HOME » NEWS » District » POLITICS IN HOUSE PLANNING SCHEME AT BIDAR RH SSBDR

ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ವಸತಿ ಯೋಜನೆ ರಾಜಕೀಯ ಮೇಲಾಟ, ಬಾರದ ಅನುದಾನ, ಫಲಾನುಭವಿಗಳು ಹೈರಾಣು

ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದ ಭಗವಂತ ಖೂಬಾ ನನ್ನ ಮೇಲೆ ಹೊಟ್ಟೆಕಿಚ್ಚಿನಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲಿನ ಖೂಬಾ ಅವರ ಆರೋಪ ಸುಳ್ಳು. ಅದನ್ನು ಅವರು ನಿಜ ಮಾಡುವುದಾದರೆ ಬಹಿರಂಗ ಚರ್ಚೆಗೆ ಬರಲಿ ಸವಾಲು ಹಾಕಿದ್ದಾರೆ. ಜೊತೆಗೆ ನೀವು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ನಮ್ಮ ಮೇಲೆ ಆರೋಪ ಹೊರಿಸುತ್ತೀರಾ ಎಂದು ಉತ್ತರ ನೀಡಿದ್ದಾರೆ.

news18-kannada
Updated:November 23, 2020, 8:10 PM IST
ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ವಸತಿ ಯೋಜನೆ ರಾಜಕೀಯ ಮೇಲಾಟ, ಬಾರದ ಅನುದಾನ, ಫಲಾನುಭವಿಗಳು ಹೈರಾಣು
ವಸತಿ ಯೋಜನೆಯಡಿ ನಿರ್ಮಿಸಲಾಗಿರುವ ಮನೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದು.
  • Share this:
ಬೀದರ್; ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಸೂರು ರಹಿತರಿಗೆ ನೀಡಬೇಕಾದ ಸರಕಾರದ ಆಶ್ರಯ ಯೋಜನೆ, ರಾಜೀವ್ ಗಾಂಧಿ ಆವಾಸ ಯೋಜನೆ, ಇಂದಿರಾ ಆವಾಸ್ ಯೋಜನೆಯ ಮನೆಗಳು ಇದೀಗ ರಾಜಕೀಯ ನಾಯಕರ ಮೇಲಾಟಕ್ಕೆ ಕಾರಣವಾಗಿವೆ. ಭಾಲ್ಕಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ 16000 ಮನೆಗಳು ಬಡವರಿಗೆ ಕಳೆದ ಐದಾರು ವರ್ಷಗಳಲ್ಲಿ ಮಂಜೂರಾಗಿವೆ. ಇದೀಗ ಈ ಯೋಜನೆಗಳ 16000 ಫಲಾನುಭವಿಗಳು ಸಹಿತ ಪರಿತಪಿಸುವಂತಾಗಿದೆ.

ಒಟ್ಟು 1,80000 ಫಲಾನುಭವಿಯ ಖಾತೆಗೆ ನಾಲ್ಕು ಹಂತದಲ್ಲಿ ಜಮೆಯಾಗುತ್ತದೆ. ಇದರಲ್ಲಿ ಕೆಲ ಫಲಾನುಭವಿಗಳಿಗೆ ಮೊದಲ ಹಂತದ ಅನುದಾನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಿತ್ತು. ಕೆಲವರ ಮನೆಗಳು ಆ ಹಣದಲ್ಲೇ ಅಡಿಪಾಯ ಕಂಡರೆ, ಕೆಲವರ ಮನೆಗಳು ಅರ್ಧದಷ್ಟು ಮುಗಿದಿವೆ. ನಂತರದಲ್ಲಿ ಬರಬೇಕಿದ್ದ ಹಣ ಬಾರದೇ ಇದ್ದುದರಿಂದ ಕೆಲವರು ಅರ್ಧ ಮುಗಿದ ಮನೆಯಲ್ಲಿಯೇ ಶೆಡ್ ಹಾಕಿಕೊಂಡು ಜೀವನ ದೂಡುತ್ತಿದ್ದಾರೆ. ಇದಕ್ಕಾಗಿ ಬಹುತೇಕ ಫಲಾನುಭವಿಗಳು ಸಾಲಸೋಲ ಮಾಡಿದ್ದರೂ ಮನೆಗಳನ್ನು ಮುಗಿಸಲಾಗಿಲ್ಲ.

ಇದನ್ನು ಓದಿ: ಭೂ ಸ್ವಾಧೀನಕ್ಕೂ ಮುಂಚೆ ಹಿಂದಿನ ಪರಿಹಾರ ನೀಡಿ, ಭರವಸೆ ಮೇಲೆ ಗೋರಿ ಕಟ್ಟಬೇಡಿ; ನಿರಾಶ್ರಿತರ ಎಚ್ಚರಿಕೆ

ಇದೀಗ ಬಿಜೆಪಿ ಸರಕಾರ ಬಂದಾಗಿನಿಂದ ಭಾಲ್ಕಿ ತಾಲೂಕಿನ 16000 ಸೂರು ರಹಿತ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ಬೇಕಾದ ಮುಂದಿನ ಕಂತಿನ ಹಣ ಬಂದಿಲ್ಲ. ಇದರಿಂದ ಅತ್ತ ಮನೆಯೂ ಮುಗಿಯದೆ, ಇತ್ತ ಮಾಡಿದ ಸಾಲಕ್ಕೆ ಬಡ್ಡಿಯೂ ಕಟ್ಟಲಾಗದೆ ಸೂರು ರಹಿತರು ಪರಿತಪಿಸುತ್ತಿದ್ದಾರೆ. ಇದಕ್ಕೆ ಕಾರಣ ಬಿಜೆಪಿ ಸರಕಾರ ಅನುದಾನ ತಡೆಹಿಡಿದಿರುವುದು. ಬೀದರ್ ಬಿಜೆಪಿ ಸಂಸದ ಭಗವಂತ ಖೂಬಾ ಸಹ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರ ಮೇಲೆ ಮನೆ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಹೊರಿಸಿದ್ದಾರೆ. ಅಲ್ಲದೆ ಶಾಸಕ ಖಂಡ್ರೆ ಅವರು, ಕಾಂಗ್ರೆಸ್ ಕಾರ್ಯಕರ್ತರಿಗೆ ಮನೆ ಕಟ್ಟಿಕೊಟ್ಟಿದ್ದಾರೆ. ಅದರ ಜೊತೆಗೆ ತಮ್ಮ ಹೊಲದಲ್ಲಿನ ಮನೆಯನ್ನು ಸರಕಾರಿ ಯೋಜನೆಯಡಿ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ, ಅನುದಾನ ತಡೆಹಿಡಿದಿರುವುದನ್ನು ಸಮರ್ಥಿಸಿಕೊಂಡಿದ್ದರು.

ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದ ಭಗವಂತ ಖೂಬಾ ನನ್ನ ಮೇಲೆ ಹೊಟ್ಟೆಕಿಚ್ಚಿನಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲಿನ ಖೂಬಾ ಅವರ ಆರೋಪ ಸುಳ್ಳು. ಅದನ್ನು ಅವರು ನಿಜ ಮಾಡುವುದಾದರೆ ಬಹಿರಂಗ ಚರ್ಚೆಗೆ ಬರಲಿ ಸವಾಲು ಹಾಕಿದ್ದಾರೆ. ಜೊತೆಗೆ ನೀವು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ನಮ್ಮ ಮೇಲೆ ಆರೋಪ ಹೊರಿಸುತ್ತೀರಾ ಎಂದು ಉತ್ತರ ನೀಡಿದ್ದಾರೆ.
Published by: HR Ramesh
First published: November 23, 2020, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading