HOME » NEWS » District » POLICE TO TAKE ACTION ON OWNERS WHO RENT HOUSE TO ILLEGAL NIGERIANS GVTV SNVS

ಬೆಂಗಳೂರಿಗರೇ, ನೈಜೀರಿಯನ್ ಪ್ರಜೆಗಳಿಗೆ ಮನೆ ಕೊಡುವ ಮುನ್ನ ಹುಷಾರ್; ಪೊಲೀಸರು ಕೊಡಲಿದ್ಧಾರೆ ಶಾಕ್

ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್​ಗಳಲ್ಲಿ ನೈಜೀರಿಯನ್ನರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಕ್ರಮವಾಗಿ ಇಲ್ಲಿ ವಾಸಿಸುತ್ತಿರುವ ಆ ದೇಶದ ಪ್ರಜೆಗಳಿಗೆ ಹಿಂದೆ ಮುಂದೆ ನೋಡದೆ ಮನೆ ಬಾಡಿಗೆ ನೀಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

news18-kannada
Updated:March 11, 2021, 2:05 PM IST
ಬೆಂಗಳೂರಿಗರೇ, ನೈಜೀರಿಯನ್ ಪ್ರಜೆಗಳಿಗೆ ಮನೆ ಕೊಡುವ ಮುನ್ನ ಹುಷಾರ್; ಪೊಲೀಸರು ಕೊಡಲಿದ್ಧಾರೆ ಶಾಕ್
ಬೆಂಗಳೂರಿನಲ್ಲಿ ಅಪರಾಧ ಎಸಗಿರುವ ನೈಜೀರಿಯನ್ ಪ್ರಜೆಗಳು
  • Share this:
ಬೆಂಗಳೂರು: ರಾಜ್ಯ ರಾಜಧಾನಿ ನಗರದಲ್ಲಿ ನೈಜೀರಿಯನ್ ಪ್ರಜೆಗಳ ಹಾವಳಿ ಹೆಚ್ಚಾಗಿದೆ. ವೀಸಾ ಪಾಸ್ ಪೋರ್ಟ್ ಅವಧಿ ಮುಗಿದಿದ್ರೂ ನಗರದಲ್ಲಿ ಅಕ್ರಮ ವಾಸ ಮಾಡುತ್ತಿದ್ದು, ಬಾಡಿಗೆ ಮನೆ ಮಾಲೀಕರಿಗೆ ಹೆಚ್ಚಿನ ಹಣದಾಸೆ ತೋರಿಸಿ ಅಕ್ರಮ ಚಟುವಟಿಕೆ ನಡೆಸ್ತಿದ್ದಾರೆ. ಪೊಲೀಸರಿಗೆ ಸಿಗುವ ಭಯದಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡು ತಿಂಗಳಿಗೊಮ್ಮೆ ವಾಸ್ತವ್ಯ ಬದಲಾವಣೆ ಮಾಡ್ತಿದ್ದಾರೆ. ಹೆಚ್ಚು ಹಣ ಸಿಗುತ್ತೆ ಎಂದು ಏನೂ ದಾಖಲೆ ಪಡೆಯದೆ ಮನೆ ಮಾಲೀಕರು ಮನೆ ಬಾಡಿಗೆ ನೀಡ್ತಿದ್ದಾರೆ. ಇವರಲ್ಲಿ ಡ್ರಗ್ ಫೆಡ್ಲರ್​ಗಳೇ ಹೆಚ್ಚು ಅಕ್ರಮ ವಾಸ್ತವ್ಯ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಈಗ ಪೊಲೀಸ್ ಕಮಿಷನರ್ ಕಮಲ್ ಪಂಥ್ ಮುಂದಾಗಿದ್ದಾರೆ. ಈ ಮೂಲಕ ಮೊದಲು ಮನೆ ಬಾಡಿಗೆ ಕೊಡುವ ಮಾಲೀಕರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.

ಹೆಚ್ಚು ಹಣ ಸಿಗುತ್ತೆ, ಎಷ್ಟು ದಿನವಾದ್ರು ಇರಲಿ, ಏನಾದರೂ ಮಾಡಿಕೊಳ್ಳಲಿ ಅಂತ ಯಾರಿಗಾದರೂ ಬಾಡಿಗೆಗೆ ಕೊಟ್ರೆ ಹುಷಾರ್. ಅದರಲ್ಲೂ ನೈಜೀರಿಯನ್ ಪ್ರಜೆಗಳಿಗೆ ಬಾಡಿಗೆಗೆ ಮನೆ ಕೊಡುವ ಮಾಲೀಕರು ನೂರೆಂಟು ಬಾರಿ ಯೋಚಿಸುವುದು ಒಳ್ಳೆಯದು. ಅಕ್ರಮ ಚಟುವಟಿಕೆ ಕಂಡುಬಂದರೆ, ಮೊದಲು ಮನೆ ಮಾಲೀಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಿದ್ದಾರೆ. ಫಾರಿನರ್ಸ್ ಆಕ್ಟ್ ಅಡಿ ಶಿಸ್ತು ಕ್ರಮ ಜರುಗಿಸಲಿದ್ದಾರೆ.

ರಾಜಧಾನಿಯಲ್ಲಿ ಡ್ರಗ್ ಫೆಡ್ಲರ್​ಗಳ ಅಕ್ರಮ ವಾಸ್ತವ್ಯಕ್ಕೆ ಮನೆ ಮಾಲೀಕರೇ ಸಹಾಯ ಮಾಡ್ತಿರೋದು ಹೆಚ್ಚಾಗಿದೆ. ಹೀಗಾಗಿ ನೈಜೀರಿಯನ್ ವಾಸ್ತವ್ಯದ ಮನೆಗಳ ಪರಿಶೀಲನೆಗೆ ಎಲ್ಲಾ ಸ್ಟೇಷನ್ ಇನ್ಸ್ ಪೆಕ್ಟರ್​ಗಳಿಗೆ ಕಮಿಷನರ್ ಸೂಚನೆ ನೀಡಿದ್ದಾರೆ. ಎಲ್ಲೆಲ್ಲಿ ಹೆಚ್ಚು ನೈಜೀರಿಯನ್ ಪ್ರಜೆಗಳು ವಾಸ್ತವ್ಯ ಇದ್ದಾರೆ ಎಂದು ಸರ್ವೆ ಮಾಡಲು ಮುಂದಾಗಿದ್ದಾರೆ. ನೈಜೀರಿಯನ್ಸ್ ಅಕ್ರಮ ವಾಸ್ತವ್ಯ ಹೆಚ್ಚಾದ ಹಿನ್ನೆಲೆಯಲ್ಲಿ‌ ಕಡಿವಾಣಕ್ಕೆ ಕ್ರಮ ವಹಿಸಲಾಗ್ತಿದೆ.

ಇದನ್ನೂ ಓದಿ: ವೈದ್ಯರಿಗೆ ನೈತಿಕತೆ ಇರಲಿ, ಹಳ್ಳಿ ಜನರ ಬಗ್ಗೆ ಕಾಳಜಿಯೂ ಇರಲಿ: ಡಿಸಿಎಂ ಡಾ. ಅಶ್ವಥ್ ನಾರಾಯಣ

ಕೊತ್ತನೂರು, ಚಿಕ್ಕಜಾಲ, ಬಾಣಸವಾಡಿ, ಕೆ ಆರ್ ಪುರಂ, ಹೆಣ್ಣೂರು, ಟಿನ್ ಫ್ಯಾಕ್ಟರಿ, ಟಿಸಿ ಪಾಳ್ಯ, ಹೂಡಿ‌‌ಭಾಗದಲ್ಲೇ ಹೆಚ್ಚು ವಾಸ್ತವ್ಯ ಹೂಡಿದ್ದಾರೆ. ನಗರದ ಹೊರಹೊಲಯ ಸೊಲದೇವನಹಳ್ಳಿ ಭಾಗದಲ್ಲೂ ಅಕ್ರಮ ವಾಸ್ತವ್ಯದ ಬಗ್ಗೆ ಮಾಹಿತಿ ಸಿಕ್ಕಿದೆ. ನಗರದಲ್ಲಿ ಅಕ್ರಮ ವಾಸ್ತವ್ಯ ಹೂಡಿರುವ ನೈಜೀರಿಯನ್ ಪ್ರಜೆಗಳ ಬಗ್ಹೆ ಎಫ್ ಆರ್ ಆರ್ ಒ ದಿಂದ ಪೊಲೀಸ್ ಆಯುಕ್ತರಿಗೆ ರಿಪೋರ್ಟ್ ಕೊಡಲಾಗಿದೆ. ಅಕ್ರಮ ವಾಸ್ತವ್ಯ ಹೂಡಿರೋ ನೈಜೀರಿಯನ್ಸ್ ಸೇರಿದಂತೆ ಫಾರಿನರ್ಸ್ ಬಗ್ಗೆ ವಿದೇಶಿ ಪ್ರಾದೇಶಿಕ ಕೇಂದ್ರದಿಂದಲೂ ಪೊಲೀಸ್ ಕಮಿಷನರ್ ಮಾಹಿತಿ ಪಡೆದಿದ್ದಾರೆ.

ಈ ನಡುವೆ ಮೊದಲು ಡ್ರಗ್ಸ್ ಅಕ್ರಮದಲ್ಲಿ ತೊಡಗಿದ್ದು, ಅಂಥವರ ವಿರುದ್ದ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಜೊತೆಗೆ ನಕಲಿ ದಾಖಲೆಗಳನ್ನ ಸೃಷ್ಟಿಸಿ ಮನೆ ಮಾಲೀಕರಿಗೆ ಕೊಟ್ಟು ಉಳಿದುಕೊಂಡಿರೋ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಮಫ್ತಿನಲ್ಲಿ ಪೊಲೀಸರು ನೈಜೀರಿಯನ್ಸ್ ಎಲ್ಲೆಲ್ಲಿ ವಾಸ್ತವ್ಯ ಹೂಡಿದ್ದಾರೆ ಅಂಥವ್ರ ಮೇಲೆ ನಿಗಾ ವಹಿಸಿದ್ದಾರೆ. ಜೊತೆಗೆ ಸರ್ವೆ ನಡೆಸಿದ್ದು, ‌ಶೀಘ್ರದಲ್ಲೇ ಅಂಥ ಮನೆ ಮಾಲೀಕರಿಗೂ ಬಿಸಿ ಮುಟ್ಟಿಸಲಿದ್ದಾರೆ. ಅಕ್ರಮ ಸಾಬೀತಾದ್ರೆ ನೈಜೀರಿಯನ್ಸ್ ಜೊತೆ ಮಾಲೀಕರನ್ನೂ ಜೈಲಿಗೆ ಕಳಿಸಲಿದ್ದಾರೆ.

ಇದೇ ವೇಳೆ, ಮೊದಲು ನೈಜೀರಿಯನ್ಸ್ ವಾಸವಾಗಿರುವ ಮನೆಗಳಿಗೆ ನೋಟೀಸ್ ಕೊಟ್ಟು, ದಾಖಲೆಗಳನ್ನ ತರುವಂತೆ ಪೊಲೀಸರು ಸೂಚನೆ ನೀಡಲಿದ್ದಾರೆ.ವರದಿ: ಗಂಗಾಧರ ವಾಗಟ
Published by: Vijayasarthy SN
First published: March 11, 2021, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories