• Home
  • »
  • News
  • »
  • district
  • »
  • ರಾಮನಗರ ರೇಷ್ಮೆ ಮಾರುಕಟ್ಟೆ ಸ್ಥಳಾಂತರ ರಾಜಕೀಯ; ಸರ್ಕಾರ ಸಮರ್ಥನೆ; ಕಾಂಗ್ರೆಸ್ ಕಿಡಿ

ರಾಮನಗರ ರೇಷ್ಮೆ ಮಾರುಕಟ್ಟೆ ಸ್ಥಳಾಂತರ ರಾಜಕೀಯ; ಸರ್ಕಾರ ಸಮರ್ಥನೆ; ಕಾಂಗ್ರೆಸ್ ಕಿಡಿ

ಅಶ್ವಥ್ ನಾರಾಯಣ್.

ಅಶ್ವಥ್ ನಾರಾಯಣ್.

ರಾಮನಗರದ ರೇಷ್ಮೆ ಮಾರ್ಕೆಟ್ ಸ್ಥಳಾಂತರದ ವಿಚಾರವಾಗಿ ಮಾಜಿ ಸಿಎಂ ಹೆಚ್​ಡಿಕೆ ಹಾಗೂ ರಾಮನಗರದ ಕಾಂಗ್ರೆಸ್ ಮುಖಂಡರ ನಡುವೆ ರಾಜಕೀಯ ಜಗಳ ಪ್ರಾರಂಭವಾಗಿದೆ. ಇದೇ ವೇಳೆ ಡಿಸಿಎಂ ಅಶ್ವಥ್ ನಾರಾಯಣ ಅವರು ಕುಮಾರಸ್ವಾಮಿ ಪರ ಹೇಳಿಕೆ ನೀಡಿದ್ದಾರೆ.

  • Share this:

ರಾಮನಗರ: ಇಲ್ಲಿಯ ಸಿಲ್ಕ್ ಮಾರ್ಕೆಟ್ ಈಗ ಕಿರಿದಾಗಿದ್ದು ಅದನ್ನ ಮೇಲ್ಧರ್ಜೆಗೇರಿಸಿ ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ಪಿಟಿಎಸ್​ನಲ್ಲಿ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೈಟೆಕ್ ಮಾರ್ಕೆಟ್ ನಿರ್ಮಾಣ ಮಾಡಬೇಕೆಂದು ಹೆಚ್​ಡಿಕೆ ಪ್ಲ್ಯಾನ್ ರೂಪಿಸಿದ್ದು, ರಾಜ್ಯ ಸರ್ಕಾರ ಈಗ ಯೋಜನೆಗೆ ಗ್ರೀನ್ ಸಿಗ್ನಲ್ ಸಹ ಕೊಟ್ಟಿದೆ. ಆದರೆ ಈ ಯೋಜನೆಗೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಯುದ್ಧ ಸಾರಿದ್ದಾರೆ.


ರಾಮನಗರದ ಖಾಸಗಿ ಕಾರ್ಯಕ್ರಮಕ್ಕೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಆಗಮಿಸಿದ್ದ ವೇಳೆ ಮಾತನಾಡಿ ನಗರ ಪ್ರದೇಶದಲ್ಲಿ ರೇಷ್ಮೆ ಮಾರುಕಟ್ಟೆ ಮಾಡಬೇಕೆಂಬ ಆಲೋಚನೆ ಇತ್ತು, ಆದರೆ ಜಾಗ ಇಲ್ಲದ ಕಾರಣ ಮಾರುಕಟ್ಟೆಯನ್ನ ವಿಸ್ತರಣೆ ಮಾಡಬೇಕೆಂದು ಮಾಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಮಾರುಕಟ್ಟೆಯನ್ನ ಹೈಟೆಕ್ ಮಾರುಕಟ್ಟೆಯಾಗಿ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ವತಿಯಿಂದ ಇದೀಗ ನಿಗದಿ ಮಾಡಿರುವ ಚನ್ನಪಟ್ಟಣದಲ್ಲಿ ಮಾರುಕಟ್ಟೆ ನಿರ್ಮಾಣವಾಗುತ್ತೆ. ರಾಮನಗರದಲ್ಲಿ ಜಾಗ ಇಲ್ಲದ ಕಾರಣ ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ, ಜನರಿಗೆ ಒಳ್ಳೆಯದಾಗಬೇಕು ಅಷ್ಟೆ. ಇಲ್ಲಿ ವ್ಯಾಪಾರಿಗಳ ದ್ಱಷ್ಟಿಯಲ್ಲ, ರೈತರ ಹಿತದ್ಱಷ್ಟಿಯಿಂದ ಈ ಅಭಿವೃದ್ಧಿ ಅಷ್ಟೇ ಎಂದು ಖಡಕ್ ಆಗಿ ತಿಳಿಸಿದರು.


ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಸರ್ಕಾರದಿಂದ ಕಣ್ಣೊರೆಸುವ ತಂತ್ರ: ಎಂಬಿ ಪಾಟೀಲ್ ವಾಗ್ದಾಳಿ


ಇದೇ ವಿಚಾರವಾಗಿ ಮಾಗಡಿ ಶಾಸಕ ಎ. ಮಂಜು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಚನ್ನಪಟ್ಟಣದ ಬಳಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾಗಬೇಕು. ಈಗಿರುವ ರೇಷ್ಮೆ ಮಾರುಕಟ್ಟೆ 2 ಎಕರೆಯಲ್ಲಿದೆ. ಆದರೆ ಚನ್ನಪಟ್ಟಣದ ಬಳಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾದರೆ ರೈತರಿಗೆ ಅನುಕೂಲ. ರಾಜ್ಯ ಹಾಗೂ ಹೊರರಾಜ್ಯದಿಂದಲೂ ಗೂಡು ಬರುತ್ತಿದೆ. ರೈತರ ಹಿತಕ್ಕಾಗಿ ಹೈಟೆಕ್ ಮಾರ್ಕೆಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತರಿಗೆ ಅನುಕೂಲವಾಗಬೇಕಾದರೆ ಹೈಟೆಕ್ ಮಾರ್ಕೆಟ್ ಬೇಕಿದೆ. ಆದರೆ ಇದನ್ನೇ ಕೆಲವರು ರಾಜಕೀಯಕ್ಕಾಗಿ ಬಳಸಿಕೊಳ್ತಿದ್ದಾರೆ. ಚನ್ನಪಟ್ಟಣದಲ್ಲಿ ಮಾರ್ಕೆಟ್ ನಿರ್ಮಾಣವಾದರೂ ಸಹ ರಾಮನಗರ ರೇಷ್ಮೆ ಹೈಟೆಕ್ ಮಾರ್ಕೆಟ್ ಎಂದೇ ಹೆಸರಿಡಲಾಗುತ್ತೆ ಎಂದು ಸ್ಪಷ್ಟವಾಗಿ ತಿಳಿಸಿದರು.


ಬಿಜೆಪಿ - ಜೆಡಿಎಸ್ ನಾಯಕರು ಹೈಟೆಕ್ ಮಾರ್ಕೆಟ್ ಪರವಾಗಿದ್ದರೆ, ಇದರ ವಿರುದ್ಧವಾಗಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಹೆಚ್ಡಿಕೆ ವಿರುದ್ಧ ಏಕವಚನದಲ್ಲಿಯೇ ಕಿಡಿಕಾರಿದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರೇಷ್ಮೆ ಮಾರ್ಕೆಟ್ ಸ್ಥಳಾಂತರ ವಿಚಾರವಾಗಿ ಹೆಚ್ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


Ramanagara Congress leaders
ರಾಮನಗರದ ಕಾಂಗ್ರೆಸ್ ಮುಖಂಡರಿಂದ ಸುದ್ದಿಗೋಷ್ಠಿ


ರಾಮನಗರ ಬಂದ್​​ಗೂ ಹಿಂದಿನ ದಿನ ಹೋರಾಟ ಮಾಡ್ತಿರುವವರು 420 ಗಳು ಎಂದು ಹೆಚ್ಡಿಕೆ ಗುಡುಗಿದ್ದರು. ಈ ವಿಚಾರವಾಗಿ ಇಂದು ಕಾಂಗ್ರೆಸ್ ಮುಖಂಡ ಶೇಷಾದ್ರಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಒಬ್ಬ ಗೋಮುಖವ್ಯಾಘ್ರ, ನಯವಂಚಕ, ಮತಿಹೀನ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಾಗ ಒಬ್ಬ ಕಾರ್ಯಕರ್ತನಿಗೂ ಅಧಿಕಾರ ಕೊಡಲಿಲ್ಲ. ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಕೈಮುಗಿದಿದ್ದಾರೆ. ನಮ್ಮಲ್ಲಿ ಹಣ ಕೊಡಲ್ಲ, ನೀವೇ ಚುನಾವಣೆ ಮಾಡಿಕೊಳ್ಳಿ ಎಂದಿದ್ದಾರೆ. ಇಷ್ಟು ಹೀನಾಯ ಪರಿಸ್ಥಿತಿಗೆ ಜೆಡಿಎಸ್ ತಲುಪಿದೆ. ಅವರು ಅರ್ಥ ಮಾಡಿಕೊಳ್ಳಲಿ. ನಿಮ್ಮ ಬದುಕಿನಲ್ಲಿ ನೀವು ಯಾವುದರಲ್ಲೂ ನ್ಯಾಯ ತೋರಿಸಿಲ್ಲ. ಕರ್ನಾಟಕದ ಮಾನ ಇಡೀ ವರ್ಲ್ಡ್​ನಲ್ಲಿ ಹರಾಜಾಗೋದು. ಅವರು ಸಿಎಂ ಆಗಿದ್ದಾಗ ಕಿಶೋರ್ ಚಂದ್ರ ಇಲ್ಲದಿದ್ದರೆ ಏನಾಗುತ್ತಿತ್ತು. ಐಟಿ ರೇಡ್ ಆದಾಗ ಎಲ್ಲೋ ಒಂದು ಮನೆಯಲ್ಲಿದ್ದರು ಕುಮಾರಸ್ವಾಮಿ. ಆಗ ಅಧಿಕಾರಿ ಕಿಶೋರ್ ಚಂದ್ರ ಇಂಟಲಿಜೆನ್ಸ್ ನಲ್ಲಿದ್ದರು, ಆಗ ರಾಜ್ಯದ ಮಾನ ಹೋಗುತ್ತೆ ಅಂತಾ ಕುಮಾರಸ್ವಾಮಿನ ಹೊರಗಡೆ ಕರೆತಂದು ನಂತರ ರೇಡ್ ಮಾಡಿಸಿದರು. ನಮ್ಮನ್ನ 420 ಅನ್ನೋ ಪದ ಕುಮಾರಸ್ವಾಮಿಗೆ ಸಾವಿರ ಬಾರಿ ಅನ್ವಯಿಸುತ್ತದೆ. ರೇಷ್ಮೆ ಮಾರ್ಕೆಟ್ ಸ್ಥಳಾಂತರ ವಿಚಾರವಾಗಿ ಮುಂದುವರೆಯಲಿ, ಮುಂದಿನ ಪರಿಸ್ಥಿತಿಯನ್ನ ಅವರೇ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: Gelatin Blast - ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟ: 6 ಮಂದಿ ಸಾವು


ಇದೇ ವೇಳೆ ಕಾಂಗ್ರೆಸ್ ಎಂ ಎಲ್ ಸಿ ಸಿಎಂ ಲಿಂಗಪ್ಪ ಮಾತನಾಡಿ, ಅವನ್ಯಾರೋ ಸಿಎಂ ಲಿಂಗಪ್ಪ ಅಂತ ಏಕವಚನದಲ್ಲಿ ಅಂತಾರೆ ಅವರು. ಕುಮಾರಸ್ವಾಮಿ ನನಗಿಂತಲೂ ಚಿಕ್ಕವರು, ನನ್ನ ಮಗಳ ವಯಸ್ಸಿನವರು, ನೀವು ಚೆನ್ನಮ್ಮನ ಮಗ, ನಾನು ಮಲ್ಲಮ್ಮನ ಮಗ ಸಿಎಂ ಲಿಂಗಪ್ಪ‌. 1994 ರಲ್ಲಿ ಅವರತ್ತಿರವಿದ್ದ ಹಣ ನನ್ನತ್ತಿರ ಇದ್ದಿದ್ದರೆ ಎಂದಿಗೂ ಅವರು ರಾಮನಗರ ಶಾಸಕರಾಗುತ್ತಿರಲಿಲ್ಲ. ಇತ್ತೀಚೆಗೆ ಅವರ ನಾಲಿಗೆ ಹಿಡಿತ ತಪ್ಪುತ್ತಿದೆ. ನಾನು ಚಿಕ್ಕವನ ಹಾಗೇ ಮಾತನಾಡಿದರೆ, ನನ್ನ ಬುದ್ಧಿ ನನಗೆ ಉಗಿಯುತ್ತಾನೆ. ಹಾಗೆಯೇ ಕುಮಾರಸ್ವಾಮಿಗೂ ಅವನ ಬುದ್ಧಿ ಉಗಿಯುತ್ತಿದೆ. ಅವನ ಆತ್ಮಕ್ಕೂ ಉಗಿಯುತ್ತಿದೆ, ಲೇ ಬೋಸುಡಿಕೆ ಆ ಪದ ಬಳಸಬೇಡ ಎನ್ನುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ಒಟ್ಟಾರೆ ರಾಮನಗರದ ರೇಷ್ಮೆ ಮಾರ್ಕೆಟ್ ಸ್ಥಳಾಂತರದ ವಿಚಾರವಾಗಿ ಕಾಂಗ್ರೆಸ್‌ ಮುಖಂಡರು ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿಯನ್ನೇ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ. ಆದರೆ ಇದು ಮುಂದೆ ಯಾವ ಹಂತ ತಲುಪಲಿದೆ ಎಂದು ಕಾಲವೇ ಉತ್ತರಿಸಬೇಕಿದೆ.


ವರದಿ: ಎ.ಟಿ‌. ವೆಂಕಟೇಶ್

Published by:Vijayasarthy SN
First published: