ಕೊಲೆ ಆರೋಪಿ ಮದುವೆಯಲ್ಲಿ ಪೋಲೀಸರೇ ಗೆಸ್ಟ್, ಸಮವಸ್ತ್ರ ಧರಿಸಿ ಫೋಟೋಗೆ ಪೋಸ್ ಕೊಟ್ಟವರಿಗೆ ಕಡ್ಡಾಯ ರಜೆ !

ಯಲ್ಲಾಲಿಂಗ ಎನ್ನುವ ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ರೈಲ್ವೆ ಟ್ರ್ಯಾಕ್ ಮೇಲೆ ಎಸೆದು ಆತ್ಮಹತ್ಯೆ ಎನ್ನುವಂತೆ ಬಿಂಬಿಸಿದ್ದು ವಿಚಾರಣೆ ಮುಂದುವರೆದಿದೆ. ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಮದುವೆಯಾಗಿದ್ದು ಆತನ ಮದುವೆಗೆ ಪೋಲೀಸ್ ಇಲಾಖೆಯ ಅನೇಕರು ಸಮವಸ್ತ್ರ ತೊಟ್ಟು ಭೇಟಿಕೊಟ್ಟಿದ್ದಾರೆ. ನಗುತ್ತಾ ಫೋಟೋಗೆ ಪೋಸ್ ಕೊಟ್ಟವರನ್ನು ಡಿವೈಎಸ್ಪಿ ಕಡ್ಡಾಯ ರಜೆ ಮೇಲೆ ಮನೆಗೆ ಕಳಿಸಿದ್ದಾರೆ.

ಆರೋಪಿಯ ಮದುವೆಯಲ್ಲಿ ಪೋಲೀಸರ ಹಾಜರಿ

ಆರೋಪಿಯ ಮದುವೆಯಲ್ಲಿ ಪೋಲೀಸರ ಹಾಜರಿ

  • Share this:
ಕೊಪ್ಪಳ(ಜುಲೈ 20): ರಾಜ್ಯದಲ್ಲಿ ಅತಿ ಹೆಚ್ಚು ಸದ್ದು‌ ಮಾಡಿದ್ದ ಕನಕಾಪುರದ ಯಲ್ಲಾಲಿಂಗ ಕೊಲೆ ಪ್ರಕರಣ, ಅಂದು ಕೊಲೆಯನ್ನು ಹುಲಿಹೈದರದ ಮಹಾಂತೇಶ ನಾಯಕ, ಹನುಮೇಶ ನಾಯಕ ಸೇರಿ 9 ಜನರ ಮೇಲೆ ಪ್ರಕರಣ ದಾಖಲಾಗಿ ನ್ಯಾಯಾಂಗ ವಶದಲ್ಲಿದ್ದರು, ಅವರು ಈಗ ಜಾಮೀನಿನ ಮೇಲೆ ಹೊರ ಬಂದಿದ್ದು ಪ್ರಮುಖ ಆರೋಪಿಯ ಮದುವೆಗೆ ಗಂಗಾವತಿಯ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು, ಅಧಿಕಾರಿಗಳು ಮದುವೆಯಲ್ಲಿ ಡ್ರೆಸ್ ನೊಂದಿಗೆ ಭಾಗಿಯಾಗಿರುವ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು, ಇದು ಪೊಲೀಸ್ ಇಲಾಖೆಗೆ ಮುಜುಗರ ತರುವಂತೆ ಮಾಡಿದ್ದರಿಂದ ಮದುವೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ತಕ್ಷಣದಿಂದ ಕಡ್ಡಾಯ ರಜೆ ಮೇಲೆ ಹೋಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.

2015 ಜನವರಿ 11 ರಂದು ಕನಕಗಿರಿ ತಾಲೂಕಿನ ಕನಕಾಪುರದ ಯಲ್ಲಾಲಿಂಗ ಎಂಬ ವಿದ್ಯಾರ್ಥಿ ಯನ್ನು ಕೊಲೆ ಮಾಡಿ ಕೊಪ್ಪಳ ರೈಲು ನಿಲ್ದಾಣದ ಬಳಿಯ ಹಳಿಯ ಮೇಲೆ ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿತ್ತು, ಆದರೆ ಕುಟುಂಬದವರಯ ಹಾಗು ಪ್ರಗತಿಪರ ಸಂಘಟನೆಯವರ ಮನವಿಯ ಮೇರಿಗೆ ಅಂದಿನ ಪೊಲೀಸರು ತನಿಖೆ ಮಾಡಿದಾಗ ಇದು ಕೊಲೆ ಎಂದು ಕೊಲೆಯಲ್ಲಿ ಕಾಂಗ್ರೆಸ್ ಮುಖಂಡ ಹನುಮೇಶ ನಾಯಕ ಪುತ್ರ ಮಹಾಂತೇಶ ನಾಯಕ ಹಾಗು ಇತರ 9 ಜನರು ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ 9 ಜನರನ್ನು ಬಂಧಿಸಿ ನ್ಯಾಯಾಂಗ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: CM BSY: ಆಗಸ್ಟ್ 15ರ ಮುಂಚೆಯೇ ಸಿಎಂ ಬಿಎಸ್​ವೈ ರಾಜೀನಾಮೆ? ವಿಧಾನಸೌಧದ ಪಡಸಾಲೆಯಲ್ಲಿ ಏನಿದು ಗುಸುಗುಸು?

ಕನಕಾಪುರದ ಯಲ್ಲಾಲಿಂಗ ತಮ್ಮ ಗ್ರಾಮದ ಸಮಸ್ಯೆ ಕುರಿತು ಸ್ಥಳೀಯ ಚಾನೆಲ್ ಗೆ ಹೇಳಿಕೆ ನೀಡಿದ್ದರು, ಇದರಿಂದ ಕುಪಿತಗೊಂಡ ಮಹಾಂತೇಶ ನಾಯಕ ಹಾಗು ತಂಡ ಯಲ್ಲಾಲಿಂಗ ಕೊಲೆ ಮಾಡಿದ್ದರು, ಇದೇ ಸಂದರ್ಭದಲ್ಲಿ ಈ ಕೊಲೆಯಿಂದ ಪರಾಗಲು , ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದ ನಂತರ ರಾಜ್ಯದಾದ್ಯಂತ ಹೆಚ್ಚು ಚರ್ಚೆಯಾಗಿತ್ತು, ಇಂಥ ಪ್ರಕರಣದ ಆರೋಪಿಯ ಮದುವೆಯಲ್ಲಿ ಭಾಗಿಯಾಗಿರುವುದು ಪೊಲೀಸರಲ್ಲಿ ಮುಜಗರ ತರುತ್ತಿದೆ, ಸುಮಾರು 2 ವರ್ಷ ವಿಚಾರಣಾಧಿನ ಕೈದಿಗಳಾಗಿದ್ದವರು ಇತ್ತೀಚಿಗೆ ಜಾಮೀನನ ಮೇಲೆ ಬಿಡುಗಡೆಗೊಂಡಿದ್ದಾರೆ, ಇನ್ನೂ ವಿಚಾರಣೆ ನಡೆಯುತ್ತಿರುವಾಗ ಹಿರಿಯ ಪೊಲೀಸ್ ಅಧಿಕಾರಿಯಾದ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜನಕೊಪ್ಪ, ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ಹಾಗು ಕನಕಗಿರಿ ಪಿಎಸ್ಐ ತಾರಾಬಾಯಿ ಪವಾರ ಭಾಗಿಯಾಗಿದ್ದರು, ಪೊಲೀಸ್ ಯೂನಿಫಾರ್ಮ್ ಧರಿಸಿಯೇ ಭಾಗಿಯಾಗಿ, ಮದುವೆಯಲ್ಲಿ ಫೋಟೊಕ್ಕೆ ಫೋಸು ನೀಡಿದ್ದರು.

ಜುಲೈ 18 ರಂದು ಮಹಾಂತೇಶ ನಾಯಕ ಮದುವೆಯು ಹುಲಿಹೈದರದಲ್ಲಿ ನಡೆಯಿತು, ಈ ಮದುವೆಯು ಅದ್ದೂರಿಯಾಗಿ ನಡೆಯಿತು, ಈ ಸಂದರ್ಭದಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದರು, ಇದೇ ಸಂದರ್ಭದಲ್ಲಿ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜನಿಕೊಪ್ಪ, ಗಂಗಾವತಿ ಗ್ರಾಮೀಣ ಠಾಣೆಯ ಉದಯರವಿ ಹಾಗು ಕನಕಗಿರಿ ಪಿಎಸ್ಐ ತಾರಾಬಾಯಿ ಭಾಗಿಯಾಗಿದ್ದರು, ಈ ಬಗ್ಗೆ ಸಾಕಷ್ಟು ಚರ್ಚೆ ನಡೆದು ಪೊಲೀಸರ ನೈತಿಕತೆಯ ಬಗ್ಗೆ ಪ್ರಶ್ನಿಸಿದ್ದರು.ಇದು ಪೊಲೀಸರಿಗೆ ಮುಜಗರ ತರುವಂತೆ ಮಾಡಿತ್ತು, ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ ಶ್ರೀಧರ ತಕ್ಷಣದಿಂದ ಮೂರು ಜನರು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶಿದ್ದಾರೆ, ಇದರ ನಂತರ ಎಸ್ಪಿಯವರ ನೇತ್ರತ್ವದಲ್ಲಿ ತನಿಖೆ ನಡೆಯಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: