HOME » NEWS » District » PRAHLAD JOSHI VERBAL ATTACK ON CONGRESS AT HUBLI PTH SNVS

ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ನಾಯಕರಾದರೆ, ಕಾಂಗ್ರೆಸ್​ನಲ್ಲಿ ಕುಟುಂಬದವರು ನಾಯಕರಾಗುತ್ತಾರೆ: ಪ್ರಲ್ಹಾದ್ ಜೋಶಿ

ಒಬ್ಬ ಗ್ರಾ.ಪಂ. ಸದಸ್ಯ ದೇಶದ ಪ್ರಧಾನಿಯಾಗಲು ಸಾಧ್ಯವಾಗುವುದು ಬಿಜೆಪಿಯಲ್ಲಿ ಮಾತ್ರ. ಕಾಂಗ್ರೆಸ್ನಲ್ಲಿ ಪಕ್ಷದ ಮುಖಂಡರ ಮನೆಯಲ್ಲಿ ಹುಟ್ಟಿದವರು ಮಾತ್ರ ಶಾಸಕ, ಸಂಸದರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

news18-kannada
Updated:January 11, 2021, 10:44 AM IST
ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ನಾಯಕರಾದರೆ, ಕಾಂಗ್ರೆಸ್​ನಲ್ಲಿ ಕುಟುಂಬದವರು ನಾಯಕರಾಗುತ್ತಾರೆ: ಪ್ರಲ್ಹಾದ್ ಜೋಶಿ
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ನೂತನವಾಗಿ ಆರಂಭವಾದ ರೀಫ್ರೆಶ್​ಮೆಂಟ್ ಉದ್ಘಾಟಿಸಿದ ಪ್ರಲ್ಹಾದ್ ಜೋಷಿ
  • Share this:
ಹುಬ್ಬಳ್ಳಿ: ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗುತ್ತಾರೆ. ಕಾಂಗ್ರೆಸ್ ಪಕ್ಷದ ಇಬ್ಬರು ಲೀಡರ್‌ಗಳು ರೂ‌ಮಿನಲ್ಲಿ ಒಳಗಡೆ ಹೋದ್ರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ. ಇಲ್ಲಿ ನಿನ್ನೆ ಭಾನುವಾರ ನಡೆದ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಕಾಂಗ್ರೆಸ್ ಕಾರ್ಯಕರ್ತರು ಸ್ವೀಟ್ ಹಂಚಿದ್ರು ಎಂದು ಗಾಂಧಿ ಕುಟುಂಬದ ಬಗ್ಗೆ ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಜೀವನಕ್ಕೆ ಒಂದು ಪ್ಲ್ಯಾನ್ ಇಲ್ಲಾ. ಅವರು ಲಾಕ್‌ಡೌನ್ ಅನ್ನು ಅನ್‌ ಪ್ಲ್ಯಾನ್ಡ್ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿ ದೇಶ ಬಿಟ್ಟು ಅವರ ಪೂರ್ವಜರನ್ನು ನೋಡಲಿಕ್ಕೆ ವಿದೇಶಕ್ಕೆ ಹೋಗಿದ್ದರು ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯರು ಸರಿಯಾಗಿ ಕೆಲಸ ಮಾಡಬೇಕು. ಉತ್ತಮ ಕೆಲಸ‌ ಮಾಡಿದ್ರೆ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ದೇಶದ ಪ್ರಧಾನಿಯಾಗಬಹುದು. ಇದು ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ. ಆದ್ರೆ ಕಾಂಗ್ರೆಸ್‌ ಪಕ್ಷದಲ್ಲಿ ಮುಖಂಡರ ಮನೆಯಲ್ಲಿ ಹುಟ್ಟಿದವರು ಮಾತ್ರ ಶಾಸಕರು, ಲೋಕಸಭಾ ಸದಸ್ಯರು ಆಗ್ತಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂಥವರು ಡಿಕೆಶಿ, ಸಿದ್ದರಾಮಯ್ಯ: ಹುಬ್ಬಳ್ಳಿಯಲ್ಲಿ ಶೆಟ್ಟರ್ ಗುಡುಗು

ಬಿಆರ್​ಟಿಎಸ್ ಕಾಮಗಾರಿ ಬಗ್ಗೆ ಅತೃಪ್ತಿ:

ಹುಬ್ಬಳ್ಳಿ- ಧಾರವಾಡ ನಡುವಿನ ಬಿಆರ್‌ಟಿಎಸ್ ಕಾಮಗಾರಿ ನಡೆದದ್ದು ಕಾಂಗ್ರೆಸ್ ಅವಧಿಯಲ್ಲಿ. ಈ ಬಿಆರ್‌ಟಿಎಸ್ ಕಾಮಗಾರಿಯ ಬಗ್ಗೆ ನನಗೆ ತೃಪ್ತಿ ಇಲ್ಲ. ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಕೇಂದ್ರ ಬಜೆಟ್ ಅಧಿವೇಶನ ಜನವರಿ 19 ರಿಂದ ಫೆಬ್ರುವರಿ 15ರವರೆಗೆ ನಡೆಯಲಿದೆ. ನಿರ್ಮಲಾ ಸೀತಾರಾಮನ್ ಫೆಬ್ರುವರಿ ಒಂದರಂದು ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕದ ಆದ್ಯತೆ ಪಟ್ಟಿಯನ್ನು ಕೇಂದ್ರಕ್ಕೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.ಇದನ್ನೂ ಓದಿ: Mutant Corona: ಲಂಡನ್​ನಿಂದ ಬೆಂಗಳೂರಿಗೆ ಮತ್ತೊಂದು ವಿಮಾನ; 247 ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು!

ಕೋವಿಡ್ ವ್ಯಾಕ್ಸಿನ್‌ ಅನ್ನು ಮೊದಲು ಪ್ರಧಾನಿ ಹಾಗೂ ಕೇಂದ್ರ ಸಚಿವರು ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನವರು ಹೇಳಿದ್ದಾರೆ. ಬಿಜೆಪಿ ಮತ್ತು ಮೋದಿಯವರನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸುವುದು ಬೇಡ. ವಿಜ್ಞಾನಿಗಳಿಗೆ ಅಗೌರವ ತೋರುವುದು ಬೇಡ ಎಂದು ಅವರು ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಿದ್ದಾರೆ.

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಫುಡ್‌ ಇನ್ ರಿಫ್ರೆಶ್‌ಮೆಂಟ್ ರೂಮ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಚಾಲನೆ ನೀಡಿದ್ರು. ಭಾರತೀಯ ರೈಲ್ವೇ ಇಲಾಖೆಯ ಅಡಿಯಲ್ಲಿ ಡಿ.ಎಸ್. ಥೋಮರ್ ಕ್ಯಾಟರರ್ಸ್ ನಡೆಸಲಿರುವ ಆಹಾರ ತಯಾರಿಕಾ ಘಟಕವನ್ನು ಉದ್ಘಾಟಿಸಲಾಯಿತು. ಹುಬ್ಬಳ್ಳಿ ಕೇಂದ್ರ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಜಿಎಮ್ ಎ‌. ಕೆ. ಸಿಂಗ್, ಎ.ಕೆ. ಥೋಮರ್, ಉಮೇಶ್ ದೂಸಿ ಉಪಸ್ಥಿತರಿದ್ದರು.

ವರದಿ: ಪರಶುರಾಮ ತಹಶೀಲ್ದಾರ
Published by: Vijayasarthy SN
First published: January 11, 2021, 10:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories