Pneumonia Cases- ಗಣಿನಾಡಿನ ಮಕ್ಕಳಲ್ಲಿ ಹೆಚ್ಚಿದ ನ್ಯುಮೋನಿಯಾ, ಡೆಂಗ್ಯೂ ಪ್ರಕರಣಗಳು; ಆತಂಕದಲ್ಲಿ ಜಿಲ್ಲಾಡಳಿತ

ಕೋವಿಡ್​ನ ಮೂರನೇ ಅಲೆಗೂ ಮುನ್ನವೇ ಗಣಿನಾಡಿನ ಮಕ್ಕಳಲ್ಲಿ ನಿಮೋನಿಯಾ, ಡೆಂಘ್ಯೂ ಕಾಯಿಲೆ ಬರುತ್ತಿದೆ. ಇದರಿಂದ ಪೋಷಕರಲ್ಲಿ ಮತ್ತಷ್ಟು ಆತಂಕ ತಂದಿಟ್ಟಿದೆ. ಬಳ್ಳಾರಿ ಜಿಲ್ಲಾಡಳಿತವೂ ಕೂಡ ತಲೆಕೆಡಿಸಿಕೊಂಡು ಕೂತಿದೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆ

ಬಳ್ಳಾರಿಯ ವಿಮ್ಸ್ ಆಸ್ಪತ್ರೆ

  • Share this:
    ಬಳ್ಳಾರಿ: ಮೂರನೇ ಅಲೆಗೂ ಮುನ್ನವೇ ಗಡಿನಾಡನ ಮಕ್ಕಳಿಗೆ ನಿಮೋನಿಯಾ (Pneumonia), ಡೆಂಘ್ಯೂ (Dengue).. ಬಳ್ಳಾರಿ ವಿಮ್ಸ್‌ನಲ್ಲಿ (WIMS Bellary) 300 ಮಕ್ಕಳಿಗೆ ಚಿಕಿತ್ಸೆ.. ಎದೆ ನೋವು, ನೆಗಡಿ, ನೆಮ್ಮು ಅಂತಾ ಜ್ವರ ಆಸ್ಪತ್ರೆ ದಾಖಲು.. ಬಳ್ಳಾರಿ ಜಿಲ್ಲಾಡಳಿತಕ್ಕೆ (Bellary District Administration ನಿಮೋನಿಯ ಕಾಯಿಲೆ ತಲೆ ನೋವು.. ಕೊರೊನಾ ಮೂರನೇ ಅಲೆ (Covid 3rd wave) ಮಕ್ಕಳನ್ನ ಟಾರ್ಗೆಟ್ ಮಾಡ್ತದೆ, ಜಾಗೃತಿ ವಹಿಸಿ ಎಂದು ಸರ್ಕಾರಕ್ಕೆ ತಜ್ಞರು ಹೇಳಿದ್ದಾರೆ. ಕೋವಿಡ್ ವೈರಸ್ ಭೀತಿ ಸರ್ಕಾರಕ್ಕೆ ಟೆನ್ಶನ್ ಮೇಲೆ ಟೆನ್ಶನ್ ನೀಡ್ತಿದೆ. ಹಲವು ಜಿಲ್ಲೆಗಳಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ, ಡೆಂಗ್ಯೂನಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವುದು ಕಂಡುಬಂದಿದೆ. ಇದಕ್ಕೆ ಗಣಿನಾಡು ಹೊರತಾಗಿಲ್ಲ‌.

    ಎರಡನೇ ಅಲೆಯಲ್ಲಿ ಅಖಂಡ ಬಳ್ಳಾರಿಯ (ವಿಜಯನಗರ ಜಿಲ್ಲೆ ಸೇರಿ) 4 ಸಾವಿರಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕು ಅಂಟಿತು. ವಿಶೇಷ ಕ್ರಮಗಳಿಂದ ಬಳ್ಳಾರಿ ಜಿಲ್ಲಾಡಳಿತ ಹೆಮ್ಮಾರಿ ವೈರಸ್ ಅನ್ನು ಕಂಟ್ರೋಲ್ ಮಾಡಿತು. ಆದ್ರೆ ಈ ನಡುವೆ ಬಳ್ಳಾರಿ, ವಿಜಯನಗರ ಜಿಲ್ಲೆಯ ಜನತೆಗೆ ಮತ್ತೊಂದು ಆತಂಕ ಎದುರಾಗಿದೆ. 15 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ನ್ಯುಮೋನಿಯಾ, ಡೆಂಘ್ಯೂ ಕಾಯಿಲೆ ಕಾಣಿಸಿಕೊಳ್ತಿರೋದೆ ಕಳವಳಕ್ಕೆ ಕಾರಣ ಆಗಿದೆ. ಕಳೆದ ವಾರದಿಂದ ಮಕ್ಕಳಲ್ಲಿ ಬಳ್ಳಾರಿ ವಿಮ್ಸ್ ‌ಗೆ 300 ಕ್ಕೂ ಹೆಚ್ಚು ಮಕ್ಕಳ ದಾಖಲಾಗೊದ್ರೋಂದಿಗೆ ಈಗ ಆರೋಗ್ಯ ಇಲಾಖೆಗೂ ಆತಂಕ ತಂದಿದೆ.

    ಇದನ್ನೂ ಓದಿ: Mysuru Gang Rape Case: ಮತ್ತೊಬ್ಬ ಅತ್ಯಾಚಾರ ಆರೋಪಿ ಅಂದರ್- 7ನೇ ಆರೋಪಿಗಾಗಿ ತೀವ್ರ ಶೋಧ

    ಇನ್ನು, ಬಳ್ಳಾರಿ ವಿಮ್ಸ್‌ಗೆ ದಾಖಲಾಗುವ ಬಹುತೇಕ ಮಕ್ಕಳಲ್ಲಿ ಜ್ವರ, ಆಯಾಸ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ಸೇರಿದಂತೆ ಹಲವು ಸಿಂಪ್ಟಮ್ಸ್ ಕಾಣ್ತಿದೆ. ಅಂದಹಾಗೇ ಈ ಲಕ್ಷಣಗಳಿಗೆ ಟಾರ್ಗೆಟ್ ಆಗ್ತಿರೋದೆ 16 ವರ್ಷದೊಳಗಿನ ಮಕ್ಕಳು ಅನ್ನೋದೇ ಆಶ್ಚರ್ಯ. ಈಗಾಗಲೇ ಮಿಮ್ಸ್‌ಗೆ ದಾಖಲಾದ ಹೆಚ್ಚಿನ ಮಕ್ಕಳು ನಿಮೋನಿಯಾ ಕಾಯಿಲೆಗೆ ತುತ್ತಾಗಿದ್ದಾರೆ. ವಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಮೋನಿಯಾ ಬರೋಕೆ ಪ್ರಮುಖ ಕಾರಣ ಕಲುಷಿತ ವಾತಾವರಣ ಅಂತಾ ವೈದ್ಯರು ಹೇಳಿದ್ದಾರೆ. ಸ್ಥಳೀಯ ಮಟ್ಟ ಚಿಕಿತ್ಸೆ ಬಿಟ್ಟು ತಜ್ಞ ವೈದ್ಯರ ಬಳಿ ಬರಲು ವಿಮ್ಸ್ ವೈದ್ಯರು ಕೂಡ ಸಲಹೆ ನೀಡ್ತಿದ್ದಾರೆ.‌

    ಮಕ್ಕಳ ನಿಮೋನಿಯಾ, ಡೆಂಘ್ಯೂ ಕಾಯಿಲೆ ಪ್ರಕರಣಗಳ ಹೆಚ್ಚಳವಾಗ್ತಿರೋದು ವೈದ್ಯರು ಆತಂಕದ ಮಾತುಗಳು ಆಡುವಂತೆ ಮಾಡಿವೆ. ಈಗ ಕಾಲಮಾನ ಸರಿ ಇಲ್ಲ. ಕಾಯಿಲೆ ಲಕ್ಷಣ ಕಾಣಿಸಿಕೊಂಡಾಗ ಜನ ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು ಎಂದು ಸಲಹೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ನೋ ವ್ಯಾಕ್ಸಿನೇಷನ್… ನೋ ರೇಷನ್, ನೋ ಪೆನ್ಷನ್: ಚಾಮರಾಜನಗರ ಜಿಲ್ಲಾಡಳಿತದ ವಿಭಿನ್ನ ಕ್ರಮ

    ಒಟ್ಟನಲ್ಲಿ ಕೊರೊನಾ ಮೂರನೇ ಅಲೆಗೂ ಮುನ್ನವೇ ಬಳ್ಳಾರಿ, ವಿಜಯನಗರ ಜಿಲ್ಲೆಯ ಮಕ್ಕಳಲ್ಲಿ ನ್ಯುಮೋನಿಯಾ, ಡೆಂಘ್ಯೂ ಕಾಯಿಲೆಗಳು ಕಾಣಿಕೊಳ್ತಿರೋದು ಬಳ್ಳಾರಿ ಜಿಲ್ಲಾಡಳಿತಕ್ಕೂ ಆತಂಕ ಉಂಟಾಗಿದೆ. ಇನ್ನಾದ್ರೂ ಪೋಷಕರು ತಮ್ಮ ಮಕ್ಕಳ ಆರೋಗ್ಯದ ಕುರಿತು ವಹಿಸಬೇಕಾಗಿದೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

    ವರದಿ: ವಿನಾಯಕ ಬಡಿಗೇರ
    Published by:Vijayasarthy SN
    First published: