ಚಿಕ್ಕಮಗಳೂರು: ಮೂರೇ ವರ್ಷದಲ್ಲಿ ಗುಂಡಿಬಿದ್ದ ಮೂರೂವರೆ ಕೋಟಿ ರೂ ವೆಚ್ಚದ ರಸ್ತೆ, ಇಲ್ಲಿ ಸವಾರಿ ಸವಾಲೇ ಸರಿ!
ಈ ರಸ್ತೆಯಲ್ಲಿ ಬೈಕ್ ಸವಾರರು ಸಂಚರಿಸುವುದು ನಿಜಕ್ಕೂ ಸವಾಲೇ ಸರಿ. ಸಖರಾಯಪಟ್ಟಣ ದಿಂದ ಜೋಡಿಹೋಚಿಹಳ್ಳಿ ಮಾರ್ಗವಾಗಿ ನಿಡಘಟ್ಟ, ಎಸ್.ಬಿದರೆ, ಸಿಂದಿಗೆರೆ, ನೇರ್ಲಿಗೆ ಮೂಲಕ ಜಾವಗಲ್ ಕನೆಕ್ಟ್ ಆಗುವ ಈ ರಸ್ತೆ ಮೇಲೆ ಪ್ರವಾಸಿಗರು ಅವಲಂಬಿತರಾಗಿದ್ದಾರೆ.
ಚಿಕ್ಕಮಗಳೂರು : ಬರೋಬ್ಬರಿ ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಮೂರೇ ವರ್ಷಕ್ಕೆ ಗುಂಡಿ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜೋಡಿಹೋಚಿ ಹಳ್ಳಿ ಹಾಗೂ ನಿಡಘಟ್ಟ ಗ್ರಾಮದ ದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಜೋಡಿಹೋಚಿ ಹಳ್ಳಿ ಹಾಗೂ ನಿಡಘಟ್ಟ ಗ್ರಾಮದ ರಸ್ತೆ, ಕಡೂರಿಂದ ಹಾಸನ ಜಿಲ್ಲೆಯ ಜಾವಗಲ್ ಮೂಲಕ ಬೇಲೂರು-ಹಳೇಬೀಡು ದೇವಸ್ಥಾನಕ್ಕ ಸಂಪರ್ಕ ಕಲ್ಪಿಸುತ್ತೆ. ಈ ಭಾಗದ ನೂರಾರು ಗ್ರಾಮಗಳಿಗೆ ಈ ರಸ್ತೆಯೇ ಜೀವಾಳ. ಕಡೂರು ತಾಲೂಕಿನ ತಂಗಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಿಂದ ಬಳ್ಳೇಕೆರೆ ಮೂಲಕ ನೇರವಾಗಿ ಜಾವಗಲ್ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತವೆ.
ಈ ರಸ್ತೆಯಲ್ಲಿ ಬೈಕ್ ಸವಾರರು ಸಂಚರಿಸುವುದು ನಿಜಕ್ಕೂ ಸವಾಲೇ ಸರಿ. ಸಖರಾಯಪಟ್ಟಣ ದಿಂದ ಜೋಡಿಹೋಚಿಹಳ್ಳಿ ಮಾರ್ಗವಾಗಿ ನಿಡಘಟ್ಟ, ಎಸ್.ಬಿದರೆ, ಸಿಂದಿಗೆರೆ, ನೇರ್ಲಿಗೆ ಮೂಲಕ ಜಾವಗಲ್ ಕನೆಕ್ಟ್ ಆಗುವ ಈ ರಸ್ತೆ ಮೇಲೆ ಪ್ರವಾಸಿಗರು ಅವಲಂಬಿತರಾಗಿದ್ದಾರೆ. ಆದ್ರೆ, ರಸ್ತೆ ಸಂಪೂರ್ಣ ಹಾಳಾಗಿದೆ. ಮೂರುವರೆ ಕೋಟಿ ಹೊಳೆಯಲ್ಲಿ ಹುಣಸೇಹಣ್ಣು ಕದಡಿದಂತಾಗಿದೆ ಅಂತಾರೆ ಸ್ಥಳಿಯರು.
ಮೂರು ವರ್ಷಗಳ ಹಿಂದೆಯೇ ಈ ರಸ್ತೆಗೆ ಟೆಂಡರ್ ಆಗಿದೆ. ಗುತ್ತಿಗೆದಾರ ಹೇಳೋರಿಲ್ಲ, ಕೇಳೋರಿಲ್ಲ ಎಂದು ಮೇಲ್ಮೇಲೆ ಕೆಲಸ ಮಾಡಿ ಡಾಂಬರ್ ಸುರಿದು ಪರಿಣಾಮ ಈ ರಸ್ತೆ ಮೂರು ವರ್ಷದಲ್ಲಿ ಅದೆಷ್ಟು ಬಾರಿ ಕಿತ್ತೋಗಿದ್ಯೋ ಗೊತ್ತಿಲ್ಲ. ಮೂರುವರೆ ಕೋಟಿಯ ಈ ರಸ್ತೆ ಸಂಪೂರ್ಣ ಅವೈಜ್ಞಾನಿಕ ಹಾಗೂ ಕಳಪೆಯಾಗಿದ್ದು ಅಧಿಕಾರಿಗಳು ರೆಕಾರ್ಡ್ ಕೀಪಿಂಗ್ ಅಂಡ್ ಸ್ಲೀಪಿಂಗ್ಗೆ ಮಾತ್ರ ಸೀಮಿತವಾಗಿದ್ದು, ಸ್ಥಳ ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಸ್ಥಳೀಯರು ಅದೆಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರು ನೋ ಯೂಸ್. ಪ್ರತಿನಿತ್ಯ ಈ ರಸ್ತೆಯಲ್ಲಿ ಬಿದ್ದು-ಎದ್ದು ಹೋಗೋರೆ ಹೆಚ್ಚು. ಬೀಳುವವರನ್ನ ನೋಡಿ ನಮಗೇ ಬೇಜಾರಿಗದೆ, ನಾವೇ ಎಷ್ಟೋ ಜನರನ್ನ ಆಸ್ಪತ್ರೆಗೆ ಸೇರಿದ್ದೇವೆ ಅಂತಾರೆ ಸ್ಥಳಿಯರು.
ಒಟ್ಟಾರೆ, ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲು ಮುಂದಾಗುತ್ತೆ. ಆದ್ರೆ, ಅನುಕೂಲ ಜನಸಾಮಾನ್ಯರಿಗಿಂತ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮಾತ್ರ ಅನ್ನೋದ್ರಲ್ಲಿ ಅನುಮಾನವಿಲ್ಲ. ಮೂರು ವರ್ಷದ ಹಿಂದೆ ಮೂರುವರೆ ಕೋಟಿ ಖರ್ಚು ಮಾಡಿದ್ದ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿಯಲ್ಲಿ ಬಿದ್ದು ಜನ ಹೈರಾಣಾಗುತ್ತಿದ್ದಾರೆ. ಇನ್ನಾದ್ರು ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಮೂರು ವರ್ಷದಿಂದ ಹಳ್ಳಹಿಡಿದಿರೋ ಈ ರಸ್ತೆಗೆ ಮುಕ್ತಿ ಕಾಣಿಸಬೇಕಾಗಿದೆ ಎಂಬುದು ಜನರ ಆಶಯ. ಆದರೆ, ಜನ ಪ್ರತಿನಿಧಿಗಳು ಈ ಬಗ್ಗೆ ಏನು ಕ್ರಮ ಜರುಗಿಸಲಿದ್ದಾರೆ? ಎಂಬುದನ್ನು ಕಾದುನೋಡಬೇಕಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ