HOME » NEWS » District » POLICE STRUGGLING TO BRIG SEIZED GANJA TO POLICE STATION AS ACCUSED ARE ESCAPED IN KALBURGI HK

ಪೊಲೀಸರು ಬರುವ ಮುನ್ನವೇ ಆರೋಪಿಗಳು ಪರಾರಿ ; ಗಾಂಜಾ ಗಿಡ ಠಾಣೆಗೆ ತರಲು ಪೊಲೀಸರ ಹರಸಾಹಸ

ಪೊಲೀಸರು ಬರುವ ಸುಳಿವು ಸಿಕ್ಕ ಚಾಲಾಕಿ ಆರೋಪಿಗಳು ಪರಾರಿ ಆಗಿದ್ದಾರೆ. ಕಲಬುರ್ಗಿ ಪೊಲೀಸು ಅಕ್ರಮ ಗಾಂಜಾ ಬೆಳೆಗಾರರ ಮೇಲೆ ಕಾರ್ಯಾಚರಣೆ ಮುಂದುವರೆಸಿದ್ದಾರೆ

news18-kannada
Updated:September 29, 2020, 3:27 PM IST
ಪೊಲೀಸರು ಬರುವ ಮುನ್ನವೇ ಆರೋಪಿಗಳು ಪರಾರಿ ; ಗಾಂಜಾ ಗಿಡ ಠಾಣೆಗೆ ತರಲು ಪೊಲೀಸರ ಹರಸಾಹಸ
ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು
  • Share this:
ಕಲಬುರ್ಗಿ(ಸೆಪ್ಟೆಂಬರ್​. 29): ರಾಜ್ಯದಲ್ಲಿ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳಲಾರಂಭಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕಲಬುರ್ಗಿಯ ಮೂಲಕ ಗಾಂಜಾ ಪೂರೈಕೆ ಮಾಡುತ್ತಿತ್ತು ಎಂಬ ಅಂಶ ಬಹಿರಂಗಗೊಂಡ ನಂತರ ಕಲಬುರ್ಗಿ ಪೊಲೀಸರು ಅಕ್ರಮಣಕಾರರ ಮೇಲೆ ದಾಳಿಗಳನ್ನು ಮುಂದುವರೆಸಿದ್ದಾರೆ. ಚಿತ್ತಾಪುರ ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಪೊಲೀಸರು ಬರುವ ಸುಳಿವು ಸಿಕ್ಕ ಚಾಲಾಕಿ ಆರೋಪಿಗಳು ಪರಾರಿ ಆಗಿದ್ದಾರೆ. ಕಲಬುರ್ಗಿ ಪೊಲೀಸು ಅಕ್ರಮ ಗಾಂಜಾ ಬೆಳೆಗಾರರ ಮೇಲೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಗುಡ್ಡದ ಮೇಲಿದ್ದ ಹೊಲದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಅಲ್ಲೂರು (ಬಿ) ಗ್ರಾಮಗಳಲ್ಲಿ ಘಟನೆ ನಡೆದಿದೆ. ಗುಡ್ಡಗಾಡಿನಲ್ಲಿದ್ದ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗಳು. ತೊಗರಿ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ಹಾಕಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, 4.10 ಲಕ್ಷ ರೂಪಾಯಿ ಮೌಲ್ಯದ 410 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಒಟ್ಟು 610 ಗಾಂಜಾ ಗಿಡಗಳ ಜಪ್ತಿ ಮಾಡಲಾಗಿದೆ. ಅಲ್ಲೂರು ಗ್ರಾಮದ ಹನಮಂತ ಕಟ್ಟಿ ಹಾಗೂ ಭೀಮರಾಯ ಕಟ್ಟಿ ಎಂಬುವರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗಿತ್ತು.

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಅಕ್ರಮ ಗಾಂಜಾ ಅಡ್ಡೆಗಳ ಮೇಲೆ ದಾಳಿ ನಡೆಯುತ್ತಿರುವುದನ್ನು ಗಮನಿಸಿದ ಆರೋಪಿಗಳು ಒಂದಷ್ಟು ಗಾಂಜಾ ಗಿಡಗಳನ್ನು ಕಿತ್ತಿ ಗುಡ್ಡದಲ್ಲಿ ಎಸೆಯಲು ಪ್ರಯತ್ನಿಸಿದ್ದಾರೆ. ಆದರೆ, ಯಾವಾಗ ಹೊಲಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದ ಆರೋಪಿಗಳು, ಪೊಲೀಸರು ಬರುವಷ್ಟರಲ್ಲಿಯೇ ಪರಾರಿ ಆಗಿದ್ದಾರೆ. ಗುಡ್ಡಕ್ಕೆ ಯಾವುದೇ ವಾಹನ ಹೋಗುವುದು ದುಸ್ತರವಾಗಿದ್ದರಿಂದ ಪೊಲೀಸರು ವಶಕ್ಕೆ ಪಡೆದಿದ್ದ ಗಾಂಜಾ ಗಿಡಗಳನ್ನು ಪೊಲೀಸ್ ಠಾಣೆಗೆ ತರಲು ಹರಸಾಹಸ ಪಡುವಂತಾಯಿತು.

ಇದನ್ನೂ ಓದಿ : ಮುಂದಿನ ನಾಲ್ಕು ತಿಂಗಳಲ್ಲಿ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ದರು ; ಸೋದರ ಮಾವ ಲಿಂಗರಾಜ್ ಪಾಟೀಲ್ ಹೇಳಿಕೆ

ಗುಡ್ಡಗಾಡಿನಲ್ಲಿ ಬೆಳೆದಿದ್ದರಿಂದ ಜಪ್ತಿ ಮಾಡಿದ ಗಾಂಜಾ ತರಲು ಪೊಲೀಸರು ಸರ್ಕಸ್ ಮಾಡುವಂತಾಯಿತು. ಗುಡ್ಡದ ಕೆಳಗಿನವರೆಗೆ ಗಾಂಜಾ ಗಿಡ ಹೊತ್ತುಕೊಂಡು ಬಂದು, ನಂತರ ಟ್ರ್ಯಾಕ್ಟರ್ ಮೂಲಕ ಪೊಲೀಸ್ ಠಾಣೆಗೆ ಗಾಂಜಾ ಗಿಡ ತರಲಾಗಿದೆ.

ಸ್ಥಳಕ್ಕೆ ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಡಿ.ವೈ.ಎಸ್.ಪಿ ವೆಂಕನಗೌಡ ಪಾಟೀಲ್, ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್ಐ ಶ್ರೀಶೈಲ ಅಂಬಾಟಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.
Published by: G Hareeshkumar
First published: September 29, 2020, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories