ಕಾಂಗ್ರೆಸ್ ಮಾಜಿ ಅಧ್ಯಕ್ಷನ ಮೊಬೈಲ್‌ನಿಂದ ಅಶ್ಲೀಲ ಫೋಟೋ ಪೋಸ್ಟ್‌; ವಿಜಯಪುರದಲ್ಲಿ ಅವಾಂತರ

ವಿಜಯಪುರದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಅವರಿಗೆ ಸೇರಿದ ಮೊಬೈಲ್ ನಂಬರ್‌ನಿಂದ ನಿನ್ನೆ ರಾತ್ರಿ ವಿಜಯಪುರ ಡಿಸಿಸಿ (ಮೀಡಿಯಾ ಮತ್ತು ಟಿವಿ) ಗ್ರೂಪ್‌ನಲ್ಲಿ ಅಶ್ಲೀಲ ಪೋಸ್ಟ್ ವೊಂದನ್ನು ಹರಿಬಿಡಲಾಗಿದೆ.

news18-kannada
Updated:August 2, 2020, 10:23 AM IST
ಕಾಂಗ್ರೆಸ್ ಮಾಜಿ ಅಧ್ಯಕ್ಷನ ಮೊಬೈಲ್‌ನಿಂದ ಅಶ್ಲೀಲ ಫೋಟೋ ಪೋಸ್ಟ್‌; ವಿಜಯಪುರದಲ್ಲಿ ಅವಾಂತರ
ಪ್ರಾತಿನಿಧಿಕ ಚಿತ್ರ.
  • Share this:
ವಿಜಯಪುರ (ಆಗಸ್ಟ್‌ 02); ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಮೊಬೈಲ್‌ನಿಂದ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳ ವಾಟ್ಸಾಪ್ ಗ್ರೂಪ್‌ವೊಂದರಲ್ಲಿ ಪೋಸ್ಟ್ ಆದ ಅಶ್ಲೀಲ ಫೋಟೋ ಇಡೀ ಜಿಲ್ಲೆಯಾದ್ಯಂತ ಇಂದು ಅವಾಂತರ ಸೃಷ್ಠಿಸುತ್ತಿದೆ.

ವಿಜಯಪುರದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಅವರಿಗೆ ಸೇರಿದ ಮೊಬೈಲ್ ನಂಬರ್‌ನಿಂದ ನಿನ್ನೆ ರಾತ್ರಿ ವಿಜಯಪುರ ಡಿಸಿಸಿ (ಮೀಡಿಯಾ ಮತ್ತು ಟಿವಿ) ಗ್ರೂಪ್‌ನಲ್ಲಿ ಅಶ್ಲೀಲ ಪೋಸ್ಟ್ ವೊಂದನ್ನು ಹರಿಬಿಡಲಾಗಿದೆ. ಇದಕ್ಕೆ ಕೂಡಲೇ ಕೆಲವು ಸದಸ್ಯರು ಆಕ್ಷೇಪವೆತ್ತಿದ್ದಾರೆ.  ಆದರೆ, ಈ ವೇಳೆ ರವಿಗೌಡ ಪಾಟೀಲ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಇದಾದ ಬಳಿಕ ಹಲವು ಜನ ಗ್ರೂಪ್‌ನಿಂದ ಎಕ್ಸಿಟ್ ಆಗಿದ್ದಾರೆ.

ಪರಿಣಾಮ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಅವರು ರವಿಗೌಡ ಪಾಟೀವ ಧೂಳಖೇಡ ಅವರನ್ನು ವಾಟ್ಸಾಪ್ ಗ್ರೂಪ್ ನಿಂದಲೇ ರಿಮೂವ್ ಮಾಡಿದ್ದಾರೆ.

ಈ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿರುವ ರವಿಗೌಡ ಪಾಟೀಲ ಧೂಳಖೇಡ, "ಮೊದಲಿಗೆ ನಾನು ಕ್ಷಮೆ ಕೇಳುತ್ತೇನೆ. ನಿನ್ನೆ ರಾತ್ರಿ ವಾಶರೂಂ ಗೆ ಹೋಗಿದ್ದೆ.  ಮನೆಯಲ್ಲಿ ಮೂರ್ನಾಲ್ಕು ವರ್ಷದ ಮಕ್ಕಳು ಮೊಬೈಲ್ ತೆಗೆದುಕೊಂಡು ಆಟವಾಡುತ್ತಿದ್ದರು. ಈ ವೇಳೆ ಅವರಿಗೆ ಗೊತ್ತಾಗದೇ ಈ ರೀತಿ ಮಾಡಿರಬಹುದು.  ರಾತ್ರಿ ವಸಂತ ಹೊನಮೋಡೆ ಮೊಬೈಲ್ ಕರೆ ಮಾಡಿದಾಗಲೇ ವಿಷಯ ಗೊತ್ತಾಗಿದ್ದು.  ನನಗೆ ವಾಟ್ಸಾಪ್ ನಿರ್ವಹಣೆ ಕುರಿತು ಅಷ್ಟೋಂದು ಗೊತ್ತಿಲ್ಲ.

ಇದನ್ನೂ ಓದಿ : ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ 85 ಲಕ್ಷ ಮೌಲ್ಯದ ಚಿನ್ನ ಕಳವು; ಉದ್ಯೋಗಿಗಳ ವಿರುದ್ಧ ದಾಖಲಾಯ್ತು ಎಫ್‌ಐಆರ್‌

ವಾಟ್ಸಾಪ್ ಮೂಲಕ ನನಗೆ ಯಾವುದೇ ಸಂದೇಶವನ್ನು ಕಳುಹಿಸಲೂ ಬರುವುದಿಲ್ಲ.  ವಾಟ್ಸಾಪ್ ಬಗ್ಗೆ ಅಷ್ಟೊಂದು ಜ್ಞಾನವೂ ತನಗಿಲ್ಲ. ಈ ವಿಷಯ ತಿಳಿದ ನಂತರ ಬೇರೆಯವರಿಗೆ ಇದನ್ನು ತೋರಿಸಿದೆ.  ವಾಟ್ಸಾಪ್ ಕೆಳಗಡೆ ಪಿಕ್ಚರ್ ಬಂದಿದ್ದವು.  ಅವುಗಳನ್ನು ಮೊಮ್ಮಕ್ಕಳು ಫಾರ್ವರ್ಡ್ ಮಾಡಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಏನೇ ಆಗಲಿ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರ ಮೊಬೈಲ್ ನಂಬರಿನಿಂದ ವಾಟ್ಸಾಪ್ ಗ್ರುಪ್ ಗೆ ಪೋಸ್ಟ್ ಆದ ಅಶ್ಲೀಲ ಫೋಟೋ ಈಗ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮುಂದಾದರೂ ಸಾರ್ವಜನಿಕ ಕ್ಷೇತ್ರದಲ್ಲಿರುವ ನಾಯಕರು ಇಂತಹ ವಿಚಾರದಲ್ಲಿ ತುಸು ಎಚ್ಚರದಿಂದಿರುವುದು ಉತ್ತಮ ಎಂಬುದು ಹಲವರ ಅಭಿಪ್ರಾಯ.
Published by: MAshok Kumar
First published: August 2, 2020, 10:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading