ಸಿಂಧನೂರಿನ ಐವರ ಬರ್ಬರ ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಸಿಂಧನೂರಿನಲ್ಲಿ ಇಷ್ಟು ಭೀಕರ ಹತ್ಯೆ ಘಟನೆ ಇದೇ ಮೊದಲು ನಡೆದಿರುವುದು. ಹಿರಿಯರ ಸಮ್ಮುಖದಲ್ಲಿ ಜಗಳ ಬಗೆಹರಿಸಿಕೊಳ್ಳಬಹುದಿತ್ತು ಎಂಬುವುದು ಸುಕಾಲಪೇಟೆಯ ಹಿರಿಯರ ಅಭಿಪ್ರಾಯ.

news18-kannada
Updated:July 12, 2020, 4:47 PM IST
ಸಿಂಧನೂರಿನ ಐವರ ಬರ್ಬರ ಹತ್ಯೆ ಪ್ರಕರಣ: ಐವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಸಿಂಧನೂರು ಹತ್ಯೆ ಪ್ರಕರಣದ ಆರೋಪಿಗಳು
  • Share this:
ರಾಯಚೂರು: ಇಡೀ ರಾಜ್ಯವೇ ಬೆಚ್ಚಿ ಬೀಳುವಂಥ ಘಟನೆ ನಿನ್ನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿತ್ತು. ಪ್ರೇಮ ವಿವಾಹ ಹಾಗು ಆಸ್ತಿ ಕಾರಣಕ್ಕೆ ಒಂದೇ ಕುಟುಂಬದವರ ಮೇಲೆ ಹಲ್ಲೆ ಮಾಡಿ ಐದು ಜನರನ್ನು ಕೊಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ಭಾಗಿಯಾಗಿದ್ದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇಂಥ ಘಟನೆ ಈ ಹಿಂದೆ  ಸಿಂಧನೂರಿನಲ್ಲಿ ನಡೆದಿರಲಿಲ್ಲ. ರಾಯಚೂರು ಜಿಲ್ಲೆಯ ಸಿಂಧನೂರಿನ ಮಂಜುಳಾ ಹಾಗು ಮೌನೇಶ ಎಂಬುವವರು ಅಕ್ಕ ಪಕ್ಕದ ಮನೆಯವರಷ್ಟೇ ಅಲ್ಲ ಒಂದೇ ಕೋಮಿನವರಾಗಿದ್ದವರು. ವಯೋಸಹಜವಾಗಿ ಆಕರ್ಷಿತರಾಗಿ ಕಳೆದ ಹತ್ತು ತಿಂಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದರು. ಮೂರು ತಿಂಗಳು ಗದಗದಲ್ಲಿದ್ದ ಅವರು ಆರು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಮರಳಿದ್ದರು. ಮಂಜುಳಾ ತಂದೆ ಸಣ್ಣ ಫಕೀರಪ್ಪನಿಗೆ ಇನ್ನೊಬ್ಬ ಮಗನಿದ್ದು ಆತ ಬುದ್ದಿಮಾಂದ್ಯ. ಸ್ವಲ್ಪ ಅನುಕೂಲಸ್ಥನಾಗಿರುವ ಅವರಿಗೆ 20 ಎಕರೆ ಭೂಮಿ ಇದೆ. ಆಸ್ತಿಯಲ್ಲಿ ಮಗಳಿಗೆ ಪಾಲು ಯಾಕೆ ಕೊಡಬೇಕು? ನನಗೆ ಆಕೆಗೆ ಸಂಬಂಧವಿಲ್ಲ ಎಂದುಕೊಂಡು ರೇಖಾ ಎಂಬುವವರನ್ನು ಮದುವೆಯಾಗಿದ್ದ.

ಮಂಜುಳಾ ಗಂಡನ‌ ಮನೆಯಲ್ಲಿದ್ದರೂ ತಂದೆ ಇನ್ನೊಂದು ಮದುವೆಯಾಗಿರುವುದು ಅಸಮಾದಾನವಿತ್ತು. ಶನಿವಾರ ಮಂಜುಳಾ ತನ್ನ ತಾಯಿಯನ್ನು ಮಾತನಾಡಿಸಲು ಹೋದಾಗ ರೇಖಾಳೊಂದಿಗೆ ಜಗಳವಾಗಿದೆ. ಈ ಜಗಳದ ನಂತರ ಮಂಜುಳಾ ಹಾಗು ಮೌನೇಶ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆ. ಇದೇ ಸಮಯದಲ್ಲಿ ಮಂಜುಳಾ ತಂದೆ ಗುಂಪುಕಟ್ಟಿಕೊಂಡು ಮೌನೇಶ ಕುಟುಂಬದವರ ಮೇಲೆ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ನಾಗರಾಜ, ಶ್ರೀದೇವಿ, ಸುಮಿತ್ರಾ, ಹನುಮೇಶ ಎಂಬುವವರು ಬೀದಿಯಲ್ಲಿಯೇ ಹೆಣವಾಗಿದ್ದಾರೆ. ಮೌನೇಶ ತಂದೆ ಈರಪ್ಪ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಸ್ಮಶಾನದಲ್ಲಿದ್ದ ಪಿಪಿಇ ಕಿಟ್ ಧರಿಸಿ ಮಾನಸಿಕ ಅಸ್ವಸ್ಥನ ಹುಚ್ಚಾಟ; ಕೊರೋನಾ ಸೋಂಕಿನ ಭಯದಲ್ಲಿ ಕಂಗೆಟ್ಟ ಜನ

ಸಿಂಧನೂರಿನಲ್ಲಿ ಇಷ್ಟು ಭೀಕರ ಹತ್ಯೆ ಘಟನೆ ಇದೇ ಮೊದಲು ನಡೆದಿರುವುದು. ಹಿರಿಯರ ಸಮ್ಮುಖದಲ್ಲಿ ಜಗಳ ಬಗೆಹರಿಸಿಕೊಳ್ಳಬಹುದಿತ್ತು ಎಂಬುವುದು ಸುಕಾಲಪೇಟೆಯ ಹಿರಿಯರ ಅಭಿಪ್ರಾಯ. ಈ ಘಟನೆಯ ನಂತರ ಪೊಲೀಸರು ಎರಡು‌ ಮನೆಗಳಿಗೆ ಭದ್ರತೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಕೊಲೆ ಮಾಡಿದ ಸಣ್ಣ ಫಕೀರಪ್ಪ(45), ಅಂಬಣ್ಣ(58), ರೇಖಾ(25), ಗಂಗಮ್ಮ(55) ಸೋಮಶೇಖರ(21) ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ ಎಂದು ಎಸ್​ಪಿ ವೇದಮೂರ್ತಿ ತಿಳಿಸಿದ್ದಾರೆ.ಪ್ರೇಮ ವಿವಾಹ, ಆಸ್ತಿಗಾಗಿ ತಂದೆ ಮಗಳ ಮಧ್ಯೆಯ ವಿವಾದ ಇಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು ರಕ್ತ ಮಡುವಿನಲ್ಲಿ ಬಿದ್ದು ಒದ್ದಾಡಿ ಹೆಣಗಳಾಗಿದ್ದು ದುರಂತವೇ ಸರಿ.
Published by: Vijayasarthy SN
First published: July 12, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading