ಓದಿದ್ದು ಐದನೇ ತರಗತಿ: ಕೃಷಿ ಮಾಡಿ ಸಾಫ್ಟವೇರ್ ನೌಕರನ ಸಮಾನ ಸಂಪಾದನೆ ಮಾಡುತ್ತಿರುವ ಪ್ರೇಮಾ ಗಾಣಿಗೇರ

ಕಬ್ಬು, ಬಾಳೆ, ಚಿಕ್ಕು, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ತಿಂಗಳಿಗೆ ಸಾಫ್ಟವೇರ್ ಉದ್ಯೋಗಿಗಳು ಗಳಿಸುವಷ್ಟು ಹಣವನ್ನು ಪ್ರೇಮಾ ತಮ್ಮ ಕೃಷಿಯಿಂದಲೇ ಗಳಿಸುತ್ತಿದ್ದಾರೆ

ಪ್ರೇಮಾ ಗಾಣಿಗೇರ

ಪ್ರೇಮಾ ಗಾಣಿಗೇರ

  • Share this:
ಚಿಕ್ಕೋಡಿ(ನವೆಂಬರ್​ 10): ಇತ್ತೀಚಿನ ದಿನಗಳಲ್ಲಿ ಕೃಷಿ ಅಂದ್ರೆ ಮೂಗು ಮುರಿಯುವವರೆ ಜಾಸ್ತಿ. ಅದರಲ್ಲೂ ಕೃಷಿಕರು ಬರಿ ಗಂಡಸರೆ ಮಾಡಬೇಕು ಅನ್ನುವ ಪದ್ದತಿ ಈಗಲು ಇದೆ. ಆದರೆ, ಇಲ್ಲೊಬ್ಬ ಹೆಣ್ಣು ಮಹಿಳೆ ನಾನು ಯಾರಿಗೂ ಕಮ್ಮಿ ಇಲ್ಲಾ ಎನ್ನುವ ಹಾಗೆ ತಾನೆ ಕೃಷಿ ಮಾಡಿ ಈಗ ಕೃಷಿ ಪಾಂಡಿತ್ಯೆ ಎನ್ನುವ ಬಿರುದು ಪಡೆದುಕೊಂಡಿದ್ದಾಳೆ. ಯಾವ ಸಾಫ್ಟವೇರ್ ಇಂಜಿನಿಯರ್​​ಗೂ ಕಮ್ಮಿ ಇಲ್ಲದಷ್ಟು ತಿಂಗಳಿಗೆ ಕೃಷಿ ಸಂಪಾದನೆ ಮಾಡಿ ಸೈ ಎನಿಸಿಕೊಂಡಿದ್ದಾಳೆ. ಬರೀ ಸಿಟಿ ಅಂತ ಬಾಯ್ ಬಡಿದುಕೊಳ್ಳುವ ಇಂದಿನ ಯುಗದಲ್ಲಿ. ಈ ಮಹಿಳೆಯ ನಗರದಿಂದ ಹಳ್ಳಿ ಕಡೆಗೆ ಮುಖ ಮಾಡಿ ನೋಡುವಂತಾ ಸಾಧನೆ ಮಾಡಿದ್ದಾರೆ. ಅಂದಹಾಗೆ ಇವರ ಹೆಸರು ಪ್ರೇಮಾ ಅಂತ ಮೂಲತಃ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದವರು. ಸತತ 12 ವರ್ಷದಿಂದ ಕೃಷಿ ಕಾಯಕದಲ್ಲಿ ತೊಡಗಿರುವ ಪ್ರೇಮಾ ಅವರು ಈಗ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ.

ಕಬ್ಬು, ಬಾಳೆ, ಚಿಕ್ಕು, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ತಿಂಗಳಿಗೆ ಸಾಫ್ಟವೇರ್ ಉದ್ಯೋಗಿಗಳು ಗಳಿಸುವಷ್ಟು ಹಣವನ್ನು ಪ್ರೇಮಾ ತಮ್ಮ ಕೃಷಿಯಿಂದಲೇ ಗಳಿಸುತ್ತಿದ್ದಾರೆ. ಪ್ರೇಮಾ ಓದಿದ್ದು ಕೇವಲ 5 ನೇ ತರಗತಿ ಮಾತ್ರ ಮಾವನ ಮಗನ ಜತೆಗೆ ಬಾಲ್ಯದಲ್ಲೆ ಸಪ್ತಪದಿ ತುಳಿದ ಪ್ರೇಮಾ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದು ಇಬ್ಬರು ವಿಶೇಷ ಚೇತನ ಮಕ್ಕಳು. ಮಕ್ಕಳ ಪರಿಸ್ಥಿತಿ ನೋಡಿ ಮಮ್ಮಲ ಮರುಗಿದ್ದ ಪ್ರೇಮಾ ಅದರಿಂದ ಹೊರಗೆ ಬರುವುದಕ್ಕೆ ಸಾಕಷ್ಟು ಒದ್ದಾಡಿದ್ದರು.‌

ಕಡೆಗೆ ಮನೆಯವರೆ ಬೈದು ಬುದ್ದಿ ಹೇಳಿ ಎನಾದರೂ ಕೆಲಸ ಮಾಡು ಎಂದಾಗ ಪ್ರೇಮಾ ಓದಿದ ಓದಿಗೆ ಯಾವುದೇ ಕೆಲಸ ಸಿಕ್ಕದೇ ಇರುವುದರಿಂದ ಆರಿಸಿಕೊಂಡಿದ್ದು ಕೃಷಿಯನ್ನ ಆದರೆ ಸತತ 12 ವರ್ಷಗಳ ಪರಿಶ್ರಮ ಪ್ರೇಮಾ ಅವರನ್ನ ಎಷ್ಟರ ಮಟ್ಟಿಗೆ ಬೆಳೆಸಿದೆ ಎಂದರೆ ಕೃಷಿ ವಿಶ್ವವಿದ್ಯಾಲಯಗಳಿಗೆ ಹೋಗಿ ರೈತರಿಗೆ ಕೃಷಿಯ ಬಗ್ಗೆ ತರಬೇತಿ ಕೊಟ್ಟು ಬರುತ್ತಾರೆ.‌ ಅಲ್ಲದೆ ಧಾರವಾಡ, ಬಾಗಲಕೋಟೆ, ವಿಜಯಪುರದಿಂದ ಕೃಷಿ ಕಲಿಯುವ ವಿಧ್ಯಾರ್ಥಿಗಳು ಪ್ರೇಮಾ ಅವರ ತೋಟಕ್ಕೆ ಬಂದು ಕಲಿತು ಹೋಗುತ್ತಾರ ಇದನ್ನ ನೋಡಿ ನಮಗೆ ಖುಷಿಯಾಗುತ್ತೆ ಎಂದು ಪ್ರೇಮಾ‌ ಅವರ ತಾಯಿ ಗಂಗಮ್ಮ ಹೇಳುತ್ತಾರೆ.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ತೀವ್ರ ವಿರೋಧ ; ಕಾಂಗ್ರೆಸ್ ನಿಂದ ಪ್ರತಿಭಟನೆ

ಇನ್ನು ಪ್ರೇಮಾರವರು ಯಾವುದೇ ರಾಸಾಯನಿಕ ಔಷಧ ಸಿಂಪಡಿಣೆ ಮಾಡದೆ ಕೇವಲ ಜೀವಾಮೃತದ ಆಧಾರದ ಮೇಲೆ ಕೃಷಿ ಮಾಡುತ್ತ ಬಂದಿದ್ದು ಸಮಗ್ರ ಬೆಳೆಯಲ್ಲಿ ಯಶಸ್ವಿಯಾಗಿ ಇಂದು ಪ್ರೇಮಾ ಕೃಷಿ ಇಲಾಖೆಯ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅಲ್ಲದೆ ಪ್ರೇಮಾ ತಾನು ಮಾತ್ರ ಬೆಳೆಯದೆ ತಮ್ಮದೇ ಸಂಘಟನೆಯೊಂದಿಗೆ ನೂರಾರು ಮಹಿಳೆಯರಿಗೆ ಮಾಹಿತಿ ನೀಡಿ ಅವರನ್ನ ಕೃಷಿಯತ್ತ ಆಕರ್ಷಿಸುತ್ತಿದ್ದಾರೆ. ಹೀಗಾಗಿ ಜೀವನದಲ್ಲಿ ಕಷ್ಟ ಬಂದರು ಕಠಿಣ ಪರಿಶ್ರಮ ಹಾಕಿದರೆ ಯಾವುದು ಸಾಧ್ಯವಲ್ಲ ಎನ್ನುವುದಕ್ಕೆ ಪ್ರೇಮಾರವರೇ ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು.
Published by:G Hareeshkumar
First published: