• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮೈಸೂರಿನಲ್ಲಿ ತಾರಕ್ಕೇರಿದ ಸಾ.ರಾ. ಮಹೇಶ್​-ಜಿ.ಟಿ. ದೇವೇಗೌಡ ನಡುವಿನ ರಾಜಕೀಯ ಸಮರ!

ಮೈಸೂರಿನಲ್ಲಿ ತಾರಕ್ಕೇರಿದ ಸಾ.ರಾ. ಮಹೇಶ್​-ಜಿ.ಟಿ. ದೇವೇಗೌಡ ನಡುವಿನ ರಾಜಕೀಯ ಸಮರ!

ಸಾರಾ ಮಹೇಶ್​-ಜಿ.ಟಿ. ದೇವೇಗೌಡ.

ಸಾರಾ ಮಹೇಶ್​-ಜಿ.ಟಿ. ದೇವೇಗೌಡ.

ಜೆಡಿಎಸ್‌ನಿಂದ ದೂರ ಇದ್ದು ಹೆಚ್‌.ಡಿ. ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿರುವ ಜಿ.ಟಿ.ದೇವೇಗೌಡ ಒಂದು ಕಡೆ. ಹೆಚ್‌.ಡಿ. ಕುಮಾರಸ್ವಾಮಿಗೆ ಹತ್ತಿರವಾಗಿ ಜೆಡಿಎಸ್‌ನಲ್ಲಿ ಎತ್ತರಕ್ಕೆ ಬೆಳೆಯುವ ಉದ್ದೇಶ ಹೊಂದಿರುವ ಸಾ.ರಾ. ಮಹೇಶ್‌ ಮತ್ತೊಂದು ಕಡೆ.

  • Share this:

ಮೈಸೂರು (ಫೆಬ್ರವರಿ 04); ಸಾ.ರಾ. ಮಹೇಶ್‌ ಹಾಗೂ ಜಿ.ಟಿ. ದೇವೇಗೌಡ ನಡುವಿನ ರಾಜಕೀಯ ಗುದ್ದಾಟದ ಸಮರ ದಿನೆ ದಿನೆ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದಷ್ಟೆ ಶಾಸಕ ಸಾ.ರಾ.ಮಹೇಶ್‌ ಕ್ಷೇತ್ರದಲ್ಲಿ ಅದ್ದೂರು ಅಭಿನಂದನಾ ಸಮಾರಂಭ ಮಾಡಿದ್ದ ಶಾಸಕ ಜಿಟಿಡಿ ಪುತ್ರ ಹರೀಶ್‌ಗೌಡಗೆ ಕೆ.ಆರ್.ನಗರದಲ್ಲಿ ಭರ್ಜರಿ ಸ್ವಾಗತ ಹಾಗೂ ಸನ್ಮಾನ ಸಿಕ್ಕಿತ್ತು. ಇದಾದ ಬಳಿಕ ಇಂದು ಜಿಟಿಡಿ ಕುಟುಂಬ ಮತ್ತೆ ಕೆ.ಆರ್.ನಗರ ಕ್ಷೇತ್ರದ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡುವ ಮೂಲಕ ಸಾ.ರಾ.ಮಹೇಶ್‌ಗೆ ಟಾಂಗ್ ನೀಡಿದ್ದಾರೆ.  ಈ ಎರಡು ಕಾರ್ಯಕ್ರಮದಿಂದ ಕೊಂಚ ವಿಚಲಿತರಾದಂತೆ ಕಂಡಿರುವ ಶಾಸಕ ಸಾ.ರಾ.ಮಹೇಶ್‌ ಇದೀಗ ಜಿಟಿ.ದೇವೇಗೌಡರ ಸ್ವಕ್ಷೇತ್ರ ಚಾಮುಂಡೇಶ್ವರಿಗೆ ಲಗ್ಗೆ ಇಟ್ಟಿದ್ದಾರೆ. ಮೊದಲ ಹಂತವಾಗಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾ.ಪಂ.ಸದಸ್ಯರಿಗೆ ಸನ್ಮಾನ ಮಾಡಿ, ನೀ ಬಂದರೆ ನಾನು ನಿನ್ನ ಜಾಗಕ್ಕೆ ಬರುವೆ ಅನ್ನೋ ಸಂದೇಶ ನೀಡಿದ್ದಾರೆ. 


ಹೌದು ಮೊನ್ನೆ ಮೊನ್ನೆಯಷ್ಟೆ ತನ್ನ ಪುತ್ರನ ಅದ್ದೂರಿನ ಅಭಿನಂದನಾ ಸಮಾರಂಭ ಆಯೋಜಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದ ಶಾಸಕ ಜಿ.ಟಿ.ದೇವೇಗೌಡ ಮತ್ತೆ ಕೆ.ಆರ್.ನಗರ ಕ್ಷೇತ್ರವನ್ನ ಕೆಣಕಿದ್ದಾರೆ. ಶಾಸಕ ಸಾ.ರಾ.ಮಹೇಶ್‌ ಸ್ವಕ್ಷೇತ್ರದ ಕೆ.ಆರ್.ನಗರ ತಾಲ್ಲೂಕಿನ ಲಾಳನಹಳ್ಳಿ ಗ್ರಾ.ಪಂ.ಸದಸ್ಯರಿಗೆ ಜಿಟಿಡಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.


ಲಾಳನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಲಿಲಾವತಿ ಶಿವರಾಮ್ ಹಾಗೂ ಉಪಾಧ್ಯಕ್ಷರಾದ ಅಯ್ಕೆಯಾದ ಮಂಜುಳ ರಾಜ ನಾಯ್ಕ್ ರವರವರನ್ನ ತನ್ನ ಕಚೇರಿಗೆ ಕರೆಸಿ ಅಭಿನಂದನೆ ಸಲ್ಲಿಸಿದ ಜಿ.ಟಿ.ದೇವೇಗೌಡ. ಪುತ್ರ ಜಿಡಿ.ಹರೀಶ್ ಗೌಡ ಹಾಗೂ ಕೆ.ಆರ್. ನಗರದ ಜೆಡಿಎಸ್‌ ಮುಖಂಡ,ಮಾಜಿ‌ ಮುಡಾ ಅಧ್ಯಕ್ಷ ವಿಜಯ್‌ಕುಮಾರ್ ಸಮ್ಮುಖದಲ್ಲಿ ಸನ್ಮಾನ ಮಾಡಿದ್ದಾರೆ.


ಇದು ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಕಣ್ಣು ಕೆಂಪಾಗುವಂತೆ ಮಾಡಿದೆ. ಮೊನ್ನೆ ಕೆ.ಆರ್.ನಗರದಲ್ಲಿ ಪುತ್ರ ಹರೀಶ್‌ಗೌಡ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಇಂದು  ಕೆ.ಆರ್. ನಗರದ ಜನಪ್ರತಿನಿಧಿಗಳಿಗೆ ಸನ್ಮಾನ ಹೀಗೆ ದಿನೆ ದಿನೆ ಸಾ.ರಾ. ಮಹೇಶ್ ಕ್ಷೇತ್ರದಲ್ಲಿ ಆಕ್ಟಿವ್ ಆಗುತ್ತಿರುವ ಜಿಟಿಡಿ ಕುಟುಂಬ ಸಾ.ರಾ.ಮಹೇಶ್‌ರನ್ನ ಚುನಾವಣೆಯಲ್ಲಿ ಬಲ ಕುಗ್ಗಿಸುವ ತಂತ್ರ ಮಾಡಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ.


ಇನ್ನು ತನ್ನ ಕ್ಷೇತ್ರಕ್ಕೆ ಬಂದ ಜಿ.ಟಿ. ದೇವೇಗೌಡರ ಕ್ಷೇತ್ರಕ್ಕೆ‌ ಸಾ.ರಾ.ಮಹೇಶ್ ಲಗ್ಗೆ ಇಟ್ಟಿದ್ದಾರೆ. ಜಿಟಿಡಿ ಪುತ್ರನ ಅಭಿನಂದನಾ ಕಾರ್ಯಕ್ರಮ ಹಾಗೂ ತನ್ನ ಕ್ಷೇತ್ರದ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡಿದ್ದ ಜಿಟಿಡಿ ನಡೆಯಿಂದ ಹೊಸ ಚಿಂತೆಗಿಡಾಗಿರುವ ಸಾ.ರಾ.ಮಹೇಶ್‌ ಇದೀಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಕ್ಟಿವ್ ಆಗಲು ಮುಂದಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಮಾರಗೌಡನಹಳ್ಳಿ ಪಂಚಾಯಿತಿ ಸದಸ್ಯರಿಗೆ ಸಾ.ರಾ. ಮಹೇಶ್ ಸನ್ಮಾನ ಮಾಡಿದ್ದು.


ಇದನ್ನೂ ಓದಿ: Farmers Protest: ಸೇತುವೆಗಳನ್ನು ಕಟ್ಟಿ ಗೋಡೆಗಳನ್ನಲ್ಲ; ರೈತ ಹೋರಾಟವನ್ನು ಹಣಿಯುತ್ತಿರುವ ಕೇಂದ್ರಕ್ಕೆ ರಾಹುಲ್ ಕಿವಿಮಾತು


ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾದ ಸುಮಾ, ಹಾಗೂ ಉಪಾಧ್ಯಕ್ಷರಾದ ನಂದರಾಜು ಜೊತೆ 23 ಪಂಚಾಯಿತಿ ಸದಸ್ಯರನ್ನ ತನ್ನ ಕಚೇರಿಗೆ ಕರೆಸಿ ಸನ್ಮಾನಿಸಿದ್ದಾರೆ ಸಾ.ರಾ.ಮಹೇಶ್‌. ತನ್ನ ಕ್ಷೇತ್ರಕ್ಕೆ ಬಂದಿದ್ದ ಜಿಟಿಡಿ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಶಾಸಕ ಸಾ.ರಾ ಇದೀಗ ನೇರವಾಗಿಯೇ ಸನ್ಮಾನದ ನೇಪದಲ್ಲಿ ವಿರೋಧಿ ಪಾಲಿಟಿಕ್ಸ್ ಆರಂಭಿಸಿದ್ದಾರೆ.


ಜೆಡಿಎಸ್‌ನಿಂದ ದೂರ ಇದ್ದು ಹೆಚ್‌.ಡಿ. ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿರುವ ಜಿ.ಟಿ.ದೇವೇಗೌಡ ಒಂದು ಕಡೆ. ಹೆಚ್‌.ಡಿ. ಕುಮಾರಸ್ವಾಮಿಗೆ ಹತ್ತಿರವಾಗಿ ಜೆಡಿಎಸ್‌ನಲ್ಲಿ ಎತ್ತರಕ್ಕೆ ಬೆಳೆಯುವ ಉದ್ದೇಶ ಹೊಂದಿರುವ ಸಾ.ರಾ. ಮಹೇಶ್‌ ಮತ್ತೊಂದು ಕಡೆ. ಒಂದೆ ಜಿಲ್ಲೆಯ ಇಬ್ಬರು ನಾಯಕರು ಅಧಿಕಾರ ಹಾಗೂ ರಾಜಕೀಯ ಲಾಭಕ್ಕಾಗಿ ಪರಸ್ಪರ ಕೇಸರೆರೆಚಾಟ ನಡೆಸುತ್ತಿರೋದು ರಾಜಕೀಯದ ವಿರ್ಯಾಸವೇ ಸರಿ.

Published by:MAshok Kumar
First published: