HOME » NEWS » District » POLICE AGAIN CATCH THE CORONA PATIENT WHO ESCAPE FROM HOSPITAL RH

ಎರಡನೆ ಬಾರಿ ಆಸ್ಪತ್ರೆಯಿಂದ ಪರಾರಿಯಾದ ಕೊರೋನಾ ‌ಸೋಂಕಿತನನ್ನು ಪೊಲೀಸರಿಗೆ ಹಿಡಿದುಕೊಟ್ಟ ಗ್ರಾಮಸ್ಥರು

ನೆನ್ನೆ ಮಧ್ಯರಾತ್ರಿ ಆಸ್ಪತ್ರೆಯಿಂದ‌ ಪರಾರಿಯಾಗಿದ್ದ ಆಸಾಮಿಯನ್ನು ಎಷ್ಟೇ ಹುಡುಕಾಡಿದರು ಎಲ್ಲೂ ಸಿಗಲಿಲ್ಲ. ಸಮಯ ಕಳೆದಂತೆ ಪೊಲೀಸರ ಜತೆಗೆ ಕಾರವಾರದ ಜನರಿಗೂ ಆತಂಕ ಹೆಚ್ಚಾಯಿತು. ಕೊನೆಗೆ ಇಲ್ಲಿನ ಶಿರವಾಡ ಗ್ರಾಮದ ಬಳಿ ಸ್ಥಳೀಯರು ಮಾಹಿತಿ ನೀಡಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಬಳಿಕ ಈತನನ್ನು ಪೋಲಿಸರು ಮತ್ತೆ ಆಸ್ಪತ್ರೆಗೆ ಸೇರಿಸಿದ್ದಾರೆ.

news18-kannada
Updated:July 1, 2020, 6:20 PM IST
ಎರಡನೆ ಬಾರಿ ಆಸ್ಪತ್ರೆಯಿಂದ ಪರಾರಿಯಾದ ಕೊರೋನಾ ‌ಸೋಂಕಿತನನ್ನು ಪೊಲೀಸರಿಗೆ ಹಿಡಿದುಕೊಟ್ಟ ಗ್ರಾಮಸ್ಥರು
ಪ್ರಾತಿನಿಧಿಕ ಚಿತ್ರ
  • Share this:
ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕೋವಿಡ್ ಆಸ್ಪತ್ರೆಯಿಂದ ಎರಡನೇ ಬಾರಿಗೆ ಪರಾರಿಯಾದ ಕೊರೋನಾ ಸೋಂಕಿತನನ್ನು ಪೊಲೀಸರು ಮತ್ತೆ ಹಿಡಿದು, ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ. 

ಕಳೆದ ಎರಡು‌ ದಿನದ ಹಿಂದೆ ಕಾರವಾರ ಕೋವಿಡ್-19 ಆಸ್ಪತ್ರೆಯಿಂದ ಕೊರೋನಾ ಸೋಂಕಿತ ರಾತ್ರಿ ನಾಪತ್ತೆ ಆಗಿ ಕಾರವಾರದ ಕದ್ರಾ ಬಳಿ ಸಿಕ್ಕಿ ಬಿದ್ದಿದ್ದ. ಇವತ್ತು ಮತ್ತು ಅದೇ ಚಾಳಿ ಮುಂದುವರೆಸಿದ್ದ. ಮತ್ತೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಇವನನ್ನು ಹಿಡಿದು ತರುವಷ್ಟರಲ್ಲಿ ಪೋಲಿಸರು ಹೈರಾಣಾಗಿ ಹೋಗಿದ್ದಾರೆ.

ಬೈಕ್​ ಕಳ್ಳತನದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಠಾಣೆಯ ಪೋಲಿಸರು ಆರೋಪಿಯನ್ನು ಬಂಧಿಸಿದ್ದರು. ಈತನಿಗೆ 12057ನಂಬರ್ ನೀಡಿ ಈತನನ್ನು ಇಲ್ಲಿನ ಸಬ್ ಜೈಲಿನಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಈತನ ಆರೋಗ್ಯದಲ್ಲಿ ಕೊರೋನಾ ಸೋಂಕಿನ ಗುಣಲಕ್ಷಣ ಕಂಡು ಬಂದು ಕೋವಿಡ್ ಟೆಸ್ಟ್ ಮಾಡಿದಾಗ ಸೋಂಕು ದೃಢವಾಗಿತ್ತು. ಬಳಿಕ ಈತನನ್ನ ಕಾರವಾರ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಒಂದು ದಿನ ಆರಾಮವಾಗಿದ್ದ ಸೋಂಕಿತ ಆರೋಪಿ ಎರಡನೇ ದಿನ ನಾಪತ್ತೆ ಆಗಿ‌ ಕಾರವಾರ ಜನರ ನಿದ್ದೆಗೆಡಿಸಿದ್ದ. ಇವನನ್ನ ಹಿಡಿಯಲು ಪೋಲಿಸರು ಹೈರಾಣಾಗಿ ಹೋಗಿದ್ದರು. ಕೊನೆಗೆ ಹೇಗೊ ಮಾಡಿ ಕದ್ರಾ ಬಳಿ ಸಿಕ್ಕಿ ಬಿದ್ದ ಇವನನ್ನು ತಂದು ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಮತ್ತೆ ಈತ ನೆನ್ನೆ ಆಸ್ಪತ್ರೆಯಿಂದ ಓಡಿ ಹೋಗಿ, ಎಲ್ಲರನ್ನು ಕಂಗಾಲಾಗುವಂತೆ ಮಾಡಿದ್ದ.

ಇದನ್ನು ಓದಿ: ಕೊರೋನಾ ಮೃತದೇಹಗಳನ್ನು ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಖಂಡನೀಯ; ಸಿಎಂ ಯಡಿಯೂರಪ್ಪ

ನೆನ್ನೆ ಮಧ್ಯರಾತ್ರಿ ಆಸ್ಪತ್ರೆಯಿಂದ‌ ಪರಾರಿಯಾಗಿದ್ದ ಆಸಾಮಿಯನ್ನು ಎಷ್ಟೇ ಹುಡುಕಾಡಿದರು ಎಲ್ಲೂ ಸಿಗಲಿಲ್ಲ. ಸಮಯ ಕಳೆದಂತೆ ಪೊಲೀಸರ ಜತೆಗೆ ಕಾರವಾರದ ಜನರಿಗೂ ಆತಂಕ ಹೆಚ್ಚಾಯಿತು. ಕೊನೆಗೆ ಇಲ್ಲಿನ ಶಿರವಾಡ ಗ್ರಾಮದ ಬಳಿ ಸ್ಥಳೀಯರು ಮಾಹಿತಿ ನೀಡಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಬಳಿಕ ಈತನನ್ನು ಪೋಲಿಸರು ಮತ್ತೆ ಆಸ್ಪತ್ರೆಗೆ ಸೇರಿಸಿದ್ದಾರೆ.
First published: July 1, 2020, 6:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories