ನಿಯಮ ಮೀರಿ ಮಣ್ಣು ಬಗೆದು ಕೆರೆ ಹಾಳು ಮಾಡಿದ ಖಾಸಗಿ ಕಂಪನಿ; ಕ್ರಮ ಕೈಗೊಳ್ಳದ ಸಣ್ಣ ನೀರಾವರಿ ಇಲಾಖೆ

ಇದೇ 05 ರಂದು  ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಹೆದ್ದಾರಿ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇಷ್ಟಾದ್ರು ಕೂಡಾ ಸಣ್ಣ ನೀರಾವರಿ ಇಲಾಖೆ EE ರಾಧಾಕೃಷ್ಣ, AEE ಗುರು ಬಸವರಾಜಯ್ಯ ಸೇರಿ ಹಲವು ಅಧಿಕಾರಿಗಳು ಮೌನವಹಿಸಿದ್ದು, ಕೆರೆಯಂಚಿನ ಗ್ರಾಮಗಳ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಹಾಳಾಗಿರುವ ಕೆರೆ.

ಹಾಳಾಗಿರುವ ಕೆರೆ.

  • Share this:
ಚಿತ್ರದುರ್ಗ: ಭೂಮಿಯ ಒಡಲಲ್ಲಿ ಅಂತರ್ಜಲ ಹೆಚ್ಚಿಸಬೇಕು ಅಂತ ಸರ್ಕಾರಗಳು ಕೆರೆ ಅಭಿವೃದ್ದಿ ಮಾಡೋಕೆ ಸೂಚಿಸಿವೆ. ಆ ಕೆರೆಗಳ ಅಭಿವೃದ್ದಿ ಹೆಸರಲ್ಲಿ ಸಾವಿರಾರು ಕೋಟಿ ಹಣವನ್ನೂ ನೀಡುತ್ತಲಿವೆ. ಆ ಆದೇಶವನ್ನ ಪಾಲಿಸಿ ಕೆರೆಗಳ ಪುನಶ್ಚೇತನ ಪಡಿಸಿ ಅಭಿವೃದ್ದಿ ಪಡಿಸಬೇಕಾದ ಅಧಿಕಾರಿಗಳು‌ ಮಾತ್ರ ನಿರ್ಲಕ್ಷ ತೋರಿದ್ದಾರೆ. ಇದೀಗ  ಕೆರೆಗಳ ಹೂಳು ತೆಗೆಯಲು ಒಡಂಬಡಿಕೆ ಮಾಡಿಕೊಂಡಿದ್ದ ಖಾಸಗಿ ಕಂಪನಿ ಸಾವಿರಾರು ಲೋಡ್ ಮಣ್ಣು ತುಂಬಿ ಕೆರೆಗಳ ವಿನ್ಯಾಸವನ್ನೇ ಮಾರೆಯಾಗಿಸಿದೆ. ಇದರಿಂದ ಆಕ್ರೋಶಗೊಂಡ ಜನರು ಆಡಳಿತ ವ್ಯವಸ್ಥೆ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಮಣ್ಣು ಬಗೆದು ಹೊಡಲನ್ನ ಬರಿದಾಗಿಸಿರೋ ಈ ಕೆರೆಗಳ ದೃಷ್ಯ ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ತಿಪ್ಪಯ್ಯನಕೋಟೆ, ಕೋಡಿಹಳ್ಳಿ ಗ್ರಾಮಗಳಲ್ಲಿ. ಇದೇ ಕೆರೆಗಳನ್ನ ತುಂಬಿಸಲು ಒತ್ತಾಯಿಸಿ ಈ ಭಾಗದ ಜನರು ವರ್ಷಗಟ್ಟಲೇ ಹೋರಾಟ ಮಾಡಿದ್ದಾರೆ.

ಇದರ ಫಲವಾಗಿ ಕೆರೆಗಳಿಗೆ ಕೆಲವೇ ದಿನಗಳಲ್ಲಿ ಭದ್ರಾ ಮೇಲ್ದಂಡೆ ನೀರು ಹರಿಯಬೇಕಿತ್ತು. ಆದರೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ, ದಿಲೀಪ್ ಬಿಲ್ಡ್ಕನ್ ಹೆದ್ದಾರಿ ಕಂಪನಿ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕಿನ ಒಟ್ಟು‌16 ಕೆರೆಗಳಲ್ಲಿ ಹೂಳು ತುಂಬಿ ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸೋಕೆ ಅನುಮತಿ ಪಡೆದಿತ್ತು. ಅದರಂತೆ ಸರ್ಕಾರದ ಅನುಮತಿ ಪಡೆದು ಒಪ್ಪಂದವನ್ನೂ ಮಾಡಿಕೊಂಡಿದೆ. ಆದರೇ ಇಲಾಖೆಯ ನಿಯಮ ಮೀರಿ ಇಪ್ಪತ್ತಕ್ಕೂ ಹೆಚ್ಚು ಅಡಿ ಆಳ ಕೆರೆ ಮಣ್ಣು ಬಗೆದು ಸಾವಿರಾರು ಲೋಡ್ ಮಣ್ಣನ್ನ ಲೂಟಿ ಮಾಡಿದೆ.

ಸರ್ಕಾರದ ಆದೇಶದಂತೆ  ಹೂಳೆತ್ತಲೂ  ನೀಡಿದ್ದು ಮಾತ್ರ ಒಂದು ಮೀಟರ್. ಇದರಿಂದ ನೂರಾರು ವರ್ಷಗಳ ಐತಿಹಾಸಿಕ ಕೆರೆಗಳು ಅಳಿವಿನಂಚಿಗೆ ತಲುಪಿವೆ. ಆದರೇ ಅಧಿಕಾರಿಗಳು ಮಾತ್ರ ಕಣ್ಮಚ್ಚಿ ಕುಳಿತಿದ್ದಾರೆ, ಅಲ್ಲದೇ  ನಾಮಕವಸ್ತೆಗೆ ಹೆದ್ದಾರಿ ಕಂಪನಿಯ ಲಾರಿ ಚಾಲಕರ ವಿರುದ್ದ ಪ್ರಕರಣ ದಾಖಲಿಸಿ, ಕಂಪನಿಗೆ ನೋಟೀಸ್ ಕೊಟ್ಟಿದೇವೆ, ಒಪ್ಪಂದ ರದ್ದು‌ ಮಾಡಿದ್ದೇವೆ ಅಂತ ಸಬೂಬು ಹೇಳುತ್ತಿದ್ದಾರೆ. ಇನ್ನೂ ರಾಜರೋಷವಾಗಿ ಮಣ್ಣು ಲೂಟಿ ಮಾಡ್ತಿದ್ದ ಹೆದ್ದಾರಿ ಕಂಪನಿಯ ವಿರುದ್ದ ಕೋಡಿಹಳ್ಳಿ ಗ್ರಾಮಸ್ಥರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ಇದನ್ನೂ ಓದಿ: VK Sasikala: ಬೌರಿಂಗ್ ಆಸ್ಪತ್ರೆಯ ಐಸಿಯುಗೆ ಶಿಫ್ಟ್​ ಆದ ಜಯಲಲಿತಾ ಆಪ್ತೆ ಶಶಿಕಲಾ; ಆರೋಗ್ಯದಲ್ಲಿ ಅಲ್ಪ ಸುಧಾರಣೆ

ಅದರಂತೆ ಇದೀಗ ಇದೇ 05 ರಂದು  ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಹೆದ್ದಾರಿ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇಷ್ಟಾದ್ರು ಕೂಡಾ ಸಣ್ಣ ನೀರಾವರಿ ಇಲಾಖೆ EE ರಾಧಾಕೃಷ್ಣ, AEE ಗುರು ಬಸವರಾಜಯ್ಯ ಸೇರಿ ಹಲವು ಅಧಿಕಾರಿಗಳು ಮೌನವಹಿಸಿದ್ದು, ಕೆರೆಯಂಚಿನ ಗ್ರಾಮಗಳ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ಬರದನಾಡಿನ ಈ ಕೆರೆಗಳು ಕೆಲವೇ ದಿನಗಳಲ್ಲಿ ಭದ್ರಾ ನೀರಿನಿಂದ ತುಂಬಿ, ಅನ್ನದಾತರ ಬದುಕಿನ ಜೀವ ಸೆಲೆಯಾಗಬೇಕಿತ್ತು. ಆದ್ರೆ ದಿಲೀಪ್ ಬಿಲ್ಡ್ಕನ್ ಹೈವೆ ಕಂಪನಿಯ ಅಕ್ರಮ ಮಣ್ಣಿನಾಸೆಗೆ  ಕೆರೆಗಳು ಹಾಳಾಗಿ ಬರಡು ಭೂಮಿಯಂತಾಗಿವೆ.
Published by:MAshok Kumar
First published: