Politics: ಮಾಗಡಿ ಕ್ಷೇತ್ರದ ಹಾಲಿ-ಮಾಜಿ ಶಾಸಕರ ಗುದ್ದಾಟ, 2023ರ ಚುನಾವಣೆಯೇ ಇವರಿಬ್ಬರ ಟಾರ್ಗೆಟ್

 ಅವರು ನನ್ನ ಪರವಾಗಿ ಇದ್ದಿದ್ದನ್ನ ಸಾಬೀತು ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿಯಾಗ್ತೇನೆಂದು ಮಾಗಡಿ ಜೆಡಿಎಸ್ ಶಾಸಕ ಎ.ಮಂಜು ಹೇಳಿಕೆ ನೀಡಿದರು.

ಎ.ಮಂಜು

ಎ.ಮಂಜು

  • Share this:
ರಾಮನಗರ(ಡಿ.25) : ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ(HC Balakrishna) ಸುದ್ದಿಗೋಷ್ಟಿ ನಡೆಸಿ ಹಾಲಿ ಶಾಸಕ ಎ.ಮಂಜು(A Manju) ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ(Bengaluru) ಮಹಿಳೆಗೆ 50 ಕೋಟಿ ಹಣವನ್ನ ವಂಚಿಸಿದ್ದರು.‌ ಸಿಬಿಐ ಅಧಿಕಾರಿಗಳು ಇವರಿಗೆ ಹಗ್ಗ ಹಾಕುತ್ತಿದ್ದರು. ಆದರೆ ಆವತ್ತು ಡಿ.ಕೆ.ಸುರೇಶ್ ಇವರನ್ನ ಬಚಾವ್ ಮಾಡಿದ್ದರು. ಇವರ ಚರಿತ್ರೆ ಸರಿಯಿದ್ದರೆ ಮಾತನಾಡಲಿ, ಇವರ ಭ್ರಷ್ಟಾಚಾರ(Corruption) ಒಂದು ಪುಸ್ತಕ(Book) ಮಾಡಿಸಬಹುದು. ಬೇರೆಯವರ ಬಗ್ಗೆ ಮಾತನಾಡುವಾಗ ಇವರು ಸರಿಯಿರಬೇಕು ಎಂದುಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಸುದ್ದಿಗೋಷ್ಟಿ ನಡೆಸಿ ಹೇಳಿಕೆ ನೀಡಿದರು.

ಇನ್ನು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಆರೋಪಕ್ಕೆ ಎ.ಮಂಜು ತಿರುಗೇಟು ನೀಡಿ 50 ಕೋಟಿ ಕೊಟ್ಟರೆ ನಾನು ಇವತ್ತೇ ಜೈಲಿಗೆ ಹೋಗ್ತೀನಿ. ನಾನು ಮಾತನಾಡಿದರೆ ಅವರ ಪೂರ್ವಜರಷ್ಟು ಮಾತನಾಡ್ತೇನೆ. ಇವರ ರೀತಿ ಹಲ್ಕಟ್ ರಾಜಕೀಯ ನಾನು ಮಾಡಲ್ಲ, 10 ಕೋಟಿ ಹಣ ಪಡೆದು ಕುಮಾರಸ್ವಾಮಿ-ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದರು.ಇವತ್ತು ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡ್ತಿದ್ದಾರೆ. ಡಿ.ಕೆ.ಶಿವಕುಮಾರ್ ಗೆ, ಡಿ.ಕೆ.ಸುರೇಶ್ ಗೆ ನನ್ನಿಂದ ಸಹಾಯ ಆಗಿದೆ. ಆದರೆ ಅವರಿಂದ ನನಗೇನು ಸಹಾಯ ಆಗಿಲ್ಲ. ತೆಗೆದುಕೊಂಡಿದ್ದ ಹಣಕ್ಕೆ ಬಡ್ಡಿ ಸಮೇತ ವಾಪಸ್ ನೀಡಿದ್ದೇನೆ. ಅವರು ನನ್ನ ಪರವಾಗಿ ಇದ್ದಿದ್ದನ್ನ ಸಾಬೀತು ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿಯಾಗ್ತೇನೆಂದು ಮಾಗಡಿ ಜೆಡಿಎಸ್ ಶಾಸಕ ಎ.ಮಂಜು ಹೇಳಿಕೆ ನೀಡಿದರು.

ಇದನ್ನೂ ಓದಿ: Crime News: ಇದು ಮೈಸೂರಿನಲ್ಲಿ ನಡೆದ ಘಟನೆ.. ಕೈ ಮೇಲಿನ ಹಚ್ಚೆಯಿಂದ ಪತ್ತೆಯಾಯ್ತು ಅನಾಥ ಶವದ ಗುರುತು

ಇನ್ನು, ಇವರು ಕುಮಾರಸ್ವಾಮಿಗೆ ಚಾಕಲೇಟ್ ಕೊಟ್ಟು, ಐಸ್ಕ್ರೀಮ್ ನೆಕ್ಕಿ ಹೋದರು. ನಾನು ಕುಮಾರಣ್ಣನಿಗೆ ಚಾಕಲೇಟ್ ಕೊಟ್ಟರೆ ಜನ ನನಗೆ ಬತಾಸ್ ಕೊಡ್ತಾರೆ. ಅದು ನನಗೆ ಗೊತ್ತಿದೆ, ಹಾಗಾಗಿ ನಾನು ಕುಮಾರಣ್ಣನ ಜೊತೆಗೆ ಇರುತ್ತೇನೆಂದರು.

ಮಾಗಡಿ ಕ್ಷೇತ್ರದಲ್ಲಿ ಹಾಲಿ - ಮಾಜಿಗಳ ರಾಜಕೀಯ ಗುದ್ದಾಟ :

ರಾಮನಗರ ಜಿಲ್ಲೆಯಲ್ಲಿ ಮಾಗಡಿ ಕ್ಷೇತ್ರ ಸಹ ಜೆಡಿಎಸ್ ಪಕ್ಷದ ಭದ್ರಕೋಟೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇವತ್ತಿಗೂ ಸಹ ದೇವೇಗೌಡರು, ಕುಮಾರಸ್ವಾಮಿರವರು ಕ್ಷೇತ್ರದಲ್ಲಿ ಕಾಣಿಸಿಕೊಂಡು ತಮ್ಮ‌ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದರೆ ಆ ಅಭ್ಯರ್ಥಿ ಶಾಸಕನಾಗಿ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿದೆ. ಆದರೆ ಇದೇ ಕ್ಷೇತ್ರದಲ್ಲಿ ಈಗ ಮಾಜಿ ಹಾಗೂ ಜೆಡಿಎಸ್ ನಾಯಕರು ರಾಜಕೀಯವಾಗಿ ಕಿತ್ತಾಡುತ್ತಿದ್ದಾರೆ.

ಇದನ್ನೂ ಓದಿ: Coronavirus: ಕೊಡಗಿನಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಹರಡಿದ ಕೊರೋನಾ, ವಿವಿಧ ಶಾಲೆಗಳಲ್ಲಿ ಒಂದೇ ದಿನ 32 ಕೇಸ್ ಪತ್ತೆ

ಮತದಾರ ಯಾರ ಕೈ ಹಿಡಿಯಲಿದ್ದಾನೆ?

ಹೆಚ್.ಸಿ.ಬಾಲಕೃಷ್ಣ ಸಹ ಈ ಹಿಂದೆ ಜೆಡಿಎಸ್ ಶಾಸಕರಾಗಿದ್ದರು. ಎ.ಮಂಜು ಸದ್ಯ ಮಾಗಡಿ ಕ್ಷೇತ್ರದ ಶಾಸಕರಾಗಿದ್ದಾರೆ. ಆದರೆ ಬಾಲಕೃಷ್ಣ ಮಾತ್ರ ಎ.ಮಂಜು ವಿರುದ್ಧ ಗುಟುರು ಹಾಕುತ್ತಲೇ ಇರುತ್ತಾರೆ, ಅದಕ್ಕೆ ಎ.ಮಂಜು ಸಹ ಸರಿಯಾಗಿಯೇ ಟಾಂಗ್ ಕೊಡ್ತಿದ್ದರೆ. ಮುಂದಿನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಜನರು ಬೆಂಬಲಿಸಿ ನನಗೆ ಆರ್ಶೀವಾದ ಮಾಡ್ತಾರೆಂಬ ವಿಶ್ವಾಸದಲ್ಲಿ ಬಾಲಕೃಷ್ಣ ಇದ್ದಾರೆ. ಅದೇ ರೀತಿ ದೇವೇಗೌಡರು - ಕುಮಾರಸ್ವಾಮಿರವರ ಕೃಪೆಯಿಂದಾಗಿ ನಾನೇ ಗೆಲ್ತೇನೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಅಂತಿಮವಾಗಿ ಮತದಾರರು 2023 ರಲ್ಲಿ ಯಾರ ಕೈ ಹಿಡಿಯುತ್ತಾರೆಂಬುದು ಕಾಲವೇ ಉತ್ತರಿಸಬೇಕಿದೆ.

ವರದಿ : ಎ.ಟಿ.ವೆಂಕಟೇಶ್
Published by:Latha CG
First published: