ಪ್ರಮೋದ್ ಮುತಾಲಿಕ್ ರಿಂದ ದತ್ತ ಗಣ ಹೋಮ ; ಕೊರೋನಾ ನಿಯಂತ್ರಣಕ್ಕೆ ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ಪಟ್ಟು

ಮಾರುಕಟ್ಟೆಗಳಲ್ಲಿ ಜನಜಾತ್ರೆ ನೆರೆಯುತ್ತಿದೆ. ಅದನ್ನು ನಿಯಂತ್ರಿಸುವುದನ್ನು ಬಿಟ್ಟು ಗಣೇಶ ಪ್ರತಿಷ್ಠಾಪನೆ ಮೇಲೆ ನಿರ್ಬಂಧ ಹೇರಲಾಗಿದೆ. ಸರ್ಕಾರ ಏನೇ ನಿರ್ಬಂಧ ಹೇರಿದರೂ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತೇವೆ.

news18-kannada
Updated:August 9, 2020, 5:00 PM IST
ಪ್ರಮೋದ್ ಮುತಾಲಿಕ್ ರಿಂದ ದತ್ತ ಗಣ ಹೋಮ ; ಕೊರೋನಾ ನಿಯಂತ್ರಣಕ್ಕೆ ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ಪಟ್ಟು
ದತ್ತ ಗಣ ಹೋಮ ನಡೆಸುತ್ತಿರುವ ಪ್ರಮೋದ್ ಮುತಾಲಿಕ್
  • Share this:
ಕಲಬುರ್ಗಿ(ಆಗಸ್ಟ್​.09): ದತ್ತ ಪೀಠ ವಿವಾದದಿಂದ ಮುಕ್ತಿಯಾಗಿ, ಹಿಂದೂಗಳ ಕೈವಶವಾಗಬೇಕು. ದೇಶದಿಂದ ಕೊರೋನಾ ತೊಲಗಬೇಕೆಂದು ಪ್ರಾರ್ಥಿಸಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಗಾಣಗಾಪುರದ ಸಂಗಮ ಕ್ಷೇತ್ರದಲ್ಲಿ ಹೊಮ-ಹವನ ನಡೆಯಿತು. ಭೀಮಾ ಹಾಗೂ ಅಮರ್ಜಾ ನದಿ ಸಂಗಮದಲ್ಲಿ ಹೋಮ-ಹವನ ನಡೆಸಲಾಯಿತು. 

ಚಿಕ್ಕಮಗಳೂರು ಬಾಬಾ ಬುಡನ್ ಗಿರಿ ದತ್ತ ಪೀಠ ವಿವಾದದಿಂದ ಮುಕ್ತಿ ಹೊಂದಬೇಕು. ಭಾರತ ಸೇರಿ ವಿಶ್ವದಲ್ಲಿ ಕೊರೋನಾ ಸೋಂಕು ನಿಯಂತ್ರಣವಾಗಬೇಕು. ದೇಶದೆಲ್ಲೆಡೆ ಸುಖ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು. ಆಂದೋಲ ಕರುಣೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿ ಮತ್ತಿತರರು ಉಪಸ್ಥಿತಿರಿದ್ದರು. ವಿಘ್ನ ನಿವಾರಕ ಗಣೇಶನ ಪ್ರತಿಷ್ಠಾಪನೆಗೆ ಯಾರಾದರು ವಿಘ್ನ ತಂದ್ರೆ ಸುಮ್ಮನ್ನೆ ಕೂಡಲ್ಲ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ವೇಳೆ ಎಚ್ಚರಿಸಿದ್ದಾರೆ.

ಗಣೇಶ ಅಂದ್ರೆ ವಿಘ್ನ ನಿವಾರಕ. ಗಣೇಶನ ಪ್ರತಿಷ್ಠಾಪನೆ ಮಾಡಿದ್ರೆ ಕೊರೋನಾ ತೊಲಗುತ್ತೆ. ಆದರೆ, ಸರ್ಕಾರ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಮೀನ-ಮೇಷ ಎಣಿಸುತ್ತಿದೆ. ಅನುಮತಿ ನೀಡದಿದ್ದರೂ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಿಯೇತೀರುತ್ತೇವೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಬಾರ್ ಗಳಿಗೆ, ಮಾಲ್ ಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಮಾರುಕಟ್ಟೆಗಳಲ್ಲಿ ಜನಜಾತ್ರೆ ನೆರೆಯುತ್ತಿದೆ. ಅದನ್ನು ನಿಯಂತ್ರಿಸುವುದನ್ನು ಬಿಟ್ಟು ಗಣೇಶ ಪ್ರತಿಷ್ಠಾಪನೆ ಮೇಲೆ ನಿರ್ಬಂಧ ಹೇರಲಾಗಿದೆ. ಕೆಲ ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಿರ್ಬಂಧಿಸಲಾಗಿದೆ. ಸರ್ಕಾರ ಏನೇ ನಿರ್ಬಂಧ ಹೇರಿದರೂ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ವಿಘ್ನ ನಿವಾರಕನ ಪ್ರತಿಷ್ಠಾಪನೆಗೆ ಯಾರೇ ಅಡ್ಡಿಪಡಿಸಿದರೂ ಸುಮ್ಮನಿರಲ್ಲ. ಕೊರೋನಾ ತೊಲಗಬೇಕಂದ್ರೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಮಾಡಿ. ಸರ್ಕಾರದ ಮಾರ್ಗಸೂಚಿಗಳ ಪಾಲನೆ ಮಾಡುತ್ತೇವೆ ಎಂದು ಮುತಾಲಿಕ್ ತಿಳಿಸಿದ್ದಾರೆ.

ಇದನ್ನೂ ಓದಿ : ಸಿಎಂ ಖುದ್ದು ಭೇಟಿಯಾಗಿ ನೀಡಿದ ಭರವಸೆಗಳು ಇನ್ನೂ ಮರೀಚಿಕೆ ; ಹೆಗಲತ್ತಿ ಗ್ರಾಮದ ರೈತರ ಗೋಳು ಕೇಳೋರಿಲ್ಲ

ದೇಶದಲ್ಲಿ ಕೊರೋನಾ ತೊಲಗಲಿ ಎಂದು ಹೋಮ-ಹವನ ಮಾಡಿದ್ದಾನೆ. ಗಣ ಹೋಮ ಮತ್ತು ದತ್ತ ಹೋಮ ಮಾಡಿದ್ದೇನೆ. ಕೋಟಿ ದತ್ತ ಜಪ ಯಜ್ಞ ಕೈಗೊಂಡಿದ್ದೆವು. 23 ದಿನಗಳಲ್ಲಿಯೇ ಒಂದು ಕೋಟಿ ಜಪ ಮುಗಿದಿದೆ. ದತ್ತ ಕೋಟಿ ಜಪ ಯಜ್ಞದ ಸಮಾಪ್ತಿ ಕಾರ್ಯವನ್ನು ಇಲ್ಲಿ ಮಾಡಿದ್ದೇವೆ. ಭೀಮಾ-ಅಮರ್ಜಾ ನದಿಗಳ ಸಂಗಮದಲ್ಲಿ ಹೋಮ-ಹವನ ಮಾಡಿದ್ದೇವೆ. ಕೊರೋನಾ ದೇಶದಿಂದ ತೊಲಗಲಿ, ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠ ಹಿಂದೂಗಳ ಪಾಲಾಗಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಮುತಾಲಿಕ್ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಕೆಡವಿ ಮಸೀದಿ ಕಟ್ಟುವುದಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಹೇಳುತ್ತಿದೆ. ಆ ಮೂಲಕ ಸುಪ್ರೀಂ ಕೋರ್ಟ್ ಗೆ ನ್ಯಾಯಾಂಗ ನಿಂದನೆ ಮಾಡಿದೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಮ ಮಂದಿರದ ತಂಟೆಗೆ ಬಂದರೆ ಸುಮ್ಮನೆ ಇರಲ್ಲ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.
Published by: G Hareeshkumar
First published: August 9, 2020, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading