ಮದುವೆಮನೆಗೆ ಹೋಗ್ಬೇಕಾದರೆ ವಧೂವರರ ಬ್ಯಾಕ್​ಗ್ರೌಂಡ್ ಚೆಕ್ ಮಾಡ್ಕೊಳಿ: ಪೋಲೀಸರಿಗೆ ಹೊಸಾ ರೂಲ್ಸ್

ಯಾವುದೇ ಅಧಿಕಾರಿಯು ಪೊಲೀಸ್ ಠಾಣೆಯಲ್ಲಿ ಅಪರಾಧ ಹಿನ್ನಲೆಯುಳ್ಳವರು, ರೌಡಿಶೀಟರ್ ಗಳೊಂದಿಗೆ ಯಾವುದೇ ರೀತಿ ಸಂಪರ್ಕ ಹೊಂದಿರಬಾರದು, ವರ್ಗಾವಣೆ ಮುಂಬಡ್ತಿ ಹೊಂದಿದವರು ಠಾಣೆಯಲ್ಲಿ ಸಂಭ್ರಮಾಚರಣೆ ಬೇಡ, ಪೊಲೀಸ ಕಚೇರಿಗಳು ಸಾರ್ವಜನಿಕ ಸ್ಥಳಗಳಾಗಿವೆ ಇಲ್ಲಿ ಆಚರಣೆ ಬೇಡ ಎಂದು ಆದೇಶಿಸಲಾಗಿದೆ.

ಆರೋಪಿಯ ಮದುವೆಯಲ್ಲಿ ಪೋಲೀಸರ ಹಾಜರಿ

ಆರೋಪಿಯ ಮದುವೆಯಲ್ಲಿ ಪೋಲೀಸರ ಹಾಜರಿ

  • Share this:
ಕೊಪ್ಪಳ:ಸಾಮಾನ್ಯವಾಗಿ ಮದುವೆ ಸಮಾರಂಭಗಳಿಗೆ ಹೋಗುವ ಪೊಲೀಸ ಅಧಿಕಾರಿಗಳು ಸಮವಸ್ತ್ರದಲ್ಲಿ ಹೋಗಿ ಅಲ್ಲಿ ವಧುವರಗೆ ಶುಭಕೋರುವುದು ವಾಡಿಕೆ, ಪೊಲೀಸ್ ಠಾಣೆಗಳಲ್ಲಿಯೇ ಅಧಿಕಾರಿಗಳು ತಮ್ಮ ಬರ್ತಡೇ ಆಚರಿಸುವುದು, ಈ ಸಂದರ್ಭದಲ್ಲಿ ಸ್ನೇಹಿತರನ್ನು ಕರೆದು ಸಂಭ್ರಮಿಸುವುದು, ಸಮವಸ್ತ್ರದಲ್ಲಿ ಯೇ ಕುಣಿದು ಕುಪ್ಪಳಿಸುವುದು, ಠಾಣೆ ಸಿಬ್ಬಂದಿ ಬೀಳ್ಕೂಡುವ ಸಂದರ್ಭದಲ್ಲಿ ಯೂ ಠಾಣೆಯಲ್ಲಿ ಹೇಗೆ ಬೇಕೆಂದರೆ ಹಾಗೆ ಸಂಭ್ರಮದಲ್ಲಿ ಮೈ ಮರೆಯುವುದು ವಾಡಿಕೆ, ಇಂಥ ಘಟನೆಗಳು ಪೊಲೀಸ ಇಲಾಖೆಗೆ ಮುಜಗರ ತರುವಂಥವು ಆಗಿವೆ, ಈ ಕಾರಣಕ್ಕೆ ಆಗಷ್ಟ 2 ರಂದು ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ ಸೂದ್ ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ, ಪೊಲೀಸರು ಮುಜಗರವಾಗದಂತೆ ವರ್ತಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಶಿಸ್ತಿನ‌ ಸಿಪಾಯಿಗಳು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು, ಅಪರಾಧಗಳನ್ನು ತಡೆಯಬೇಕು, ಇಂಥ ಪೊಲೀಸರು ಇತ್ತೀಚಿಗೆ ಇಲಾಖೆ ಮುಜಗರಕ್ಕೊಳಗಾಗುವಂತೆ ನಡೆದುಕೊಳ್ಳುತ್ತಿದ್ದಾರೆ, ಪೊಲೀಸ ಅಧಿಕಾರಿಗಳಿಗೆ ವರ್ಗಾವಣೆ, ಮುಂಬಡ್ತಿ, ಸ್ವಾಗತ, ನಿವೃತ್ತಿ ಸಹಜ ಕ್ರಿಯೆಗಳು, ಇಂಥ ಸಂದರ್ಭದಲ್ಲಿ ಪೊಲೀಸರು ತಮ್ಮ ಠಾಣೆಗಳಲ್ಲಿ ಅಥವಾ ಸಾರ್ವಜನಿಕವಾಗಿ ಅಪರಾಧ ಹಿನ್ನಲೆಯುಳ್ಳವರು, ವಿಚಾರಣೆಯ ಹಂತದಲ್ಲಿರುವವರೊಂದಿಗೆ ಸಂಭ್ರಮ ಆಚರಿಸಿಕೊಳ್ಳುತ್ತಾರೆ ಇದರಿಂದ ಇಲಾಖೆ ಮುಜಗರಕ್ಕೊಳಗಾಗುತ್ತಿದೆ.

ಈ ಮುಜಗರ ತಪ್ಪಿಸುವ ಉದ್ದೇಶದಿಂದ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.ಮಾರ್ಗಸೂಚಿ ಆದೇಶದಲ್ಲಿ ಯಾವುದೇ ಅಧಿಕಾರಿಯು ಪೊಲೀಸ್ ಠಾಣೆಯಲ್ಲಿ ಅಪರಾಧ ಹಿನ್ನಲೆಯುಳ್ಳವರು, ರೌಡಿಶೀಟರ್ ಗಳೊಂದಿಗೆ ಯಾವುದೇ ರೀತಿ ಸಂಪರ್ಕ ಹೊಂದಿರಬಾರದು, ವರ್ಗಾವಣೆ ಮುಂಬಡ್ತಿ ಹೊಂದಿದವರು ಠಾಣೆಯಲ್ಲಿ ಸಂಭ್ರಮಾಚರಣೆ ಬೇಡ, ಪೊಲೀಸ ಕಚೇರಿಗಳು ಸಾರ್ವಜನಿಕ ಸ್ಥಳಗಳಾಗಿವೆ ಇಲ್ಲಿ ಆಚರಣೆ ಬೇಡ, ಇಲಾಖೆಯ ಪೂರ್ವಾನುಮತಿ ಪಡೆಯದೇ ಯಾವುದೇ ಸಭೆ, ಸಮಾರಂಭ, ಸಮಾರಂಭಕ್ಕೆ ಹಣ ಎತ್ತಬಾರದು, ಅಪರಾಧ ಹಿನ್ನಲೆಯುಳ್ಳವರು, ವಿಚಾರಣೆ ನಡೆಯುವ ಹಂತದಲ್ಲಿರುವವರ ಸಭೆ, ಸಮಾರಂಭಗಳಲ್ಲಿ ಭಾಗಿಯಾಗಬಾರದು ಎಂದು ಖಡಕ್ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಈ ಊರಿಗೆ ನೆಂಟರು ಬಂದ್ರೆ ಮಧ್ಯರಾತ್ರಿಗೇ ಜಾಗ ಖಾಲಿ ಮಾಡ್ತಾರೆ, ದನಗಳಿಗೂ ಇಲ್ಲಿ ಫ್ಯಾನ್ ಬೇಕೇ ಬೇಕು...ಏನಿದು ವಿಚಿತ್ರ?

ಈ ರೀತಿಯ ಮಾರ್ಗಸೂಚಿಗೆ ಇತ್ತೀಚಿಗೆ ಕೊಪ್ಪಳದಲ್ಲಿ ನಡೆದಿರುವ ಪೊಲೀಸರಿಗೆ ಮುಜಗರವಾಗುವಂಥ ಘಟನೆ ಕಾರಣವಾಗಿರಬಹುದು ಎನ್ನಲಾಗಿದೆ. 2015 ರಲ್ಲಿ ಕನಕಾಪುರದ ವಿದ್ಯಾರ್ಥಿ ಯಲ್ಲಾಲಿಂಗ ಎಂಬುವವರನ್ನು ಹುಲಿಹೈದರ ಹನುಮೇಶ ನಾಯಕ ಪುತ್ರ ಮಹಾಂತೇಶ ನಾಯಕ ಹಾಗು ಇತರ 8 ಜನ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದು ಈ ಪ್ರಕರಣದ ವಿಚಾರಣೆ ನ್ಯಾಯಲಯದಲ್ಲಿ ಈಗಲೂ ನಡೆಯುತ್ತಿದೆ, ಈ ಪ್ರಕರಣ ಆರೋಪಿಯಾಗಿರುವ ಮಹಾಂತೇಶ ಮದುವೆಯು ಜು 18 ರಂದು ಹುಲಿಹೈದರಲ್ಲಿ ನಡೆಯಿತು, ಆರೋಪಿಯ  ಮದುವೆ ಸಮಾರಂಭದಲ್ಲಿ ಗಂಗಾವತಿ ಡಿವಾಯ್ ಎಸ್ಪಿ ರುದ್ರೇಶ ಉಜನಿಕೊಪ್ಪ, ಗಂಗಾವತಿ ಗ್ರಾಮೀಣ ಸಿ ಪಿಐ ಉದಯರವಿ ಹಾಗು ಕನಕಗಿರಿ ಪಿಎಸ್ಐ ತಾರಬಾಯಿ  ಯಲ್ಲಾಲಿಂಗ ಕೊಲೆ ಆರೋಪಿ ಮಹಾಂತೇಶ ಮದುವೆಯಲ್ಲಿ ಪೊಲೀಸ್ ಸಮವಸ್ತ್ರದೊಂದಿಗೆ ಭಾಗಿಯಾಗಿದ್ದರು.

ಸಮವಸ್ತ್ರದಲ್ಲಿ ಭಾಗಿಯಾಗಿ ಫೋಟೊಕ್ಕೆ ಫೋಸು ನೀಡಿದ್ದರು, ಇದು ಮುಜಗರಕ್ಕೊಗಾಗಿತ್ತು,  ಈ ಸಂದರ್ಭದಲ್ಲಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಗಳು ಈ ಮೂವರಿಗೆ ಕಡ್ಡಾಯ ರಜೆ ನೀಡಿದ್ದರು, ಈ ಪ್ರಕರಣದ ಬೆನ್ನಲ್ಲೆಯೇ ಮಹಾನಿರ್ದೇಶಕರ ಮಾರ್ಗಸೂಚಿ ಬಿಡುಗಡೆಯಾಗಿದೆ, ಇನ್ನೂ ಮೇಲೆ ಪೊಲೀಸ ಅಧಿಕಾರಿಗಳು ಅಪರಾಧ ಹಿನ್ನಲೆ ಹೊಂದಿರುವವರಿಂದಿಗೆ ಸಂಭ್ರಮ ಆಚರಣೆ ಮಾಡುವ ಮುನ್ನ ವಿಚಾರ ಮಾಡಿ ಭಾಗಿಯಾಗಬೇಕು, ಪೊಲೀಸ್ ಮಹಾನಿರ್ದೇಶಕರ ಮಾರ್ಗಸೂಚಿ ಆದೇಶ ಕಟ್ಟುನಿಟ್ಟಿನಿಂದ ಪಾಲನೆಯಾಗುತ್ತಾ ಕಾದು ನೋಡಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: