ರೈತರ ಹೋರಾಟದ ಹಿಂದೆ ರಾಜಕೀಯ ಪಿತೂರಿ; ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆರೋಪ

ಶಾಸಕ ಯತ್ನಾಳ್ ಅವರು ಕೆಲವು ತಿಂಗಳ ನಂತರ ಬಿಎಸ್​ವೈ ಅವರು ಬದಲಾಗಿ, ಉತ್ತರ ಕರ್ನಾಟಕವರೇ ಸಿಎಂ ಆಗಲಿದ್ದಾರೆ ಎನ್ನೋ ಹೇಳಿಕೆಯನ್ನು ಸಚಿವ ಡಿ ವಿ ಸದಾನಂದಗೌಡ ಟೀಕಿಸಿದ್ದಾರೆ. ಯತ್ನಾಳ್ ಬೆಳಿಗ್ಗೆಯೊಂದು ಸಂಜೆಯೊಂದು ಮಾತನಾಡುತ್ತಾರೆ. ಅವರು ಹೇಳಿದಂತೆ ಮಾಡುವುದಾದರೆ ಇಷ್ಟೊತ್ತಿಗೆ ನೂರು ಬಾರಿ ಸಿಎಂ ಸ್ಥಾನ ಬದಲಾಯಿಸಬೇಕಾಗಿತ್ತು. ಇನ್ನು ಮಧ್ಯರಾತ್ರಿ ಎಲ್ಲ ಎದ್ದು ಕುಳಿತು ಏನೇನು ಮಾತನಾಡುತ್ತಾರೋ ಯಾರಿಗೆ ಗೊತ್ತು ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

  • Share this:
ಕೊಡಗು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಕಡಿಮೆ ಸಂಖ್ಯೆಯಲ್ಲಿ ನೈಜ ರೈತರಿದ್ದಾರೆ. ಆದರೆ ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಗೌಡ ಸಮಾಜ ಭವನ ಉದ್ಘಾಟನೆಗೆ ಆಗಮಿಸಿದ್ದ ಸಂದರ್ಭ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು. ರೈತರಿಗೆ ಬೆಂಬಲ ನೀಡುತ್ತಿರುವ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ರೈತರು ಬೆಳೆಯುವ ಅನ್ನವನ್ನು ತಿನ್ನೋದಿಲ್ಲವೆ. ರೈತರ ಅನ್ನ ತಿಂದು ರೈತರಿಗೆ ದ್ರೋಹ ಮಾಡಲು ಸೆಲೆಬ್ರಿಟಿಗಳು ಹೊರಟಿದ್ದಾರೆ. ರೈತರ ಹೋರಾಟಕ್ಕೆ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಬೆಂಬಲ ಸೂಚಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಮೋದಿಯವರು ಪ್ರಧಾನಿಯಾದ ಮೇಲೆ ಒಂದು ದೇಶ ಒಂದು ಕಾನೂನು ತರಲು ಹೊರಟಿದ್ದಾರೆ. ಆದರೆ ದೇಶದ ಏಕತೆಯನ್ನು ಒಡೆಯಲು ಷಡ್ಯಂತ್ರಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಕಾನೂನು ತಂದಿದ್ದರಿಂದ ರೈತರು ಸ್ವತಂತ್ರರಾಗಲಿದ್ದಾರೆ. ಅವರ ಭೂಮಿ, ಬೆಳೆ ಯಾರಿಗೆ ಬೇಕಾದರೂ ರೈತ ಮಾರಾಟ ಮಾಡಬಹುದು. ಆದರೆ ಇದು ಕೆಲವರಿಗೆ ಬೇಕಾಗಿಲ್ಲದ್ದರಿಂದ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ರೈತರು ಖಾಸಗಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡರು ಅವರಿಗೆ ಬೇಡ ಎನಿಸಿದರೆ ಒಪ್ಪಂದದಿಂದ ಹಿಂದೆ ಸರಿಯಬಹುದು. ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಈಗಾಗಲೇ ನಾವು ಎಂಎಸ್​ಪಿ ಕೂಡ ಘೋಷಿಸಿದ್ದೇವೆ, ಇದರ ಮಧ್ಯೆ ರೈತರು ಚರ್ಚೆಗೆ ಬಂದರೆ ಸರ್ಕಾರ ಚರ್ಚಿಸಲು ಸಿದ್ಧ ಎಂದು ಹೇಳಿದರು.

ಇದನ್ನು ಓದಿ: ಕೊರೋನಾ ಲಸಿಕೆ‌ ಹಾಕಿಸಿಕೊಳ್ಳಲು ಬರುತ್ತಿಲ್ಲ ಆರೋಗ್ಯ ಸಿಬ್ಬಂದಿ, ಹೀಗಾಗಿ ವಿಳಂಬವಾಗುತ್ತಿದೆ ಎರಡನೇ‌ ಹಂತದ ಲಸಿಕೆ ಅಭಿಯಾನ!

ಸಚಿವ ಸಂಪುಟ ವಿಸ್ತರಣೆ ಆದ ಬಳಿಕ ಹಲವು ಶಾಸಕರು ಪ್ರತ್ಯೇಕ ಸಭೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸದಾನಂದಗೌಡ ಅವರು, ನಮ್ಮ ಪಕ್ಷದಲ್ಲಿ ಮೂರ್ನಾಲ್ಕು ಬಾರಿ ಶಾಸಕರಾಗಿ ಗೆದ್ದವರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಸಚಿವ ಸ್ಥಾನ ತಮಗೂ ಬೇಕು ಎಂದು ಅಸಮಾಧಾನಗೊಳ್ಳೋದು ಸಹಜ. ಮುಖ್ಯಮಂತ್ರಿ ಅವರನ್ನು ಆಯ್ಕೆ ಮಾಡಿದ ಬಳಿಕ ಮಂತ್ರಿ ಸ್ಥಾನ ಹಂಚಿಕೆ ಮಾಡಲಾಗುತ್ತದೆ. ಸಿಎಂ ಎಲ್ಲರನ್ನು ಒಂದೇ ರೀತಿ ಕರೆದುಕೊಂಡು ಹೋಗುತ್ತಾರೆ ಎಂದಿದ್ದಾರೆ. ಶಾಸಕ ಯತ್ನಾಳ್ ಅವರು ಕೆಲವು ತಿಂಗಳ ನಂತರ ಬಿಎಸ್​ವೈ ಅವರು ಬದಲಾಗಿ, ಉತ್ತರ ಕರ್ನಾಟಕವರೇ ಸಿಎಂ ಆಗಲಿದ್ದಾರೆ ಎನ್ನೋ ಹೇಳಿಕೆಯನ್ನು ಸಚಿವ ಡಿ ವಿ ಸದಾನಂದಗೌಡ ಟೀಕಿಸಿದ್ದಾರೆ. ಯತ್ನಾಳ್ ಬೆಳಿಗ್ಗೆಯೊಂದು ಸಂಜೆಯೊಂದು ಮಾತನಾಡುತ್ತಾರೆ. ಅವರು ಹೇಳಿದಂತೆ ಮಾಡುವುದಾದರೆ ಇಷ್ಟೊತ್ತಿಗೆ ನೂರು ಬಾರಿ ಸಿಎಂ ಸ್ಥಾನ ಬದಲಾಯಿಸಬೇಕಾಗಿತ್ತು. ಇನ್ನು ಮಧ್ಯರಾತ್ರಿ ಎಲ್ಲ ಎದ್ದು ಕುಳಿತು ಏನೇನು ಮಾತನಾಡುತ್ತಾರೋ ಯಾರಿಗೆ ಗೊತ್ತು ಎಂದು ಟೀಕಿಸಿದ್ದಾರೆ.

ಐದು ವರ್ಷ ಸಿಎಂ ಆಗಿದ್ದವರು ಸಿದ್ದರಾಮಯ್ಯ. ಹತ್ತು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ಅವರಿಗೆ ಪದಬಳಕೆ ಗೊತ್ತಿಲ್ಲ. ಅವರ ಮಾತಿನ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಬೇಕು ಎಂದು ಡಿ ವಿ ಸದಾನಂದಗೌಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಇನ್ನು ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚು ಸೆಸ್ ವಿಧಿಸಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡ ಸೆಸ್ ಮತ್ತು ತೆರಿಗೆ ನಡುವೆ ವ್ಯತ್ಯಾಸಗಳಿವೆ. ಈ ವ್ಯತ್ಯಾಸವನ್ನು ಜನರು ತಿಳಿದುಕೊಳ್ಳಬೇಕು. ಈ ರೀತಿ ಸೆಸ್ ಸಂಗ್ರಹಿಸಿದ್ದರಿಂದಲೇ ದೇಶದಲ್ಲಿ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡಲು ಸಾಧ್ಯವಾಯಿತು. ಈಗಲೂ ಅಷ್ಟೇ ಕೃಷಿ ಸೆಸ್ ವಿಧಿಸಿದ್ದರೆ ಅದನ್ನು ಕೃಷಿಗಾಗಿಯೇ ಬಳಕೆ ಮಾಡಬೇಕೆ ಹೊರತ್ತು ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ ಎಂದರು.
Published by:HR Ramesh
First published: