• Home
  • »
  • News
  • »
  • district
  • »
  • ರೈತರನ್ನೇ ದಾರಿ ತಪ್ಪಿಸಿದವರು, KSRTC ನೌಕರರನ್ನ ತಪ್ಪಿಸದೇ ಇರುತ್ತಾರಾ? ಖಾಸಗೀಕರಣಕ್ಕೆ ಅವಕಾಶ ಕೊಡಬೇಡಿ: ಪ್ರತಾಪ್ ಸಿಂಹ

ರೈತರನ್ನೇ ದಾರಿ ತಪ್ಪಿಸಿದವರು, KSRTC ನೌಕರರನ್ನ ತಪ್ಪಿಸದೇ ಇರುತ್ತಾರಾ? ಖಾಸಗೀಕರಣಕ್ಕೆ ಅವಕಾಶ ಕೊಡಬೇಡಿ: ಪ್ರತಾಪ್ ಸಿಂಹ

ಮೈಸೂರಿನಲ್ಲಿ ಪ್ರತಾಪ್ ಸಿಂಹ ರೌಂಡ್ಸ್

ಮೈಸೂರಿನಲ್ಲಿ ಪ್ರತಾಪ್ ಸಿಂಹ ರೌಂಡ್ಸ್

ಕೆಎಸ್ಸಾರ್ಟಿಸಿ ನೌಕರರು ಪ್ರತಿಭಟನೆ ಮುಂದುವರಿಸಿದರೆ ಸಾರಿಗೆ ನಿಗಮಗಳ ಖಾಸಗೀಕರಣ ಪ್ರಕ್ರಿಯೆಗೆ ಎಡೆಯಾಗಬಹುದು. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮುಷ್ಕರನಿರತ ನೌಕರರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

  • Share this:

ಮೈಸೂರು: ಮೈಸೂರಿನಲ್ಲಿ ಎರಡನೇ ದಿನಕ್ಕೆ ಕಾಲಟ್ಟಿರುವ ಸಾರಿಗೆ ನೌಕರರ ಮುಷ್ಕರದ ಮಾಹಿತಿಯನ್ನ ಸಂಸದ ಪ್ರತಾಪ್‌ಸಿಂಹ ಕಲೆ ಹಾಕಿದ್ದಾರೆ. ಮೈಸೂರು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್‌ಸಿಂಹ ಭೇಟಿ ನೀಡಿ ಬಸ್ ಸೇವೆಯ ಪರ್ಯಾಯ ವ್ಯವಸ್ಥೆ ಹಾಗೂ ಮುಷ್ಕರದ ಕುರಿತು ಮಾಹಿತಿ ಸಂಗ್ರಹಿಸಿದರು. ಖಾಸಗಿ ಬಸ್ ಮಾಲೀಕ ಹಾಗೂ ಚಾಲಕರನ್ನ ಮಾತನಾಡಿಸಿದ ಪ್ರತಾಪ್‌ಸಿಂಹ, ನೀವು ಎಷ್ಟು ಜನ ಇದ್ದೀರಾ?, ಎಲ್ಲಿಗೆ ಬಸ್ ಓಡಿಸುತ್ತಿರಾ? ನಿಮ್ ಬಸ್ ದರ ಎಷ್ಟು? ರ‌್ಯಾಶ್ ಡ್ರೈವಿಂಗ್ ಮಾಡಬೇಡಿ, ಹೆಚ್ಚಿನ ಹಣ ವಸೂಲಿ ಮಾಡಬೇಡಿ. ನಿಮಗೆ ಬೇಕಾದ ವ್ಯವಸ್ಥೆಯನ್ನ ಅಧಿಕಾರಿಗಳೇ ಮಾಡಿಕೊಡುತ್ತಾರೆ ಅಂತ ಇಡೀ ಬಸ್ ನಿಲ್ದಾಣವನ್ನ ರೌಂಡ್ ಹಾಕಿ ಪರಿಶೀಲನೆ ನಡೆಸಿದರು.


ಆ ನಂತರ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ, ರೈತರನ್ನೇ ದಾರಿ ತಪ್ಪಿಸಿದ ಮುಖಂಡನನ್ನ, ತಮ್ಮ ಲೀಡರ್ ಅಂತ ಹೇಳಿದ್ರೆ ಕೆ‌ಎಸ್‌ಆರ್‌ಟಿಸಿ ನೌಕರರು ದಾರಿ ತಪ್ಪದೇ ಇರುತ್ತಾರಾ ಅಂತ ವ್ಯಂಗ್ಯವಾಡಿದರು. ಸಾರಿಗೆ ನೌಕರರ ಮುಷ್ಕರಕ್ಕೆ ಪರೋಕ್ಷವಾಗಿ ಸಿಡಿಮಿಡಿ ವ್ಯಕ್ತಪಡಿಸಿದ ಪ್ರತಾಪ್‌ಸಿಂಹ, ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಕೆ ಎಸ್ ಆರ್ ಟಿ ಸಿ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ಕೆ ಎಸ್ ಆರ್ ಟಿ ಸಿ ನೌಕರರು ತಮ್ಮ ನಾಯಕ ಎಂದು ಮಾಡಿಕೊಂಡಿದ್ದೇ ತಪ್ಪು. ಪ್ರೊ| ‌ನಂಜುಂಡಸ್ವಾಮಿ, ಕೆ. ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಂಡರು ಮತ್ತವರ ಹೋರಾಟಗಳ ಬಗ್ಗೆ ಗೌರವವಿತ್ತು. ಆದರೆ, ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖವೊಂದು ಆ ಹೋರಾಟದಲ್ಲಿ ಇಲ್ಲ. ಈಗ ಇರುವವರು ಖಾಲಿ ಹೋರಾಟಗಾರರು. ಹಾಗಾಗಿ ಇಂತಹ ಹೋರಾಟಗಾರರನ್ನ ನಂಬಿದರೆ ನೌಕರರು ಸಹ ದಾರಿ ತಪ್ಪುತ್ತಾರೆ ಎಂದು ಟೀಕಿಸಿದರು.


ಇದನ್ನೂ ಓದಿ: ಬೆಂಗಳೂರು ವಿವಿ ಬ್ಯಾಕ್ ಲಾಗ್ ಹುದ್ದೆ ನೇಮಕಾತಿ ವಿವಾದ; ಒಂದು ಹುದ್ದೆಗೆ ಎರಡು ಪೋಸ್ಟ್ – ರಾಜ್ಯಪಾಲರಿಗೆ ದೂರು


ನಾವು ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕೆ ಎಸ್ ಆರ್ ಟಿ ಸಿ ನೌಕರರು ರಾಜ್ಯ ಸರಕಾರ ಸಂಕಷ್ಟದಲ್ಲಿ ಇರುವಾಗ ಈ ರೀತಿ ಹೋರಾಟಕ್ಕೆ ಇಳಿಯುವುದು ತಪ್ಪು. ಇದು ಮುಂದುವರಿದರೆ ಈ ವಿಭಾಗದಲ್ಲೂ ಖಾಸಗೀಕರಣ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಜಾಸ್ತಿ ಕೆಲಸ ಮಾಡುತ್ತೀರಿ ಅಂತ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಆ ಪ್ರೀತಿ ಕಳೆದುಕೊಳ್ಳಬೇಡಿ. ನೀವು ಇದೇ ರೀತಿ ಮಾಡಿದರೆ ಜನರೇ ಈ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನ ಈ ಬಗ್ಗೆ ಧ್ವನಿ ಎತ್ತುವಂತೆ ಮಾಡಬೇಡಿ. ಅಲ್ಲದೆ ಎಸ್ಮಾ ಜಾರಿ ಮಾಡಿ ಬಲವಂತವಾಗಿ ಕೆಲಸಕ್ಕೆ ಹಾಜರಾಗುವಂತಹ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ. ಎಸ್ಮಾ ಜಾರಿಯ ಅನಿರ್ವಾಯತೆಯನ್ನು ಸರಕಾರಕ್ಕೆ ತಂದಿಡಬೇಡಿ ಎಂದು ಪ್ರತಿಭಟನಾನಿರತ ನೌಕರರ ಬಳಿ ಮನವಿ ಮಾಡಿದರು.


ಇನ್ನು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗ ಸಾರಿಗೆ ನೌಕರರ ಬೇಡಿಕೆ ಈಡೇರಿಸಿ ಎನ್ನುತ್ತಿದ್ದಾರೆ. ಆದ್ರೆ ಅವರ ಅಧಿಕಾರವಧಿಯಲ್ಲೇ ಅವರು ಈ ಕೆಲಸ ಮಾಡಬಹುದಿತಲ್ವಾ? ಅಂದು 5 ವರ್ಷ ಜನ ಕಾಲಾವಕಾಶ ಕೊಟ್ಟಿದ್ದರು ತಾನೆ. ಆಗ ಎಲ್ಲ ನಿಗಮಗಳ‌ ನೌಕರರರನ್ನ ಸರ್ಕಾರಿ ನೌಕರರನ್ನಾಗಿ ಮಾಡಬಹುದಿತ್ತು ಅಲ್ವಾ. ಸಿದ್ದರಾಮಯ್ಯ ಅವರ ಇವತ್ತಿನ ಮಾತನ್ನು ಜನರು ಮೆಚ್ಚಲ್ಲ. ಅವರ ಆತ್ಮಸಾಕ್ಷಿಯೂ ಮೆಚ್ಚಲ್ಲ‌ ಎಂದು ಸಿದ್ದುಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದರು.


ವರದಿ: ಪುಟ್ಟಪ್ಪ

Published by:Vijayasarthy SN
First published: