ರಾತ್ರಿಯೆಲ್ಲಾ ಸುತ್ತಿದರೂ ಹೆರಿಗೆಗೆ ಸಿಗಲಿಲ್ಲ ಆಸ್ಪತ್ರೆ; ಆಟೋದಲ್ಲೇ ಅಬಾರ್ಷನ್; ಮಗು ಸಾವು

ತುಂಬು ಗರ್ಭಿಣಿ ಎಂಟು ಗಂಟೆ ಕಾಲ ನಗರದ ವಿವಿಧ ಆಸ್ಪತ್ರೆಗಳಿಗೆ ಅಲೆದಾಡಿದರೂ ಎಲ್ಲಿಯೂ ಸ್ಥಳ ಸಿಗದೆ ಕೊನೆಗೆ ಆಟೋರಿಕ್ಷಾದಲ್ಲೇ ಹೆರಿಗೆಯಾಗಿ ಆ ಮಗು ಸತ್ತು ಹೋದ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

news18-kannada
Updated:July 20, 2020, 1:36 PM IST
ರಾತ್ರಿಯೆಲ್ಲಾ ಸುತ್ತಿದರೂ ಹೆರಿಗೆಗೆ ಸಿಗಲಿಲ್ಲ ಆಸ್ಪತ್ರೆ; ಆಟೋದಲ್ಲೇ ಅಬಾರ್ಷನ್; ಮಗು ಸಾವು
ಕೆಸಿ ಜನರಲ್ ಆಸ್ಪತ್ರೆ ಎದುರು
  • Share this:
ಬೆಂಗಳೂರು(ಜುಲೈ 20): ಇತ್ತೀಚೆಗೆ ಮಗುವೊಂದು ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಬೆಂಗಳೂರಿನ ವೈದ್ಯಕೀಯ ದುಸ್ಥಿತಿಗೆ ಇದು ಕನ್ನಡಿ ಹಿಡಿದಿತ್ತು. ಈಗ ಅಂಥ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆಗೆ ಆಸ್ಪತ್ರೆ ಸಿಗದೆ ಆಟೋದಲ್ಲೇ ಗರ್ಭಪಾತವಾಗು ಮಗು ಸಾವನಪ್ಪಿರುವ ಅತ್ಯಂತ ದಾರುಣ ಘಟನೆ ನಡೆದಿದೆ. ಮಲ್ಲೇಶ್ವಂನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಬೆಳಗ್ಗೆ 11 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.

ಶ್ರೀರಾಮಪುರದ ನಿವಾಸಿಯಾದ ತುಂಬುಗರ್ಭಿಣಿಗೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ರಾತ್ರಿ 3 ಗಂಟೆಯಿದ ಈಕೆ ವಿವಿಧ ಆಸ್ಪತ್ರೆಗಳಿಗೆ ಹೋದರೂ ಎಲ್ಲಿಯೂ ದಾಖಲಿಸಿಕೊಂಡಿಲ್ಲ. ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್, ಶ್ರೀರಾಮಪುರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಈಕೆಗೆ ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಲಾಗಿದೆ. ಕೊನೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈಕೆ ಅರ್ಧಗಂಟೆ ಕಾದ ಬಳಿಕ ದಾಖಲಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಅಷ್ಟರಲ್ಲಿ ಈಕೆಗೆ ಆಟೋದಲ್ಲೇ ಗರ್ಭಪಾತವಾಗಿದೆ.

ಈ ಘಟನೆ ನಡೆದ ಬಳಿಕ ಕೆಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ ದೌಡಾಯಿಸಿ ಬಂದಿದ್ದೇನೋ ಹೌದು. ಆದರೆ, ಪ್ರಾಣಪಕ್ಷಿಯೇ ಹಾರಿ ಹೋದ ಮೇಲೆ ಜೀವ ಉಳಿಸಲು ಸಾಧ್ಯವಾ? ಬೆಂಗಳೂರಿನಂಥ ಒಂದು ಮಹಾನಗರದಲ್ಲಿ ಇಂಥ ಪರಿಸ್ಥಿತಿ ಆದರೆ ಹಳ್ಳಿಗಳಲ್ಲಿ ಹೇಗಿರಬಹುದು ಸ್ಥಿತಿ ಎಂದು ಸ್ಥಳೀಯರೊಬ್ಬರು ನ್ಯೂಸ್18 ಕನ್ನಡದ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೀವನ್ಮರಣದ ಮಧ್ಯೆ ಡಯಾಲಿಸಿಸ್ ರೋಗಿಗಳ ಹೋರಾಟ; ಚಿಕಿತ್ಸೆ ನೀಡದೆ ಆಸ್ಪತ್ರೆಯಿಂದಲೇ ಹೊರಹಾಕಿದ ಸಿಬ್ಬಂದಿ

ಇದೇ ವೇಳೆ, ಚಿಕಿತ್ಸೆಗೆ ಆಸ್ಪತ್ರೆ ಸಿಗದೆ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಇದೇ ಬೆಂಗಳೂರಿನಲ್ಲಿ ಸಂಭವಿಸಿದೆ. ಕೊರೋನಾ ವೈರಸ್ ಪರೀಕ್ಷೆಯ ರಿಪೋರ್ಟ್ ಇಲ್ಲದೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸಿದ್ದರಿಂದ ಈ ದುರಂತ ಸಂಭವಿಸಿದೆ. ಪರೀಕ್ಷಾ ವರದಿ ಬರುವುದು 3 ದಿನವಾಗುತ್ತದೆ. ಅಷ್ಟರಲ್ಲಿ ರೋಗಿಗೆ ಚಿಕಿತ್ಸೆ ನೀಡುವುದಿಲ್ಲ ಎಂದರೆ ಹೇಗೆ? ಇದು ಲಜ್ಜೆಗೆಟ್ಟ ಸರ್ಕಾರ ಮತ್ತು ಆಡಳಿತ ಎಂದು ಆ ಯುವತಿಯ ಸಂಬಂಧಿಕರು ಹಿಡಿಶಾಪ ಹಾಕಿದ್ದಾರೆ.ಕೆಲ ದಿನಗಳ ಹಿಂದಷ್ಟೇ ಹಸುಗೂಸೊಂದು ಇದೇ ರೀತಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿತ್ತು. ಮಗುವಿನ ತಂದೆ ತನ್ನ ಮಗುವಿನ ಫೋಟೋ ಇಟ್ಟುಕೊಂಡು ಮುಖ್ಯಮಂತ್ರಿಗಳ ನಿವಾಸದೆದುರು ಪ್ರತಿಭಟನೆ ನಡೆಸಿದ್ದರು.
Published by: Vijayasarthy SN
First published: July 20, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading