ಆನ್​​ಲೈನ್ ತರಗತಿಯ ಅಬ್ಬರದ ನಡುವೆ ಸಕ್ಕರೆನಾಡು ಮಂಡ್ಯದಲ್ಲಿ ಶುರುವಾದ ಪೋಸ್ಟ್ ಕಾರ್ಡ್ ಟೀಚಿಂಗ್

ತಮ್ಮ ವಿಳಾಸಕ್ಕೆ ಕಾಲೇಜಿನಿಂದ ಬಂದ ಈ ಫೋಸ್ಟ್ ಕಾರ್ಡ್ ಪಾಠವನ್ನು ಮನನ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಕೆಲವು  ವಿದ್ಯಾರ್ಥಿಗಳು ಕೂಡ ಪೋಸ್ಟ್ ಕಾರ್ಡ್ ಮೂಲಕವೇ ಸಂದೇಹವನ್ನು ಬರೆದು ಕಳಿಸಿ ಉತ್ತರ ಪಡೆದುಕೊಳ್ಳುತ್ತಿದ್ದಾರೆ

news18-kannada
Updated:September 25, 2020, 4:22 PM IST
ಆನ್​​ಲೈನ್ ತರಗತಿಯ ಅಬ್ಬರದ ನಡುವೆ ಸಕ್ಕರೆನಾಡು ಮಂಡ್ಯದಲ್ಲಿ ಶುರುವಾದ ಪೋಸ್ಟ್ ಕಾರ್ಡ್ ಟೀಚಿಂಗ್
ಉಪನ್ಯಾಸಕರು
  • Share this:
ಮಂಡ್ಯ(ಸೆಪ್ಟೆಂಬರ್​.25): ದೇಶದಲ್ಲಿ ಕೊರೋನಾ ಬಂದ ಮೇಲೆ ಶಾಲಾ ಕಾಲೇಜುಗಳು ಮುಚ್ಚಿವೆ. ಸುಧೀರ್ಘ ಅವಧಿಗೆ ಮುಚ್ಚಿದ್ದ ಶಾಲಾ ಕಾಲೇಜುಗಳು ಈಗ ಆನ್​​ಲೈನ್​​ ತರಗತಿಗಳನ್ನು ಶುರು ‌ಮಾಡಿದ್ದಾರೆ. ಕಂಪ್ಯೂಟರ್ ಮತ್ತು ಮೊಬೈಲ್ ಮೂಲಕ  ಆನ್​​ಲೈನ್​​​ ಪಾಠ ಮಾಡುವ ಸಂಪ್ರದಾಯದ ನಡುವೆ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಹೊಸ ಸಂಪ್ರದಾಯ ಹುಟ್ಟಿಕೊಂಡಿದೆ. ಮಂಡ್ಯದ ಖಾಸಗಿ ಕಾಲೇಜ್ ಒಂದು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಸ್ಟ್  ಕಾರ್ಡ್ ಮೂಲಕ ಪಾಠ ಮಾಡುವ ಹೊಸ ಸಂಪ್ರದಾಯ ಶುರು ಮಾಡಿದ್ದು, ಪೋಸ್ಟ್ ಕಾರ್ಡ್ ಮೂಲಕ  ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹೊರಟಿದೆ. ಮಂಡ್ಯ ನಗರದ ಮರೀಗೌಡ ಬಡಾವಣೆಯಲ್ಲಿರೋ ಸಂತೋಷ್ ಪಿಯು ಕಾಲೇಜಿನಲ್ಲಿ ಹೊಸ ಸಂಪ್ರದಾಯದ ಟೀಚಿಂಗ್ ಗೆ ಕಾಲೇಜಿನ ಆಡಳಿತ ಮಂಡಳಿ ಮುಂದಾಗಿದೆ. ತಮ್ಮ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿರುವ ಬಡ ಮಕ್ಕಳಿಗಾಗಿ ಪೋಸ್ಟ್ ಕಾರ್ಡ್ ಮೂಲಕ ಪಾಠ ಪ್ರವಚನ ಮಾಡುತ್ತಿದೆ.

ಪ್ರತಿದಿನ ಪೋಸ್ಟ್ ಕಾರ್ಡ್ ಮೂಲಕ ಈ ಶೈಕ್ಷಣಿಕ ವರ್ಷದ ಪಾಠವನ್ನು ಉಪನ್ಯಾಸಕರಿಂದ ಬರೆಸಿ ಅದನ್ನು ವಿದ್ಯಾರ್ಥಿಗಳಿಗೆ ಪೋಸ್ಟ್ ಮೂಲಕ ಕಳಿಸುತ್ತಿದ್ದ ಆ ಮೂಲಕ ವಿದ್ಯಾ ರ್ಥಿಗಳಿಗೆ  ಪಾಠ ಬೋಧನೆ ಮಾಡುತ್ತಿದೆ. ಈ ಮೂಲಕ ಹೊಸ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಇನ್ನು ಈ ಪಿಯುಸಿ ಕಾಲೇಜಿನಲ್ಲಿ ಸುಮಾರು 30 ಕ್ಕೂ ಬಡ ವಿದ್ಯಾರ್ಥಿಗಳು ಈ ವರ್ಷ  ಈ ಕಾಲೇಜಿಗೆ ದಾಖಲಾಗಿದ್ದಾರೆ. ವಿದ್ಯಾರ್ಥಿಗಳು ಬಡವರಾಗಿದ್ದು ಯಾವುದೇ ಮೊಬೈಲ್ ಇಲ್ಲದ ಕಾರಣಕ್ಕೆ ಈ ಕಾಲೇಜಿನ ಆಡಳಿತ ಮಂಡಳಿಯ ಈ ಹೊಸ ಸಂಪ್ರದಾಯ ಹುಟ್ಟಿ ಹಾಕಿದ್ದಾರೆ. ಮಕ್ಕಳಿಗೆ ಹೇಗಾದರೂ ಮಾಡಿ ಶಿಕ್ಷ ಣ ಕೊಡುವ ನಿಟ್ಟಿನಲ್ಲಿ ಈ ಪೋಸ್ಟ್ ಕಾರ್ಡ್ ಗಳಲ್ಲಿ ಆಯಾ ವಿಷ ಯದ ಕುರಿತು ಚಿಕ್ಕದಾಗಿ ಚೊಕ್ಕವಾಗಿ ಪಾಠವನ್ನು ಬರೆದು ವಿದ್ಯಾರ್ಥಿಗಳ ವಿಳಾಸಕ್ಕೆ ಕಳಿಸುತ್ತಿದ್ದಾರೆ.

ತಮ್ಮ ವಿಳಾಸಕ್ಕೆ ಕಾಲೇಜಿನಿಂದ ಬಂದ ಈ ಫೋಸ್ಟ್ ಕಾರ್ಡ್ ಪಾಠವನ್ನು ಮನನ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಕೆಲವು ವಿದ್ಯಾರ್ಥಿಗಳು ಕೂಡ ಪೋಸ್ಟ್ ಕಾರ್ಡ್ ಮೂಲಕವೇ ಸಂದೇಹವನ್ನು ಬರೆದು ಕಳಿಸಿ ಉತ್ತರ ಪಡೆದುಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಕಾರ್ಡ್ ಟೀಚಿಂಗ್ ಗಾಗಿ ಈ ಕಾಲೇಜಿನವರು ನಗರದ ಅಂಚೇ ಕಚೇರಿ ಯಿಂದ ಸಾವಿರಾರು ಪೋಸ್ಟ್ ಕಾರ್ಡ್ ಖರೀಸಿದ್ದಾರೆ.

ಇದನ್ನೂ ಓದಿ : SP Balasubrahmanyam: ದೇವರು ಇನ್ನೊಂದು ಜನ್ಮ ಕೊಟ್ಟರೆ ಕನ್ನಡಿಗನಾಗಿ ಹುಟ್ಟಲು ಬಯಸುತ್ತೇನೆ ಎಂದಿದ್ದರು ಎಸ್​ಪಿಬಿ

ಅಲ್ಲದೇ ಅಂಚೆ ಇಲಾಖೆಯವರ ಜೊತೆ ಈ ಸಂಬಂಧ ಮಾತುಕತೆ ನಡೆಸಿದ್ದು, ತಮ್ಮ ಈ ಪ್ರಯತ್ನಕ್ಕೆ ಕೈಜೋಡಿ ಸುವಂತೆ ಮನವಿ ಮಾಡಿದ್ದು, ಅಂಚೆ ಕಚೇರಿಯವರು ಈ ಹೊಸ ಪ್ರಯತ್ನಕ್ಕೆ ಕೈಜೋಡಿಸಿ ಶೀಘ್ರವಾಗಿ ಒಂದೇ ದಿನದಲ್ಲಿ ವಿದ್ಯಾರ್ಥಿಗಳ ವಿಳಾಸಕ್ಕೆ ಪೋಸ್ಟ್ ಕಾರ್ಡ್ ತಲುಪಿಸುತ್ತಿದ್ದಾರೆ. ಕಾಲೇಜಿನವರ ಈ ಹೊಸ ಪ್ರಯ ತ್ನಕ್ಕೆ ಬಡ ಪೋಷಕರು ಸೇರಿದಂತೆ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಎಲ್ಲೆಡೆ ಆನ್​​ಲೈನ್​​​ ತರಗತಿಗಳ ಅಬ್ಬರದ ನಡುವೆ ಮಂಡ್ಯದಲ್ಲಿ ಹೊಸ ಬಗೆಯ ಟೀಚಿಂಗ್ ಹುಟ್ಟಿ ಕೊಂಡಿದೆ. ಮೊಬೈಲ್ ಇಲ್ಲದ ಬಡ ವಿದ್ಯಾರ್ಥಿಗಳಿಗಾಗಿ ಈ ಹೊಸ ಬಗೆಯ ಪೋಸ್ಟ್ ಕಾರ್ಡ್ ಪಾಠ ವರದಾನವಾಗಿ ಹೊಸದಾಗಿದೆ. ಹುಟ್ಟಿರುವ ಈ ಟೀಚಿಂಗ್ ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತೆ ಈ ಆಧುನಿಕ ಅಂತರ್ಜಾಲ ಜಗತ್ತಿನಲ್ಲಿ ಈ ಪೋಸ್ಟ್ ಪಾಠ ನಿಜಕ್ಕೂ ಪರಿಣಾಮಕಾರಿಯಾಗುತ್ತಾ ಎನ್ನುವುದು ಕಾದು ನೋಡಬೇಕಿದೆ.
Published by: G Hareeshkumar
First published: September 25, 2020, 3:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading