HOME » NEWS » District » POLICE DTP WATCH AT CHIKMAGALUR HOME STAY AND RESORT MAK

ಡ್ರಗ್ಸ್‌ ಜಾಲ: ಕಾಫಿನಾಡು ಚಿಕ್ಕಮಗಳೂರಿನ ಹೋಂ ಸ್ಟೇ, ರೆಸಾರ್ಟ್ ಮೇಲೆ ಖಾಕಿ ನಿಗಾ!

ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಮಾದಕ ವಸ್ತುಗಳನ್ನ ಕಂಪ್ಲೀಟ್ ಆಗಿ ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಪೊಲೀಸರು, ಒಂದು ವೇಳೆ ಈ ಬಗ್ಗೆ ಸುಳಿವು ನೀಡಿದ್ರೆ ಸೂಕ್ತ ಬಹುಮಾನ ನೀಡುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಬಂಪರ್‌ ಅವಕಾಶ ನೀಡಿದ್ದಾರೆ.

news18-kannada
Updated:September 15, 2020, 10:09 PM IST
ಡ್ರಗ್ಸ್‌ ಜಾಲ: ಕಾಫಿನಾಡು ಚಿಕ್ಕಮಗಳೂರಿನ ಹೋಂ ಸ್ಟೇ, ರೆಸಾರ್ಟ್ ಮೇಲೆ ಖಾಕಿ ನಿಗಾ!
ಚಿಕ್ಕಮಗಳೂರು ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ.
  • Share this:
ಚಿಕ್ಕಮಗಳೂರು : ಕಾಫಿನಾಡಿನ ಪೊಲೀಸರು ಈಗ ಮತ್ತಷ್ಟು ಅಲರ್ಟ್ ಆಗಿದ್ದಾರೆ. ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪಣ ತೊಟ್ಟಿರುವ ಪೊಲೀಸರು ಇದೀಗ ಹೋಂ ಸ್ಟೇ, ರೆಸಾರ್ಟ್ ಮೇಲೆ ನಿಗಾ ಇಟ್ಟಿದ್ದಾರೆ. ಅಷ್ಟಕ್ಕೂ ಹೀಗೆ ಪೊಲೀಸರು ಏಕಾಏಕಿ ಪ್ರವಾಸಿಗರು ಉಳಿದುಕೊಳ್ಳುವ ಸ್ಥಳಗಳ ಮೇಲೆ ಕಣ್ಣಿಟ್ಟಿದ್ದೇಕೆ..? ಸ್ವತಃ ಪೊಲೀಸ್ ಮಹಾನಿರ್ದೇಶಕರೇ ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ವಾರ್ನ್ ಮಾಡಿದ್ದೇಕೆ..? ಅಂತೀರಾ..? ಇತ್ತೀಚಿಗೆ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಘಮಲು ಕೇಳಿಬರ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೂ ಕೂಡ ಮಾಹಿತಿ ಲಭ್ಯವಾಗಿದೆ. ಲಾಕ್ ಡೌನ್ ಫ್ರೀ ಮಾಡಿದ್ಮೇಲಂತೂ ಕಾಫಿನಾಡಿಗೆ ಲಗ್ಗೆಯಿಡುವ ಪ್ರವಾಸಿಗರ ಸಂಖ್ಯೆ ದುಪ್ಪಟಾಗಿದೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಅದರಲ್ಲೂ ವೀಕೆಂಡ್ ನಲ್ಲಂತೂ ಪ್ರವಾಸಿಗರ ಸಂಖ್ಯೆಗೆ ಲೆಕ್ಕನೇ ಇಲ್ಲ. ಹೀಗೆ ಗುಂಪು ಗುಂಪಾಗಿ ಬರುವ ಪ್ರವಾಸಿಗರು ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿ ಎಂಜಾಯ್ ಮಾಡ್ತಾರೆ. ಕೇವಲ ಎಂಜಾಯ್ ಮಾಡ್ಕೊಂಡ್ ಹೋದ್ರೆ ನೋ ಟೆನ್ಷನ್, ಆದ್ರೆ ಹೀಗೆ ಕಾಫಿನಾಡಿನಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಾರೆ ಅನ್ನೋ ಗಂಭೀರ ಆರೋಪವಿದೆ.

ಈಗಂತೂ ಸ್ಯಾಂಡಲ್ ವುಡ್ ಸೇರಿದಂತೆ ರಾಜ್ಯದ ಹಲವೆಡೆ ಪೊಲೀಸ್ರು ಮಾದಕ ವ್ಯಸನಿಗಳ ವಿರುದ್ದ ಹಾಗೂ ಆ ವಸ್ತುಗಳನ್ನ ಪೂರೈಕೆ ಮಾಡುವವರ ವಿರುದ್ಧ ಬಲೆ ಬೀಸುತ್ತಲೇ ಇದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಪೊಲೀಸ್ರು ಮತ್ತಷ್ಟು ಅಲರ್ಟ್ ಆಗಿದ್ದು ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಸೇವನೆ, ಪೂರೈಕೆ ಬಗ್ಗೆ ಸ್ವಲ್ಪ ಸುಳಿವು ಸಿಕ್ರೂ ಹಬ್ಬ ಮಾಡುವುದಾಗಿ ತಿಳಿಸಿದ್ದಾರೆ.

ಅಂದಾಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 700-800 ಹೋಂ ಸ್ಟೇ, ರೆಸಾರ್ಟ್ ಗಳಿದ್ದು ಅವುಗಳಲ್ಲಿ 400ರಷ್ಟು ಮಾತ್ರ ಲೈಸೆನ್ಸ್ ಪಡೆದುಕೊಂಡು ವ್ಯವಹಾರ ನಡೆಸ್ತಿವೆ. ಕಾಫಿ ತೋಟ, ಕಾಡಿನಂಚಿನಲ್ಲಿರುವ ಹೋಂ ಸ್ಟೇ, ರೆಸಾರ್ಟ್ಗಳಿಗೆ ಭಾರೀ ಡಿಮ್ಯಾಂಡ್ ಇದ್ದು ಪ್ರವಾಸಿಗರು ಅಂತಹ ಸ್ಥಳಗಳನ್ನ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಹೋಂ ಸ್ಟೇ, ರೆಸಾರ್ಟ್ ಮಾಲೀಕರ ಜೊತೆ ಸಭೆ ಕೂಡ ನಡೆಸಿ ವಾರ್ನಿಂಗ್ ಕೂಡ ನೀಡಿದ್ದಾರೆ. ಕಾನೂನು ಬಾಹಿರವಾದ ಯಾವುದೇ ಕೃತ್ಯಗಳು ಕಂಡುಬಂದ್ರೂ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ. ರೆಸಾರ್ಟ್, ಹೋಂ ಸ್ಟೇ ಮಾಲೀಕರು ಕೂಡ ಇದಕ್ಕೆ ಸಾಥ್ ನೀಡಿದ್ದು ನಾವು ಕಾನೂನು ರೀತಿ ವ್ಯವಹಾರ ಮಾಡಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ‘ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಮಾದಕ ವಸ್ತುಗಳನ್ನ ಕಂಪ್ಲೀಟ್ ಆಗಿ ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಪೊಲೀಸರು, ಒಂದು ವೇಳೆ ಈ ಬಗ್ಗೆ ಸುಳಿವು ನೀಡಿದ್ರೆ ಸೂಕ್ತ ಬಹುಮಾನ ನೀಡುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಬಂಪರ್‌ ಅವಕಾಶ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಿಂದ ಜಿಲ್ಲೆಗೆ ಬಂದು ಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರವೀಣ್ ಸೂದ್ ಹಿಂದಿರುಗಿದ್ದಾರೆ. ರಾಜ್ಯಾದ್ಯಂತ ಡ್ರಗ್ಸ್ ಸೇರಿ ಮಾದಕ ವಸ್ತುಗಳನ್ನ ಮಟ್ಟ ಹಾಕಲು ಪೊಲೀಸ್ರು ಎಚ್ಚರ ವಹಿಸುತ್ತಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಕೂಡ ಖಾಕಿ ಮಾದಕ ವಸ್ತುಗಳ ಸಾಗಾಟ, ಮಾರಾಟ ಮಾಡೋ ಜಾಲವನ್ನ ಹೆಡಮುರಿ ಕಟ್ಟಲು ಪಣ ತೊಟ್ಟಿದೆ.
Published by: MAshok Kumar
First published: September 15, 2020, 10:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories