Chamarajanagara: ಕೊತ ಕೊತ ಕುದಿಯುವ ಎಣ್ಣೆಯಿಂದ ಕಜ್ಜಾಯ ತೆಗೆದ ಅರ್ಚಕ: ವಿಡಿಯೋ ನೋಡಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಸಿದ್ದಪ್ಪಾಜಿಯ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ಭಾಗಿಯಾಗುತ್ತಾರೆ.

ಬಿಸಿ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆಯುತ್ತಿರುವ ಅರ್ಚಕ

ಬಿಸಿ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆಯುತ್ತಿರುವ ಅರ್ಚಕ

  • Share this:
ಭಾರತದಲ್ಲಿ ಎಲ್ಲ ಧರ್ಮದವರು (Religion) ವಾಸವಾಗಿದ್ದಾರೆ. ಧಾರ್ಮಿಕ ಆಚರಣೆಗಳಿಗೆ (Tradition) ಭಾರತದಲ್ಲಿ (India) ವಿಶೇಷ ಸ್ಥಾನ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು, ಭಾಷೆ. ಜೀವನಶೈಲಿ ಹೀಗೆ ಎಲ್ಲವೂ ಬದಲಾಗುತ್ತಾ ಇರುತ್ತದೆ. ಕೆಲವು ಆಚರಣೆಗಳಿಗೆ ಮೂಢನಂಬಿಕೆ ಎಂಬ ಅನ್ವರ್ಥ ನಾಮ ಸಹ ಇರೋದುಂಟು. ಇದು ನಂಬಿಕೆ ವಿಷಯ ಆಗಿರೋದದರಿಂದ ಅಂತಹ ಆಚರಣೆಗಳು ಇಂದಿಗೂ ನಡೆದುಕೊಂಡು ಬಂದಿವೆ. ದೇವರಿಗೆ ಹರಕೆ ಕಟ್ಟಿಕೊಳ್ಳುವುದು, ಉಪವಾಸ ವ್ರತ ಆಚರಣೆ,. ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಹೀಗೆ ಹತ್ತು ಹಲವು ಸಂಪ್ರದಾಯದ ನಡುವೆ ನಮ್ಮ ಜೀವನದ ಬಂಡಿ ಸಾಗುತ್ತಿದೆ. ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತೇವೆ. ಕೆಲವರು ಈ ಆಚರಣೆಗಳನ್ನು ಪರೀಕ್ಷೆ ನಡೆಸಲು ಮುಂದಾಗಿ ಹಲವು ಕಾರಣಗಳನ್ನು  ನೀಡಬಹುದು. ಅದೇ ಕಾರಣ ನೀಡಿದ್ರೂ ನಂಬಿಕೆ ಮುಂದೆ ಅದು ಶೂನ್ಯವಾಗಿರುತ್ತದೆ.

ಹೌದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಸಿದ್ದಪ್ಪಾಜಿಯ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಜನ ಭಾಗಿಯಾಗುತ್ತಾರೆ.

ಈ ವೇಳೆ ಸಾವಿರಾರು ಜನರ ಸಮ್ಮುಖದಲ್ಲಿ ಸಿದ್ದಪ್ಪಾಜಿ ಎಂಬ ಅರ್ಚಕ ಕೊತ ಕೊತ ಕುದಿಯುವ  ಎಣ್ಣೆಗೆ ಕೈ ಹಾಕುತ್ತಾರೆ. ಬರಿಗೈಯಲ್ಲಿಯೇ ಬಿಸಿ ಬಿಸಿ ಕಜ್ಜಾಯ ತೆಗೆಯುತ್ತಾರೆ.

ಇದನ್ನೂ ಓದಿ:  ಸುಟ್ಟ ಗಾಯವಾದರೆ ಏನು ಮಾಡಬೇಕು? ಏನು ಮಾಡಬಾರದು?

ಭಕ್ತರ ನಂಬಿಕೆ

ಅರ್ಚಕರ ಮೇಲೆ ಸಿದ್ದಾಪ್ಪಜ್ಜಿ ಬರುತ್ತಾರೆ ಎಂದು ಭಕ್ತರು ಹೇಳುತ್ತಾರೆ. ಇನ್ನು ಈ ವಿಸ್ಮಯವನ್ನು ನೋಡಲು ಆಗಮಿಸುವ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ. ಇನ್ನು ಇದೇ ವೇಳೆ ಕೆಲವರು ಬಿಸಿ ಬಿಸಿ ಎಣ್ಣೆಗೆ ಕೈ ಹಾಕುತ್ತಾರೆ. ಇಂದು ಬೆಳಗ್ಗೆ ಈ ವಿಶೇಷ ಜಾತ್ರೆ ನಡೆದಿದೆ.

ಅಡುಗೆ ಮಾಡುವಾಗ ಬಿಸಿ ಎಣ್ಣೆ ಒಂದು ಹನಿ ತಾಗಿದರೆ ಜೋರು ಜೋರಾಗಿ ಕೂಗುತ್ತಾರೆ, ಇದರ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಅಯ್ಯಪ್ಪ ಸ್ವಾಮಿ ಭಕ್ತರು ಬಿಸಿ ಎಣ್ಣೆಯಲ್ಲಿ ಬೋಂಡಾ ತೆಗೆಯುವ ವಿಡಿಯೋಗಳು ವೈರಲ್ ಆಗಿರುತ್ತವೆ.

ಬಿಸಿ ಎಣ್ಣೆಗೆ ಕೈ ಹಾಕಿ ಚಿಕನ್ ಫ್ರೈ ತೆಗೆಯುವ ವಿಡಿಯೋ ವೈರಲ್

ಕೆಲವೊಮ್ಮೆ ಹೋಟೆಲ್ ಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಬಿಸಿ ಎಣ್ಣೆಗೆ ಕೈ ಹಾಕಿ ಚಿಕನ್ ಫ್ರೈ (Chicken Fry) ತೆಗೆಯುವ ವ್ಯಕ್ತಿಯ ವಿಡಿಯೋ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.



ಇದನ್ನೂ ಓದಿ:  Jog Falls: ರಾಜ್ಯಪಾಲರ ಜೋಗ ವೀಕ್ಷಣೆಗಾಗಿ ನದಿಗೆ ನೀರು ಬಿಟ್ಟ ಅಧಿಕಾರಿಗಳು: ಆದ್ರೆ ಅದನ್ನ ಅವರು ನೋಡಲೇ ಇಲ್ಲ

ಸ್ಟ್ರೀನ್ ಫುಡ್ ಮರಾಟಗಾರ ಮಾತ್ರ ಕೊತ ಕೊತ ಕುದಿಯುವ ಎಣ್ಣೆಗೆ ಕೈ ಹಾಕುತ್ತಾನೆ, ಎಣ್ಣೆಯಲ್ಲಿ ಕೈಯಲ್ಲಿ ಹಿಡಿದು ಸಹ ತೋರಿಸುತ್ತಾನೆ, ಎಣ್ಣೆಯಲ್ಲಿ ಫ್ರೈ ಆಗುತ್ತಿರುವ ಚಿಕನ್ ಹೊರ ತೆಗೆಯುತ್ತಾನೆ.

ವೈರಲ್ ಆಗುತ್ತಿರುವ ವಿಡಿಯೋ

ಕೆಲವರು ಇದು ಚಿಕನ್ ಫ್ರೈ ಅಲ್ಲ  ಫಿಂಗರ್ ಫ್ರೈ (Finger Fry) ಅಂತ ಬರೆದುಕೊಂಡ್ರೆ, ಮತ್ತೊಬ್ಬರು ರಿಯಲ್ ಲೈಫ್ ಐರನ್ ಮ್ಯಾನ್ (Real-Life Iron Man) ಎಂದು ಹಾಡಿ ಹೊಗಳಿದ್ದಾರೆ. ನಾನ್ ವೆಜ್ ಫುಡ್ ಡೈ (nonvegfoodie) ಹೆಸರಿನ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, 18 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 55 ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು 500ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ, ಆದ್ರೆ ವಿಡಿಯೋ ಎಲ್ಲಿಯದ್ದು,  ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.

ಈ ವಿಡಿಯೋ ನೋಡಿದ ನೆಟ್ಟಿಗರು ಈ ವ್ಯಕ್ತಿಗೆ ಬಿಸಿ ತಾಗಲ್ಲವಾ ಎಂದು ಪ್ರಶ್ನೆ ಮಾಡುವ ಮೂಲಕ ಅಚ್ಚರಿ ಹೊರ ಹಾಕಿದ್ದಾರೆ. ಕೆಲ ನೆಟ್ಟಿಗರು ಹೋಟೆಲ್ ವಿಳಾಸ ತಿಳಿಸಿ. ನಾನು ಸಹ ಒಮ್ಮೆ ಆ ವ್ಯಕ್ತಿಯನ್ನು ಭೇಟಿಯಾಗುತ್ತೇನೆ. ಆತನ ಕೈಯಿಂದ ಹೊರ ತೆಗೆದ ಚಿಕನ್ ಫ್ರೈ ಸವಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ,
Published by:Mahmadrafik K
First published: