ಮೊದಲು ಮಸೀದಿಗಳಲ್ಲಿ ಮೈಕ್​ಗಳನ್ನು ತೆಗೆದು ಹಾಕಿ, ಇದು ಪಾಕಿಸ್ತಾನ ಅಲ್ಲ ಎಂದ Pramod Muthalik

ಮಸೀದಿಗಳಲ್ಲಿ ಮೈಕ್ ಹಾಕಿ ಶಬ್ದ ಮಾಲಿನ್ಯ ಮಾಡುತ್ತಿದ್ದು, ಸುಪೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಮಸೀದಿಗಳಲ್ಲಿ ಮೈಕ್ ಹಾಕಿ ಸೌಂಡ್‌ ಮಾಡುವದರಿಂದ ಆಸ್ಪತ್ರೆ ಹಾಗೂ ಮಸೀದಿ ಸುತ್ತಮುತ್ತಲು ವಾಸ ಮಾಡುವ ಜನರಿಗೆ ಕಿರಿಕಿರಿಯಾಗುತ್ತಿದೆ. ತಾಲಿಬಾನ್ ಹಾಗೂ ಪಾಕಿಸ್ತಾನ ಅಲ್ಲ ನಮ್ಮ ದೇಶದಲ್ಲಿ ಸಂವಿಧಾನದಂತೆ ನಡೆದುಕೊಳ್ಳಬೇಕು

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಯಾದಗಿರಿ: ದೇಶದಲ್ಲಿರುವ ಹಿಂದೂಗಳಿಗೆ(Hindus) ಬ್ಲ್ಯಾಕ್​​ ಮ್ಯಾಜಿಕ್ (Black Magic) ಹಾಗೂ ವಿವಿಧ ಆಮಿಷವೊಡ್ಡಿ ಕ್ರೈಸ್ತರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಬಲವಂತದ ಮತಾಂತರ (Conversion) ದೇಶಕ್ಕೆ ಮುಂದೆ ಗಂಡಾಂತರವಾಗಲಿದ್ದು ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ (Conversion Prohibition Act) ಜಾರಿಗೆ ತರಬೇಕೆಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಒತ್ತಾಯಿಸಿದ್ದಾರೆ. ಯಾದಗಿರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಕ್ರೈಸ್ತ ಸಮುದಾಯದವರ ಮತ ಸೆಳೆಯಲು ಮತಾಂತರಕ್ಕೆ ಪ್ರೋತ್ಸಾಹಿಸುತ್ತಿದೆ.ದೇಶದಲ್ಲಿ ಮತಾಂತರ ಪೀಡುಗು ಹೆಚ್ಚಾಗಿದೆ.ಕಾಂಗ್ರೆಸ್ ನವರ ನಿರ್ಲಕ್ಷ್ಯತನದಿಂದ ಮತಾಂತರ ನಿಷೇಧ ಕಾಯ್ದೆ ತಂದಿಲ್ಲ.ಮತಾಂತರ ಎಲ್ಲಾ ಜಾತಿಗು ವ್ಯಾಪಿಸಿದ್ದು ,ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ 1 ಲಕ್ಷ ಜನರು ಮತಾಂತರಗೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 

ಮತಾಂತರ ಹಿಂದೂ ಸಮಾಜಕ್ಕೆ ಗೆದ್ದಲು ಹಿಡಿದಂತೆ

ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಕಾಯ್ದೆ ಜಾರಿಗೆ ತರದಿದ್ದರೆ ಜನವರಿಯಲ್ಲಿ ಉಗ್ರ ಹೋರಾಟ ಮಾಡುತ್ತೆವೆಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಎರಡು ರೀತಿ ಮತಾಂತರ ಮಾಡಲಾಗುತ್ತಿದೆ. ಅಸ್ಪೃಶ್ಯತೆ ಸಮಾಜಕ್ಕೆ ಅಂಟಿಕೊಂಡ ದೊಡ್ಡ ಪೀಡುಗು ಆಗಿದೆ. ಮುಗ್ದ ಹಾಗೂ ಅನಕ್ಷರಸ್ಥರಿಗೆ ಮತಾಂತರ ಮಾಡಿ ಟೋಪಿ ಹಾಕುತ್ತಿದ್ದಾರೆ‌. ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಗೆ ಬಲವಂತದ ಮತಾಂತರ ಮಾಡಲಾಗಿದೆ. ಮತಾಂತರವೆಂಬುದು ಹಿಂದೂ ಸಮಾಜಕ್ಕೆ ಗೆದ್ದಲು ಹಿಡಿದಂತೆ ಇದು ಡೈಂಜರ್ಸ್ ಆಗಿದೆ ಎಂದರು.

ಇದನ್ನೂ ಓದಿ: ಮಳೆಯಿಂದ ಜನ ಸಂಕಷ್ಟದಲ್ಲಿದ್ದರೆ, BJPಯವರಿಗೆ ಪರಿಷತ್ ಚುನಾವಣೆಯದ್ದೇ ಚಿಂತೆ; HDK ಟೀಕೆ

ಮೊದಲು ಮಸೀದಿಗಳಲ್ಲಿ ಮೈಕ್​ ತೆಗೆದು ಹಾಕಿ 

ಮಸೀದಿಗಳಲ್ಲಿ ಮೈಕ್ ಹಾಕಿ ಶಬ್ದ ಮಾಲಿನ್ಯ ಮಾಡುತ್ತಿದ್ದು, ಸುಪೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ. ಮಸೀದಿಗಳಲ್ಲಿ ಮೈಕ್ ಹಾಕಿ ಸೌಂಡ್‌ ಮಾಡುವದರಿಂದ ಆಸ್ಪತ್ರೆ ಹಾಗೂ ಮಸೀದಿ ಸುತ್ತಮುತ್ತಲು ವಾಸ ಮಾಡುವ ಜನರಿಗೆ ಕಿರಿಕಿರಿಯಾಗುತ್ತಿದೆ. ತಾಲಿಬಾನ್ ಹಾಗೂ ಪಾಕಿಸ್ತಾನ ಅಲ್ಲ ನಮ್ಮ ದೇಶದಲ್ಲಿ ಸಂವಿಧಾನದಂತೆ ನಡೆದುಕೊಳ್ಳಬೇಕು. ಮೈಕ್ ತೆಗೆಯದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಿ ಮೈಕ್ ಕಿತ್ತು ಹಾಕುತ್ತೆವೆಂದು ಮುತಾಲಿಕ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಮುತಾಲಿಕ್​ ಎಚ್ಚರಿಕೆ 

ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ರೈತರು ‌ನಿರಂತರ ಹೋರಾಟ ನಡೆಸಿ ಕೃಷಿ ಕಾಯ್ದೆಗೆ ವಿರೋಧ ಮಾಡಿದ್ದು ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಕಾಯ್ದೆ ವಾಪಸ್ ಪಡೆದಿದ್ದು ರೈತರ ಹೋರಾಟಕ್ಕೆ ಕೇಂದ್ರ ಸರಕಾರ ಶರಣಾಗಿದೆ.ಕೇಂದ್ರ ಸರಕಾರ ದೇಶದ ಅನ್ನದಾತರ ಹಿತ ಕಾಪಾಡುವ ಕಾರ್ಯ ಮಾಡಬೇಕಿತ್ತು. ದೇಶಾದ್ಯಂತ ಅನ್ನದಾತರು ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ಮಾಡಿದರು ರೈತರ ನೋವು ಅರಿಯುವ ಕಾರ್ಯ ಮಾಡದೆ ಅಲಕ್ಷ್ಯ ಮಾಡಿತ್ತು. ದೇಶದ ವಿವಿಧ ರಾಜ್ಯಗಳಲ್ಲಿ ರಾಜ್ಯಗಳಲ್ಲಿ ಕೇಂದ್ರ ಸರಕಾರದ ನಡೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ನಿರಂತರ ಹೋರಾಟ ಮಾಡಿದ ಹಿನ್ನೆಲೆ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಕೃಷಿ ಕಾಯ್ದೆ ವಾಪಸ್ ಪಡೆದಿದೆ ಎಂದರು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದ್ದು ಹಿಂದುಗಳ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಬಿಜೆಗೆ ಮತದಾರರು ಮನೆಗೆ ಕಳುಹಿಸುವ ಕೆಲಸ ಮಾಡುತ್ತಾರೆಂದು ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
Published by:Kavya V
First published: