news18-kannada Updated:December 25, 2020, 7:58 AM IST
ವಿದ್ಯುತ್ ಟರ್ಬೈನ್ ಯಂತ್ರದೊಂದಿಗೆ ಮಂಜೇಗೌಡ.
ಮಂಡ್ಯ : ಆತ ಎಂಟನೆ ತರಗತಿ ಓದಿರೋ ರೈತ. ಆದರೆ, ಆತನ ಮಾಡಿರೋ ಮತ್ತು ಮಾಡಲು ಹೊರಟಿರೋ ಹೊಸ ಅವಿಷ್ಕಾರಗಳು ಮತ್ತು ಕೆಲಸಗಳು ಇವರನ್ನು ಈ ಭಾಗದಲ್ಲಿ ರೈತ ವಿಜ್ಞಾನಿ ರೋಬೋ ಮಂಜೇಗೌಡ ಅಂತಲೇ ಫೇಮಸ್ ಮಾಡಿವೆ. ಇವರ ಮಾಡಿ ರೋ ಆ ಸಾಧನೆಗಳು ಜೊತೆಗೆ ಇದೀಗ ತಮ್ಮ ತಾಂತ್ರಿ ಕತೆಯ ಮೂಲಕ ತಮ್ಮೂರಿಗೆ ಹಾಗೂ ಊರಿನ ಬಡ ಜನರಿಗೆ ಉಚಿತವಾಗಿ ವಿದ್ಯುತ್ ನೀಡಲು ಮುಂದಾ ಗಿದ್ದಾರೆ. ಅಂದಾಗೆ! ಇವರ ಹೆಸರು ಮಂಜೇಗೌಡ. ಇವರನ್ನು ಮಂಡ್ಯ ಜಿಲ್ಲೆಯಲ್ಲಿ ಜನರು ರೋಬೋ ಮಂಜೇಗೌಡ ಎಂದೇ ಕರೆಯುತ್ತಾರೆ. ಇವರು ಓದಿರೋದು ಕೇವಲ 8ನೇ ತರ ಗತಿಯಾದ್ರು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತಮ್ಮದೆ ಕೌಶಲ್ಯದ ಮೂಲಕ ಹಲವಾರು ಯಂತ್ರ ಮತ್ತು ಉಪಕರಣಗಳನ್ನು ಸಂಶೋಧಿಸಿ ಅವಿಷ್ಕರಿಸಿದ್ದಾರೆ. ಅಲ್ಲದೆ ಇದೀಗ ಕೆರೆಯ ಸೀಪೇಜ್ ನೀರು ಬಳಸಿ ತಮ್ಮ ಜಮೀನಿನಲ್ಲಿ ವಿದ್ಯುತ್ ಉತ್ಪಾದಿಸಿ ತಮ್ಮೂರಿಗೆ ಹಾಗೂ ಊರಿನ ಬಡ ಜನರಿಗೆ ಉಚಿತವಾಗಿ ವಿದ್ಯು ತ್ ನೀಡುತ್ತಿದ್ದಾರೆ.
ಕೆರೆಯ ಸಿಪೇಜ್ ನೀರಿಗೆ ತಮ್ಮದೆ ಜ್ಞಾನದ ಟರ್ಬೈನ್ ಅಳವಡಿಸುವ ಮೂಲಕ ನೀರು ತಳ್ಳುವ ಯಂತ್ರವನ್ನು ತಯಾರಿಸಿ ಅದ್ರಿಂದ ಸುಮಾರು 3 ಕಿಲೋ ವ್ಯಾಟ್ ವಿದ್ಯುತ್ ತಯಾರಿಸುತ್ತಿದ್ದಾರೆ. ಅಲ್ಲಿ ತಯಾರಾಗೋ ವಿದ್ಯುತ್ ಅನ್ನು 1 ಕಿ.ಮೀ. ದೂರದ ತಮ್ಮೂರು ಕೋಮನಹಳ್ಳಿಗೆ ಕೇಬಲ್ ಮೂಲಕ ಕೊಂಡೋಯ್ದು ಊರಿನ ಬಡ ಜನರು ಸೇರಿ ಊರಿನ ಶಾಲೆ,ಹಾಲಿನ ಡೇರಿ ಸೇರಿ ದಂತೆ ಊರಿನ ಬೀದಿ ದೀಪ ಗಳಿಗೆ ಉಚಿತ ವಿದ್ಯುತ್ ಕೊಡ್ತಿದ್ದಾರೆ.ಅಲ್ದೆ ವರ್ಷವಿಡಿ ಊರಿಗೆ ನೀರು ಮತ್ತು ಗಾಳಿಯಿಂದ ವಿದ್ಯುತ್ ತಯಾ ರಿಸ್ತಿದ್ದಾರೆ. ಯಾರ ಸಹಾಯವಿಲ್ಲದೆ ಮಾಡ್ತಿರೋ ಈ ತಮ್ಮಗೆ ತೃಪ್ತಿ ತಂದಿದ್ದೆ ಎನ್ನುತ್ತಿದ್ದಾರೆ ಈ ಹಳ್ಳಿಯ ರೈತ ವಿಜ್ಞಾನಿ.
ಇನ್ನು ಈ ರೈತ ವಿಜ್ಞಾನಿ ರೋಬೋ ಮಂಜೇಗೌಡ ಇದೊಂದೆ ಅವಿಷ್ಕಾರ ಅಲ್ಲ. ಈ ಹಿಂದೆಯೇ ಹತ್ತು ಹಲವು ಸಂಶೋಧನೆಗಳ ಮೂಲಕ ಹಲವಾರು ಸಮಾಜಮುಖಿ ಯಂತ್ರಗಳನ್ನು ಅವಿಷ್ಕಾರ ಮಾಡಿದ್ದಾರೆ. ಅದರಲ್ಲಿ ಪ್ರಮುಖವಾದವುವೆಂದರೆ ಆಟೋ ಮೆಟಿಕ್ ರೈಲ್ವೆ ಗೇಟ್, ಕೊಳವೆ ಬಾವಿಯಲ್ಲಿ ಮತ್ತು ನೀರಿನಲ್ಲಿ ಬಿದ್ದ ವಸ್ತು ಮತ್ತು ವಕ್ತಿಗಳ ಹುಡುಕಾಟಕ್ಕೆ ರೋಬೋ, ದೇಶಕಾಯೋ ಯೋಧನ ರೋಬೋ,ಸೇರಿ ಹತ್ತು ಹಲವು ಯಂತ್ರಗಳನ್ನು ತಮ್ಮ ತಂತ್ರಜ್ಞಾನದ ಕೌ ಶಲ್ಯದಿಂದ ಅವಿಷ್ಕರಿಸಿದ್ದಾರೆ.
ಇದೀಗ ಕೆರೆಯ ವೇಸ್ಟೇಜ್ ನೀರಿನಿಂದ ಮತ್ತು ಮನೆಯ ಮೇಲೆ ಚಿಕ್ಕದಾಗಿ ಗಾಳಿಗೋಪುರದ ಫ್ಯಾನ್ ಅಳವಡಿಕೆಯಿಂದ ವಿದ್ಯುತ್ ಉತ್ಪಾದಿಸಿ ಊರಿಗೆ ಉಚಿತ ವಿದ್ಯುತ್ ಕೊಡಲು ಮುಂದಾಗಿದ್ದಾರೆ. ರೋಬೋ ಮಂಜೇಗೌಡರ ಸೇವೆ ಕಂಡು ಊರ ಜನರು ಮಂಜೇ ಗೌಡರ ಕೆಲಸಕ್ಕೆ ಹೆಮ್ಮೆ ಪಟ್ಟು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಜನವರಿ 1ರಿಂದ ಶಾಲೆಗಳ ಆರಂಭಕ್ಕೆ ತುಮಕೂರು ಜಿಲ್ಲಾಡಳಿತ ಸಿದ್ಧ
ಇವರ ಸೇವೆಗೆ ಸರ್ಕಾರದ ನೆರವು ಅಗತ್ಯ ಎಂದಿರುವ ಜಿಲ್ಲೆ ಯ ಉಸ್ತುವಾರಿ ಸಚಿವ ನಾರಾಯಣಗೌಡ ಮಂಜೇ ಗೌಡರ ಸಾಧನೆಯನ್ನು ಶ್ಲಾಘಿಸಿ ಪ್ರಶಂಸೆ ವ್ಯಕ್ಯಪಡಿಸಿ ಸರ್ಕಾರದ ಗಮನಕ್ಕೆ ಇವರ ಸಾಧನೆ ತಿಳಿಸಿ ಇವರ ಸೇ ವೆಯನ್ನು ರಾಜ್ಯಕ್ಕೆ ಬಳಸಿ ಇಂತವರಿಗೆ ಶಕ್ತಿ ತುಂಬುವ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಹಳ್ಳಿಯ ರೈತನಾಗಿ ವಿಜ್ಞಾನಿಗಳಂತೆ ಅನೇಕ ಸಮಾಜ ಮುಖಿಯಂತ್ರಗಳ ಅವಿಷ್ಕಾರದಿಂದ ರೋಬೋ ಮಂಜೇಗೌಡರೆಂದೇ ಪ್ರಸಿದ್ದಿಯಾಗಿರೋ ಇವ್ರು,ಇದೀಗ ತಮ್ಮ ತಂತ್ರಜ್ಞಾನದ ಮೂಲಕ ಊರಿಗೆ ಉಚಿತ ವಿದ್ಯುತ್ ನೀಡುತ್ತಿರುವುದು ಸಾಧನೆಯೇ ಸರಿ.
Published by:
MAshok Kumar
First published:
December 25, 2020, 7:58 AM IST