HOME » NEWS » District » POLICE ARRESTS A MAN FOR CHEATING WOMEN OF JEWELRIES WORTH 20 CRORES IN MANDYA RGM SNVS

ಚಿನ್ನದ ಮೇಲೆ ಬಡ್ಡಿ; ಮಂಡ್ಯದ ಬ್ಯಾಂಕ್ ಉದ್ಯೋಗಿ ಆಮಿಷಕ್ಕೆ ಕೋಟಿಗಟ್ಟಲೆ ಚಿನ್ನ ಕಳೆದುಕೊಂಡ ನಾರಿಯರು

ಅಡವಿಟ್ಟ ಚಿನ್ನಕ್ಕೆ ತಿಂಗಳಿಗೆ ಶೇ. 40 ಬಡ್ಡಿ ಕೊಡಿಸುವುದಾಗಿ ಆಮಿಷ ಒಡ್ಡಿ ಮಹಿಳೆಯರಿಂದ ಚಿನ್ನವನ್ನು ಲಪಟಾಯಿಸಿದ್ದ ಮಂಡ್ಯದ ಗುತ್ತಲು ಬಡವಾಣೆಯ ನಿವಾಸಿ ಸೋಮಶೇಖರ್​ನನ್ನು ಪೊಲೀಸರು ಬಂಧಿಸಿದ್ದಾರೆ.

news18-kannada
Updated:October 15, 2020, 4:10 PM IST
ಚಿನ್ನದ ಮೇಲೆ ಬಡ್ಡಿ; ಮಂಡ್ಯದ ಬ್ಯಾಂಕ್ ಉದ್ಯೋಗಿ ಆಮಿಷಕ್ಕೆ ಕೋಟಿಗಟ್ಟಲೆ ಚಿನ್ನ ಕಳೆದುಕೊಂಡ ನಾರಿಯರು
ಮಹಿಳೆಯರಿಗೆ ಚಿನ್ನದ ದೋಖಾ ಮಾಡಿದ ಆರೋಪಿ ಮಂಡ್ಯದ ಯುವಕ ಸೋಮಶೇಖರ್
  • Share this:
ಮಂಡ್ಯ: ಖತರ್ನಾಕ್ ವಂಚಕನೋರ್ವ ಮಹಿಳೆಯರಿಗೆ ಚಿನ್ನದ ಮೇಲೆ ಅಧಿಕ ಬಡ್ಡಿಯ ಆಸೆ ತೋರಿಸಿ ಕೆಜಿಗಟ್ಟಲೇ ಚಿನ್ನವಂಚಿಸಿರುವ ಘಟನೆ ಸಕ್ಕರೆ ನಾಡಿನಲ್ಲಿ ಬೆಳಕಿಗೆ ಬಂದಿದೆ. ವಂಚಕನ ವಂಚನೆಗೆ ಹಲವಾರು ಮಹಿಳೆಯರು ತಮ್ಮಲ್ಲಿದ್ದ ಚಿನ್ನ ವಾಪಸ್ ಕೊಡಿಸಿ ಎಂದು ಕಣ್ಣೀರು ಹಾಕ್ತಿದ್ದಾರೆ. ಖತರ್ನಾಕ್ ವಂಚಕ ತನ್ನ ವಂಚನೆಯಿಂದ ಹಲವಾರು ಮಹಿಳೆಯರಿಂದ ಬರೋಬ್ಬರಿ 20 ಕೋಟಿಗೂ ಹೆಚ್ಚಿನ ಮೌಲ್ಯದ ಚಿನ್ನವನ್ನು ಪಡೆದು ಯಾಮಾರಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ವಂಚಕನ ಹೆಸರು ಸೋಮಶೇಖರ್. ಈತ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರೋ ಈ ಫೆಡ್ ಬ್ಯಾಂಕ್​ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡ್ತಿದ್ದ‌. ಈ ಯುವಕ ನಯ ನಾಜೂಕಿನ ಮಾತುಗಳಿಂದ ಮಂಡ್ಯದಲ್ಲಿ ಹಲವಾರು ಮಹಿಳೆಯರಿಗೆ ತಮ್ಮ ಬ್ಯಾಂಕ್​ನಲ್ಲಿ ಚಿನ್ನ ಇಟ್ಟರೆ ಅಧಿಕ ಬಡ್ಡಿ ಕೊಡ್ತಾರೆಂದು ನಂಬಿಸಿದ್ದ. ನಮ್ಮಲ್ಲಿ ವಾರಕ್ಕೆ ಶೇ 10ರಷ್ಟು ಹಾಗೂ ತಿಂಗಳಿಗೆ ಶೇ 40% ಬಡ್ಡಿ ಕೊಡಿಸುವುದಾಗಿ ನಂಬಿಸಿದ್ದ. ಮಹಿಳೆಯರಿಂದ ಪಡೆದ ಚಿನ್ನವನ್ನು ಈತ ಬ್ಯಾಂಕ್​ನಲ್ಲಿ ಇಟ್ಟಿರುವುದಾಗಿ ಹೇಳಿ, ಕೆಲ ತಿಂಗಳ ಕಾಲ ಬಡ್ಡಿಯನ್ನೂ ಕೊಡುತ್ತಾ ಬಂದಿದ್ದ. ಇವನ ಮಾತನ್ನು ನಂಬಿದ್ದ ಹಲವಾರು ಮಹಿಳೆಯರು‌ ಈತನಿಗೆ ತಮ್ಮಲ್ಲಿದ್ದ ಚಿನ್ನವೆನ್ನಲ್ಲವನ್ನೂ ನೀಡುತ್ತಾರೆ.

ಇದನ್ನೂ ಓದಿ: ಮಾಸ್ಕ್ ಹಾಕದಿದ್ದರೆ ಸ್ಥಳದಲ್ಲೇ ಕೊರೋನಾ ಟೆಸ್ಟ್; ಸಾರ್ವಜನಿಕರಿಗೆ ಕೋಲಾರ ತಹಶೀಲ್ದಾರ್​ ಶೋಬಿತಾ ಎಚ್ಚರಿಕೆ

ಈತ ಮಹಿಳೆಯರಿಯಿಂದ ಬರೋಬ್ಬರಿ 20 ಕೋಟಿ ಮೌಲ್ಯದ ಕೆಜಿ ಗಟ್ಟಲೆ ಚಿನ್ನ ಸಂಗ್ರಹಣೆ ಮಾಡುತ್ತಾನೆ. ಅವ್ರಿಗೆಲ್ಲ ಕೆಲವು ತಿಂಗಳು ಬಡ್ಡಿ ನೀಡುವ ಈತ ಕೆಲ ತಿಂಗಳ ಬಳಿಕ ನಾಪತ್ತೆಯಾಗುತ್ತಾನೆ. ಈತನಿಗೆ ಚಿನ್ನ ಕೊಟ್ಟವರು ಈತನ ಮನೆಗೆ ಹೋಗಿ ವಿಚಾರಿಸುತ್ತಾರೆ. ಆತನ ಮನೆಯಲ್ಲಿದ್ದವರು ಸರಿಯಾಗಿ ಸ್ಪಂದಿಸುವುದಿಲ್ಲ. ಕಡೆಗೆ ಮಂಗಳಮುಖಿಯೊಬ್ಬರು ಪೊಲೀಸರಿಗೆ ದೂರು‌ ನೀಡಿದ್ರಿಂದ ಈ ವಂಚಕನ ಪ್ರಕರಣ ಬಯಲಿಗೆ ಬಂದಿದೆ. ತಾವು ಆ ಯುವಕನಿಂದ ವಂಚನೆಗೊಳದ ವಿಷಯ ತಿಳಿಯುತ್ತಿದ್ದಂತೆ ಇದೀಗ ಚಿನ್ನ ಕಳೆದುಕೊಂಡ ಮಹಿಳೆಯರು ಪೂರ್ವ ಪೊಲೀಸ್ ಠಾಣೆ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದು, ತಮ್ಮ ಚಿನ್ನ ಕೊಡಿಸಿಕೊಡಿ ಎಂದು ಕಣ್ಣೀರು ಹಾಕ್ತಿದ್ದಾರೆ.

ಇನ್ನು ಪ್ರಕರಣ ದಾಖಲಿಸಿಕೊಂಡ ಪೂರ್ವ ಠಾಣಾ ಪೊಲೀಸರು ದೂರುದಾರರಿಂದ ಮಾಹಿತಿ ಪಡೆದು ತಲೆ ಮರೆಸಿಕೊಂಡಿದ್ದ ಆರೋಪಿ ಸೋಮಶೇಖರ್​‌ನನ್ನು ಬಂಧಿಸಿದ್ದು, ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಬ್ಯಾಂಕ್ ನೌಕರನೆಂದು ವಂಚಿಸಿದ್ದು, ಈತನ ವಂಚನೆಗೆ ಮಂಡ್ಯ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷೆ ರಶ್ಮಿ ಕೂಡ ಸಿಲುಕಿ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದಾರೆ. ಈತನ ಮಾತು ನಂಬಿ  ಯಾವುದೇ ದಾಖಲೆ ಇಲ್ಲದೆ ಈತನಿಗೆ  ತಮ್ಮ ಚಿನ್ನವನ್ನು ನೀಡಿದ್ದಾರೆ. ಅಧಿಕ ಬಡ್ಡಿ ಆಸೆಗೆ ಇವರೆಲ್ಲರೂ ಇದೀಗ ಚಿನ್ನ‌ ಕಳೆದುಕೊಂಡಿದ್ದು, ಈ ಪ್ರಕರಣದ ಹಿಂದೆ ಮಂಡ್ಯ ನಗರದ ಶ್ರೀಮಂತ ವರ್ತಕನ ಸೊಸೆ ಭಾಗಿಯಾಗಿರೋ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಇಂಧನ ತಯಾರಿಯ ಯಶಸ್ವೀ ಪ್ರಯೋಗ; ದಕ್ಷಿಣ ಕನ್ನಡದ ವಿಟ್ಲದಲ್ಲಿ ಆರಂಭಗೊಂಡಿದೆ ಬಯೋ ಡೀಸೆಲ್ ಬಂಕ್

ಈತನ ಕೃತ್ಯ ತಿಳಿದು ಈತ ಕೆಲಸ ಮಾಡುತ್ತಿದ್ದ ಬ್ಯಾಂಕ್​ನವರು ಈತನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಈತ ಷೋಕಿಗಾಗಿ ತಾನು ಈ ಕೃತ್ಯ ಎಸಗಿರೋದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದು, ತಾನು ಮಹಿಳೆಯರಿಂದ ಪಡೆದ ಚಿನ್ನವನ್ನು ಬೇರೆಬೇರೆ ಫೈನಾನ್ಸ್​ನಲ್ಲಿ ಅಡವಿಟ್ಟಿರೋದಾಗಿ ತಿಳಿಸಿದ್ದಾನೆ. ಇದೀಗ ಪೊಲೀಸರು ಚಿನ್ನವನ್ನು ವಶಕ್ಕೆ ವಪಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿ ಆರೋಪಿಯಿಂದ ಮೋಸಕೊಳ್ಳದಾವರ ಚಿನ್ನ ಕೊಡಿಸುವ ಪ್ರಯತ್ನಿಸುವುದಾಗಿ ಎಸ್​ಪಿ ಪರಶುರಾಮ್ ತಿಳಿಸಿದ್ದಾರೆ‌.ಒಟ್ಟಾರೆ ಅಧಿಕ ಬಡ್ಡಿಯ ಆಸೆಗೆ ಬಿದ್ದ ಮಹಿಳೆಯರು ತಮ್ಮ ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ವಂಚಕನ ಮಾತು ನಂಬಿ ಆತನಿಗೆ  ಕೊಟ್ಟು ಇದೀಗ ಕಣ್ಣೀರು ಹಾಕ್ತಿದ್ದಾರೆ. ಇನ್ನಾದ್ರು ಮಹಿಳೆಯರು ಎಚ್ಚೆತ್ತು ಇಂತಹ ವಂಚಕರ ಆಸೆ ಆಮಿಷಗಳಿಗೆ ಒಳಗಾಗುವುದನ್ನು ಬಿಡಬೇಕಿದೆ.

ವರದಿ: ರಾಘವೇಂದ್ರ ಗಂಜಾಂ
Published by: Vijayasarthy SN
First published: October 15, 2020, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories