ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ 1 ಲಕ್ಷ ಮುಂಗಡ ಹಣ ನೀಡಿದರೆ ಮಾತ್ರ ಪ್ರವೇಶ ; ಬಡ ರೋಗಿಗಳಿಗೆ ಪೀಕಲಾಟ

ಬೆಳಗಾವಿ ಜಿಲ್ಲೆಯ ಕಾಗವಾಡ ಚಿಕ್ಕೋಡಿ, ನಿಪ್ಪಾಣಿ, ಅಥಣಿ ತಾಲೂಕಿನ ಶೇ 80 ರಷ್ಟು ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಖಾಯಿಲೆಗಳಿಗೂ ಚಿಕಿತ್ಸೆಯನ್ನ ಸ್ಥಗಿತಗೊಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕೋಡಿ(ಸೆಪ್ಟೆಂಬರ್​. 18): ಬೆಳಗಾವಿ ಜಿಲ್ಲೆಯ ಶೇ 60 ಭಾಗ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆ. ಇಷ್ಟು ದಿನ ಗಡಿ ಗ್ರಾಮಗಳಲ್ಲಿನ ಜನ ಎಲ್ಲದಕ್ಕೂ ಮಹಾರಾಷ್ಟ್ರವನ್ನೆ ಜನರು ಅವಲಂಬನೆ ಆಗಿದ್ದರು. ಆಸ್ಪತ್ರೆಗೆ ಹೋಗಬೇಕು ಅಂದ್ರೆ ಪಕ್ಕದ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಮೀರಜ್​​ ನ ಖಾಸಗಿ ಆಸ್ಪತ್ರೆಗಳೇ ಇಲ್ಲಿನ ಜನರ ಆಶ್ರಯಗಳು. ವಿಜಯಪುರ, ಬಾಗಲಕೋಟೆ, ಬೆಳಗಾವಿಯ ಗಡಿ ಗ್ರಾಮದ ಜನ ಎಲ್ಲದಕ್ಕೂ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗಳಿಗೆ ಅವಲಂಬಿತರಾಗಿದ್ದರು. ಅತಿ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಸೌಲಭ್ಯಗಳನ್ನ ಒದಗಿಸಿ ಚಿಕಿತ್ಸೆಯನ್ನ ಅಲ್ಲಿನ ಆಸ್ಪತ್ರೆಗಳು ನೀಡುತ್ತಿದ್ದವು. ಆದರೆ, ಈಗ ಕೊರೋನಾ ಬಂದಾಗಿನಿಂದ ಸಾಮಾನ್ಯ ಚಿಕಿತ್ಸೆ ಪಡೆಯುವುದಕ್ಕೂ ರೋಗಿಗಳು ಪರದಾಡುವಂತಾಗಿದೆ. ಅದಕ್ಕೆ ಕಾರಣ ಕಡ್ಡಾಯ ಮುಂಗಡ ಹಣದ ಪಾಲಿಸಿ. ಕೊರೋನಾ ಹೊರತಾದ ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋದಲ್ಲಿ ಕನಿಷ್ಠ 1 ರಿಂದ 2 ಲಕ್ಷ ರೂಪಾಯಿ ಮುಂಗಡ ಹಣ ಕಟ್ಟಬೇಕಾಗಿದೆ.

ಈ ಮೊದಲು ಸಾಮಾನ್ಯದಿಂದ ಹಿಡಿದು ಹೃದಯ ಸಂಬಂಧಿ ರೋಗಗಳ ವರೆಗೂ ಅತಿ ಕಡಿಮೆ ಖರ್ಚಿನಲ್ಲಿ ಯಾವುದೆ ಮುಂಗಡ ಹಣ ಇಲ್ಲದೆ ಚಿಕಿತ್ಸೆ ನೀಡುತ್ತ ಬಂದಿದ್ದವು. ಆದರೆ, ಕೊರೋನಾ ರೋಗ ಹೆಚ್ಚಾಗಿರುವ ಪರಿಣಾಮ ಸಾಮಾನ್ಯ ಚಿಕಿತ್ಸೆಗೂ ಕಡ್ಡಾಯ ಮುಂಗಡ ನಿಯಮವನ್ನು ಜಾರಿಗೊಳಿಸಿವೆ. ಸಾಮಾನ್ಯ ಚಿಕಿತ್ಸೆಗೆ ಹೋದರು ಮೊದಲು ಕೋವಿಡ್ ಪರೀಕ್ಷೆ ಕಡ್ಡಾಯ ಬಳಿಕವೆ ಆಸ್ಪತ್ರೆಗೆ ದಾಖಲಾತಿ. ಪರಿಣಾಮ ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊರೋನಾ ಕಾರಣದಿಂದ ಆರ್ಥಿಕತೆಗೆ ಸಾಕಷ್ಟು ಪೆಟ್ಟು ಬಸವಳಿದಿರುವ ಜನರಿಗೆ ಸಾಮಾನ್ಯ ಖಾಯಿಲೆಯ ಚಿಕಿತ್ಸೆಗೂ ಲಕ್ಷಾಂತರ ಹಣ ಹೊಂದಿಸುವುದು ಸವಾಲಾಗಿದೆ. ಹಣ ಇಲ್ಲದೆ ನೋವನ್ನು ತಾಳಲಾರದೆ ಆಸ್ಪತ್ರೆಗೂ ಹೋಗಲಾಗದಂತಹ ಪರಿಸ್ಥಿತಿಯನ್ನ ಇಲ್ಲಿನ ಜನ ಎದುರಿಸುತ್ತಿದ್ದಾರೆ.

ಇನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದೆ. ಕೊರೋನಾ ರೋಗಿಗಳ ಹೊರತಾಗಿ ಬೇರೆ ಯಾವುದೆ ರೋಗಿಗಳನ್ನ ಅಲ್ಲಿಗೆ ಸೇರಿಸಿಕೊಳ್ಳಲ್ಲ. ಇನ್ನು ಜಿಲ್ಲೆಯ ತಾಲೂಕು ಕೇಂದ್ರದ ಆಸ್ಪತ್ರೆಗಳು ಸಹ ಕೋವಿಡ್ ಕೇರ್ ಆಸ್ಪತ್ರೆಗಳಾಗಿ ಮಾರ್ಪಟ್ಟಿವೆ. ಪರಿಣಾಮ ಕೊರೋನಾ ಹೊರತಾದ ಚಿಕಿತ್ಸೆಗಳಿಗೆ ಜನರು ಸಮಸ್ಯೆ ಎದುರಿಸುವಂತಾಗಿದೆ.

ಇದನ್ನೂ ಓದಿ : ದೆಹಲಿಯಿಂದ ಸಿಎಂ ಎಷ್ಟು ಅನುದಾನ ತರ್ತಾರೆ ನೋಡೋಣ: ಸಿದ್ದರಾಮಯ್ಯ

ಆರಂಭದಲ್ಲಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಬಹಳಷ್ಟು ರೋಗಿಗಳನ್ನ ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ಕಳುಸಿಹಲು ಸೂಚಿಸಲಾಗುತ್ತದೆ. ಜಿಲ್ಲೆಯ ಕಾಗವಾಡ ಚಿಕ್ಕೋಡಿ, ನಿಪ್ಪಾಣಿ, ಅಥಣಿ ತಾಲೂಕಿನ ಶೇ 80 ರಷ್ಟು ಖಾಸಗಿ ಆಸ್ಪತ್ರೆಗಳು ಸಾಮಾನ್ಯ ಖಾಯಿಲೆಗಳಿಗೂ ಚಿಕಿತ್ಸೆಯನ್ನ ಸ್ಥಗಿತಗೊಳಿಸಿವೆ. ಪರಿಣಾಮ ಅನಿವಾರ್ಯವಾಗಿ ಬೇರೆ ಗತಿಯಿಲ್ಲದೆ ನಾವು ಮಹಾರಾಷ್ಟ್ರದ ಆಸ್ಪತ್ರೆಗಳಿ ಹೋಗಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ಕೊರೋನಾ ಬಂದಾಗಿನಿಂದಲೂ ಸಾಮಾನ್ಯ ರೋಗಿಗಳಿಗೆ ಸಿಗಬೇಕಾದ ಚಿಕಿತ್ಸೆ ಮರಿಚಿಕೆಯಾಗಿದೆ. ಖಾಸಗಿ ಆಸ್ಪತ್ರೆಗಳು ಕೊರೋನಾ ಹೆಸರಿನಲ್ಲಿ ದುಡ್ಡು ಮಾಡಲು ಮುಂದಾದ್ರೆ ಇತ್ತ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಇನ್ನಿತರ ಖಾಯಿಲೆಗಳಿಗೆ ತುತ್ತಾಗಿ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಬಿಡುವ ಸ್ಥಿತಿ ಇಲ್ಲಿನ ಜನರದ್ದಾಗಿದೆ.
Published by:G Hareeshkumar
First published: