ಶಿವಮೊಗ್ಗ(ಅಕ್ಟೋಬರ್. 13): ಇದು ಹೇಳಿ ಕೇಳಿ ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆ. ಯಡಿಯೂರಪ್ಪ ಸಿಎಂ ಆಗಿ ಒಂದು ವರ್ಷ ಕಳೆದ ಹೋದರು ಶಿವಮೊಗ್ಗ ನಗರ ರಸ್ತೆಗಳಿಗೆ ಮುಕ್ತಿ ಸಿಕ್ಕಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವಂತ ಅನೇಕ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಮಾರ್ಟಿ ಸಿಟಿ ಕಾಮಗಾರಿಗಳು ಸಹ ಪಾದಚಾರಿಗಳಿಗೆ ಸಂಚಾರಕ್ಕೆ ತೊಂದರೆ ಅಡಿಯಾಗಿದೆ. ಜೊತೆಗೆ ಕೇಬಲ್ ಪೈಪ್ ಲೈನ್ ಗಳ ಅಳವಡಿಕೆ, ಚರಂಡಿ ಕಾಮಗಾರಿಗೆ ಎಲ್ಲಂದರಲ್ಲಿ ಗುಂಡಿ ತೆಗೆಯುತ್ತಿದ್ದ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಯಡಿಯೂರಪ್ಪ ಸಿಎಂ ಆದ ಮೇಲೆ ಶಿವಮೊಗ್ಗ ನಗರ ಅಭಿವೃದ್ಧಿ ಆಗುತ್ತದೆ, ರಸ್ತೆಗಳು ಪಳ ಪಳ ಹೊಳೆಯುತ್ತವೆ ಎಂದುಕೊಂಡಿದ್ದ ಜನರು ಈಗ ಭ್ರಮ ನಿರಸನಗೊಂಡಿದ್ದಾರೆ. ಶಿವಮೊಗ್ಗ ನಗರದ ರಸ್ತೆಗಳ ಗುಂಡಿ ಬಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ನಗರದ ಬಹುತೇಕ ರಸ್ತೆಗಳು ಸ್ಥಿತಿ ಇದೆ ರೀತಿ ಇದೆ. ಕಳೆದ ಎರಡು ವರ್ಷಗಳಿಂದ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ. ಗುಂಡಿ ಬಿದ್ದ ರಸ್ತೆಗಳಲ್ಲೇ ಸಂಚಾರ ಮಾಡಲು ವಾಹನ ಸವಾರರು ಪರದಾಡುತ್ತಿದ್ದಾರೆ.
ಗುಂಡಿಗಳಿಗೆ ವಾಹನ ಇಳಿಸಿದರೇ ಎಲ್ಲಿ ಬೀಳುತ್ತೇವೋ ಎಂಬ ಭಯದಲ್ಲೇ ಜೀವ ಬೀಗಿ ಹಿಡಿದುಕೊಂಡು ವಾಹನ ಓಡಿಸುತ್ತಿದ್ದಾರೆ. ಯಾವ ರಸ್ತೆಗೆ ಹೋದರು ಗುಂಡಿ ಗುಂಡಿ ಎನ್ನುವ ಪರಿಸ್ಥಿತಿ ಶಿವಮೊಗ್ಗ ನಗರದಲ್ಲಿದೆ. ನಗರದಲ್ಲಿ ಇರುವಂತ ಬಹುತೇಕ ರಸ್ತೆಗಳು ಗುಂಡಿ ಬಿದ್ದು ವರ್ಷಗಳೇ ಕಳೆಯುತ್ತಾ ಬಂದರೂ, ಅವಕ್ಕೆ ಮುಕ್ತಿ ಸಿಕ್ಕಿಲ್ಲ. ಹೊಸ ರಸ್ತೆ ಇರಲಿ ಅವುಗಳಿಗೆ ತೇಪೆ ಹಾಕುವ ಕೆಲಸ ಸಹ ಆಗಿಲ್ಲ. ಡಾಂಬರು ರಸ್ತೆಗಳು ಗುಂಡಿ ಬಿದ್ದರೆ, ಮಹಾ ನಗರ ಪಾಲಿಕೆ ಅಧಿಕಾರಿಗಳು ಮಣ್ಣು, ಜಲ್ಲಿಪುಡಿ, ಇಟ್ಟಿಗೆ ತುಂಡುಗಳನ್ನು ತಂದು ಹಾಕಿ ಗುಂಡಿ ಮುಚ್ಚುವ ಕೆಲಸ ಮಾಡುತ್ತಾರೆ. ಇದರಿಂದ ವಾಹನ ಸವಾರರನ್ನು ಮತ್ತೋಷ್ಟು ಪರಿತಪಿಸುವಂತಾಗಿದೆ. ನಗರದ ಬಹುತೇಕ ಬಡಾವಣೆಗಳ ರಸ್ತೆ ಪರಿಸ್ಥಿತಿ ಇದೇ ರೀತಿ ಇದೆ.
ಇನ್ನು ಗುಂಡಿ ಬಿದ್ದ ರಸ್ತೆಗಳು ಒಂದು ಕಡೆಯಾದರೆ, ರಸ್ತೆ ಪಕ್ಕದಲ್ಲೇ ಎಲ್ಲೆಂದರಲ್ಲಿ ಪೈಪ್ ಲೈನ್ ಗಾಗಿ ಗುಂಡಿ ಹೊಡೆಯಲಾಗುತ್ತಿದೆ. ಇದರಿಂದ ಸಹ ರಸ್ತೆ ಹಾಳಾಗುತ್ತಿದೆ. ಯಾರು, ಯಾವುದಕ್ಕೆ ಗುಂಡಿ ತೆಗೆಯುತ್ತಿದ್ದಾರೆ, ಪೈಪ್ ಲೈನ್ ಹಾಕುತ್ತಿದ್ದಾರೆ ಎಂಬ ಮಾಹಿತಿ ಸಹ ಸಾರ್ವಜನಿಕರಿಗೆ ಇಲ್ಲವಾಗಿದೆ. ಬೆಳಗ್ಗೆ ಹೋದ ರಸ್ತೆಯಲ್ಲಿ ಸಂಜೆ ಹೋಗಲು ಹೋದರೆ ಅಲ್ಲಿ ಅಡ್ಡಲಾಗಿ ಗುಂಡಿ ಹೊಡೆದು ಸಂಚಾರಕ್ಕೆ ಅಡ್ಡಿಯಾದ ಪ್ರಸಂಗಗಳು ಸಹ ನಡೆದಿವೆ. ಹೀಗಾಗಿ ಸರ್ಕಾರ ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ಸಾರ್ವನಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ : Cheating: ಸುಲಭ ಸಾಲದ ಆಮಿಷ; ಗ್ರಾಹಕರಿಗೆ ಲಕ್ಷಾಂತರ ರೂ ವಂಚನೆ
ರಸ್ತೆಗಳ ಪಕ್ಕದಲ್ಲೇ ಗುಂಡಿ ಹೊಡೆಯುತ್ತಿದ್ದು, ರಸ್ತೆಗಳ ಸಹ ಹಾಳಾಗುತ್ತಿವೆ. ಸಂಚಾರಕ್ಕೂ ಸಹ ಅಡಚಣೆಯಾಗುತ್ತಿದೆ. ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ, ಅಪಘಾತವಾಗುವ ಸಾಧ್ಯತೆಗಳು ಹೆಚ್ಚಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ