ಶೂಟೌಟ್ ಬಳಿಕ ಎಚ್ಚೆತ್ತ ವಿಜಯಪುರ ಪೊಲೀಸರು: ಪರೇಡ್ ನಲ್ಲಿ ರೌಡಿ ಕೆನ್ನೆಗೆ ಬಾರಿಸಿದ ಎಸ್ಪಿ

ಪ್ರತಿಯೊಂದು ತಾಲೂಕು ಮತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಪರೇಡ್ ನಡೆಸಲಾಗುವುದು. ಅಲ್ಲದೇ, ತಾವೇ ಖುದ್ದಾಗಿ ತೆರಳಿ ರೌಡಿಗಳ ಪರೇಡ್ ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.

ರೌಡಿಗಳಿಗೆ ಎಚ್ಚರಿಕೆ ನೀಡಿದ ಎಸ್​​ಪಿ

ರೌಡಿಗಳಿಗೆ ಎಚ್ಚರಿಕೆ ನೀಡಿದ ಎಸ್​​ಪಿ

  • Share this:
ವಿಜಯಪುರ(ನವೆಂಬರ್​. 20): ರೌಡಿಶೀಟರ್ ಗೆ ಎಸ್ಪಿ ಕಪಾಳಮೋಕ್ಷ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ನಡೆದ ರೌಡಿಗಳ ಪರೇಡ್ ನಲ್ಲಿ ಎಸ್ಪಿ‌ ಅನುಪಮ ಅಗ್ರವಾಲ, ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಭೀಮಶಿ ಭಜಂತ್ರಿ ಎಂಬುವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಇದೇ ತಿಂಗಳು ನಡೆದ ಎರಡು ಶೂಟೌಟ್ ಗಳ ನಂತರ ವಿಜಯಪುರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿಗಳ ಪರೇಡ್ ನಲ್ಲಿ 113 ರೌಡಿಗಳ ಪರೇಡ್ ನಡೆಯಿತು. ಈ ಸಂದರ್ಭದಲ್ಲಿ ರೌಡಿಗಳ ವಿರುದ್ಧ ಎಸ್ಪಿ ಅನುಪಮ ಅಗ್ರವಾಲ ಫುಲ್ ಗರಂ ಆದರು. ಬಡ್ಡಿ ಮಾಫಿಯಾದಲ್ಲಿದ್ದ ರೌಡಿ ಭೀಮಶಿ ಭಜಂತ್ರಿಗೆ ಎಸ್ಪಿ ಕಪಾಳಮೋಕ್ಷ‌ ಮಾಡುವ ಮೂಲಕ ರೌಡಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ವಿಜಯಪುರ ತಹಶೀಲ್ದಾರ್ ಕಾರು ಚಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಭೀಮಶಿ ಭಜಂತಿ ಎಂಬ ರೌಡಿಶೀಟರ್ ಕೈವಾಡದ ಆರೋಪ ಕೇಳಿ ಬಂದಿದ್ದು, ಆತನ ವಿರುದ್ಧ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈತ ಅನುಮತಿ ಪಡೆದಿದ್ದ ರಿವಾಲ್ವರ ಹೊಂದಿದ್ದು, ಬಡ್ಡಿ ಹಣಕ್ಕಾಗಿ ಕಿರುಕುಳ ಹಿನ್ನೆಲೆ ಚಾಲಕ ನೇಣಿಗೆ ಎಂಬು ಆರೋಪವಿದೆ.  ಈ ಪರೇಡ್ ನಲ್ಲಿ ವಿಜಯಪುರ ನಗರದ ರೌಡಿಶೀಟರ್ ಗೆ ಕೆನ್ನೆಗೆ ಬಾರಿಸುವ ಮೂಲಕ ಉಳಿದವರಿಗೆ ಚಳಿ‌ ಬಿಡಿಸಿದ್ದಾರೆ.

ರೌಡಿ ಪರೇಡ್ ಬಳಿಕ ಮಾತನಾಡಿದ ಎಸ್ಪಿ ಅನುಪಮ ಅಗ್ರವಾಲ, ಸುಮಾರು ಎರಡು ವರ್ಷಗಳ ನಂತರ ರೌಡಿಗಳ ಪರೇಡ್ ನಡೆಸಲಾಗಿದೆ. ಈಗ ನಡೆದ ರೌಡಿಗಳ ಪರೇಡ್ ನಲ್ಲಿ ಸುಮಾರು 113 ರೌಡಿಗಳನ್ನು ಪರೇಡ್ ಮಾಡಿಸಲಾಗಿದೆ. ಇನ್ನೂ ಹಲವರು ಬಂದಿಲ್ಲ. ಮತ್ತೆ ಹಲವರು ರೌಡಿಶೀಟರ್ ಪಟ್ಟಿಗೆ ಸೇರಿಲ್ಲ. ವಾಮ ಮಾರ್ಗದ ಮೂಲಕ ಹಣದಾಸೆಗೆ ಮತ್ತು ಫೇಸ್‌ ಬುಕ್ ಹಾಗೂ ವಾಟ್ಸಾಪ್ ಗಳಲ್ಲಿ ಶೋಕಿಗಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ. ಇದು ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ತಿಳಿಸಿದರು.

ಹದಿ ಹರೆಯದ ಯುವಕರು ಭೀಮಾತೀರದ ಮುಖಂಡರನ್ನು ಮಾದರಿಯಾಗಿಟ್ಟುಕೊಂಡು ದಾರಿ ತಪ್ಪುತ್ತಿದ್ದಾರೆ. ಈಗ ಇವರನ್ನು ಸರಿ ಪಡಿಸದಿದ್ದರೆ ಮುಂದೆ ಸಮಸ್ಯೆ ಎದುರಾಗಲಿದೆ. ಹೊಸದಾಗಿ ರೌಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಮತ್ತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ರೌಡಿಗಳ ಪರೇಡ್ ನಡೆಸಲಾಗಿದೆ ಎಂದರು.

ಇದನ್ನೂ ಓದಿ : ಕಾಂಗ್ರೆಸ್ ತೆಕ್ಕೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ; ಬಿಜೆಪಿ ಯೋಜನೆ ವಿಫಲ

ಪ್ರತಿಯೊಂದು ತಾಲೂಕು ಮತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಪರೇಡ್ ನಡೆಸಲಾಗುವುದು. ಅಲ್ಲದೇ, ತಾವೇ ಖುದ್ದಾಗಿ ತೆರಳಿ ರೌಡಿಗಳ ಪರೇಡ್ ನಡೆಸಿ ಕೆಲವೊಂದು ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ತಿಳಿಸಿದರು.

ಅಲ್ಲದೇ, ಈಗ ತಮ್ಮ ವರ್ತನೆಯನ್ನು ತಿದ್ದಿಕೊಂಡಿರುವ ಮತ್ತು ತುಂಬಾ ಹಳೆಯ ರೌಡಿ ಶೀಟರ್ ಹೊಂದಿರುವ ಜನರನ್ನು ರೌಡಿಶೀಟರ್ ನಿಂದ ಮುಕ್ತಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
Published by:G Hareeshkumar
First published: