ಚಾಮರಾಜನಗರ(ಜೂ. 08): ಮೂವರು ವಿದೇಶಿಯರು ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅರಣ್ಯದ ರಸ್ತೆಗಳಲ್ಲಿ ಸುತ್ತಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಬಾಡಿಗೆ ಬೈಕ್ಗಳಲ್ಲಿ ಬಂದಿದ್ದ ಅವರು ಅನುಮತಿಯಿಲ್ಲದೆ ಬಂಡೀಪುರ ಅರಣ್ಯ ಪ್ರವೇಶಿಸಿ ಸುತ್ತಾಡಿದ್ದಾರೆ. ಇವರನ್ನು ಅರಣ್ಯ ಸಿಬ್ಬಂದಿ ತಡೆದು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಒರಟಾಗಿ ವರ್ತಿಸಿ ರೇಗಾಡಿದ್ದಾರೆ. ಹೀಗಾಗಿ ಈ ಮೂವರನ್ನು ಅತಿಕ್ರಮಪ್ರವೇಶದ ಆರೋಪದ ಮೇರೆಗೆ ಗುಂಡ್ಲುಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ.
ಡಿ.ಆರ್.ಡಿ.ಓದಲ್ಲಿ ಪ್ರಾಜೆಕ್ಟ್ ವರ್ಕ್ ಮಾಡಲು ಪೋರ್ಚುಗೀಸ್ ದೇಶದ ನೂನೋ ರಿಕಾರ್ಡೋ ಬೆರ್ನಾಡೆಸ್ ಮಿರಾಂಡಾ, ಏಂಜೆಲೋ ಮೈಗ್ವೆಲ್ ಗ್ಯಾರಿಡೋ ಮತ್ತು ಥಾಮಸ್ ಪಿನ್ಹೋ ಮಾರ್ಕಿಜ್ ಎಂಬುವರು ಬೆಂಗಳೂರಿಗೆ ಬಂದಿದ್ದು ಅಲ್ಲಿಂದ ಅನುಮತಿ ಇಲ್ಲದೆ ಬಂಡೀಪುರಕ್ಕೆ ಬಂದಿದ್ದರು.
ಇದನ್ನೂ ಓದಿ: ದೀರ್ಘಾವಧಿ ಬಳಿಕ ಶಿರಸಿ ಮಾರಿಕಾಂಬಾ ದೇವಾಲಯ ಓಪನ್; ಮಹಾಬಲೇಶ್ವರನಿಗೂ ಪೂಜೆ, ಮುರ್ಡೇಶ್ವರನನ್ನು ಕಂಡ ಭಕ್ತರು
ಬಂಡೀಪುರಕ್ಕೆ ಅಕ್ರಮ ಪ್ರವೇಶ ಮಾಡಿ ಬೈಕ್ಗಳಲ್ಲಿ ಸಂಚರಿಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಸರಿಯಾದ ಉತ್ತರ ನೀಡದೆ ಒರಟಾಗಿ ವರ್ತಿಸಿದ್ದಾರೆ. ಇವರ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹಾಗಾಗಿ ಇವರನ್ನು ಗುಂಡ್ಲುಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.
ಅತಿಕ್ರಮ ಪ್ರವೇಶ ಆರೋಪದ ಮೇರೆಗೆ ಅರಣ್ಯ ಇಲಾಖೆ ಈ ಮೂವರನ್ನು ನಮ್ಮ ವಶಕ್ಕೆ ನೀಡಿದೆ. ಹಾಗಾಗಿ ಈ ಮೂವರಿಂದ ಹೇಳಿಕೆ ಪಡೆದು ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಗುಂಡ್ಲುಪೇಟೆ ಪೊಲಿಸರು ತಿಳಿಸಿದ್ದಾರೆ.
ವರದಿ: ಎಸ್.ಎಂ. ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ