ಕೊರೋನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ : ಚಿಕಿತ್ಸೆ ನೀಡದೇ ಇದ್ದರೂ ದುಬಾರಿ ಬಿಲ್ ನೀಡಿದ ಆಸ್ಪತ್ರೆ

ಕೊರೋನಾದ ಯಾವುದೇ ಲಕ್ಷಣ ಪತ್ತೆಯಾಗದಿದ್ದರೂ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅವರ ಆಸ್ಪತ್ರೆ ಬಿಲ್ ನೋಡಿದಾಗ ಒಂದು ‌ಬಾರಿ ಮೂರ್ಛೆ ಹೋದಂತಾಗಿತ್ತು

news18-kannada
Updated:July 29, 2020, 10:21 AM IST
ಕೊರೋನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳ ಲೂಟಿ : ಚಿಕಿತ್ಸೆ ನೀಡದೇ ಇದ್ದರೂ ದುಬಾರಿ ಬಿಲ್ ನೀಡಿದ ಆಸ್ಪತ್ರೆ
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು(ಜುಲೈ.29): ಕೊರೋನಾ ಹೆಸರಿನಲ್ಲಿ ಆಸ್ಪತ್ರೆಗಳು ಜನರನ್ನು ಲೂಟಿ ಮಾಡುತ್ತಿದೆ ಎನ್ನುವ ಆರೋಪ ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ಲೂಟಿ ಎಗ್ಗಿಲ್ಲದೆ ಸಾಗುತ್ತಿದೆ.

ಸುಳ್ಯ ಮೂಲದ ಹೃದಯ ಸಂಬಂಧಿ ಸಮಸ್ಯೆಗೆ ದಾಖಲಾಗಿದ್ದ ವ್ಯಕ್ತಿಯ ಜೊತೆಗೆ ಅವರನ್ನು ನೋಡಿಕೊಳ್ಳಲೆಂದು ಬಂದಿದ್ದ ಶರತ್ ಕುಮಾರ್ ಎನ್ನುವವರ ಗಂಟಲು ದ್ರವ ಪರೀಕ್ಷೆಯನ್ನು ಆಸ್ಪತ್ರೆಯಲ್ಲಿ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಶರತ್ ಕುಮಾರ್ ಗೆ ಕೊರೋನಾ ನೆಗೆಟಿವ್ ಪತ್ತೆಯಾಗಿದೆ.

ಕೊರೋನಾದ ಯಾವುದೇ ಲಕ್ಷಣ ಪತ್ತೆಯಾಗದಿದ್ದರೂ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಅವರ ಆಸ್ಪತ್ರೆ ಬಿಲ್ ನೋಡಿದಾಗ ಒಂದು ‌ಬಾರಿ ಮೂರ್ಛೆ ಹೋದಂತಾಗಿತ್ತು.

ಆಸ್ಪತ್ರೆ ನೀಡಿದ ಬಿಲ್


ಎರಡು ದಿನ ಆಸ್ಪತ್ರೆಯಲ್ಲಿ ಎರಡು ಜಗ್ ಬಿಸಿ ನೀರು, ಒಂದು ಸಣ್ಣ ಬಾಟಲ್ ಸ್ಯಾನಿಟೈಸರ್ ಗೆ‌ ನೀಡಿದ್ದು ಹೊರತುಪಡಿಸಿ ಶರತ್ ಅವರಿಗೆ ಒಂದು ಮಾತ್ರೆಯನ್ನೂ ನೀಡಿರಲಿಲ್ಲ. ಆಸ್ಪತ್ರೆಯ ಎರಡು ದಿನದ ರೂಮ್ ಬಾಡಿಗೆ 2,100 ಸೇರಿದಂತೆ ಒಟ್ಟು ಬಿಲ್ 21,305 ರೂಪಾಯಿಗಳಾಗಿತ್ತು. ಕೇವಲ ಎರಡು ಜಗ್ ಬಿಸಿ ನೀರು, ಒಂದು ಸ್ಯಾನಿಟೈಸರ್ ಗಾಗಿ 21,305 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಇದನ್ನೂ ಓದಿ : ಕ್ಷೇತ್ರದ 4 ಲಕ್ಷ ಜನರಿಗೆ ಉಚಿತವಾಗಿ ಆಯುರ್ವೇದ ಔಷಧ ವಿತರಣೆಗೆ ಮುಂದಾದ ಸಚಿವ ಈಶ್ವರಪ್ಪ

ಆಸ್ಪತ್ರೆಯ ಪ್ರಕಾರ ಬಹುತೇಕ ಚಾರ್ಜ್ ಪಿಪಿಇ ಕಿಟ್ ಗಳದ್ದಾಗಿದ್ದು, ಉಳಿದವು ವೈದ್ಯರ ಹಾಗೂ ನರ್ಸ್ ಗಳ ಭೇಟಿ ನೀಡಿದ ಚಾರ್ಜ್ ಗಳಾಗಿವೆ. ಇದರ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶರತ್ ಕುಮಾರ್ ಅವರ ಸಂಬಂಧಿ ದಿನೇಶ್ ಅಡ್ಕಾರ್ ಎಂಬವರಿಗೂ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ನಾಲ್ಕು ದಿನ ದಿನೇಶ್ ಅವರೂ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ದಿನೇಶ್ ಅವರ ಬಿಲ್ 88,450 ರೂಪಾಯಿಗಳಾಗಿವೆ. ಕೊರೋನಾ ಹೆಸರಿನಲ್ಲಿ ಆಸ್ಪತ್ರೆಗಳಲ್ಲಾಗುತ್ತಿರುವ ಈ ಹಗಲು ದರೋಡೆಗೆ ಕಡಿವಾಣವಿಲ್ಲವೇ ಎನ್ನುವ ಪ್ರಶ್ನೆಗಳೂ ಮೂಡಲಾರಂಭಿಸಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 5103 ಕೊರೋನಾ ಪಾಸಿಟೀವ್ ಪತ್ತೆಯಾಗಿದ್ದು, ಇದರಲ್ಲಿ 2700 ಮಂದಿ ಗುಣಮುಖರಾಗಿದ್ದು, 2632 ಸಕ್ರಿಯ ಪ್ರಕರಣಗಳಿವೆ. ನಿನ್ನೆ ಜಿಲ್ಲೆಯಲ್ಲಿ 173 ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಸಂಬಂಧಿ 4 ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸಂಭಂಧಿ 135 ಸಾವು ಸಂಭವಿಸಿದೆ. ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳ ಬಿಲ್ ಗಳೂ ಜಾಸ್ತಿಯಾಗುತ್ತಿವೆ.
Published by: G Hareeshkumar
First published: July 29, 2020, 10:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading