ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಅಪ್ಪು; ತಿನ್ನುವ ಮುನ್ನ ಹಾಕಿದ್ದ ಕಂಡೀಷನ್ ಏನು ಗೊತ್ತಾ?

Puneeth Rajkumar and Bangarpet Panipuri- ಒಳ್ಳೆಯ ರುಚಿ ಆಹಾರ ಎಂದರೆ ಎಷ್ಟು ದೂರ ಬೇಕಾದರೂ ಹೋಗುತ್ತಿದ್ದ ಪುನೀತ್ ರಾಜಕುಮಾರ್ ಅವರಿಗೆ ಕೋಲಾರದ ಬಂಗಾರಪೇಟೆಯ ಪಾನಿಪುರಿ ಎಂದರೆ ಬಹಳ ಪ್ರಿಯವಾಗಿತ್ತು. ಆ ಬಗ್ಗೆ ಒಂದು ವಿಶೇಷ ವರದಿ ಇದು:

ಬಂಗಾರಪೇಟೆಯಲ್ಲಿ ಪಾನಿಪುರಿ ಸವಿದಿದ್ದ ಪುನೀತ್ ರಾಜಕುಮಾರ್

ಬಂಗಾರಪೇಟೆಯಲ್ಲಿ ಪಾನಿಪುರಿ ಸವಿದಿದ್ದ ಪುನೀತ್ ರಾಜಕುಮಾರ್

  • Share this:
ಕೋಲಾರ: ನಟನೆಗೂ ಸೈ, ಸಾಹಸಕ್ಕೂ ಸೈ, ಹೆಜ್ಜೆ ಹಾಕಲೂ ಸೈ ಎಂತಿದ್ದ ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Sandalwood Power Star Puneeth Rajkumar), ತಿಂಡಿ ತಿನಿಸುಗಳನ್ನ ಸವಿಯಲು ಸಾಕಷ್ಟು ಇಷ್ಟ ಪಡ್ತಿದ್ದರು. ಹೀಗೆ ರಾಜ್ಯಾದ್ಯಂತ ಹೆಸರುವಾಸಿಯಾಗಿರುವ ಕೋಲಾರದ ಬಂಗಾರಪೇಟೆ ಪಾನಿಪುರಿ (Bangarpet Panipuri) ಎಂದರೆ ನಮ್ಮ ಪವರ್‌ ಸ್ಟಾರ್ ಪುನೀತ್ ಅವರಿಗೆ ಎಲ್ಲಿಲ್ಲದ ಇಷ್ಟವಿತ್ತಂತೆ. ಇದಕ್ಕಾಗಿಯೇ ಮೊದಲ ಬಾರಿಗೆ 2012 ರಲ್ಲಿ ಬಂಗಾರಪೇಟೆಯಲ್ಲಿ ಪಾನಿಪುರಿ (Pani Puri/Gol Goppa) ಸವಿದಿದ್ದ ನಟ ಪುನೀತ್, ಒಂದಾದ ಮೇಲೆ ಮತ್ತೊಂದು ಎನ್ನುತ್ತಾ 4 ಪ್ಲೇಟ್ ಪಾನಿಪುರಿ ಸವಿದಿದ್ದನ್ನು ಇಂದಿಗೂ ಇಲ್ಲಿನ ಪಾನಿಪುರಿ ವ್ಯಾಪಾರಿಗಳು ಮರೆತಿಲ್ಲ.

ಪುನೀತ್‍ ರಾಜ್‍ಕುಮಾರ್ ನಟನೆಯ, ಸೂಪರ್‌ ಹಿಟ್ ಚಲನಚಿತ್ರ ಅಣ್ಣಾಬಾಂಡ್ (Kannada movie Anna Bond) ಚಿತ್ರೀಕರಣ ಕೆಜಿಎಫ್​ನಲ್ಲಿ (KGF) ನಡೆಯುತ್ತಿದ್ದ ವೇಳೆ, ಬಂಗಾರಪೇಟೆ ಪಾನಿಪುರಿ ಸವಿಯಬೇಕೆಂಬ ಬಯಕೆಯನ್ನ ಪುನೀತ್ ರಾಜ್‍ಕುಮಾರ್ ತಿಳಿಸಿದ್ದರಂತೆ. ಹೀಗಾಗಿ ಬಂಗಾರಪೇಟೆಯ ವಾಸವಿ ಚಾಟ್ಸ್ ಸೆಂಟರ್‌ನ ಮಾಲೀಕ ವಾಸು (Vasavi Chats Center owner Vasu) ಹಾಗು ಅವರ ಸಹೋದರ ರಮೇಶ್ ಅವರು, ಅಪ್ಪು ಅವರಿಗೆ ಪಾನಿಪುರಿ ತಿನ್ನಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಅಂದು 4 ಪ್ಲೇಟ್ ಪಾನಿಪುರಿಯನ್ನ ಅಪ್ಪು ತಿಂದಿದ್ದನ್ನ ವ್ಯಾಪಾರಿ ವಾಸು ಅವರು ಇನ್ನೂ ಮರೆತಿಲ್ಲ.

ಪಾನಿಪುರಿ ತಿನ್ನುವ ಮುನ್ನ ಅಪ್ಪು ಷರತ್ತು (Condition by Appu):

ಅಂದು ಪಾನಿಪುರಿ ತಿನ್ನುವುದಕ್ಕೂ ಮೊದಲು ಒಂದು ಕಂಡೀಷನ್ ಹಾಕಿದ್ದ ಅಪ್ಪು, ‘ಮೊದಲು ಎಷ್ಟು ಪೋಟೊಸ್ ಬೇಕಾದರು ತಗೊಳ್ಳಿ. ಆದರೆ ತಿನ್ನುವ ವೇಳೆ ಮಧ್ಯೆ ಡಿಸ್ಟರ್ಬ್ ಮಾತ್ರ ಮಾಡಬೇಡಿ’ ಎಂತಲೂ ಹೇಳಿದ್ದರಂತೆ. ಪಾನಿಪುರಿ ಸವಿದ ಮೇಲೆ ತಿರುಪತಿ ಲಡ್ಡು ಎಷ್ಟು ರುಚಿಯೊ, ಹಾಗೆಯೇ ಬಂಗಾರಪೇಟೆ ಪಾನಿಪುರಿಯು ಅಷ್ಟೇ ರುಚಿಯಿದೆ ಎಂದು ಹೊಗಳಿದ್ದರು ಎಂದು ವ್ಯಾಪಾರಿ ವಾಸು ಅವರು ಹೇಳಿಕೆ ನೀಡಿದ್ದಾರೆ.

Vasavi Condiments at Bangarapete, Kolar
ಕೋಲಾರದ ಬಂಗಾರಪೇಟೆಯ ವಾಸವಿ ಕಾಂಡಿಮೆಂಟ್ಸ್


ಪುನೀತ್​ಗೆ ಬಂಗಾರಪೇಟೆ ಪಾನಿಪುರಿ ರುಚಿ ಹತ್ತಿದ್ದು ಹೀಗೆ:

ದಿವಂಗತ ಡಾ|| ರಾಜ್ ಕುಮಾರ್ ಅವರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಬಂಗಾರಪೇಟೆಯ ವ್ಯಾಪಾರಿ ವಾಸು ಹಾಗು ರಮೇಶ್ ಪಾನಿಪುರಿ ಹಾಗು ಮಸಾಲೆ ಪುರಿಯನ್ನು ನೀಡಿದ್ದರು. ಅಲ್ಲಿಂದ ಅಪ್ಪು ಬಂಗಾರಪೇಟೆ ಪಾನಿಪುರಿಯನ್ನ ಇಷ್ಟ ಪಡುತ್ತಿದ್ದರಂತೆ. ಅದಕ್ಕಾಗಿಯೇ ಶೂಟಿಂಗ್‍ಗೆಂದು ಬಂದಾಗ ಖುದ್ದು ಅವರೇ ತರಿಸಿಕೊಂಡು ಪಾನಿಪುರಿ ಸವಿದಿದ್ದಾರೆ. ಅದಾದ ನಂತರ ಮತ್ತೊಮ್ಮೆ ಫ್ಯಾಮಿಲಿ ಗೆಟ್ ಟುಗೆದರ್ ಪಾರ್ಟಿಯಲ್ಲೂ ಅಪ್ಪು ಬಂಗಾರಪೇಟೆ ಪಾನಿಪುರಿಯನ್ನ ಸವಿದಿದ್ದರು.

ಇದನ್ನೂ ಓದಿ: Puneeth Rajkumar ನಿಧನದ ಬಳಿಕ ಹೆಂಡತಿ Ashwini ಮೊದಲ ರಿಯಾಕ್ಷನ್; ದೊಡ್ಡತನ ಮೆರೆದ ದೊಡ್ಮನೆ ಸೊಸೆ

ಒಟ್ಟಿನಲ್ಲಿ ಅಪ್ಪು ಇಂದು ನಮ್ಮೊಂದಿಲ್ಲ ಎಂಬುದು ಎಷ್ಟು ಸತ್ಯವೋ, ಅವರ ಹಠಾತ್ ಅಗಲಿಕೆಯನ್ನ ಇನ್ನೂ ನಂಬಲಾಗುತ್ತಿಲ್ಲ ಎಂಬುದು ಅಷ್ಟೇ ಕಹಿ ಸತ್ಯವಾಗಿದೆ. ಅಪ್ಪು ದೈಹಿಕವಾಗಿ ನಮ್ಮಿಂದ ದೂರವಾಗಿದ್ದರೂ ಅವರ ನಗುಮುಖ, ಸಮಾಜಮುಖಿ ಕಾರ್ಯ, ನಟನೆಯ ಮೂಲಕ ನಮ್ಮ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನೂ ನಮ್ಮೊಂದಿಗೆ ಜೀವಂತವಾಗಿದ್ದಾರೆ.

ಪುನೀತ್ ಸಾವಿನಿಂದ ದೇವರಿಗೆ ಧಿಕ್ಕಾರ ಎಂದ ಅಭಿಮಾನಿಗಳು:

ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನವನ್ನ ಅಭಿಮಾನಿಗಳಿಗೆ ಇಂದಿಗೂ ನಂಬಲಾಗುತ್ತಿಲ್ಲ. ಕೋಲಾರದ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿ ಗ್ರಾಮದಲ್ಲಿ ಪುನೀತ್‍ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ಗ್ರಾಮಸ್ಥರು ಹಮ್ಮಿಕೊಂಡಿದ್ದರು. 60 ಅಡಿ ಉದ್ದದ ಪುನೀತ್ ಬ್ಯಾನರ್ ಅಳವಡಿಸಿದ್ದ ಅಭಿಮಾನಿಗಳು, ನೆಚ್ಚಿನ ನಟನ ಸ್ಮರಣಾರ್ಥ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಸರಳವಾಗಿ ಆಚರಣೆ ಮಾಡಿದರು.

ಇನ್ನು ಗ್ರಾಮದಲ್ಲಿನ 500 ವಿದ್ಯಾರ್ಥಿಗಳಿಗೆ ಪುನೀತ್ ಹೆಸರಲ್ಲಿ ಬುಕ್ ಹಾಗು ಪೆನ್ ವಿತರಿಸಿ ಒಂದು ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆಯನ್ನ ಮಾಡಿದ್ದರು. ಇದೇ ವೇಳೆ ಮಾತನಾಡಿದ ಗ್ರಾಮಸ್ಥರು, ಸರಳ ಸಜ್ಜನಿಕೆಯ ನಟನ ಸಾವು ನಂಬಲಾಗುತ್ತಿಲ್ಲ ಎಂದಿದ್ದು, ಒಳ್ಳೆಯವರನ್ನ ಕರೆಸಿಕೊಂಡ ದೇವರಿಗೆ ದಿಕ್ಕಾರ (Fans Anger against The God) ಎಂದು ಆಕ್ರೋಶ ಹೊರಹಾಕಿದರು. ಪುನೀತ್ ಅವರ ಸಮಾಜಮುಖಿ ಕಾರ್ಯವನ್ನ ಕೋಲಾರದಲ್ಲಿ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದು, ಜಿಲ್ಲೆಯಲ್ಲಿನ ವೃದ್ದಾಶ್ರಮಗಳಿಗೆ ಅಗತ್ಯ ನೆರವು ನೀಡಲು ನಿರ್ಧಾರ ಮಾಡಿರುವುದಾಗಿ ಅಭಿಮಾನಿಗಳು ತಿಳಿಸಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: