HOME » NEWS » District » POLICE INSPECTOR SUSPENDED FOR DELAYING FILING CHARGE SHEET ON SEDITION CASE RH

ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ; ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬ ಮಾಡಿದ್ದ ಇನ್ಸ್​ಪೆಕ್ಟರ್ ಅಮಾನತು

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಿ ತನಿಖೆ ಆರಂಭಿಸಲಾಗಿದೆ. ಪೊಲೀಸರ ಕರ್ತವ್ಯ ಲೋಪದ ಕುರಿತು ಗದಗ ಡಿವೈಎಸ್‌ಪಿ ತನಿಖೆ ನಡೆಸಲಿದ್ದಾರೆ.

news18-kannada
Updated:June 12, 2020, 10:05 AM IST
ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ; ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬ ಮಾಡಿದ್ದ ಇನ್ಸ್​ಪೆಕ್ಟರ್ ಅಮಾನತು
ಅಮಾನತಾದ ಪೊಲೀಸ್ ಇನ್ಸ್​ಪೆಕ್ಟರ್ ಜಾಕ್ಸನ್ ಡಿಸೋಜಾ
  • Share this:
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಲು ವಿಳಂಬ ಮಾಡಿದ್ದ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಲಾಗಿದೆ. 

ಪೊಲೀಸರ ನಿರ್ಲಕ್ಷದಿಂದಾಗಿ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿಗಳು ಜಾಮೀನಿನ ಮೇಲೆ ಅನಾಯಾಸವಾಗಿ ಬಿಡುಗಡೆ ಆಗಿದ್ದರು. ತನಿಖಾಧಿಕಾರಿಗಳು ನಿಯಮದಂತೆ 90 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾ 90 ದಿನಗಳಲ್ಲಿ ಜಾರ್ಜ್‌ಶೀಟ್ ಸಲ್ಲಿಸಲು ವಿಫಲರಾಗಿದ್ದರು. ಆರೋಪ ಪಟ್ಟಿ ಸಲ್ಲಿಸಲು ವಿಳಂಬವಾದ ಕಾರಣ ಹುಬ್ಬಳ್ಳಿಯ ಎರಡನೆಯ ಜೆಎಮ್‌ಎಫ್‌ಸಿ ನ್ಯಾಯಾಲಯ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸಿಆರ್‌ಪಿಸಿ 167(2) ಅಡಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮೂವರು ಆರೋಪಿಗಳು ಜಾಮೀನು ಪಡೆದು ಹಿಂಡಲಗಾ ಜೈಲಿಂದ ಬಿಡುಗಡೆಯಾಗಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಕಾಶ್ಮೀರದ ತಾಲಿಬ್, ಆಮಿರ್, ಬಾಸಿತ್‌‌ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ದೇಶದ್ರೋಹದ ಆರೋಪಿಗಳು ಬಿಡುಗಡೆ ಆಗಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಪೊಲೀಸರ ಬೇಜವಾಬ್ದಾರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿವಿಧ ಸಂಘಟನೆಗಳ ಮುಖಂಡರು, ಜನ ಪ್ರತಿನಿಧಿಗಳು ಮತ್ತು ಜನ ಸಾಮಾನ್ಯರು ಪೊಲೀಸರ ವಿರುದ್ಧ ಟೀಕಿಸಿದ್ದರು‌. ತಕ್ಷಣ ಎಚ್ಚೆತ್ತ ಐಜಿಪಿ ರಾಘವೇಂದ್ರ ಸುಹಾಸ್ ಅವರು ಕಾಶ್ಮೀರಿಗಳ ಬೇಲ್ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಇದನ್ನು ಓದಿ: ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹೊಸ ನೇಮಕಕ್ಕೆ ಬ್ರೇಕ್ ; ಆರ್ಥಿಕ ಇಲಾಖೆ ಆದೇಶ

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಾಕ್ಸನ್ ಡಿಸೋಜಾರನ್ನು ಅಮಾನತು ಮಾಡಿ ತನಿಖೆ ಆರಂಭಿಸಲಾಗಿದೆ. ಪೊಲೀಸರ ಕರ್ತವ್ಯ ಲೋಪದ ಕುರಿತು ಗದಗ ಡಿವೈಎಸ್‌ಪಿ ತನಿಖೆ ನಡೆಸಲಿದ್ದಾರೆ.
First published: June 12, 2020, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories