• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ವೀಕೆಂಡ್​ನಲ್ಲಿ ವೀಲಿಂಗ್ ಶೋಕಿ; 17 ಪುಂಡರನ್ನು ಬಂಧಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್

ವೀಕೆಂಡ್​ನಲ್ಲಿ ವೀಲಿಂಗ್ ಶೋಕಿ; 17 ಪುಂಡರನ್ನು ಬಂಧಿಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್

ಬೆಂಗಳೂರಿನಲ್ಲಿ ವೀಲಿಂಗ್ ಮಾಡುತ್ತಿದ್ದ ಹುಡುಗರ ಬಂಧನ

ಬೆಂಗಳೂರಿನಲ್ಲಿ ವೀಲಿಂಗ್ ಮಾಡುತ್ತಿದ್ದ ಹುಡುಗರ ಬಂಧನ

ಹೊಸೂರು ರಸ್ತೆಯ ಹೆದ್ದಾರಿಯಲ್ಲಿ ವೀಕೆಂಡ್​ನಲ್ಲಿ ವೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 16 ಮಂದಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

  • Share this:

ಬೆಂಗಳೂರು: ವೀಕೆಂಡ್​ನಲ್ಲಿ ವೀಲಿಂಗ್ ಪುಂಡರ ಹಾವಳಿ ಜಾಸ್ತಿಯಾಗುತ್ತಲೇ ಇದೆ. ಇವರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು, ವೀಲಿಂಗ್ ಮಾಡುತ್ತಿದ್ದ 17 ಪುಂಡರನ್ನ ರೆಡ್ ಹ್ಯಾಂಡ್ ಆಗಿ ಹಿಡಿದು ಅರೆಸ್ಟ್ ಮಾಡಿದ್ದಾರೆ. ವೀಕೆಂಡ್​ನಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದ ಆರೋಪಿಗಳಾದ ಇರ್ಷಾದ್. ಉಮ್ರಾಜ್, ರವಿಕುಮಾರ್, ಅಜೀತ್, ದ್ರಾವಿಡ್, ಪ್ರಶಾಂತ್, ಮಂಜುನಾಥ್, ರಂಜಿತ್, ಅಮೀನ್, ಅಸ್ಲಾಂ, ರೆಹಮಾನ್ ಖಾನ್, ಅರ್ಜುನ್, ಸೈಯ್ಯದ್ ಸುಲ್ತಾನ್, ಮರಿಲಿಂಗ, ಶೇಖ್ ವಾಜಿದ್ ಹಾಗೂ ದರ್ಶನ್ ಎಂಬುವವರನ್ನು ಬಂಧನ ಮಾಡಿದ್ದಾರೆ.


ಈ ‌ಬಂಧಿತರೆಲ್ಲಾ ವಾರಾಂತ್ಯ ಬಂದಾಗೆಲ್ಲಾ ತಮ್ಮ ಬೈಕ್ ಗಳನ್ನು ತಗೊಂಡು ಹೈವೇಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಇದರ ಬಗ್ಗೆ ಸಾಕಷ್ಟು ದೂರುಗಳು ಸಹ‌ ಪೊಲೀಸರಿಗೆ ಬಂದಿತ್ತು. ಇದರ ಮೇಲೆ ತೀವ್ರ ನಿಗಾ ಇಟ್ಟಿದ್ದ ಪೊಲೀಸರು ನಿನ್ನೆ ಸಂಜೆಯಿಂದ ಕಾರ್ಯಾಚರಣೆಗೆ ಇಳಿದರು. ಹೆದ್ದಾರಿಗಳಲ್ಲಿ ವೀಲಿಂಗ್ ಮಾಡುತ್ತಿದ್ದ 17 ಜನರನ್ನು ಬಂಧನ ಮಾಡಿದ್ದು, 17 ಬೈಕ್​ಗಳನ್ನು ಸೀಜ್ ಮಾಡಿದ್ದಾರೆ. ಇದ್ತ ಜೊತೆಗೆ ಆರೋಪಿಗಳ ಮೊಬೈಲ್​ಗಳನ್ನ ಸಹ‌ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರು ವೀಲಿಂಗ್ ಮಾಡುತ್ತಿರುವ ವಿಡಿಯೋಗಳು ಈ ಮೊಬೈಲ್​ನಲ್ಲಿ ಸಿಕ್ಕಿವೆ.


ಇದನ್ನೂ ಓದಿ: ವಿಜಯಪುರದಲ್ಲಿ ಭಾರೀ ಪ್ರಮಾಣದ ಗಾಂಜಾ, ಅಕ್ರಮ ಮದ್ಯ ವಶ; 51 ಜನರ ಬಂಧನ


ಸದ್ಯ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಅವರ ಬ್ಯಾಕ್ ಗ್ರೌಂಡ್ ಏನು ಅನ್ನೋದರ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಾ ಇದ್ದಾರೆ. ಘಟನೆ ಆದ ಬೆನ್ನಲ್ಲೇ ವೀಲಿಂಗ್​ನಂತಹ ಕಾನೂನುಬಾಹಿರ ಕೃತ್ಯಗಳನ್ನು ತಡೆಗಟ್ಟಲು ಪೂರ್ವ ವಿಭಾಗ ಸಂಚಾರ ಡಿಸಿಪಿ ನಾರಾಯಣ್ ಗ್ಯಾರೇಜ್ ಮಾಲೀಕರುಗಳ ಜೊತೆ ಸಭೆ ನಡೆಸಿದ್ದಾರೆ. ಇನ್ನು ಮುಂದೆ ಸೈಲೆಂಸರ್ ಶಬ್ದ ಯಾವುದೇ ಕಾರಣಕ್ಕೂ ಜಾಸ್ತಿ ಮಾಡಬಾರದು. ಬೈಕ್ ಗಳನ್ನು ವೀಲಿಂಗ್ ಮಾಡೋ ರೀತಿಯಲ್ಲಿ ಆಲ್ಟರ್ ಮಾಡಿಕೊಡಬಾರದು ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ.





ಬೆಂಗಳೂರಿನಲ್ಲಿ ವೀಲಿಂಗ್ ಮಾಡಿ ಸಾವು ಸಂಭವಿಸಿದ ಅನೇಕ ಪ್ರಕರಣಗಳು ವರದಿಯಾಗಿವೆ. ಜನಸಂದಣಿ ಇರುವ ಸಮಯದಲ್ಲೂ ಇವರ ಅತಿರೇಕದ ಓಟ ನಿಲ್ಲುವುದಿಲ್ಲ. ವೀಲಿಂಗ್ ಮಾಡುವವರ ಪ್ರಾಣದ ಜೊತೆಗೆ ರಸ್ತೆ ಸಂಚರಿಸುವ ಇತರ ಜನರ ಪ್ರಾಣಕ್ಕೂ ಸಂಚಕಾರ ಇದೆ. ಪೊಲೀಸರು ಅನೇಕ ಬಿಗಿಕ್ರಮ ಕೈಗೊಂಡರೂ ಪುಂಡರು ಕಣ್ತಪ್ಪಿಸಿ ಅಲ್ಲಲ್ಲಿ ವೀಲಿಂಗ್ ಮಾಡುತ್ತಲೇ ಇದ್ದಾರೆ.

Published by:Vijayasarthy SN
First published: