Anekal Police Death: ಕೆಲಸದ ಒತ್ತಡಕ್ಕೆ ಬಲಿ ಆಯ್ತಾ ಪೊಲೀಸ್ ಪೇದೆ ಜೀವ?

ಅತಿಯಾದ ಒತ್ತಡ,‌ ಆರೋಗ್ಯದ ಕಡೆ ‌ಗಮನ ಕೊಡದೇ ರಾತ್ರೀ ಪಾಳಿಯಲ್ಲಿ ಮಳೆ ಚಳಿ ಎನ್ನದೇ ಕೆಲಸದ ಪರಿಣಾಮ ದಿನೇಶ್ ರವರಿಗೆ ಮುಳುವಾಯ್ತಾ ಎನ್ನುವ ಮಾತು ಇದೆ. ಇದು ಕೇವಲ ಕಾನ್ಸಟೇಬಲ್ ಗಳಿಗೆ ಮಾತ್ರವಲ್ಲ ಅಧಿಕಾರಿಗಳಿಗು ಸಹ ಇದೇ ಪರಿಸ್ಥಿತಿ ಇದೇ. ಆದರೂ ಜನ ಶಾಂತಿಯುತವಾಗಿ ಜೀವನ ಸಾಗಿಸಲು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜಾವಾಬ್ದಾರಿ ಮಾತ್ರ ಅಧಿಕಾರಿಗಳ ಮೇಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅದು ಕ್ರೈಮ್ ನಲ್ಲಿ(Crime) ಮಿನಿ ಬಾಂಬೆ ಎಂದೇ ಖ್ಯಾತಿ ಗಳಿಸಿದ ಪ್ರದೇಶ. ಆ ಪ್ರದೇಶದಲ್ಲಿ ಅಪರಾಧ ಕೃತ್ಯ, ಕೊಲೆ ಸುಲಿಗೆ ಕಳ್ಳತನ ಮಾಮೂಲು. ಆದ್ರೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಬೇಕಾದ ಪೊಲೀಸ್ ಸಿಬ್ಬಂದಿ ಸಂಖ್ಯೆ ಮಾತ್ರ. ಹೀಗಾಗಿ ಇಲ್ಲಿನ ಪೊಲೀಸರಿಗೆ ಕೆಲಸದೊತ್ತಡ ಇತರೆ ಕಡೆಗಳಿಂತ ಹೆಚ್ಚಾಗಿದೆ. ಕೆಲಸದ ಒತ್ತಡದ‌ ಕಾರಣದಿಂದ ಇತ್ತೀಚೆಗೆ ಹೆಡ್ ಕಾನ್ಸೆಟೇಬಲ್(Head Constable) ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೆ ತೀರಿಕೊಂಡಿದ್ದಾರೆ.

ಹೌದು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸಟೇಬಲ್ ದಿನೇಶ್ ,‌ ಕೆಲಸ ನಿರ್ವಹಿಸುತ್ತಿದ್ದ ವೇಳೆಯೇ ಅಸುನೀಗಿದ್ದಾರೆ. 112‌ ವಾಹನದಲ್ಲಿ( ತುರ್ತು ಸೇವೆ ವಾಹನ) ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ.

ಮೊನ್ನೆಯಷ್ಟೇ 49‌ವರ್ಷ ಮುಗಿಸಿ 50 ವರ್ಷಕ್ಕೆ ಕಾಲಿಟ್ಟು ಬರ್ಥ್ ಡೇ ಆಚರಿಸಿಕೊಂಡಿದ್ದ ದಿನೇಶ್ ಕುಟುಂಬದ ಜೊತೆ ಖುಷಿಯಾಗಿದ್ರು. ಕೊರೊನಾ ಕಾಲದಲ್ಲೂ ಆ್ಟಕ್ಟೀವ್ ಆಗಿ ಕೆಲಸ ಮಾಡಿಕೊಂಡಿದ್ದ ದಿನೇಶ್ ರವರಿಗೆ ಹೃದಯಘಾತ ಸಂಭವಿಸಿರೋದು ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ಆರೋಗ್ಯವಾಗಿದ್ದ ದಿನೇಶ್ ಸಾವು ಕುಟುಂಬದವರಲ್ಲಿ ಪರೋಕ್ಷವಾಗಿ ಸತತ 24 ಗಂಟೆಗಳ ಶಿಫ್ಟ್ ಮಾಡಿದ್ದ ದಿನೇಶ್ ಕೆಲಸದ ಒತ್ತಡದಿಂದಾಗಿ ಈ ರೀತಿ ಆಯ್ತಾ ಅಂತ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ದಲಿತ ನಾಯಕರ ಹೆಸರನ್ನು ಸಿಎಂ ಎಂದು ಘೋಷಿಸಲಿ: ಸಚಿವ ಬಿ.ಶ್ರೀರಾಮುಲು ಸವಾಲು!

ಇನ್ನೂ ಬರು ಬರುತ್ತಾ ಬೆಂಗಳೂರು ಹೊರವಲಯ ವೇಗವಾಗಿ ಬೆಳೆಯುತ್ತಿದೆ. ಅದ್ರಲ್ಲು ಆನೇಕಲ್ ತಾಲ್ಲೂಕಿನಲ್ಲಿ ಕೂಡ ಜನಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ಐಟಿ ಬಿಟಿ ಹಬ್, ಇಂಡಸ್ಟ್ರೀಯಲ್ ಏರಿಯಾಗಳು ದಿನೇ‌ದಿನೇ ಬೆಳೆಯುತ್ತಿರುವ ಪರಿಣಾಮ ಬಹಳಷ್ಟು ಜನ ವಲಸೆ ಬಂದು ಇಲ್ಲಿ ‌ನೆಲೆಸುತ್ತಿದ್ದಾರೆ.‌ ಸ್ವಾಭಾವಿಕವಾಗಿ ಏರಿಯಾಗಳು ಬೆಳೆದಂತೆ ಕ್ರೈಂ ಕೂಡ ಬೆಳೆಯುತ್ತಿದೆ. ಆದರೆ ಇದನ್ನು ಆನೇಕಲ್ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ನಿಭಾಯಸಲು ಬೇಕಾದ ಅರಕ್ಷರ ಸಂಖ್ಯೆ ತೀರಾ ಕಡಿಮೆ ಇದೆ. ಆನೇಕಲ್ ಭಾಗದ ಪ್ರತಿ ಪೊಲೀಸ್ ಠಾಣೆಯಲ್ಲೂ ಶೇಕಡಾ‌50 ರಿಂದ 60 ರಷ್ಟು ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಪೊಲೀಸರು ಅತ್ಯಂತ ಕಷ್ಟದ ಸನ್ನಿವೇಶದಲ್ಲಿಯು ಒತ್ತಡದಿಂದ ಅನಿವಾರ್ಯವಾಗಿ ಕೆಲಸ ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದಾರೆ.

ಅಂದಹಾಗೆ ಅತಿಯಾದ ಒತ್ತಡ,‌ ಆರೋಗ್ಯದ ಕಡೆ ‌ಗಮನ ಕೊಡದೇ ರಾತ್ರೀ ಪಾಳಿಯಲ್ಲಿ ಮಳೆ ಚಳಿ ಎನ್ನದೇ ಕೆಲಸದ ಪರಿಣಾಮ ದಿನೇಶ್ ರವರಿಗೆ ಮುಳುವಾಯ್ತಾ ಎನ್ನುವ ಮಾತು ಇದೆ. ಇದು ಕೇವಲ ಕಾನ್ಸಟೇಬಲ್ ಗಳಿಗೆ ಮಾತ್ರವಲ್ಲ ಅಧಿಕಾರಿಗಳಿಗು ಸಹ ಇದೇ ಪರಿಸ್ಥಿತಿ ಇದೇ. ಆದರೂ ಜನ ಶಾಂತಿಯುತವಾಗಿ ಜೀವನ ಸಾಗಿಸಲು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜಾವಾಬ್ದಾರಿ ಮಾತ್ರ ಅಧಿಕಾರಿಗಳ ಮೇಲಿದೆ.

ಇದನ್ನೂ ಓದಿ: ಪ್ರತಿ ರಾಜ್ಯದಲ್ಲಿ ಏಮ್ಸ್ ನಿರ್ಮಿಸಲು ಪ್ರಧಾನಿ ಮೋದಿ ಸರ್ಕಾರ ಕ್ರಮ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಒಟ್ನಲ್ಲಿ ಶಿಸ್ತಿಗೆ ಇಲಾಖೆ ಎಂದೇ ಹೆಸರಾದ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ  ಪೊಲೀಸರು ತಮಗಾಗುವ ನೋವುಗಳನ್ನು ಹೇಳಿಕೊಳ್ಳೋದಕ್ಕೆ ಯಾವ ವೇದಿಕೆ ಇಲ್ಲ. ಹತ್ತಾರು ಸಮಸ್ಯೆಗಳಿದ್ದರು ಪ್ರತಿದಿನ ಬದುಕಿನಲ್ಲಿ ತಮ್ಮವರನ್ನು ಬಿಟ್ಟು ದಿನದ 24‌ಗಂಟೆ ಜನಸೇವೆ ಮಾಡುತ್ತಿರುವ ಪೊಲೀಸರಿಗೆ ರಜೆ ಸೇರಿದಂತೆ ಇನ್ನಷ್ಟು ಸಿಬ್ಬಂದಿ ನೀಡುವ ಮೂಲಕ ಗೃಹ ಇಲಾಖೆ ಬಡಪಾಯಿ ಪೊಲೀಸರಿಗೆ ನೆರವಾಗಬೇಕಿದೆ.

ವರದಿ : ಆದೂರು ಚಂದ್ರು.
Published by:Sandhya M
First published: