ತಹಶೀಲ್ದಾರ್ ಕಛೇರಿಗೆ ಪೊಲೀಸ್ ಬೇಡಿ; ಸಿಬ್ಬಂದಿಗಳ ಬೇಜವಾಬ್ದಾರಿಗೆ ಹೈರಾಣಾದ ಪೊಲೀಸರು

ರಾತ್ರಿ ಗಸ್ತು ತಿರುಗುವ ಪೊಲೀಸರು ಬಾಗಿಲು ತೆರೆದಿರುವುದನ್ನು ನೋಡಿ ಕಳ್ಳತನ ಆಗದಿರಲೆಂದು ಕಚೇರಿಯ ಮುಂಬಾಗಿಲಿಗೆ ಬೇಡಿ ಹಾಕುವುದು ಪೊಲೀಸರ ನಿತ್ಯ ಕಾಯಕವಾಗಿದೆ

ತಹಶೀಲ್ದಾರ್ ಕಛೇರಿ

ತಹಶೀಲ್ದಾರ್ ಕಛೇರಿ

  • Share this:
ಚಿಕ್ಕೋಡಿ(ನವೆಂಬರ್​. 30): ತಾಲೂಕು ಆಡಳಿತ ಕಛೇರಿ ಇಡಿ ತಾಲೂಕಿನ ಆಗು ಹೋಗುಗಳ ಕುರಿತು ಮಾಹಿತಿ ಇಡುತ್ತೆ. ತಾಲೂಕಿನ ಸಂಪೂರ್ಣ ಆಡಳಿತ ಹೊಂದಿರುವ ತಾಲೂಕಿನ ಶಕ್ತಿ ಕೇಂದ್ರ ಅಂತಲೆ ಕರೆಯಬಹುದು. ಆದರೆ, ಇಲ್ಲಿನ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ತಾಲೂಕು ಆಡಳಿತ ಕಛೇರಿ ರಾತ್ರಿ ಆದರೆ ಸಾಕು ಅನಾಥವಾಗುತ್ತದೆ. ರಾತ್ರಿ ಹೊತ್ತು ಕಳ್ಳರು ಬಂದು ರಾಜಾರೋಷವಾಗಿ ಇಲ್ಲಿ ಓಡಾಡುವಾಗಾಗಿದೆ. ಕಛೇರಿ ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪೊಲೀಸರು ಕೂಡ ಹೈರಾಣಾಗಿ ಹೋಗಿದ್ದಾರೆ. ಇಂತಹ ನಿರ್ಲಕ್ಷ್ಯ ತೋರುತ್ತಿರುವ ಕಛೇರಿ ಇರುವುದು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಪಟ್ಟಣದ ತಹಶೀಲ್ದಾರ್ ಕಛೇರಿ ರಾತ್ರಿ ಆದ್ರೆ ಸಾಕು ಕಳ್ಳರಿಗೆ ಆಹ್ವಾನ ನೀಡುವಂತಾಗಿದೆ. ರಾತ್ರಿ ಹೊತ್ತು ಓರ್ವ ಸಿಪಾಯಿಯನ್ನ ಸೆಕ್ಯೂರಿಟಿಗೆ ಅಂತ ನೇಮಿಸಬೇಕು ಆದ್ರೆ ಇಲ್ಲಿ ಯಾರು ಸಿಪಾಯಿ ಕೆಲಸ ಮಾಡುತ್ತಿಲ್ಲಾ ಪರಿಣಾಮ ರಾತ್ರಿ ಆದ್ರೆ ಸಾಕು ಪೊಲೀಸರ ಬೇಡಿ ಈ ಕಛೇರಿಯ ರಕ್ಷಣೆ ಮಾಡುವಂತಾಗಿದೆ.

ಕಳೆದ ಹಲವು ದಿನಗಳಿಂದಲೂ ರಾತ್ರಿ ಹೊತ್ತು ಕಛೇರಿಗೆ ಬೀಗವನ್ನು ಹಾಕದೆ ತಹಶೀಲ್ದಾರ್ ಕಛೇರಿಯ ಸಿಬ್ಬಂದಿಗಳು ಮನೆಗೆ ಹೊರಟು ಹೋಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಗಸ್ತು ತಿರುಗುವ ಪೊಲೀಸರು ಬಾಗಿಲು ತೆರೆದಿರುವುದನ್ನು ನೋಡಿ ಕಳ್ಳತನ ಆಗದಿರಲೆಂದು ಕಚೇರಿಯ ಮುಂಬಾಗಿಲಿಗೆ ಬೇಡಿ ಹಾಕುವುದು ಪೊಲೀಸರ ನಿತ್ಯ ಕಾಯಕವಾಗಿದೆ

ಕಚೇರಿಯ ಕೆಲಸದ ಅವಧಿ ಮುಗಿದ ನಂತರ ರಾತ್ರಿ ಪಾಳಿಯದಲ್ಲಿರುವ ಕಂದಾಯ ಇಲಾಖೆಯ ಸಿಬ್ಬಂದಿಗಳು ಕಚೇರಿಗೆ ಬೀಗ ಹಾಕುವುದಿಲ್ಲ ಇಲಾಖೆಯ ಸಿಬ್ಬಂದಿಗಳು ಮಾಡಿದ ಎಡವಟ್ಟನ್ನು ಪೊಲೀಸರು ಬೇಡಿ ಹಾಕುವ ಮೂಲಕ ಸರಿ ಪಡಿಸುತ್ತಿದ್ದಾರೆ.

ಇನ್ನು ರಾಯಬಾಗದ ಈ ತಹಶೀಲ್ದಾರ್ ಕಛೇರಿಯಲ್ಲಿ ನೋಂದಣಿ ಕಚೇರಿ, ಸರ್ವೆ ಇಲಾಖೆ,  ಖಜಾನೆ ಇಲಾಖೆ ಆಹಾರ ಇಲಾಖೆಗೆ ಸೇರಿದ ಹಲವಾರು ಮಹತ್ವದ ದಾಖಲೆಗಳು ಇರುತ್ತವೆ. ಅವುಗಳ ಕಾವಲಿಗೆ ಎಂದು ಸಿಬ್ಬಂದಿಗಳು ರಾತ್ರಿ ಗಸ್ತು ಇರುತ್ತಾರೆ. ಆದರೆ, ಇಲ್ಲಿ ಮಾತ್ರ ರಾತ್ರಿ ಪಾಳಿಯದಲ್ಲಿ ಯಾರು ಇರಲ್ಲ. ಕಂದಾಯ ಇಲಾಖೆಯ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಇರುವುದು ಕಂಡುಬರುತ್ತದೆ. ಅಲ್ಲದೆ ಒಂದು ವೇಳೆ ಮಹತ್ತ್ವದ ದಾಖಲೆಗಳು ಕಳ್ಳತನವಾದ್ರೆ ಯಾರು ಹೊಣೆ ಅನ್ನೊದು ಪ್ರಶ್ನೆಯಾಗಿದೆ.

ಇನ್ನು ರಾತ್ರಿ ಹೊತ್ತು ಸಿಬ್ಬಂದಿಗಳ ನಿರ್ಲಕ್ಷ್ಯದ ಕುರಿತು ಪೊಲೀಸರು ತಹಶೀಲ್ದಾರ್ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಮಾತ್ರ ಆಗಿಲ್ಲಾ. ರಾತ್ರಿ ಗಸ್ತು ಇರಬೇಕಾದ ಸಿಬ್ಬಂದಿಗಳ ನಿರ್ಲಕ್ಷ್ಯದ ಕುರಿತು ಇಲ್ಲಿನ ತಹಶೀಲ್ದಾರ್ ಎನ್.ಬಿ ಗೆಜ್ಜೆ ಅವರ ಗಮನಕ್ಕೆ ತಂದರು ಸರಿ ಹೇಳುತ್ತೇನೆ. ಮುಂದಿನ ಬಾರಿ ಹೀಗೆ ಆಗಲ್ಲಾ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ.

ಇದನ್ನೂ ಓದಿ : ಸಂವಿಧಾನ ಸುಟ್ಟು ಬಿಡಲಿ ಬಿಡಿ: ಈಶ್ವರಪ್ಪ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ

ಆದರೆ, ಘಟನೆ ಮಾತ್ರ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೆ ಇದೆ. ನಮಗೂ ಸಾಕಾಗಿ ಹೋಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಕಳ್ಳತನವಾದ್ರೆ ನಮ್ಮನ್ನೆ ಕೇಳುತ್ತಾರೆ. ಹಾಗಾಗಿ ನಮ್ಮ ಬಳಿ ಬೀಗ ಇಲ್ಲದೆ ಇರುವ ಕಾರಣಕ್ಕಾಗಿ ನಮ್ಮ ಬಳಿ ಇರುವ ಬೇಡಿಯನ್ನ ಹಾಕುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಪೊಲೀಸರು.

ಒಟ್ಟಿನಲ್ಲಿಇಡಿ ತಾಲೂಕಿನ ಮಹತ್ವದ ದಾಖಲಾತಿಗಳನ್ನ ಹೊಂದಿರುವ ಕೇಂದ್ರದಲ್ಲೆ ಸರಿಯಾಗಿ ಭದ್ರತೆ ಇಲ್ಲದೆ ರಾತ್ರಿ ಹೊತ್ತು ಈ ರೀತಿ ಬೀಗ ಹಾಕದೆ ಇದ್ರೆ ನಮ್ಮ ದಾಖಲೆಗಳು ಇಲ್ಲಿ ಸುರಕ್ಷಿತ ಇರಲು ಸಾಧ್ಯವಿಲ್ಲ. ಕೂಡಲೆ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಜನ ಒತ್ತಾಯಿಸಿದ್ದಾರೆ.
Published by:G Hareeshkumar
First published: