟ ತಪ್ಪಿದ್ದಲ್ಲ. ಇದಕ್ಕಾಗಿ ಕೊರೊನಾ‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇಲ್ಲವಾದಲ್ಲಿ‌ ಕಳೆದ ವರುಷದ ಕೊರೊನಾ ಸಂಕಷ್ಟ ಮರುಕಳಿಸಿ ಮತ್ತೊಮ್ಮೆ ಲಾಕ್ ಡೌನ್​ಗೆ ನಾವು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ವರದಿ: ಶರಣು ಹಂಪಿ
Published by: Vijayasarthy SN
First published: April 7, 2021, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories