• Home
  • »
  • News
  • »
  • district
  • »
  • ಬೆಂಗಳೂರಿನಲ್ಲಿ ಕದ್ದ ಚಿನ್ನ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದ ಅಕ್ಕಸಾಲಿಗ

ಬೆಂಗಳೂರಿನಲ್ಲಿ ಕದ್ದ ಚಿನ್ನ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದ ಅಕ್ಕಸಾಲಿಗ

ಆರೋಪಿ ಉತ್ತಮ್ ದೋಲಾಯಿ

ಆರೋಪಿ ಉತ್ತಮ್ ದೋಲಾಯಿ

ಪಶ್ಚಿಮ ಬಂಗಾಳ ಮೂಲದ ಆರೋಪಿ ಉತ್ತಮ್ ದೋಲಾಯಿ ತಾನು ಕೆಲಸ ಮಾಡುತ್ತಿದ್ದ ಜುವೆಲರಿ ಸಾಪ್ನಲ್ಲಿ ಸ್ವಲ್ಪ ಸ್ವಲ್ಪವೇ ಚಿನ್ನ ಕದಿಯುತ್ತಾ ಒಂದು ಕೆಜಿಯಷ್ಟು ಚಿನ್ನದ ಗಟ್ಟಿ ಶೇಖರಣೆ ಮಾಡಿ ಮಾರಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

  • Share this:

ಬೆಂಗಳೂರು: ಕದ್ದ ಚಿನ್ನವನ್ನ ಮಾರಾಟ ಮಾಡಲು ಹೋಗಿ ಅಕ್ಕಸಾಲಿಗನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ನಂದಿನಿಲೇಔಟ್ ಪೊಲೀಸರು ಉತ್ತಮ್ ದೋಲಾಯಿ ಎಂಬಾತನ ಬಂಧಿಸಿ ಆತನಿಂದ 45 ಲಕ್ಷ ಮೌಲ್ಯದ 1.16 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಆರೋಪಿ ಉತ್ತಮ್ ದೋಲಾಯಿ ಕಾಟನ್ ಪೇಟೆಯ ಜ್ಯುವೆಲ್ಲರಿ ಶಾಪ್​ವೊಂದರಲ್ಲಿ ಚಿನ್ನದ ಆಭರಣ ತಯಾರಿ ಮಾಡಿಕೊಡುವ ಅಕ್ಕಸಾಲಿಗನ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕೈದು ವರ್ಷಗಳಿಂದಲೂ ಜ್ಯುವೆಲ್ಲರಿ ಅಂಗಡಿಗೆ ಆಭರಣ ತಯಾರಿಸಿ ಕೊಡುತ್ತಿದ್ದ ಉತ್ತಮ್ ದೋಲಾಯಿ ನಂಬುಗೆ ಗಳಿಸಿದ್ದ. ಇದೇ ವೇಳೆ ಚಿನ್ನದ ಗಟ್ಟಿಯಲ್ಲಿ ಸ್ವಲ್ಪ ಸ್ವಲ್ಪ ಚಿನ್ನ ಕದ್ದು ಒಂದು ಕೆಜಿಯಷ್ಟು ಚಿನ್ನದ ಗಟ್ಟಿ ಶೇಖರಣೆ ಮಾಡಿದ್ದನಂತೆ. ಅಲ್ಲದೇ, ಕದ್ದ ಚಿನ್ನವನ್ನ ಆಭರಣಗಳಾಗಿ ಮಾಡಿದ ಅಕ್ಕಸಾಲಿಗ ಉತ್ತಮ್ ದೋಲಾಯಿ ನಂತರ ಅವನ್ನ ಮಾರಲು ಹೊಂಚು ಹಾಕಿದ್ದ.

ಇದನ್ನೂ ಓದಿ: ಅರಿಶಿಣ ಕದಿಯಲು ಸುಪಾರಿ ಕೊಟ್ಟು ಸಿಕ್ಕಿಬಿದ್ದ ಗ್ಯಾಂಗ್; 1 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ

ಆರೋಪಿ ದೋಲಾಯಿ ಚಿನ್ನದ ಆಭರಣ ತಯಾರಿಸುವ ಅಕ್ಕಸಾಲಿಗ ಆಗಿದ್ದರಿಂದ ಒಂದಷ್ಟು ಜ್ಯುವೆಲ್ಲರಿ ಶಾಪ್​ಗಳ ಪರಿಚಯ ಇಟ್ಕೊಂಡಿದ್ದ. ತಾನೇ ತಯಾರಿಸಿದ ಆಭರಣಗಳನ್ನ ಮಾರಾಟ ಮಾಡೋ ಸಲುವಾಗಿ ಜೂನ್ 8 ರಂದು ನಗರದ ಕಂಠೀರವ ಸ್ಟುಡಿಯೋ ಬಳಿಯ ಜ್ಯುವೆಲ್ಲರಿ ಶಾಪ್ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದನಂತೆ. ಈ ವೇಳೆ ಆದೇ ರಸ್ತೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಅಚಾರಿ ಉತ್ತಮ್ ದೋಲಾಯಿಯನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತಪಾಸಣೆ ವೇಳೆ ಆರೋಪಿ ಜೇಬುಗಳಲ್ಲಿ ಚಿನ್ನದ ಆಭರಣಗಳು ಪತ್ತೆಯಾಗಿವೆ. ಕೂಡಲೇ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಅಸಲಿ ಕಥೆಯನ್ನ ಬಿಚ್ಚಿಟ್ಟಿದ್ದಾನೆ‌. ಸದ್ಯ ನಂದಿನಿಲೇಔಟ್ ಪೊಲೀಸರು ಆರೋಪಿ ಉತ್ತಮ್ ದೋಲಾಯಿಯನ್ನ ಬಂಧಿಸಿ ಆತನ ಬಳಿಯಿದ್ದ 1.16 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಇನ್ನು, ಆರೋಪಿಯ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ವಿಡಿಯೋಗಳ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಜರ್ಮನ್​​ ಮೂಲದ ಮೋಸ್ಟ್​​​ ವಾಟೆಂಡ್​​ ಕ್ರಿಮಿನಲ್​​ನನ್ನು ಬಂಧಿಸಿದ ಕರ್ನಾಟಕ ಸಿಐಡಿಅದೇನೇ ಇರಲಿ ನಂಬಿಕಸ್ಥ ವ್ಯಕ್ತಿ ಅಂತ ಚಿನ್ನದ ಗಟ್ಟಿ ಕೊಟ್ಟು ಆಭರಣ ಮಾಡಿಸುತ್ತಿದ್ದ ತಪ್ಪಿಗೆ ಅಸಾಮಿ ಚೂರು ಚೂರು ಚಿನ್ನವನ್ನೇ ಕೆಜಿಗಟ್ಟಲೆ ಸಂಗ್ರಹ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು