Lockdown Effect: ಮಂಡ್ಯದ ಹಲವೆಡೆ ಕದ್ದು ಮುಚ್ಚಿ ಮದುವೆ; ವಧು, ವರ ಮತ್ತು ಪುರೋಹಿತರು ಅರೆಸ್ಟ್​

ಮಂಡ್ಯದ ಕೆಆರ್ ಪೇಟೆ ತಾಲೂಕಿನ ಮುರುಕನಹಳ್ಳಿ, ಹರಿರಾಯನಹಳ್ಳಿ, ನಂದಿಪುರ ಮತ್ತು ಕ್ಯಾತನಹಳ್ಳಿ ಗ್ರಾಮಗಳಲ್ಲಿ ಕದ್ದು ಮುಚ್ಚಿ ಮದುವೆಗಳನ್ನ ಮಾಡಲಾಗ್ತಿತ್ತು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಕೆಆರ್ ಪೇಟೆ ಪೊಲೀಸರು ಗ್ರಾಮಗಳಿಗೆ ತೆರಳಿ ದಾಳಿ‌ ನಡೆಸಿದರು.

ವಧು-ವರ

ವಧು-ವರ

 • Share this:
  ಮಂಡ್ಯ(ಜೂ.07): ಸಕ್ಕರೆನಾಡು ಮಂಡ್ಯದಲ್ಲಿ ಕೊರೋನಾ ಎರಡನೇ ಅಲೆ ಕಡಿಮೆ ಆಗದ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಕಟ್ಟು ನಿಟ್ಟಿನ ಲಾಕ್​ಡೌನ್​​​ ಘೋಷಣೆ ಮಾಡಿದೆ. ಆದ್ರೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಅನುಮತಿ ಪಡೆಯದೆ ಕದ್ದು ಮುಚ್ಚಿ ಮದುವೆ ಸಮಾರಂಭಗಳನ್ನ ಮಾಡಲಾಗ್ತಿದೆ. ಊರಿನ ಜನಕ್ಕೂ ತಿಳಿಯದಂತೆ ಬೆಳಗಿನ ಜಾವಗಳಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಮದುವೆ ಸಂಭ್ರಮದಲ್ಲಿದ್ದ ವಧು-ವರ ಹಾಗೂ ಸಂಬಂಧಿಕರಿಗೆ ಪೊಲೀಸರು ಶಾಕ್​ ನೀಡಿದ್ದಾರೆ.

  ಹೌದು,  ಮಂಡ್ಯದ ಕೆಆರ್ ಪೇಟೆ ತಾಲೂಕಿನಲ್ಲಿ  ಕದ್ದು ಮುಚ್ಚಿ ಮದುವೆಗಳನ್ನ ಮಾಡಲಾಗ್ತಿತ್ತು. ತಾಲೂಕಿನ ಮುರುಕನಹಳ್ಳಿ, ಹರಿರಾಯನಹಳ್ಳಿ, ನಂದಿಪುರ ಮತ್ತು ಕ್ಯಾತನಹಳ್ಳಿ ಗ್ರಾಮಗಳಲ್ಲಿ ಮದುವೆ ಸಮಾರಂಭಗಳನ್ನ ಮಾಡಲಾಗ್ತಿತ್ತು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಕೆಆರ್ ಪೇಟೆ ಪೊಲೀಸರು ಗ್ರಾಮಗಳಿಗೆ ತೆರಳಿ ದಾಳಿ‌ ನಡೆಸಿದರು.

  ಇದನ್ನೂ ಓದಿ:ಮೂರು ದಿನಗಳ ಹಿಂದೆ ಕಿಡ್ನಾಪ್ ಆಗಿದ್ದ ಬಾಲಕನ ಬರ್ಬರ ಹತ್ಯೆ: ಹಣಕ್ಕಾಗಿ ಪರಿಚಯದವರಿಂದಲೆ ಕೊಲೆ ಶಂಕೆ!

  ಮದುವೆ ಮನೆ ಮೇಲೆ ಪೊಲೀಸರ ದಾಳಿ; ವಧು-ವರರು ಅರೆಸ್ಟ್

  ಅನುಮತಿ ಪಡೆಯದೆ ಈ ನಾಲ್ಕು ಗ್ರಾಮಗಳಲ್ಲಿ ಮನೆಯ ಮುಂದೆಯೆ ಮದುವೆ ಸಮಾರಂಭವನ್ನ ಮಾಡಲಾಗ್ತಿತ್ತು. ಹೀಗಾಗಿ ಕೆಆರ್ ಪೇಟೆ ಪೊಲೀಸರು ಗ್ರಾಮಗಳಿಗೆ ದಾಳಿ ನಡೆಸಿ ಮದುವೆ ಗಂಡು, ಹೆಣ್ಣು, ಪೊಷಕರು ಮತ್ತು ಪುರೋಹಿತರನ್ನ ಅರೆಸ್ಟ್ ಮಾಡಿದ್ರು. ಬಳಿಕ ಕೆಆರ್ ಪೇಟೆ ಪೊಲೀಸ್ ಠಾಣೆಗೆ ಬಂಧಿತರನ್ನ ಕರೆತರಲಾಯ್ತು. ನಂತರ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯ್ತಾದರೂ ಅನುಮತಿ ಪಡೆಯದೆ ಮದುವೆ ಮಾಡಿದ್ದರಿಂದ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದಾಗಿ ಕೆ.ಆರ್.ಪೇಟೆ ತಹಶೀಲ್ದಾರ್ ತಿಳಿಸಿದ್ದಾರೆ.  ಬೆಳಗಿನ ಜಾವದ ಮದುವೆ ಮಾಡುವುದನ್ನು ನಿಲ್ಲಿಸಿ

  ಜಿಲ್ಲೆಯಲ್ಲಿ ಅನೇಕ ಗ್ರಾಮಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬೆಳಗಿನ ಜಾವ ನಾಲ್ಕೈದು ಗಂಟೆಯ ಸಮಯದಲ್ಲಿ ಮದುವೆಗಳು ನಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಇಂತಹ ಸಮಾರಂಭಗಳ ಮೇಲೆ‌ ಪೊಲೀಸರು ಸದಾ ಸಕ್ರಿಯವಾಗಿದ್ದು ದಾಳಿ ನಡೆಸಲಿದ್ದಾರೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲವು ದಿನಗಳ ಮಟ್ಟಿಗೆ ವಿವಾಹ ಕಾರ್ಯಕ್ರಮಗಳನ್ನು ಮುಂದೂಡಬೇಕಾಗಿದೆ.

  ಇದನ್ನೂ ಓದಿ:ಕಾರವಾರದಲ್ಲೊಬ್ಬ ಭಗೀರಥ; ಏಕಾಂಗಿಯಾಗಿ ಬಾವಿ ತೋಡಿ ಊರ ಜನರ ದಾಹ ನೀಗಿಸಿದ ವ್ಯಕ್ತಿ

  ಜಿಲ್ಲೆಯಲ್ಲಿ ಮಹಾಮಾರಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಕುಟುಂಬದವರು ನೂರಾರು ಜನರನ್ನು ಸೇರಿಸಿಕೊಂಡು ಅದ್ದೂರಿಯಾಗಿ ತಿಥಿ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಯಲ್ಲಿದೆ. ಆದ್ದರಿಂದ ಕುಟುಂಬದ ಸದಸ್ಯರು ಮಾತ್ರ ಸರಳವಾಗಿ ತಿಥಿ ಮಾಡಿಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕಾನೂನಿನಲ್ಲಿ ತಿಥಿ ಮಾಡಲು ಅವಕಾಶವಿಲ್ಲ. ಆದರೂ ಕೂಡ ಜಿಲ್ಲೆಯ ಹಲವೆಡೆ ಅದ್ದೂರಿ ತಿಥಿಗಳನ್ನು‌ ಮಾಡಲಾಗ್ತಿದೆ.

  ಸಾರ್ವಜನಿಕರ ಸಹಕಾರವಿಲ್ಲದೆ ಕೊರೋನಾ ನಿಯಂತ್ರಣ ಅಸಾಧ್ಯ

  ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ.ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಎಷ್ಟೇ ಶ್ರಮಹಾಕಿ ಕೆಲಸ ಮಾಡಿದರೂ ಸಾರ್ವಜನಿಕರು ಇದಕ್ಕೆ ಸಹಕಾರ ನೀಡದಿದ್ದರೆ, ಕೊರೋನಾ ನಿಯಂತ್ರಣ ಅಸಾಧ್ಯ ಆದ್ದರಿಂದ ಜಿಲ್ಲೆಯ ಸಾರ್ವಜನಿಕರು ಮುಂದಿನ ಹದಿನೈದು ದಿನಗಳವರೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತ ಕೂಡ ಮನವಿ ಮಾಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿ ಯೊಬ್ಬರು ಕೈ ಜೋಡಿಸಬೇಕು.

  (ವರದಿ: ಸುನೀಲ್ ಕುಮಾರ್)
  Published by:Latha CG
  First published: