ಸಂಕಷ್ಟದಲ್ಲಿ ಬೀದರ್ ಜಿಲ್ಲೆಯ ಕುಂಬಾರರ ಬದುಕು ; ಕುಶಲತೆ ಮರೆಯುತ್ತಿವೆ ಮಡಿಕೆ ಮಾಡುವ ಕೈಗಳು
ಡಿಜಿಟಲ್ ಯುಗದಲ್ಲಿ ಜೇಡಿ ಮಣ್ಣನ್ನು ಹದ ಮಾಡಿ ಮಾಡಿದ ಮಡಿಕೆ, ಕುಡಿಕೆ, ಒಲೆ, ಹೂ ಕುಂಡ ಸೇರಿದಂತೆ ವಿವಿಧ ಸಾಮಗ್ರಿ ವಸ್ತುಗಳನ್ನು ಜನರು ಖರೀದಿ ಮಾಡುತ್ತಿಲ್ಲ
news18-kannada Updated:October 12, 2020, 7:07 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: October 12, 2020, 7:07 AM IST
ಬೀದರ್(ಅಕ್ಟೋಬರ್. 12): ಬೀದರ್ ಜಿಲ್ಲೆಯಲ್ಲಿ ಕುಂಬಾರರ ಬದುಕು ಅಕ್ಷರಹಃ ಬೀದಿಗೆ ಬಿದ್ದಿದೆ. ಕೊರೋನಾ ನಂತರ ಇದ್ದ ತಕ್ಕಮಟ್ಟಿನ ವ್ಯಾಪಾರವೂ ಕೈಕೊಟ್ಟಿದೆ. ಹಾಗಾಗಿ ಕುಂಬಾರಿಕೆಯನ್ನು ಬಿಟ್ಟು ಜೀವನ ನಡೆಸಲು ಬೇರೆ ಉದ್ಯೋಗಗಳತ್ತ ಜಿಲ್ಲೆಯ ಕುಂಬಾರರು ಗಮನ ಹರಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಸಾವಿರಾರು ಕುಂಬಾರಿಕೆ ಕುಟುಂಬಗಳು ಇದೀಗ ದಿಕ್ಕು ತೋಚದಂತಾಗಿವೆ. ಇನ್ನೂ ಕುಂಬಾರರಿಗೆ ಬಹುಮುಖ್ಯವಾಗಿ ಬೇಕಾಗಿರುವ ಮಣ್ಣು ಮತ್ತು ಕಟ್ಟಿಗೆಯನ್ನ ತರಲು ಅರಣ್ಯಕ್ಕೆ ಹೋದರೇ ಅಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕಾಟ. ಕದ್ದು ಮುಚ್ಚಿ ಮಣ್ಣು ತೆಗೆದುಕೊಂಡು ಬಂದರೇ ಕುಂಬಾರರ ಮೇಲೆ ಅನೇಕ ಕೇಸ್ ಗಳನ್ನ ದಾಖಲಿಸಿ ಕೋರ್ಟ್ಗೆ ಅಲೆದಾಡುವಂತೆ ಮಾಡಿದ ನಿದರ್ಶನಗಳು ಇವೆ. ಡಿಜಿಟಲ್ ಯುಗದಲ್ಲಿ ಜೇಡಿ ಮಣ್ಣನ್ನು ಹದ ಮಾಡಿ ಮಾಡಿದ ಮಡಿಕೆ, ಕುಡಿಕೆ, ಒಲೆ, ಹೂ ಕುಂಡ ಸೇರಿದಂತೆ ವಿವಿಧ ಸಾಮಗ್ರಿ ವಸ್ತುಗಳನ್ನು ಜನರು ಖರೀದಿ ಮಾಡುತ್ತಿಲ್ಲ. ಹೀಗಾಗಿ ಕುಂಬಾರಿಕೆ ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿರುವುದರಿಂದ ಕುಂಬಾರರ ಕುಶಲತೆ ಗ್ರಾಮೀಣ ಪ್ರದೇಶದಿಂದ ಹಂತ, ಹಂತವಾಗಿ ಕಣ್ಮರೆಯಾಗುತ್ತಿದೆ.
ಈ ಸಮಾಜದ ಯುವ ಪೀಳಿಗೆ ಮಣ್ಣಿನ ಕಾಯಕಕ್ಕೆ ಗುಡ್ ಬೈ ಹೇಳಿ ದೂರ ಸರಿಯುವ ಕಾಲ ಬಹಳ ಹತ್ತಿರದಲ್ಲಿದೆ. ಸರಕಾರ ಕುಂಬಾರಿಕೆಗೆ ಪ್ರೋತ್ಸಾಹ ನೀಡದೇ ಹೋದರೆ ಮುಂದಿನ ದಿನದಲ್ಲಿ ಮಡಿಕೆ, ಕುಡಿಕೆ ಮತ್ತು ಮಣ್ಣಿನಿಂದ ಮಾಡಿದ ಇನ್ನಿತರ ಸುಂದರ ವಸ್ತುಗಳು ಕಣ್ಮರೆಯಾಗುವ ದಿನ ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಹಿಂದುಳಿದ ವರ್ಗಗಳ ಇಲಾಖೆಗೆ ಸರಕಾರ ಕೋಟಿಗಟ್ಟಲೆ ಹಣ ನೀಡುತ್ತಿದೆ ಎಂದು ದಾಖಲೆಯಲ್ಲಿ ಹೇಳುತ್ತಿದ್ದಾರೆ ವಿನಃ ಈ ಕುಂಬಾರ ಜನಾಂಗಕ್ಕೆ ಸವಲತ್ತು ನೀಡಿ ಕಾರ್ಯಗತವಾಗಿರುವ ಒಂದೇ ಒಂದು ನಿದರ್ಶನಗಳಿಲ್ಲ. ಈ ಬಡ ಕುಟುಂಬಗಳನ್ನು ಸ್ಥಳೀಯ ಜನಪ್ರನಿಧಿಗಳು ನಿರ್ಲಕ್ಷಿಸಿ, ಗಮನ ಹರಿಸುವರೇ ಇಲ್ಲ ಎಂಬುದು ಈ ಜನಾಂಗಗಳ ಮುಖಂಡರ ಕೂಗು.
ಇನ್ನೂ ಬಡವರ ಪ್ರೀಡ್ಜ್ ಅಂತಾ ಕರೆಯಿಸಿಕೊಳ್ಳುವ ಮಡಿಕೆಯನ್ನ ಜನರು ಖರೀದಿಸಿ ಕುಂಬಾರಿಕೆಗೆ ಪ್ರೋತ್ಸಾಹ ನೀಡಬೇಕಂದು ಗ್ರಾಹಕರು ಹೇಳುತ್ತಿದ್ದಾರೆ.
ಇದನ್ನೂ ಓದಿ : ಕಲಬುರ್ಗಿಯಲ್ಲಿ ವರುಣನ ಅಬ್ಬರ ; ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ಬಾಲಕರ ಸಾವು
ಆಧುನಿಕ ಜಗತ್ತಿನ ನಾಗಾಲೋಟಕ್ಕೆ ಅನೇಕ ಕಲೆಗಳು, ಆಚಾರ ವಿಚಾರಗಳು ನೇಪಥ್ಯಕ್ಕೆ ಸರಿಯುತ್ತಿವೆ. ಹೊಸ ಯಾಂತ್ರಿ ಬದುಕಿನ ವಿವಿಧ ವಿಚಾರಧಾರೆಗಳು, ಯಂತ್ರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ಅದರಂತೆ ಆಧುನಿಕತೆಯ ಅಬ್ಬರಕ್ಕೆ ಸಿಲುಕಿದ ಕುಂಬಾರರು ಇಂದು ಬೀದಿಪಾಲಾಗಿದ್ದಾರೆ. ಅವರು ತಮ್ಮ ಕುಲ ಕಸುಬು ಬಿಟ್ಟು ಈಗ ಉದ್ಯೋಗಕ್ಕೆ ಅನ್ಯ ಮಾರ್ಗ ಕಾಣದೆ ಕಂಗಾಲಾಗಿದ್ದಾರೆ.
ಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುವ ತಮ್ಮ ವೃತ್ತಿಗಳಿಗೆ ಅತ್ತ ತಿಲಾಂಜಲಿ ನೀಡಲಾಗದೆ ಇತ್ತ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗದೆ ಕುಂಬಾರರ ಬದುಕು ಡೋಲಾಯಮಾನ ಸ್ಥಿತಿಗೆ ಬಂದಿದೆ. ವೃತ್ತಿಯಲ್ಲಿ ಬದುಕು ಕಂಡುಕೊಂಡಿರುವ ಸಾವಿರಾರು ಕುಂಬಾರರು ಇಂದು ಆಧುನಿಕ ವಸ್ತುಗಳೊಂದಿಗೆ ಪೈಪೋಟಿ ಮಾಡಲಾಗದೆ ಕುಂಬಾರಿಕೆಯನ್ನೇ ಬಿಟ್ಟಿದ್ದಾರೆ.
ಈ ಸಮಾಜದ ಯುವ ಪೀಳಿಗೆ ಮಣ್ಣಿನ ಕಾಯಕಕ್ಕೆ ಗುಡ್ ಬೈ ಹೇಳಿ ದೂರ ಸರಿಯುವ ಕಾಲ ಬಹಳ ಹತ್ತಿರದಲ್ಲಿದೆ. ಸರಕಾರ ಕುಂಬಾರಿಕೆಗೆ ಪ್ರೋತ್ಸಾಹ ನೀಡದೇ ಹೋದರೆ ಮುಂದಿನ ದಿನದಲ್ಲಿ ಮಡಿಕೆ, ಕುಡಿಕೆ ಮತ್ತು ಮಣ್ಣಿನಿಂದ ಮಾಡಿದ ಇನ್ನಿತರ ಸುಂದರ ವಸ್ತುಗಳು ಕಣ್ಮರೆಯಾಗುವ ದಿನ ಬಂದರೆ ಅಚ್ಚರಿ ಪಡಬೇಕಾಗಿಲ್ಲ.