• Home
  • »
  • News
  • »
  • district
  • »
  • Corona Lockdown: ಲಾಕ್​ಡೌನ್​ನಲ್ಲಿ ರೋಡ್ ಖಾಲಿ ಇದೆ ಎಂದು ಕ್ರಿಕೆಟ್ ಆಡ್ತಿದ್ದ 46 ಜನರ ವಿರುದ್ಧ ಕೇಸ್ !

Corona Lockdown: ಲಾಕ್​ಡೌನ್​ನಲ್ಲಿ ರೋಡ್ ಖಾಲಿ ಇದೆ ಎಂದು ಕ್ರಿಕೆಟ್ ಆಡ್ತಿದ್ದ 46 ಜನರ ವಿರುದ್ಧ ಕೇಸ್ !

ಪ್ರಾತಿನಿಧಿಕ ಚಿತ್ರ .

ಪ್ರಾತಿನಿಧಿಕ ಚಿತ್ರ .

ಲಾಕ್ ಡೌನ್ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮಕ್ಕೆ ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದ ಮೈದಾನಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

  • Share this:

ಹುಬ್ಬಳ್ಳಿ: ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಗೊಳಿಸಿರೋ ಲಾಕ್ ಡೌನ್ 10 ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಕೊರೋನಾ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲ. ಲಾಕ್ ಡೌನ್ ಗೆ ಡೋಂಟ್ ಕೇರ್ ಅನ್ನೋ ರೀತಿಯಲ್ಲಿ ಜನ ವರ್ತಿಸ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರಿಗೂ ಆವಾಜ್ ಹಾಕ್ತಿರೋ ಘಟನೆಗಳು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿವೆ.


ವಕೀಲ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ವಾಹನ ತಪಾಸಣೆ ವೇಳೆ ಪೊಲೀಸರಿಗೆ ವಕೀಲ ಅವಾಜ್ ಹಾಕಿದ್ದಾರೆ. ಹುಬ್ಬಳ್ಳಿ ನಗರದ ಚೆನ್ನಮ್ಮ ವೃತ್ತದಲ್ಲಿ ವಾಹನ ತಪಾಸಣೆ ವೇಳೆ ವಕೀಲರೊಬ್ಬರು ಅವಾಜ್ ಹಾಕಿದ್ದಾರೆ. ನಗರದ ವಿವಿಧೆಡೆ ಪೊಲೀಸರು ಅನಾವಶ್ಯಕವಾಗಿ ಓಡಾಡ್ತಿರೋ ವಾಹನಗಳ ತಪಾಸಣೆ ಮಾಡಿ ಸೀಜ್‌ ಮಾಡುತ್ತಿದ್ದಾರೆ.


ಕಾರು ತಪಾಸಣೆ ವೇಳೆ ಏಕಾಏಕಿ ಪೊಲೀಸರ ಜೊತೆ ವಕೀಲ ವಾಗ್ವಾದಕ್ಕಿಳಿದಿದ್ದಾರೆ. ನಾನು ಧಾರವಾಡ ವಕೀಲರ ಸಂಘದ ಕಾರ್ಯದರ್ಶಿ ದೊಡ್ಡಮನಿ ಇದ್ದೇನೆ. ಬೇಕಾದ್ರೆ ನನ್ನ ಹೆಸರು ಬರೆದುಕೊಳ್ಳಿ‌ ಅಂತಾ ಅವಾಜ್ ಹಾಕಿದ್ದಾರೆ. ನಾನು ವಕೀಲರ ಸಂಘದ ಕಾರ್ಯದರ್ಶಿ ಏನ್ ಮಾಡಿಕೊಳ್ತೀರಿ. ಬೇಕಾದ್ರೆ ನನ್ನ ಹೆಸರು ಬರೆದುಕೊಳ್ಳಿ ಧಾರವಾಡದಲ್ಲಿ‌ ನೋಡಿಕೊಳ್ತೀನಿ ಎಂದು ವಕೀಲ ಪೊಲೀಸರಿಗೇ ಅವಾಜ್ ಹಾಕಿದ್ದಾರೆ. ನಂತರ ಕೆಲ ಪೊಲೀಸರು ವಕೀಲನಿಗೆ ಸಮಾಧಾನ ಮಾಡಿ ಕಳುಹಿಸಿದ್ದಾರೆ.


ಇದನ್ನೂ ಓದಿ: https://kannada.news18.com/news/state/bengaluru-urban-state-of-the-art-modular-icu-with-led-screen-in-kc-general-hospital-bengaluru-lets-covid-patients-virtually-meet-their-families-sktv-564967.html


ಇದೇ ವೇಳೆ ಇತರೆ ಸಾರ್ವಜನಿಕರೂ ಪೊಲೀಸರ ಜೊತೆ ವಾಗ್ವಾದ ನಡೆದ ಘಟನೆ ನಡೆದಿದೆ. ವಾಹನ ತಡೆದು ತಪಾಸಣೆ ಮಾಡುತ್ತಿರೋದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.


ಕ್ರಿಕೆಟ್ ಆಡ್ತಿದ್ದ 46 ಜನರ ವಿರುದ್ಧ ಪ್ರಕರಣ: ಲಾಕ್ ಡೌನ್ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮಕ್ಕೆ ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ. ನಿಯಮ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದ ಮೈದಾನಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಸಬಾ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ಜನರ ವಿರುದ್ಧ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರು ಜನರ ವಿರುದ್ಧ ಪ್ರಕರಣ, ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸಿದ 134 ಜನರ ವಿರುದ್ಧ ಪ್ರಕರಣ ದಾಖಲಿಸಿ, 33,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡದ 509 ಜನರ ವಿರುದ್ಧ ಪ್ರಕರಣ ದಾಖಲಿಸಿ, 1,01,800 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಅನಗತ್ಯವಾಗಿ ಅಡ್ಡಾಡ್ತಿದ್ದ 152 ವಾಹನಗಳ ಸೀಜ್ ಮಾಡಲಾಗಿದೆ. ಲಾಕ್ ಡೌನ್ ಜಾರಿಗೆ ಹುಬ್ಬಳ್ಳಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ತಿದಾರೆ.

Published by:Soumya KN
First published: