ಚಿತ್ರದುರ್ಗ ಪೊಲೀಸ್ ಪೇದೆ ಸೇರಿ ಹೋಟೇಲ್ ಯುವಕನಿಗೂ ಕೊರೋನಾ: ಇಬ್ಬರ ಸಂಪರ್ಕದಿಂದ ಜಿಲ್ಲೆಯ ಜನರಲ್ಲಿ‌ ಆತಂಕ

ಇಷ್ಟು ದಿನ ಹೊರ ರಾಜ್ಯ, ಹಾಗೂ ಜಿಲ್ಲೆ ಗಳಿಂದ ಬಂದವರಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್  ಇತ್ತೀಚೆಗೆ ಸದ್ದಿಲ್ಲದೆ ಜಿಲ್ಲೆಯಲ್ಲಿ ಹರಡಲು ಪ್ರಾಂಭಿಸಿದೆ.

news18-kannada
Updated:July 11, 2020, 10:20 AM IST
ಚಿತ್ರದುರ್ಗ ಪೊಲೀಸ್ ಪೇದೆ ಸೇರಿ ಹೋಟೇಲ್ ಯುವಕನಿಗೂ ಕೊರೋನಾ: ಇಬ್ಬರ ಸಂಪರ್ಕದಿಂದ ಜಿಲ್ಲೆಯ ಜನರಲ್ಲಿ‌ ಆತಂಕ
ಸಾಂದರ್ಭಿಕ ಚಿತ್ರ
  • Share this:
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮಹಾ ಮಾರಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚತಲೇ ಇದೆ. ಜಿಲ್ಲೆಯಲ್ಲಿ ಬಂದಿರುವ ವರದಿಯಲ್ಲಿ ಓರ್ವ ಬೀದಿ ಬದಿ ಹೋಟೆಲ್ ಯುವಕ ಸೇರಿದಂತೆ ಓರ್ವ ಪೋಲೀಸ್ ಪೇದೆಗೂ ಮಹಾ ಮಾರಿ ಸೋಂಕು ತಗುಲಿದ್ದು ಜಿಲ್ಲೆಯ ಜನರಿಗೆ ಮತ್ತಷ್ಟು ಆತಂಕ ಹೆಚ್ಚು ಮಾಡಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರೆಗೆ 98 ಜನರಿಗೆ ಕೊರೋನಾ ಪಾಸೀಟೀವ್ ಕಂಡು ಬಂದಿದ್ದು, ಅದರಲ್ಲಿ 79 ಜನರು ಕೋರೋನಾದಿಂದ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಉಳಿದಂತೆ 19 ಜನ ಸೋಂಕಿತರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸದ್ಯದ ಆತಂಕ ಎಂದರೇ ಕರ್ತವ್ಯ ನಿರತ ಪೊಲೀಸ್ ಪೇದೆಗೆ ಹಾಗೂ ಹೋಟೆಲ್ ಯುವಕನಿಗೆ ಕೊರೋನಾ ಸೋಂಕು ದೃಡಪಟ್ಟಿರವ ಪ್ರಕರಣ.

Delhi Coronavirus Updates: ದೆಹಲಿಯಲ್ಲಿ ಕೋವಿಡ್​​-19 ಕಾವು: ಒಂದೇ ದಿನ 2,089 ಕೇಸ್​​​, 1.10 ಲಕ್ಷದ ಗಡಿ ಸಮೀಪಿಸಿದ ಸೋಂಕಿತರ ಸಂಖ್ಯೆ

ಯಾಕೆಂದತೆ, 38 ವರ್ಷದ ಪೊಲೀಸ್ ಮುಖ್ಯ ಪೇದೆ  ಅನಾರೋಗ್ಯಕ್ಕೆ ತುತ್ತಾದ ಬಳಿಕವೂ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಮೂಲತಃ ಚಳ್ಳಕೆರೆ ಪಟ್ಟಣದ ಗಾಂಧಿ ನಗರ ಬಡವಣೆ ನಿವಾಸಿಗಳಾಗಿದ್ದು, ಜು.1 ರಂದು ಕರ್ತವ್ಯದಲ್ಲಿದ್ದಾಗಲೇ ಕೆಮ್ಮು ನೆಗಡಿ ಜ್ವರ ಕಾಣಿಸಿಕೊಂಡಿದೆ. ಇಲ್ಲಿಂದ ಜುಲೈ 03ರ ವರೆಗೆ ಕೆಲಸಕ್ಕೆ ಹಾಜರಾಗಿದ್ದಾರೆ.

ಅಲ್ಲದೇ ಕೆಮ್ಮು ನೆಗಡಿ ಜ್ವರ ಕಡಿಮೆಯಾಗದ ಹಿನ್ನೆಲೆ ಜು.04ರಂದು ಚಳ್ಳಕೆರೆ ನಗರದ ಮನೆಗೆ ಬಂದು ಬಳಿಕ ಜು.04 ಮತ್ತು 05ರಂದು ಚಳ್ಳಕೆರೆ ಪಟ್ಟಣದ ದ್ವಾರಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದ ಬಳಿಕವೂ ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆ ಜುಲೈ 08ರಂದು ಚಿತ್ರದುರ್ಗ ನಗರದ ಕೌಸರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ಖಾಸಗಿ ಆಸ್ಪತ್ರೆ ವೈದ್ಯರ ಸಲಹೆಯಂತೆ ಅದೇ ದಿನ ಜಿಲ್ಲಾಸ್ಪತ್ರೆ ಕೋವಿಡ್ ಸೆಂಟರ್​ನಲ್ಲಿ ಗಂಟಲು ದ್ರವದ ಮಾದರಿ ನೀಡಿ ಪರೀಕ್ಷೆ ಮಾಡಿದ್ದು,  ಕೋವಿಡ್  ಪ್ರಯೋಗಾಲಯದ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿದೆ.

ಇವರಿಗೆ ಕೊರೋನಾ ಸೋಂಕು ಕಂಡಿದ್ದರಿಂದ  ಕುಟುಂಬದ ಐವರು ಸದಸ್ಯರು ಕ್ವಾರೆಂಟೈನ್ ಮಾಡಲಾಗಿದ್ದು, ಇವರ ಈ ಓಡಾಟದ ನಡುವೆ ಎಷ್ಟು ಜನ ಪೊಲೀಸ್ ಪೇದೆಗಳು, ಆಫೀಸರ್ ಗಳು ಮತ್ತು ಸಾರ್ವಜನಿಕರು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂಬುದನ್ನ ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಸಲಾಗಿದೆ. ಇನ್ನೂ ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಕೂಡಾ ಮಾಡಲಾಗಿದೆ.

Coronavirus Updates: ವಿಶ್ವಾದ್ಯಂತ 1 ಕೋಟಿ 25 ಲಕ್ಷ ಮಂದಿಗೆ ಕೊರೋನಾ​​; ಸಾವಿನ ಸಂಖ್ಯೆ 5.59 ಲಕ್ಷಕ್ಕೆ ಏರಿಕೆ

ಇಷ್ಟು ದಿನ ಹೊರ ರಾಜ್ಯ, ಹಾಗೂ ಜಿಲ್ಲೆ ಗಳಿಂದ ಬಂದವರಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್  ಇತ್ತೀಚೆಗೆ ಸದ್ದಿಲ್ಲದೆ ಜಿಲ್ಲೆಯಲ್ಲಿ ಹರಡಲು ಪ್ರಾಂಭಿಸಿದೆ. ಇದರಿಂದ ಗ್ರಾಮೀಣ ಭಾಗದ ಪ್ರದೇಶದ ಜನರು ಎಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಾರೆಯೋ, ಅದು ಸುದಾಯಕ್ಕೆ ಹರಡಿದರೆ ಗತಿ ಏನು ಎಂಬುದು ಎಲ್ಲರನ್ನು ಕಾಡುವ ಪ್ರಶ್ನೆಯಾಗಿದೆ.
Published by: Vinay Bhat
First published: July 11, 2020, 10:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading