HOME » NEWS » District » PREPARATION FOR COVID19 VACCINE STORAGE IN UTTARA KANNADA DISTRICT DKK HK

Covid19 vaccine: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧತೆ

ಒಟ್ಟು ಜಿಲ್ಲೆಯಲ್ಲಿ 7246 ಸರಕಾರಿ ಸಿಬ್ಬಂದಿ, 138 ರಕ್ಷಣಾ ಇಲಾಖೆ ಸಿಬ್ಬಂದಿ ಹಾಗು 4602 ಖಾಸಗಿ ಸಿಬ್ಬಂದಿ ಸೇರಿದಂತೆ 12133 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 2177 ಸರಕಾರಿ ಸಿಬ್ಬಂದಿಗಳು ಹಾಗು 3008 ಖಾಸಗಿ ಸಿಬ್ಬಂದಿಗಳು ಸೇರಿದಂತೆ 5185 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ

news18-kannada
Updated:January 8, 2021, 3:42 PM IST
Covid19 vaccine: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧತೆ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜನವರಿ.08): ಕೋವಿಡ್ ಲಸಿಕೆ ನೀಡಲು ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಕೋವಿಡ್ ಸಾಫ್ಟ್​​​ವೇರ್​ ಮೂಲಕ ನೊಂದಣಿ ಮಾಡಿಕೊಂಡು ಅದರಂತೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 12133 ಆರೋಗ್ಯ ಸಿಬ್ಬಂದಿಗಳಿಗೆ ನೀಡಲಾಗುತ್ತಿದ್ದು, 2177 ಸರಕಾರಿ ಸಿಬ್ಬಂದಿಗಳು ಹಾಗು 3008 ಖಾಸಗಿ ಸಿಬ್ಬಂದಿಗಳು ಸೇರಿದಂತೆ 5185 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ. ಎರಡನೇ ಹಂತದಲ್ಲಿ ನಗರಸಭೆ ಪೌರಕಾರ್ಮಿಕರು ಹಾಗು ಮೂರನೇ ಹಂತದಲ್ಲಿ 50 ವರ್ಷಕ್ಕೂ ಹೆಚ್ಚು ವಯಸ್ಸಿನ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ. ವಾಕ್ಸಿನೇಶನ್ ಸೆಂಟರ್‌ಗಳಾಗಿ ತಾಲೂಕು ಆಸ್ಪತ್ರೆ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ಆಧಾರ್ ಕಾರ್ಡ್ ಅಥವಾ ಇನ್ಯಾವುದೇ ಗುರುತಿನ ಚೀಟಿ ಪಡೆದು ಕೋವಿಡ್ ಸಾಫ್ಟ್​​ವೇರ್​​‌ನಲ್ಲಿ ಅಫ್‌ಲೋಡ್ ಮಾಡಲಾಗುತ್ತದೆ. ಈಗಾಗಲೇ ಮೊದಲ ಹಂತವಾಗಿ ಸರಕಾರಿ ಹಾಗು ಖಾಸಗಿ ಆಸ್ಪತ್ರೆಯ ವೈದ್ಯರು, ಶಶ್ರೂಶಕಿಯರು, ಎಎನ್​​ಎಮ್ ನರ್ಸ್, ಕ್ಲೀನಿಂಗ್ ಸಿಬ್ಬಂದಿ, ವೈದ್ಯಕೀಯ ಕಾಲೇಜು ಮತ್ತು ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರನ್ನು ಗುರುತಿಸಲಾಗಿದೆ.

319 ಎಎನ್‌ಎಮ್ ನರ್ಸ್, 1383 ಆಶಾ ಕಾರ್ಯಕರ್ತರು, 5374 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಡಿ ಗ್ರೂಪ್ ಸೇರಿದಂತೆ ವಿವಿಧ ವರ್ಗದ ಸಿಬ್ಬಂದಿಗಳು ಒಳಗೊಂಡಿದ್ದಾರೆ.

ಅಂಕೋಲಾ ತಾಲೂಕಿನಲ್ಲಿ 503 ಸರಕಾರಿ ಸಿಬ್ಬಂದಿ ಹಾಗು 454 ಖಾಸಗಿ ಸಿಬ್ಬಂದಿ ಸೇರಿದಂತೆ 957 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 128 ಸರಕಾರಿ ಸಿಬ್ಬಂದಿಗಳು ಹಾಗು 401 ಖಾಸಗಿ ಸಿಬ್ಬಂದಿಗಳು ಸೇರಿದಂತೆ 529 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಭಟ್ಕಳ ತಾಲೂಕಿನಲ್ಲಿ 422 ಸರಕಾರಿ ಸಿಬ್ಬಂದಿ ಹಾಗು 632 ಖಾಸಗಿ ಸಿಬ್ಬಂದಿ ಸೇರಿದಂತೆ 1059 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 98 ಸರಕಾರಿ ಸಿಬ್ಬಂದಿಗಳು ಹಾಗು 466 ಖಾಸಗಿ ಸಿಬ್ಬಂದಿಗಳು ಸೇರಿದಂತೆ 564 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಹಳಿಯಾಳ ತಾಲೂಕಿನಲ್ಲಿ 620 ಸರಕಾರಿ ಸಿಬ್ಬಂದಿ ಹಾಗು 384 ಖಾಸಗಿ ಸಿಬ್ಬಂದಿ ಸೇರಿದಂತೆ 1004 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 222 ಸರಕಾರಿ ಸಿಬ್ಬಂದಿಗಳು ಹಾಗು 307 ಖಾಸಗಿ ಸಿಬ್ಬಂದಿಗಳು ಸೇರಿದಂತೆ 529 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ 681 ಸರಕಾರಿ ಸಿಬ್ಬಂದಿ ಹಾಗು 800 ಖಾಸಗಿ ಸಿಬ್ಬಂದಿ ಸೇರಿದಂತೆ 1451 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 99 ಸರಕಾರಿ ಸಿಬ್ಬಂದಿಗಳು ಹಾಗು 463 ಖಾಸಗಿ ಸಿಬ್ಬಂದಿಗಳು ಸೇರಿದಂತೆ 562 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಜೋಯಿಡಾದಲ್ಲಿ 375 ಜನ ಆರೋಗ್ಯ ಕಾರ್ಯಕರ್ತರು ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು 134 ಸರಕಾರಿ ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ. ಕಾರವಾರ ತಾಲೂಕಿನಲ್ಲಿ 1556 ಸರಕಾರಿ ಸಿಬ್ಬಂದಿ ಹಾಗು 511 ಖಾಸಗಿ ಸಿಬ್ಬಂದಿ ಸೇರಿದಂತೆ 2087  ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 743 ಸರಕಾರಿ ಸಿಬ್ಬಂದಿಗಳು ಹಾಗು 286 ಖಾಸಗಿ ಸಿಬ್ಬಂದಿಗಳು ಸೇರಿದಂತೆ 1029 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.ಕುಮಟಾ  ತಾಲೂಕಿನಲ್ಲಿ 610 ಸರಕಾರಿ ಸಿಬ್ಬಂದಿ ಹಾಗು 494 ಖಾಸಗಿ ಸಿಬ್ಬಂದಿ ಸೇರಿದಂತೆ 1104 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 118 ಸರಕಾರಿ ಸಿಬ್ಬಂದಿಗಳು ಹಾಗು 239 ಖಾಸಗಿ ಸಿಬ್ಬಂದಿಗಳು ಸೇರಿದಂತೆ 357 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಮುಂಡಗೋಡ ತಾಲೂಕಿನಲ್ಲಿ ೪೩೮ ಸರಕಾರಿ ಸಿಬ್ಬಂದಿ ಹಾಗು 154 ಖಾಸಗಿ ಸಿಬ್ಬಂದಿ ಸೇರಿದಂತೆ 697 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 90 ಸರಕಾರಿ ಸಿಬ್ಬಂದಿಗಳು ಹಾಗು 133 ಖಾಸಗಿ ಸಿಬ್ಬಂದಿಗಳು ಸೇರಿದಂತೆ 223 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಸಿದ್ದಾಪುರ ತಾಲೂಕಿನಲ್ಲಿ 527 ಸರಕಾರಿ ಸಿಬ್ಬಂದಿ ಹಾಗು 44 ಖಾಸಗಿ ಸಿಬ್ಬಂದಿ ಸೇರಿದಂತೆ 571 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 108 ಸರಕಾರಿ ಸಿಬ್ಬಂದಿಗಳು ಹಾಗು 38 ಖಾಸಗಿ ಸಿಬ್ಬಂದಿಗಳು ಸೇರಿದಂತೆ 146 ಸಿಬ್ಬಂದಿಗಳು ವ್ಯಾಕ್ಸಿನೇಶನ್ ಮಾಡಲಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಸುಳ್ಳು ಭವಿಷ್ಯಗಾರರು - ಇನ್ನೂ ಎರಡೂವರೆ ವರ್ಷ ಬಿಎಸ್​ವೈ ಸಿಎಂ ಆಗಿರುತ್ತಾರೆ: ಡಿಸಿಎಂ ಗೋವಿಂದ ಕಾರಜೋಳ

ಶಿರಸಿ ತಾಲೂಕಿನಲ್ಲಿ 1104 ಸರಕಾರಿ ಸಿಬ್ಬಂದಿ ಹಾಗು 1056 ಖಾಸಗಿ ಸಿಬ್ಬಂದಿ ಸೇರಿದಂತೆ 2167 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 361 ಸರಕಾರಿ ಸಿಬ್ಬಂದಿಗಳು ಹಾಗು 644 ಖಾಸಗಿ ಸಿಬ್ಬಂದಿಗಳು ಸೇರಿದಂತೆ 1005 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಯಲ್ಲಾಪುರ ತಾಲೂಕಿನಲ್ಲಿ 423 ಸರಕಾರಿ ಸಿಬ್ಬಂದಿ ಹಾಗು 68 ಖಾಸಗಿ ಸಿಬ್ಬಂದಿ ಸೇರಿದಂತೆ 491 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 76 ಸರಕಾರಿ ಸಿಬ್ಬಂದಿಗಳು ಹಾಗು 31 ಖಾಸಗಿ ಸಿಬ್ಬಂದಿಗಳು ಸೇರಿದಂತೆ 107 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ.

ಒಟ್ಟು ಜಿಲ್ಲೆಯಲ್ಲಿ 7246 ಸರಕಾರಿ ಸಿಬ್ಬಂದಿ, 138 ರಕ್ಷಣಾ ಇಲಾಖೆ ಸಿಬ್ಬಂದಿ ಹಾಗು 4602 ಖಾಸಗಿ ಸಿಬ್ಬಂದಿ ಸೇರಿದಂತೆ 12133 ಜನ ವ್ಯಾಕ್ಸಿನ್ ಸೌಲಭ್ಯ ಪಡೆಯಲಿದ್ದು, ಇವರಿಗೆ 2177 ಸರಕಾರಿ ಸಿಬ್ಬಂದಿಗಳು ಹಾಗು 3008 ಖಾಸಗಿ ಸಿಬ್ಬಂದಿಗಳು ಸೇರಿದಂತೆ 5185 ಸಿಬ್ಬಂದಿಗಳು ವ್ಯಾಕ್ಸಿನೇಶನ್ ನೀಡಲಿದ್ದಾರೆ. ಈಗಾಗಲೆ ಲಸಿಕೆಗಳನ್ನು ಸಂಗ್ರಹಿಸಲು ಎಲ್ಲ ಪಿಎಚ್‌ಸಿ ಸೆಂಟರ್ ಹಾಗು ತಾಲೂಕ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಆರ್.ಸಿ.ಎಸ್ ಅಧಿಕಾರಿ ಕ್ಯಾ.ಡಾ.ರಮೇಶ್ ರಾವ್ ಮಾಹಿತಿ ನೀಡಿದ್ದಾರೆ.
Published by: G Hareeshkumar
First published: January 8, 2021, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories